ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/02 ಪು. 2
  • ಸೇವಾ ಕೂಟದ ಶೆಡ್ಯೂಲ್‌

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವಾ ಕೂಟದ ಶೆಡ್ಯೂಲ್‌
  • 2002 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ನವೆಂಬರ್‌ 11ರಿಂದ ಆರಂಭವಾಗುವ ವಾರ
  • ನವೆಂಬರ್‌ 18ರಿಂದ ಆರಂಭವಾಗುವ ವಾರ
  • ನವೆಂಬರ್‌ 25ರಿಂದ ಆರಂಭವಾಗುವ ವಾರ
  • ಡಿಸೆಂಬರ್‌ 2ರಿಂದ ಆರಂಭವಾಗುವ ವಾರ
2002 ನಮ್ಮ ರಾಜ್ಯದ ಸೇವೆ
km 11/02 ಪು. 2

ಸೇವಾ ಕೂಟದ ಶೆಡ್ಯೂಲ್‌

ನವೆಂಬರ್‌ 11ರಿಂದ ಆರಂಭವಾಗುವ ವಾರ

ಗೀತೆ 27 (221)

10 ನಿ:  ಸ್ಥಳಿಕ ಪ್ರಕಟನೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು. 8ನೆಯ ಪುಟದಲ್ಲಿರುವ ಸಲಹೆಗಳನ್ನು ಉಪಯೋಗಿಸುತ್ತಾ, ಅಕ್ಟೋಬರ್‌-ಡಿಸೆಂಬರ್‌ ಎಚ್ಚರ! ಪತ್ರಿಕೆಯನ್ನು (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೊದಲನೆಯದ್ದು) ಮತ್ತು ನವೆಂಬರ್‌ 15ರ ಕಾವಲಿನಬುರುಜು ಪತ್ರಿಕೆಯನ್ನು ಹೇಗೆ ನೀಡಬೇಕೆಂಬುದರ ವಿಷಯದಲ್ಲಿ ಎರಡು ಪ್ರತ್ಯೇಕ ಪ್ರತ್ಯಕ್ಷಾಭಿನಯಗಳಿರಲಿ. ಒಂದು ಪ್ರತ್ಯಕ್ಷಾಭಿನಯದಲ್ಲಿ, ನಮ್ಮ ಲೋಕವ್ಯಾಪಕ ಕೆಲಸಕ್ಕೆ ಹಣಕಾಸು ಹೇಗೆ ಒದಗಿಸಲ್ಪಡುತ್ತದೆ ಎಂಬುದನ್ನು ವಿವರಿಸಿರಿ.​—⁠ಕಾವಲಿನಬುರುಜು ಪತ್ರಿಕೆಯ 2ನೇ ಪುಟವನ್ನು ಇಲ್ಲವೆ ಎಚ್ಚರ! ಪತ್ರಿಕೆಯ 5ನೇ ಪುಟವನ್ನು ನೋಡಿರಿ.

15 ನಿ:  ಸತ್ಯಾರಾಧನೆಯ ಬೆಂಬಲಿಗರು​—⁠ಅಂದು ಮತ್ತು ಇಂದು. ನವೆಂಬರ್‌ 1, 2002ರ ಕಾವಲಿನಬುರುಜು ಪತ್ರಿಕೆಯ 26-30ನೆಯ ಪುಟಗಳ ಮೇಲಾಧಾರಿತವಾದ ಒಂದು ಭಾಷಣ.

20 ನಿ:  “ನಿಮ್ಮ ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರಿಗೆ ನೆರವು ನೀಡಿರಿ.”a ಸಭಾ ಪುಸ್ತಕ ಅಧ್ಯಯನ ಮೇಲ್ವಿಚಾರಕರಾಗಿರುವ ಒಬ್ಬ ಹಿರಿಯರು ಇದನ್ನು ನಿರ್ವಹಿಸಬೇಕು. 3ನೆಯ ಪ್ಯಾರಗ್ರಾಫನ್ನು ಚರ್ಚಿಸುತ್ತಿರುವಾಗ, ಲಭ್ಯವಿರುವಲ್ಲಿ ಶುಶ್ರೂಷಾ ಶಾಲೆ ಪುಸ್ತಕದ 70ನೆಯ ಪುಟದಲ್ಲಿರುವ ಹೇಳಿಕೆಗಳನ್ನು ಒಳಗೂಡಿಸಿರಿ. ಸಭೆಯವರು ಪುಸ್ತಕ ಅಧ್ಯಯನ ಏರ್ಪಾಡನ್ನು ಬೆಂಬಲಿಸುತ್ತಿರುವುದಕ್ಕಾಗಿ ಅವರನ್ನು ಪ್ರಶಂಸಿಸಿರಿ, ಮತ್ತು ಯಾವ ಕ್ಷೇತ್ರಗಳಲ್ಲಿ ಪ್ರಗತಿಯನ್ನು ಮಾಡಬೇಕಾಗಿದೆಯೋ ಆ ಕ್ಷೇತ್ರಗಳ ಕಡೆಗೆ ದಯಾಭರಿತ ರೀತಿಯಲ್ಲಿ ಗಮನವನ್ನು ಸೆಳೆಯಿರಿ.

