ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಸಭಿಕರನ್ನು ಪ್ರೋತ್ಸಾಹಿಸಿ ಬಲಪಡಿಸುವುದು
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
    • ಪರೀಕ್ಷೆಗಳನ್ನು ಅವರು ಎದುರಿಸಿದರೂ ಆತನು ಅವರಿಗೆ ನಿಜವಾಗಿಯೂ ಸಹಾಯಮಾಡುವನೆಂದೂ ಅವರು ವೈಯಕ್ತಿಕ ರೀತಿಯಲ್ಲಿ ನೋಡುವಂತೆ ನೀವು ಅವರನ್ನು ಶಕ್ತಗೊಳಿಸುವಿರಿ.—ಯೆಶಾ. 41:10, 13; 1 ಪೇತ್ರ 5:7.

      ದೇವರು ಈಗ ಏನನ್ನು ಮಾಡುತ್ತಿದ್ದಾನೊ ಅದರಲ್ಲಿ ಹರ್ಷವನ್ನು ತೋರಿಸಿರಿ. ನಿಮ್ಮ ಸಹೋದರರನ್ನು ಪ್ರೋತ್ಸಾಹಿಸಲು ಪ್ರಯತ್ನಿಸುತ್ತಿರುವಾಗ, ಯೆಹೋವನು ಈಗ ಏನು ಮಾಡುತ್ತಿದ್ದಾನೊ ಅದರ ಕಡೆಗೆ ಗಮನವನ್ನು ಸೆಳೆಯಿರಿ. ಇವುಗಳು ನಿಮಗೆ ಹರ್ಷವನ್ನು ನೀಡುತ್ತವೆ ಎಂಬುದನ್ನು ವ್ಯಕ್ತಪಡಿಸುವಂಥ ರೀತಿಯಲ್ಲಿ ಇವುಗಳ ಬಗ್ಗೆ ಮಾತಾಡುವುದು, ನಿಮ್ಮ ಕೇಳುಗರ ಹೃದಯದಲ್ಲಿಯೂ ತದ್ರೀತಿಯ ಭಾವನೆಗಳನ್ನು ಹುಟ್ಟಿಸುವುದು.

      ಜೀವನದ ಒತ್ತಡಗಳನ್ನು ನಿಭಾಯಿಸಲು ಯೆಹೋವನು ನಮಗೆ ಹೇಗೆ ಸಹಾಯಮಾಡುತ್ತಾನೆ ಎಂಬುದನ್ನು ಪರಿಗಣಿಸಿರಿ. ಆತನು ನಮಗೆ ಜೀವಿಸಲಿಕ್ಕಾಗಿರುವ ಅತ್ಯುತ್ತಮ ಮಾರ್ಗವನ್ನು ತೋರಿಸುತ್ತಾನೆ. (ಯೆಶಾ. 30:21) ಆತನು ಪಾತಕ, ಅನ್ಯಾಯ, ದಾರಿದ್ರ್ಯ, ರೋಗ ಮತ್ತು ಮರಣಗಳಿಗೆ ಕಾರಣವನ್ನು ವಿವರಿಸಿ, ಇವೆಲ್ಲವನ್ನು ಹೇಗೆ ಅಂತ್ಯಗೊಳಿಸುವನೆಂಬುದನ್ನು ನಮಗೆ ಹೇಳುತ್ತಾನೆ. ಒಂದು ಪ್ರೀತಿಪರ ಸಹೋದರತ್ವದಿಂದ ಆತನು ನಮ್ಮನ್ನು ಸುತ್ತುವರಿದಿದ್ದಾನೆ. ಆತನು ನಮಗೆ ಪ್ರಾರ್ಥನೆಯ ಅಮೂಲ್ಯವಾದ ಸುಯೋಗವನ್ನು ನೀಡುತ್ತಾನೆ. ನಾವು ಆತನ ಸಾಕ್ಷಿಗಳಾಗಿರುವಂತಹ ಸದವಕಾಶವನ್ನು ನಮಗೆ ದಯಪಾಲಿಸುತ್ತಾನೆ. ಕ್ರಿಸ್ತನು ಈಗಾಗಲೇ ಸ್ವರ್ಗದಲ್ಲಿ ಸಿಂಹಾಸನಾರೂಢನಾಗಿದ್ದಾನೆ ಮತ್ತು ಈ ಹಳೇ ವ್ಯವಸ್ಥೆಯ ಕಡೇ ದಿವಸಗಳು ವೇಗವಾಗಿ ಅಂತ್ಯವನ್ನು ಸಮೀಪಿಸುತ್ತಿವೆ ಎಂಬುದನ್ನು ನೋಡಲು ಆತನು ನಮ್ಮ ಕಣ್ಣುಗಳನ್ನು ತೆರೆಯುತ್ತಾನೆ.—ಪ್ರಕ. 12:1-12.

