ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು
    2005 ರಾಜ್ಯ ಸೇವೆ | ಫೆಬ್ರವರಿ
    • ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು

      ಭಾಗ 6: ವಿದ್ಯಾರ್ಥಿಯು ಒಂದು ಪ್ರಶ್ನೆಯನ್ನು ಎಬ್ಬಿಸುವಾಗ

      1  ಒಮ್ಮೆ ಒಂದು ಬೈಬಲ್‌ ಅಧ್ಯಯನವು ಸ್ಥಾಪಿಸಲ್ಪಟ್ಟ ಅನಂತರ, ಒಂದರಿಂದ ಮತ್ತೊಂದು ವಿಷಯವಸ್ತುವಿಗೆ ಹಾರುವ ಬದಲು ಬೈಬಲ್‌ ಬೋಧನೆಗಳನ್ನು ಕ್ರಮವಾದ ರೀತಿಯಲ್ಲಿ ಪರಿಗಣಿಸುವುದು ಹೆಚ್ಚು ಉತ್ತಮ. ಇದು ನಿಷ್ಕೃಷ್ಟ ಜ್ಞಾನದ ಬುನಾದಿಯನ್ನು ಕಟ್ಟಿಕೊಳ್ಳಲು ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಮಾಡಲು ವಿದ್ಯಾರ್ಥಿಗೆ ಸಹಾಯಮಾಡುವುದು. (ಕೊಲೊ. 1:9, 10) ಆದರೂ, ಅನೇಕವೇಳೆ ಅಧ್ಯಯನದ ಸಮಯದಲ್ಲಿ ವಿದ್ಯಾರ್ಥಿಗಳು ವಿಭಿನ್ನ ವಿಷಯಗಳ ಕುರಿತು ಪ್ರಶ್ನೆಗಳನ್ನು ಎಬ್ಬಿಸುತ್ತಾರೆ. ಇವುಗಳನ್ನು ನಿರ್ವಹಿಸುವುದು ಹೇಗೆ?

      2  ವಿವೇಚನಾಶೀಲರಾಗಿರಿ: ಪರಿಗಣಿಸಲ್ಪಡುತ್ತಿರುವ ಅಧ್ಯಯನ ಭಾಗಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾಮಾನ್ಯವಾಗಿ ಆ ಸಮಯದಲ್ಲೇ ಉತ್ತರಿಸಬಹುದು. ಒಂದು ಪ್ರಶ್ನೆಯು ಅಧ್ಯಯನ ಪ್ರಕಾಶನದಲ್ಲೇ ಸ್ವಲ್ಪ ಮುಂದಕ್ಕೆ ಚರ್ಚಿಸಲ್ಪಡಲಿರುವುದಾದರೆ, ಅದರ ಕುರಿತು ತಿಳಿಸುವುದಷ್ಟೇ ಸಾಕು. ಆದರೂ, ಒಂದುವೇಳೆ ಪ್ರಶ್ನೆಯು ಅಧ್ಯಯನ ಭಾಗಕ್ಕೆ ಸಂಬಂಧಿಸಿದ್ದಲ್ಲವಾದರೆ ಅಥವಾ ಸರಿಯಾಗಿ ಉತ್ತರಿಸಲು ಸಂಶೋಧನೆಯು ಅಗತ್ಯವಿರುವುದಾದರೆ, ಅದನ್ನು ಅಧ್ಯಯನದ ಅನಂತರ ಅಥವಾ ಮತ್ತೊಂದು ಸಮಯದಲ್ಲಿ ಪರಿಗಣಿಸುವುದು ಉತ್ತಮ. ವಿದ್ಯಾರ್ಥಿಯ ಪ್ರಶ್ನೆಯನ್ನು ಬರೆದುಕೊಳ್ಳುವುದು ತನ್ನ ಪ್ರಶ್ನೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ ಎಂಬ ಆಶ್ವಾಸನೆಯನ್ನು ಅವನಿಗೆ ಕೊಡುತ್ತದೆ ಮತ್ತು ಅಧ್ಯಯನವು ಹಳಿತಪ್ಪದಂತೆ ನೋಡಿಕೊಳ್ಳಲು ಸಹಾಯಮಾಡುತ್ತದೆ ಎಂಬುದನ್ನು ಕೆಲವು ಪ್ರಚಾರಕರು ಕಂಡುಕೊಂಡಿದ್ದಾರೆ.

