-
ಭೀಕರ ರಹಸ್ಯವೊಂದು ಬಗೆಹರಿಸಲ್ಪಡುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
10, 11. (ಎ) ಸಂಯುಕ್ತ ರಾಷ್ಟ್ರವು 1986 ರಲ್ಲಿ ಏನನ್ನು ಘೋಷಿಸಿತು, ಮತ್ತು ಪ್ರತಿಕ್ರಿಯೆ ಏನಾಗಿತ್ತು? (ಬಿ) ಇಟೆಲಿಯ ಅಸಿಸೀಯಲ್ಲಿ, ಶಾಂತಿಗಾಗಿ ಪ್ರಾರ್ಥಿಸಲು ಎಷ್ಟು “ಧಾರ್ಮಿಕ ಕುಟುಂಬಗಳು” ಕೂಡಿಬಂದವು, ಮತ್ತು ದೇವರು ಅಂಥ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೊ? ವಿವರಿಸಿರಿ.
10 ಮಾನವ ಕುಲದ ನಿರೀಕ್ಷೆಗಳನ್ನು ಪ್ರೋತ್ಸಾಹಿಸುವ ಪ್ರಯತ್ನದಲ್ಲಿ ಸಂಯುಕ್ತ ರಾಷ್ಟ್ರ ಸಂಘವು 1986ನ್ನು “ಶಾಂತಿಯನ್ನು ಮತ್ತು ಮಾನವ ಕುಲದ ಭವಿಷ್ಯವನ್ನು ರಕ್ಷಿಸುವುದು” ಎಂಬ ಮುಖ್ಯ ವಿಷಯದೊಂದಿಗೆ ಅದನ್ನು “ಅಂತಾರಾಷ್ಟ್ರೀಯ ಶಾಂತಿ ವರ್ಷ” ವಾಗಿ ಘೋಷಿಸಿತು. ಯುದ್ಧ ಮಾಡುತ್ತಿರುವ ರಾಷ್ಟ್ರಗಳು ಕಡಿಮೆ ಪಕ್ಷ ಒಂದು ವರ್ಷಕ್ಕಾದರೂ ತಮ್ಮ ಶಸ್ತ್ರಗಳನ್ನು ಕೆಳಗಿಡಬೇಕೆನ್ನುವ ಕರೆಯು ನೀಡಲ್ಪಟ್ಟಿತು. ಅವುಗಳ ಪ್ರತಿಕ್ರಿಯೆ ಏನಾಗಿತ್ತು? ಅಂತಾರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆಯಿಂದ ಬಂದ ಒಂದು ವರದಿಗನುಸಾರ, ಐವತ್ತು ಲಕ್ಷದಷ್ಟು ಜನರು 1986ರ ಯುದ್ಧಗಳ ಫಲಿತಾಂಶವಾಗಿ ಕೊಲ್ಲಲ್ಪಟ್ಟರು! ಕೆಲವು ವಿಶಿಷ್ಟ ನಾಣ್ಯಗಳು ಮತ್ತು ಸ್ಮರಣಾತ್ಮಕವಾದ ಸ್ಟಾಂಪುಗಳು ಹೊರಡಿಸಲ್ಪಟ್ಟರೂ, ಅನೇಕ ರಾಷ್ಟ್ರಗಳು ಆ ವರ್ಷದಲ್ಲಿ ಶಾಂತಿಯ ಆದರ್ಶವನ್ನು