      ಈ ಆಶೀರ್ವಾದಗಳಿಗೆ ನಮ್ಮ ಸಭಾ ಕೂಟಗಳು, ಸಮ್ಮೇಳನಗಳು ಮತ್ತು ಅಧಿವೇಶನಗಳನ್ನು ಕೂಡಿಸಿರಿ. ಈ ಒದಗಿಸುವಿಕೆಗಳ ವಿಷಯದಲ್ಲಿ ನೀವು ನಿಜವಾಗಿಯೂ ಕೃತಜ್ಞತಾಪೂರ್ವಕ ರೀತಿಯಲ್ಲಿ ಮಾತಾಡುವಾಗ, ತಮ್ಮ ಸಹೋದರರೊಂದಿಗೆ ನೆರೆದು ಬರುವುದನ್ನು ಅಸಡ್ಡೆ ಮಾಡಬಾರದೆಂಬ ಇತರರ ದೃಢನಿರ್ಧಾರವನ್ನು ನೀವು ಇನ್ನಷ್ಟು ಬಲಪಡಿಸುವಿರಿ.—ಇಬ್ರಿ. 10:23-25.

      ನಾವು ಕ್ಷೇತ್ರ ಶುಶ್ರೂಷೆಯಲ್ಲಿ ಮಾಡುವ ಪ್ರಯತ್ನಗಳ ಮೇಲೆ ಯೆಹೋವನ ಆಶೀರ್ವಾದದ ಪುರಾವೆಯನ್ನು ನೀಡುವ ವರದಿಗಳು ಸಹ ಬಲವನ್ನು ಒದಗಿಸುವ ಮೂಲಗಳಾಗಿವೆ. ಒಂದನೆಯ ಶತಮಾನದಲ್ಲಿ ಪೌಲಬಾರ್ನಬರು ಯೆರೂಸಲೇಮಿಗೆ ಹೋಗುತ್ತಿದ್ದಾಗ, ಅನ್ಯಜನರು ಪರಿವರ್ತನೆ ಹೊಂದಿದ್ದರ ಕುರಿತು ವಿವರವಾಗಿ ಹೇಳುವ ಮೂಲಕ ಅವರು ಸಹೋದರರನ್ನು “ಬಹಳವಾಗಿ ಸಂತೋಷಪಡಿಸಿದರು.” (ಅ. ಕೃ. 15:3) ನೀವು ಸಹ, ಸಹೋದರರೊಂದಿಗೆ ಆತ್ಮೋನ್ನತಿ ಮಾಡುವಂಥ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ಅವರನ್ನು ಸಂತೋಷಪಡಿಸಬಲ್ಲಿರಿ.