ಗೀತೆ 23 (200) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 18ರಿಂದ ಆರಂಭವಾಗುವ ವಾರ

ಗೀತೆ 21 (191)

10 ನಿ:  ಸ್ಥಳಿಕ ಪ್ರಕಟನೆಗಳು. ಅಕೌಂಟ್ಸ್‌ ವರದಿ. “ಉತ್ತಮವಾದ ಲೇಖನಗಳು!” ಎಂಬ ಚೌಕವನ್ನು ಚರ್ಚಿಸಿರಿ.

10 ನಿ:  ಪ್ರಶ್ನಾ ಚೌಕ. ಒಬ್ಬ ಸಮರ್ಥ ಹಿರಿಯನಿಂದ ಭಾಷಣ.

25 ನಿ:  “ಕುಟುಂಬದ ತಲೆಗಳೇ ಒಳ್ಳೆಯ ಆತ್ಮಿಕ ನಿಯತ ಕ್ರಮವನ್ನು ಕಾಪಾಡಿಕೊಳ್ಳಿರಿ.” 1-3ನೆಯ ಪ್ಯಾರಗ್ರಾಫ್‌ಗಳ ಮೇಲಾಧಾರಿತವಾದ ಸಂಕ್ಷಿಪ್ತ ಪೀಠಿಕಾ ಭಾಷಣದ ಬಳಿಕ, 4-13ರ ವರೆಗಿನ ಪ್ಯಾರಗ್ರಾಫ್‌ಗಳನ್ನು ಸಭಿಕರೊಂದಿಗೆ ಚರ್ಚಿಸಿರಿ. ಸಮಯವು ಅನುಮತಿಸಿದಂತೆ, 7, 8, 11, ಮತ್ತು 12ನೆಯ ಪ್ಯಾರಗ್ರಾಫ್‌ಗಳನ್ನು ಓದಿರಿ. ಒಬ್ಬರು ಅಥವಾ ಇಬ್ಬರು ಹೆತ್ತವರ ಇಂಟರ್‌ವ್ಯೂ ಅನ್ನು ಒಳಗೂಡಿಸಿರಿ. ಆತ್ಮಿಕ ಚಟುವಟಿಕೆಗಳ ಸುವ್ಯವಸ್ಥಿತ ನಿಯತ ಕ್ರಮವನ್ನು ಹೊಂದಿರಲು ಅವರ ಕುಟುಂಬಕ್ಕೆ ಯಾವುದು ಸಹಾಯಮಾಡಿದೆ? ಇದರಲ್ಲಿ ಯಾವ ಪ್ರಯತ್ನವು ಒಳಗೂಡಿದೆ? ಅವರು ಹೇಗೆ ಇದರಿಂದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ? 14ನೆಯ ಪ್ಯಾರಗ್ರಾಫ್‌ನ ಮೇಲಾಧಾರಿತವಾದ ಸಂಕ್ಷಿಪ್ತ ಹೇಳಿಕೆಗಳೊಂದಿಗೆ ಮುಕ್ತಾಯಗೊಳಿಸಿರಿ.

ಗೀತೆ 20 (93) ಮತ್ತು ಸಮಾಪ್ತಿಯ ಪ್ರಾರ್ಥನೆ.