      3  ನಮ್ಮ ಮೂಲಭೂತ ಅಧ್ಯಯನ ಪ್ರಕಾಶನಗಳಲ್ಲಿ ಅನೇಕ ಬೈಬಲ್‌ ಬೋಧನೆಗಳನ್ನು ಸಂಕ್ಷಿಪ್ತವಾಗಿ ಮಾತ್ರ ಪರಿಗಣಿಸಲಾಗುತ್ತದೆ. ಒಂದು ನಿರ್ದಿಷ್ಟ ಬೋಧನೆಯನ್ನು ಸ್ವೀಕರಿಸಲು ವಿದ್ಯಾರ್ಥಿಗೆ ಕಷ್ಟಕರವಾಗಿರುವುದಾದರೆ ಅಥವಾ ಅವನು ಒಂದು ಸುಳ್ಳು ನಂಬಿಕೆಗೆ ಬಲವಾಗಿ ಅಂಟಿಕೊಳ್ಳುವುದಾದರೆ ಆಗೇನು? ಆ ವಿಷಯದ ಕುರಿತು ಬೈಬಲ್‌ ಏನು ಹೇಳುತ್ತದೋ ಅದನ್ನು ಸವಿವರವಾಗಿ ಚರ್ಚಿಸುವ ಹೆಚ್ಚಿನ ಮಾಹಿತಿಯನ್ನು ಪರಿಗಣಿಸುವುದು ಪ್ರಯೋಜನದಾಯಕವಾಗಿರಬಹುದು. ವಿದ್ಯಾರ್ಥಿಗೆ ಇನ್ನೂ ಮನದಟ್ಟು ಆಗಿರದಿದ್ದರೆ, ಆ ವಿಷಯವನ್ನು ಮತ್ತೊಂದು ಸಮಯದಲ್ಲಿ ಚರ್ಚಿಸಲಿಕ್ಕಾಗಿ ಬದಿಗಿರಿಸಿ ಅವನ ಕ್ರಮದ ಅಧ್ಯಯನವನ್ನು ಮುಂದುವರಿಸಿರಿ. (ಯೋಹಾ. 16:12) ಬೈಬಲಿನ ಹೆಚ್ಚೆಚ್ಚು ಜ್ಞಾನವನ್ನು ಅವನು ಪಡೆದುಕೊಳ್ಳುತ್ತಾ ಹೋದಂತೆ ಮತ್ತು ಆಧ್ಯಾತ್ಮಿಕವಾಗಿ ಪ್ರಗತಿಯನ್ನು ಮಾಡುತ್ತಾ ಹೋದಂತೆ, ಅವನಿಗೆ ಆ ಬೈಬಲ್‌ ಬೋಧನೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾದೀತು.

      4  ವಿನಯಶೀಲರಾಗಿರಿ: ನಿಮಗೆ ಒಂದು ಪ್ರಶ್ನೆಗೆ ಉತ್ತರವು ಸ್ಪಷ್ಟವಾಗಿ ತಿಳಿದಿಲ್ಲವಾದರೆ, ನಿಷ್ಕೃಷ್ಟವಲ್ಲದ ಉತ್ತರವನ್ನು ಕೊಡುವ ಪ್ರಯತ್ನವನ್ನು ಮಾಡಬೇಡಿರಿ. (2 ತಿಮೊ. 2:15; 1 ಪೇತ್ರ 4:11) ನೀವು ಸಂಶೋಧನೆಯನ್ನು ಮಾಡಿ ಉತ್ತರದೊಂದಿಗೆ ಹಿಂದೆ ಬರುವಿರಿ ಎಂದು ಹೇಳಿರಿ. ನೀವು ಈ ಸಂದರ್ಭವನ್ನು, ಸಂಶೋಧನೆಯನ್ನು ಹೇಗೆ ಮಾಡುವುದು ಎಂಬುದನ್ನು ವಿದ್ಯಾರ್ಥಿಗೆ ತೋರಿಸುವುದಕ್ಕಾಗಿಯೂ ಉಪಯೋಗಿಸಬಹುದು. ಯೆಹೋವನ ಸಂಘಟನೆಯಿಂದ ಒದಗಿಸಲ್ಪಟ್ಟಿರುವ ವಿವಿಧ ಸಂಶೋಧನಾ ಸಹಾಯಕಗಳನ್ನು ಹೇಗೆ ಉಪಯೋಗಿಸುವುದು ಎಂಬುದನ್ನು ಅವನಿಗೆ ಪ್ರಗತಿಪರವಾಗಿ ತೋರಿಸಿರಿ. ಈ ರೀತಿಯಲ್ಲಿ ಅವನು ತರುವಾಯ ತನ್ನ ಸ್ವಂತ ಪ್ರಶ್ನೆಗಳಿಗೆ ತಾನೇ ಉತ್ತರವನ್ನು ಕಂಡುಕೊಳ್ಳಲು ಶಕ್ತನಾಗುವನು.​—⁠ಅ. ಕೃ. 17:⁠11.