      ತಾವು ಏನು ಮಾಡುತ್ತಿದ್ದಾರೊ ಅದರ ಮೌಲ್ಯವನ್ನು ನೋಡುವಂತೆ ವ್ಯಕ್ತಿಗಳಿಗೆ ಸಹಾಯಮಾಡುವಲ್ಲಿ, ಹೆಚ್ಚಿನ ಪ್ರೋತ್ಸಾಹವು ದೊರೆಯುವುದು. ಕ್ರೈಸ್ತ ಶುಶ್ರೂಷೆಯಲ್ಲಿ ಅವರು ಎಷ್ಟರ ಮಟ್ಟಿಗೆ ಪಾಲ್ಗೊಳ್ಳುತ್ತಿದ್ದಾರೋ ಅದಕ್ಕಾಗಿ ಅವರನ್ನು ಪ್ರಶಂಸಿಸಿರಿ. ವೃದ್ಧಾಪ್ಯ ಮತ್ತು ಕಾಯಿಲೆಯ ಕಾರಣ ಯಾರ ಚಟುವಟಿಕೆಯು ತೀರ ಸೀಮಿತವಾಗಿದ್ದರೂ ನಂಬಿಗಸ್ತಿಕೆಯ ತಾಳ್ಮೆಯನ್ನು ತೋರಿಸುತ್ತಾ ಮುಂದುವರಿಯುತ್ತಿದ್ದಾರೋ ಅಂಥವರನ್ನು ಪ್ರಶಂಸಿಸಿರಿ. ಯೆಹೋವನ ಹೆಸರಿಗೆ ಅವರು ತೋರಿಸಿರುವ ಪ್ರೀತಿಯನ್ನು ಆತನು ಎಂದೂ ಮರೆಯುವುದಿಲ್ಲವೆಂಬುದನ್ನು ಅವರಿಗೆ ಜ್ಞಾಪಕ ಹುಟ್ಟಿಸಿರಿ. (ಇಬ್ರಿ. 6:10) ಪರೀಕ್ಷಿಸಲ್ಪಟ್ಟು ಚೊಕ್ಕವಾದ ನಂಬಿಕೆಯು ಬೆಲೆಕಟ್ಟಲಾಗದಂಥ ಒಂದು ಸ್ವತ್ತಾಗಿದೆ. (1 ಪೇತ್ರ 1:6, 7) ಇದರ ಬಗ್ಗೆ ಸಹೋದರರಿಗೆ ಜ್ಞಾಪಕ ಹುಟ್ಟಿಸುವುದು ಆವಶ್ಯಕವಾಗಿದೆ.

      ಮುಂದಿರುವ ನಿರೀಕ್ಷೆಯ ಬಗ್ಗೆ ಭಾವಪೂರ್ಣವಾಗಿ ಮಾತಾಡಿರಿ. ದೇವರನ್ನು ಪ್ರೀತಿಸುವ ಎಲ್ಲರಿಗೆ, ಮುಂದೆ ಬರಲಿರುವ ವಿಷಯಗಳ ಕುರಿತಾದ ಪ್ರೇರಿತ ವಾಗ್ದಾನಗಳು ಪ್ರೋತ್ಸಾಹದ ದೊಡ್ಡ ಉಗಮವಾಗಿವೆ. ನಿಮ್ಮ ಸಭಿಕರಲ್ಲಿ ಅನೇಕರು ಈ ಅಭಿವ್ಯಕ್ತಿಗಳನ್ನು ಅನೇಕ ಬಾರಿ ಕೇಳಿಸಿಕೊಂಡಿದ್ದಿರಬಹುದು. ಆದರೆ ಈ ವಾಗ್ದಾನಗಳ ಬಗ್ಗೆ ಮಾತಾಡುವಾಗ ನೀವು ತೋರಿಸುವ ಗಣ್ಯತೆಯ ಮೂಲಕ, ನೀವು ಈ ವಾಗ್ದಾನಗಳನ್ನು ಸಜೀವಗೊಳಿಸಿ, ಅವುಗಳ ನೆರವೇರಿಕೆಯ ಬಗ್ಗೆ ಭರವಸೆಯನ್ನು ಹುಟ್ಟಿಸಿ, ಹೃದಯಗಳು ಕೃತಜ್ಞತಾಭಾವದಿಂದ ಉಕ್ಕಿ ಹರಿಯುವಂತೆ ಮಾಡಬಲ್ಲಿರಿ. ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನೀವು ಕಲಿತಿರುವುದನ್ನು ಅನ್ವಯಿಸಿಕೊಳ್ಳುವುದು ಅದನ್ನು ಮಾಡಲು ನಿಮಗೆ ಸಹಾಯಮಾಡಬಲ್ಲದು.