ನವೆಂಬರ್‌ 25ರಿಂದ ಆರಂಭವಾಗುವ ವಾರ

ಗೀತೆ 22 (130)

10 ನಿ:  ಸ್ಥಳಿಕ ಪ್ರಕಟನೆಗಳು. ಅಕ್ಟೋಬರ್‌-ಡಿಸೆಂಬರ್‌ (ಪತ್ರಿಕಾ ನಿರೂಪಣೆಯ ಕಾಲಮ್‌ನಲ್ಲಿ ಮೂರನೆಯದ್ದು) ಮತ್ತು ಡಿಸೆಂಬರ್‌ 1ರ ಪತ್ರಿಕೆಗಳನ್ನು ನೀಡಲಿಕ್ಕಾಗಿ 8ನೆಯ ಪುಟದಲ್ಲಿರುವ ಸಲಹೆಗಳನ್ನು ಹೇಗೆ ಉಪಯೋಗಿಸಬೇಕೆಂಬುದನ್ನು, ಕ್ಷೇತ್ರ ಸೇವೆಯಲ್ಲಿ ಒಟ್ಟಿಗೆ ಕಾರ್ಯನಡಿಸುತ್ತಿರುವ ಒಬ್ಬ ವಿವಾಹಿತ ದಂಪತಿ ಪ್ರತ್ಯಕ್ಷಾಭಿನಯಿಸಲಿ. ಪತ್ನಿಯು ಎಚ್ಚರ! ಪತ್ರಿಕೆಯನ್ನೂ ಗಂಡನು ಕಾವಲಿನಬುರುಜು ಪತ್ರಿಕೆಯನ್ನೂ ನೀಡುತ್ತಾರೆ.

15 ನಿ:  “ಯೇಸುವಿನ ಕುರಿತಾದ ಸತ್ಯವನ್ನು ತಿಳಿಯಪಡಿಸಿರಿ.”b ಲಭ್ಯವಿರುವಲ್ಲಿ, ಶುಶ್ರೂಷಾ ಶಾಲೆ ಪುಸ್ತಕದ 278ನೆಯ ಪುಟದಿಂದ ತೆಗೆದ ಹೇಳಿಕೆಗಳನ್ನು ಒಳಗೂಡಿಸಿರಿ. ಮುಂದಿನ ವಾರದ ಸೇವಾ ಕೂಟದ “ಜೀವನದ ಅತಿ ಪ್ರಾಮುಖ್ಯವಾದ ಚಟುವಟಿಕೆಗಾಗಿ ನಮ್ಮನ್ನು ಸಜ್ಜುಗೊಳಿಸುವಂಥ ಒಂದು ಶಾಲೆ” ಎಂಬ ಭಾಗಕ್ಕಾಗಿ ಪಠ್ಯಪುಸ್ತಕವನ್ನು ತರುವಂತೆ ಎಲ್ಲರನ್ನೂ ಉತ್ತೇಜಿಸಿರಿ.

20 ನಿ:  “‘ತಂದೆಯಿಲ್ಲದ ಹುಡುಗ’ರಲ್ಲಿ ಪ್ರೀತಿಭರಿತ ಆಸಕ್ತಿಯನ್ನು ತೋರಿಸಿರಿ.” ತಂದೆಯಿಲ್ಲದ ಮಕ್ಕಳ ವಿಷಯದಲ್ಲಿ ಯೆಹೋವನ ದೃಷ್ಟಿಕೋನವೇನು ಎಂಬುದರ ಕುರಿತು, ಲೇಖನದ ಪ್ಯಾರಗ್ರಾಫ್‌ 1 ಹಾಗೂ ಒಳನೋಟ (ಇಂಗ್ಲಿಷ್‌) ಪುಸ್ತಕದ ಸಂಪುಟ 1ರ 816ನೆಯ ಪುಟದ ಮೇಲಾಧಾರಿಸಿ ಮೂರು ನಿಮಿಷಗಳ ಭಾಷಣದೊಂದಿಗೆ ಆರಂಭಿಸಿ. ಪ್ರಶ್ನೋತ್ತರಗಳನ್ನು ಉಪಯೋಗಿಸುತ್ತಾ ಲೇಖನದ ಉಳಿದ ಭಾಗವನ್ನು ಪರಿಗಣಿಸಿರಿ. ಇತರರು ಸಹಾಯ ಹಾಗೂ ಪ್ರೋತ್ಸಾಹವನ್ನು ಒದಗಿಸಸಾಧ್ಯವಿರುವ ಪ್ರಾಯೋಗಿಕ ವಿಧಗಳನ್ನು ಎತ್ತಿಹೇಳಿರಿ. 3-4ನೆಯ ಪ್ಯಾರಗ್ರಾಫ್‌ಗಳನ್ನು ಚರ್ಚಿಸುವಾಗ, ಅಕ್ಟೋಬರ್‌ 8, 1995ರ ಎಚ್ಚರ! (ಇಂಗ್ಲಿಷ್‌) ಪತ್ರಿಕೆಯ 8-9ನೆಯ ಪುಟಗಳಿಂದ ಸಂಕ್ಷಿಪ್ತವಾದ ಹೇಳಿಕೆಗಳನ್ನು ಒಳಗೂಡಿಸಿರಿ.