  • ಹೆಚ್ಚಿನ ಸಾಕ್ಷಿಯನ್ನು ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡಿರಿ
    2005 ರಾಜ್ಯ ಸೇವೆ | ಫೆಬ್ರವರಿ
    • ಹೆಚ್ಚಿನ ಸಾಕ್ಷಿಯನ್ನು ಪಡೆದುಕೊಳ್ಳುವಂತೆ ಅವರಿಗೆ ಸಹಾಯಮಾಡಿರಿ

      1  ನಾವು ಸುವಾರ್ತೆಯನ್ನು ಸಾರುವಾಗ, ಅನೇಕವೇಳೆ ನಮ್ಮ ಟೆರಿಟೊರಿಯ ಹೊರಗೆ ಜೀವಿಸುವ ಅಥವಾ ಮತ್ತೊಂದು ಭಾಷೆಯನ್ನು ಮಾತಾಡುವ ಜನರನ್ನು ಭೇಟಿಮಾಡುತ್ತೇವೆ ಹಾಗೂ ಇದರಲ್ಲಿ ಸಂಜ್ಞಾ ಭಾಷೆಯೂ ಸೇರಿರಬಹುದು. ನಾವು ಯಾರೊಂದಿಗೆ ಒಳ್ಳೆಯ ಬೈಬಲ್‌ ಚರ್ಚೆಗಳನ್ನು ನಡೆಸುತ್ತಿದ್ದೇವೋ ಅವರು ನಮ್ಮ ಟೆರಿಟೊರಿಯನ್ನು ಬಿಟ್ಟು ಬೇರೆ ಕಡೆಗೆ ಸ್ಥಳಾಂತರಿಸಬಹುದು. ಇಂಥವರು ಹೆಚ್ಚಿನ ಸಾಕ್ಷಿಯನ್ನು ಪಡೆದುಕೊಳ್ಳುವಂತೆ ನಾವು ಹೇಗೆ ಏರ್ಪಾಡು ಮಾಡಬಲ್ಲೆವು? ಪ್ಲೀಸ್‌ ಫಾಲೋ ಅಪ್‌ (S-43) (ದಯವಿಟ್ಟು ಸಂಪರ್ಕಿಸಿ) ಫಾರ್ಮನ್ನು ಉಪಯೋಗಿಸುವ ಮೂಲಕವೇ.

      2  ಸುವಾರ್ತೆಯನ್ನು ಜನರ ಮಾತೃಭಾಷೆಯಲ್ಲಿ ಪ್ರಸ್ತುತಪಡಿಸುವಾಗ ಅವರು ಹೆಚ್ಚಿನ ಗಮನವನ್ನು ಕೊಡುವದುಂಟು. (ಅ. ಕೃ. 22:1, 2) ಆದುದರಿಂದ, ಹೆಚ್ಚಿನ ವಿದ್ಯಮಾನಗಳಲ್ಲಿ ಮತ್ತೊಂದು ಭಾಷೆಯನ್ನಾಡುವ ವ್ಯಕ್ತಿಯೊಬ್ಬನನ್ನು ನಾವು ಭೇಟಿಮಾಡುವುದಾದರೆ, ಆ ವ್ಯಕ್ತಿಯು ರಾಜ್ಯದ ಸಂದೇಶದಲ್ಲಿ ಆಸಕ್ತಿಯನ್ನು ತೋರಿಸದಿದ್ದರೂ S-43 ಫಾರ್ಮನ್ನು ತುಂಬಿಸಬೇಕು. ಆದರೆ ಒಂದುವೇಳೆ ಒಂದು ಕ್ಷೇತ್ರದಲ್ಲಿ ಪರಭಾಷಾ ಜನರ ಸಂಖ್ಯೆಯು ಸಾಕಷ್ಟು ದೊಡ್ಡದ್ದಾಗಿದ್ದು ಅವರೆಲ್ಲರಿಗೆ ಅವರ ಸ್ವಂತ ಭಾಷೆಯಲ್ಲಿ ಕ್ರಮವಾಗಿ ಸಾಕ್ಷಿಕೊಡಲ್ಪಡುತ್ತಿರುವುದಾದರೆ, ಆಗ ಕೇವಲ ಆಸಕ್ತಿ ತೋರಿಸುವವರಿಗಾಗಿ ಮಾತ್ರ ಈ ಫಾರ್ಮನ್ನು ತುಂಬಿಸುವ ಆವಶ್ಯಕತೆ ಇರುವುದು.