      ಯೆಹೋವನು ತಾನೇ ತನ್ನ ಜನರಿಗೆ ಮಹಾ ಪ್ರೋತ್ಸಾಹಕನೂ ಬಲದ ಮೂಲನೂ ಆಗಿದ್ದಾನೆ. ಹಾಗಿದ್ದರೂ, ಅಂತಹ ಆಶೀರ್ವಾದಗಳನ್ನು ಇತರರಿಗೆ ದಾಟಿಸುವುದರಲ್ಲಿ ನೀವು ಆತನೊಂದಿಗೆ ಸಹಕರಿಸಬಲ್ಲಿರಿ. ನೀವು ಸಭೆಗೆ ಭಾಷಣ ನೀಡುವ ಸಮಯದಲ್ಲಿ, ಅಂತಹ ಆಶೀರ್ವಾದಗಳನ್ನು ತಿಳಿಯಪಡಿಸುವುದಕ್ಕಾಗಿರುವ ಸಂದರ್ಭವನ್ನು ಸದುಪಯೋಗಿಸಿರಿ.

  • ಪ್ರಗತಿಯನ್ನು ಮಾಡುತ್ತಾ ಹೋಗಿರಿ
    ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯ ಶಿಕ್ಷಣದಿಂದ ಪ್ರಯೋಜನ ಪಡೆಯಿರಿ
    • ಪ್ರಗತಿಯನ್ನು ಮಾಡುತ್ತಾ ಹೋಗಿರಿ

      ಈ ಶಾಲಾ ಕಾರ್ಯಕ್ರಮದ ಸಲಹೆಯ ಅಂಶಗಳಲ್ಲಿ ಪ್ರತಿಯೊಂದರ ಮೇಲೆ ನೀವು ಕಾರ್ಯನಡಿಸಿದ್ದೀರೊ? ಶಿಫಾರಸ್ಸು ಮಾಡಲ್ಪಟ್ಟಿರುವ ಅಭ್ಯಾಸಪಾಠಗಳನ್ನೂ ನೀವು ಮಾಡಿ ಮುಗಿಸಿದ್ದೀರೊ? ಶಾಲೆಯಲ್ಲಿ ಇಲ್ಲವೆ ಇತರ ಕೂಟಗಳಲ್ಲಿ ಭಾಷಣಗಳನ್ನು ನೀಡುವಾಗ, ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಭಾಗವಹಿಸುವಾಗ ಪ್ರತಿಯೊಂದು ಅಂಶವನ್ನು ನೀವು ಅನ್ವಯಿಸಿಕೊಳ್ಳುತ್ತಿದ್ದೀರೊ?

      ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲಾ ಶಿಕ್ಷಣದಿಂದ ಪ್ರಯೋಜನ ಪಡೆಯುತ್ತಾ ಮುಂದುವರಿಯಿರಿ. ನೀವು ಎಷ್ಟೇ ದೀರ್ಘ ಕಾಲದಿಂದ ಭಾಷಣಗಳನ್ನು ಕೊಡುತ್ತಿರುವುದಾದರೂ, ನೀವು ಇನ್ನೂ ಹೆಚ್ಚು ಪ್ರಗತಿಯನ್ನು ಮಾಡಬಹುದಾದ ಕ್ಷೇತ್ರಗಳು ಇದ್ದೇ ಇರುತ್ತವೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