ಗೀತೆ 17 (187) ಮತ್ತು ಸಮಾಪ್ತಿಯ ಪ್ರಾರ್ಥನೆ.

ಡಿಸೆಂಬರ್‌ 2ರಿಂದ ಆರಂಭವಾಗುವ ವಾರ

ಗೀತೆ 10 (82)

8 ನಿ: ಸ್ಥಳಿಕ ಪ್ರಕಟನೆಗಳು. ನವೆಂಬರ್‌ ತಿಂಗಳ ಕ್ಷೇತ್ರ ಸೇವಾ ವರದಿಗಳನ್ನು ನೀಡುವಂತೆ ಪ್ರಚಾರಕರಿಗೆ ಜ್ಞಾಪಕಹುಟ್ಟಿಸಿರಿ. ಮಹಾನ್‌ ಪುರುಷ ಪುಸ್ತಕವನ್ನು ಕೊಡುವಾಗ ಉಪಯೋಗಿಸಸಾಧ್ಯವಿರುವ ಒಂದು ನಿರೂಪಣೆಯನ್ನು ಸಂಕ್ಷಿಪ್ತವಾಗಿ ಪುನರ್ವಿಮರ್ಶಿಸಿರಿ.​—⁠ಜೂನ್‌ 1998ರ ನಮ್ಮ ರಾಜ್ಯದ ಸೇವೆಯ 8ನೆಯ ಪುಟವನ್ನು ನೋಡಿರಿ.

12 ನಿ:  ಸ್ಥಳಿಕ ಅಗತ್ಯಗಳು.

25 ನಿ:  “ಜೀವನದ ಅತಿ ಪ್ರಾಮುಖ್ಯವಾದ ಚಟುವಟಿಕೆಗಾಗಿ ನಮ್ಮನ್ನು ಸಜ್ಜುಗೊಳಿಸುವಂಥ ಒಂದು ಶಾಲೆ.” ಸಭಿಕರೊಂದಿಗಿನ ಚರ್ಚೆಯಾಗಿದ್ದು, ಶಾಲಾ ಮೇಲ್ವಿಚಾರಕನಿಂದ ನಿರ್ವಹಿಸಲ್ಪಡಬೇಕು. ಜನವರಿ ತಿಂಗಳಿನಲ್ಲಿ ಆರಂಭವಾಗಲಿರುವ ಶಾಲಾ ಕಾರ್ಯಕ್ರಮಕ್ಕಾಗಿ ಹುರುಪನ್ನು ಅಧಿಕಗೊಳಿಸಿರಿ. ಅಕ್ಟೋಬರ್‌ 2002ರ ನಮ್ಮ ರಾಜ್ಯದ ಸೇವೆಯ ಪುರವಣಿಯಲ್ಲಿರುವ “2003ನೇ ಇಸವಿಗಾಗಿ ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶೆಡ್ಯೂಲ್‌”ನ ವೈಶಿಷ್ಟ್ಯಗಳ ಕಡೆಗೆ ಗಮನಹರಿಸಿರಿ. ಶುಶ್ರೂಷಾ ಶಾಲೆ ಪುಸ್ತಕದ 282ನೆಯ ಪುಟದಲ್ಲಿ ಮುಂತಿಳಿಸಲ್ಪಟ್ಟಿರುವಂತೆ, ಶಾಲೆಗೆ ಸೇರಲಿಕ್ಕಾಗಿರುವ ಆವಶ್ಯಕತೆಗಳನ್ನು ತಿಳಿಸಿರಿ, ಮತ್ತು ಇಷ್ಟರ ತನಕ ಯಾರು ಶಾಲೆಗೆ ಸೇರಿಲ್ಲವೋ ಅವರು ಒಂದುವೇಳೆ ಅರ್ಹರಾಗುವಲ್ಲಿ ಶಾಲೆಗೆ ಸೇರಿಕೊಳ್ಳುವಂತೆ ಅವರನ್ನು ಉತ್ತೇಜಿಸಿರಿ.

ಗೀತೆ 15 (127) ಮತ್ತು ಸಮಾಪ್ತಿಯ ಪ್ರಾರ್ಥನೆ.

[ಅಧ್ಯಯನ ಪ್ರಶ್ನೆಗಳು]

a ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

b ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಪೀಠಿಕೆಯನ್ನು ತಿಳಿಸಿರಿ. ಮತ್ತು ಅದರ ನಂತರ ಪ್ರಶ್ನೋತ್ತರಗಳ ಚರ್ಚೆಯಿರಲಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