      3  ಫಾರ್ಮನ್ನು ತುಂಬಿಸುವುದು: ವಿವೇಚನಾಪೂರ್ವಕವಾಗಿ ಆ ವ್ಯಕ್ತಿಯ ಹೆಸರು, ಅವನ ವಿಳಾಸ ಮತ್ತು ಟೆಲಿಫೋನ್‌ ನಂಬರನ್ನು ಪಡೆದುಕೊಳ್ಳಲು ಪ್ರಯತ್ನಿಸಿರಿ. ಆ ವ್ಯಕ್ತಿಯು ಎಷ್ಟು ಆಸಕ್ತಿಯನ್ನು ತೋರಿಸಿದ್ದಾನೆ, ಯಾವ ಸಮಯಕ್ಕೆ ಆ ವ್ಯಕ್ತಿಯನ್ನು ಭೇಟಿಮಾಡಬಹುದು, ನೀಡಲ್ಪಟ್ಟ ಅಥವಾ ವಿನಂತಿಸಿಕೊಂಡಿರುವ ಸಾಹಿತ್ಯ ಮತ್ತು ಆ ವ್ಯಕ್ತಿಯು ಚೆನ್ನಾಗಿ ಅರ್ಥಮಾಡಿಕೊಳ್ಳುವ ಭಾಷೆ ಯಾವುದು ಎಂಬಂಥ ವಿವರಗಳನ್ನು ಕೊಡಿರಿ. ಫಾರ್ಮನ್ನು ತುಂಬಿಸಿದ ಬಳಿಕ, ತಡಮಾಡದೆ ಅದನ್ನು ಸಭೆಯ ಕಾರ್ಯದರ್ಶಿಗೆ ಕೊಡಿರಿ. ಅವರು ತಕ್ಕದಾದ ಸಭೆ ಅಥವಾ ಗುಂಪಿಗೆ ಇದನ್ನು ಕಳುಹಿಸಿಕೊಡುವರು.

      4  ಫಾರ್ಮನ್ನು ಕಳುಹಿಸುವುದು: ಫಾರ್ಮನ್ನು ಯಾವ ಸಭೆ ಅಥವಾ ಗುಂಪಿಗೆ ಕಳುಹಿಸುವುದು ಎಂಬುದು ಕಾರ್ಯದರ್ಶಿಗೆ ತಿಳಿದಿಲ್ಲವಾದರೆ, ಅವನು ಬ್ರಾಂಚ್‌ ಆಫೀಸ್‌ನಲ್ಲಿರುವ ಟೆರಿಟೊರಿ ಡೆಸ್ಕ್‌ಗೆ ಕರೆಮಾಡಿ ಬೇಕಾದ ಮಾಹಿತಿಯನ್ನು ಪಡೆದುಕೊಳ್ಳಬಹುದು. ಫಾರ್ಮನ್ನು ಕಳುಹಿಸುವಾಗ ಇನ್ನು ಮುಂದೆ ಇದರ ಕುರಿತು ನಗರ ಮೇಲ್ವಿಚಾರಕನಿಗೆ ತಿಳಿಸುವ ಅಗತ್ಯವಿರುವುದಿಲ್ಲ.

      5  ಒಂದು ಸಭೆ ಅಥವಾ ಒಂದು ಗುಂಪು, ಭರ್ತಿಮಾಡಲ್ಪಟ್ಟ ಪ್ಲೀಸ್‌ ಫಾಲೋ ಅಪ್‌ ಫಾರ್ಮನ್ನು ಪಡೆದುಕೊಳ್ಳುವಾಗೆಲ್ಲಾ, ಆ ವ್ಯಕ್ತಿಯನ್ನು ಸಂಪರ್ಕಿಸಲು ತಡಮಾಡದೆ ಏರ್ಪಾಡುಗಳನ್ನು ಮಾಡಬೇಕು. ನಾವು ಶ್ರದ್ಧೆಯಿಂದ ನಮ್ಮ ಭಾಗವನ್ನು ನಿರ್ವಹಿಸುವಾಗ, ಯೆಹೋವನು ‘ನಿತ್ಯಜೀವಕ್ಕೆ ಯೋಗ್ಯವಾದ ಪ್ರವೃತ್ತಿಯುಳ್ಳ’ ಜನರ ಹೃದಯಗಳನ್ನು ತೆರೆಯುವನು ಎಂಬ ವಿಷಯದಲ್ಲಿ ದೃಢಭರವಸೆಯಿಂದಿರಬಲ್ಲೆವು.​—⁠ಅ. ಕೃ. 13:⁠48, NW.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