ಬೆನ್ನಟ್ಟುವುದರಲ್ಲಿ ಹೆಚ್ಚೀನನ್ನೂ ಮಾಡಲಿಲ್ಲ. ಆದಾಗ್ಯೂ, ಲೋಕದ ಧರ್ಮಗಳು—ಸಂಯುಕ್ತ ರಾಷ್ಟ್ರದೊಂದಿಗೆ ಸಾಮರಸ್ಯ ಸಂಬಂಧಕ್ಕೆ ಸದಾ ತವಕ ಪಡುತ್ತಾ—ಆ ವರ್ಷವನ್ನು ವಿಭಿನ್ನ ರೀತಿಗಳಲ್ಲಿ—ಪ್ರಚುರ ಪಡಿಸುವುದಕ್ಕೆ ತೊಡಗಿದವು. ಜನವರಿ 1, 1986 ರಂದು, ಪೋಪ್ ಜಾನ್ ಪೌಲ್ II ಸಂಯುಕ್ತ ರಾಷ್ಟ್ರದ ಕಾರ್ಯವನ್ನು ಹೊಗಳಿದರು ಮತ್ತು ಹೊಸ ವರ್ಷವನ್ನು ಶಾಂತಿಗಾಗಿ ಸಮರ್ಪಿಸಿದರು. ಮತ್ತು ಅಕ್ಟೋಬರ 27 ರಂದು ಅವರು ಲೋಕದ ಅನೇಕ ಧರ್ಮಗಳ ಮುಖಂಡರನ್ನು ಶಾಂತಿಗಾಗಿ ಪ್ರಾರ್ಥಿಸಲಿಕ್ಕೆ ಇಟೆಲಿಯ ಅಸಿಸೀಯಲ್ಲಿ ಒಟ್ಟುಗೂಡಿಸಿದರು.
11 ಶಾಂತಿಗಾಗಿ ಇಂಥ ಪ್ರಾರ್ಥನೆಗಳನ್ನು ದೇವರು ಉತ್ತರಿಸುತ್ತಾನೋ? ಒಳ್ಳೇದು, ಈ ಧಾರ್ಮಿಕ ಮುಖಂಡರು ಯಾವ ದೇವರಿಗೆ ಪ್ರಾರ್ಥಿಸಿದರು? ನೀವು ಅವರನ್ನು ಕೇಳಿದರೆ, ಪ್ರತಿಗುಂಪು ಭಿನ್ನವಾದ ಉತ್ತರವನ್ನು ಕೊಡುವುದು. ಅನೇಕ ವಿಭಿನ್ನ ರೀತಿಗಳಲ್ಲಿ ಮಾಡಿದ ಪ್ರಾರ್ಥನೆಗಳನ್ನು ಕೇಳಲು ಮತ್ತು ಬೇಡಿಕೆಗಳನ್ನು ಸಮರ್ಪಿಸಲು ಲಕ್ಷಾಂತರ ದೇವರುಗಳ ದೇವಾಲಯವೊಂದು ಇದೆಯೋ? ಭಾಗವಹಿಸಿದವರಲ್ಲಿ ಅನೇಕರು ಕ್ರೈಸ್ತಪ್ರಪಂಚದ ತ್ರಯೈಕ್ಯವನ್ನು ಆರಾಧಿಸಿದರು.c ಬೌದ್ಧರು, ಹಿಂದುಗಳು ಮತ್ತು ಇನ್ನಿತರರು ಎಣಿಕೆಯಿಲ್ಲದಷ್ಟು ದೇವರುಗಳಿಗೆ ಪ್ರಾರ್ಥನೆಗಳನ್ನು ಪಠಿಸಿದರು. ಒಟ್ಟಿನಲ್ಲಿ, ಕ್ಯಾಂಟರ್‌ಬೆರಿಯ ಆಂಗ್ಲಿಕನ್ ಕ್ರೈಸ್ತ ಧರ್ಮಾಧ್ಯಕ್ಷರಿಂದ, ಬುದ್ಧ ಧರ್ಮದ ದಲೈ ಲಾಮಾರಿಂದ, ರಶ್ಯನ್ ಅರ್ತೊಡಕ್ಸ್ ಧರ್ಮಾಧಿಕಾರಿಗಳಿಂದ, ಟೊಕಿಯೊದ ಶಿಂಟೋ ಗುಡಿಯ ಮಂಡಲಿಯ ಅಧ್ಯಕ್ಷರಿಂದ, ಆಫ್ರಿಕದ ಸರ್ವಚೇತನವಾದಿಗಳಿಂದ, ಮತ್ತು ಗರಿಗಳ ತಲೆಯುಡಿಗೆಯಿಂದ ಅಲಂಕೃತರಾದ ಇಬ್ಬರು ಅಮೆರಿಕನ್ ಇಂಡಿಯನರೇ ಮುಂತಾದ ಪ್ರಮುಖರಿಂದ ಪ್ರತಿನಿಧಿಸಲ್ಪಟ್ಟಿದ್ದ 12 “ಧಾರ್ಮಿಕ ಕುಟುಂಬಗಳು” ಕೂಡಿಬಂದವು. ಅದೊಂದು ವರ್ಣಭರಿತ ಗುಂಪಾಗಿದ್ದು, ಕಡಿಮೆ ಪಕ್ಷ ನಯನ ಮನೋಹರವಾದ ಟೀವೀ ಪ್ರಸಾರವ್ಯಾಪ್ತಿಯನ್ನಾದರೂ ಉಂಟುಮಾಡಿತು. ಒಂದು ಗುಂಪು ಒಮ್ಮೆಗೆ 12 ಘಂಟೆಗಳ ತನಕ ಸತತವಾಗಿ ಪ್ರಾರ್ಥಿಸಿತು. (ಲೂಕ 20:45-47 ಹೋಲಿಸಿರಿ.) ಆದರೆ ಅವುಗಳಲ್ಲಿ ಯಾವುದೇ ಪ್ರಾರ್ಥನೆಗಳು, ಕೂಡಿದ ಸಭೆಯ ಮೇಲೆ ಸುತ್ತುತ್ತಿದ್ದ ಮಳೆಮೋಡಗಳನ್ನು ದಾಟಿ ಆಚೆ ಮುಟ್ಟಿದವೂ? ಇಲ್ಲ. ಈ ಕೆಳಗಿನ ಕಾರಣಗಳಿಗೋಸ್ಕರ:
12. ಲೋಕದ ಧಾರ್ಮಿಕ ಮುಖಂಡರು ಶಾಂತಿಗಾಗಿ ಮಾಡಿದ ಪ್ರಾರ್ಥನೆಗಳನ್ನು ದೇವರು ಯಾವ ಕಾರಣಗಳಿಗಾಗಿ ಉತ್ತರಿಸಲಿಲ್ಲ?
12 “ಯೆಹೋವನ ಹೆಸರಿನಲ್ಲಿ ನಡೆಯುವವ” ರಿಗೆ ವಿಪರ್ಯಸ್ತವಾಗಿ, ಆ ಧಾರ್ಮಿಕರಲ್ಲಿ ಯಾರೊಬ್ಬನೂ, ಯಾರ ಹೆಸರು ಬೈಬಲಿನ ಮೂಲಗ್ರಂಥದಲ್ಲಿ ಸುಮಾರು 7,000 ಬಾರಿ ಕಂಡುಬರುತ್ತದೋ ಆ ಜೀವಂತ ದೇವರಾದ ಯೆಹೋವನಿಗೆ ಪ್ರಾರ್ಥಿಸಲಿಲ್ಲ. (ಮೀಕ 4:5; ಯೆಶಾಯ 42:8, 12)d ಒಂದು ಗುಂಪಿನೋಪಾದಿ, ಅವರು ದೇವರನ್ನು ಯೇಸುವಿನ ಹೆಸರಿನಲ್ಲಿ ಸಮೀಪಿಸಲಿಲ್ಲ, ಇವರಲ್ಲಿ ಅಧಿಕಾಂಶ ಮಂದಿ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟವರೂ ಆಗಿರಲಿಲ್ಲ. (ಯೋಹಾನ 14:13; 15:16) ಮಾನವ ಕುಲದ ನಿಜ ನಿರೀಕ್ಷೆಯಾಗಿ ಬರಲಿರುವ ದೇವರ ರಾಜ್ಯವನ್ನು—ಸಂಯುಕ್ತ ರಾಷ್ಟ್ರ ಸಂಘವನ್ನಲ್ಲ—ಲೋಕವ್ಯಾಪಕವಾಗಿ ಪ್ರಚುರಪಡಿಸುವುದೇ ನಮ್ಮೀ ದಿನಗಳಲ್ಲಿ ದೇವರ ಚಿತ್ತವಾಗಿರುವಾಗ, ಅದನ್ನು ಇವರಲ್ಲಿ ಯಾರೊಬ್ಬನೂ ಮಾಡುತ್ತಿರಲಿಲ್ಲ. (ಮತ್ತಾಯ 7:21-23; 24:14; ಮಾರ್ಕ 13:10) ಬಹು ಮಟ್ಟಿಗೆ, ಈ ಶತಮಾನದ ಎರಡು ಲೋಕ ಯುದ್ಧಗಳ ಸಹಿತ, ಅವರ ಧಾರ್ಮಿಕ ಸಂಸ್ಥೆಗಳು ಇತಿಹಾಸದ ಕ್ರೂರ ಯುದ್ಧಗಳಲ್ಲಿ, ಆಳವಾಗಿ ಮುಳುಗಿದ್ದವು. ಇಂಥವರಿಗೆ ದೇವರು ಹೇಳುವುದು: “ನೀವು ಬಹು ಪ್ರಾರ್ಥನೆಗಳನ್ನು ಮಾಡಿದರೂ ನಾನು ಕೇಳೆನು, ನಿಮ್ಮ ಕೈಗಳಲ್ಲಿ ರಕ್ತವು ತುಂಬಿದೆ.”—ಯೆಶಾಯ 1:15; 59:1-3.
13. (ಎ) ಲೋಕದ ಧಾರ್ಮಿಕ ಮುಖಂಡರು ಶಾಂತಿಗಾಗಿ ಕರೆನೀಡುವುದರಲ್ಲಿ ಸಂಯುಕ್ತ ರಾಷ್ಟ್ರದೊಂದಿಗೆ ಜತೆಗೂಡುವುದು ತಾನೇ ಯಾಕೆ ಬಹು ಮಹತ್ವದ್ದಾಗಿದೆ? (ಬಿ) ಶಾಂತಿಗಾಗಿ ಕೂಗುವಿಕೆಗಳು ದೈವಿಕವಾಗಿ ಮುಂತಿಳಿಸಲ್ಪಟ್ಟ ಯಾವ ಪರಾಕಾಷ್ಠೆಯಲ್ಲಿ ತುತ್ತತುದಿಗೇರುವುದು?
13 ಇನ್ನೂ ಹೆಚ್ಚಾಗಿ, ಈ ಸಮಯದಲ್ಲಿ ಲೋಕದ ಧಾರ್ಮಿಕ ಮುಖಂಡರು ಶಾಂತಿಗಾಗಿ ಕರೆಯುವುದರಲ್ಲಿ ಸಂಯುಕ್ತ ರಾಷ್ಟ್ರ ಸಂಘದೊಂದಿಗೆ ಜೊತೆ ಸೇರುವುದಕ್ಕೆ ಆಳವಾದ ಮಹತ್ವವಿದೆ. ತಮ್ಮ ಸ್ವಂತ ಅನುಕೂಲತೆಗೆ, ವಿಶೇಷವಾಗಿ ತಮ್ಮ ಇಷ್ಟೊಂದು ಜನರು ಧರ್ಮವನ್ನು ತೊರೆಯುವ ಈ ಆಧುನಿಕ ಯುಗದಲ್ಲಿ, ಸಂಯುಕ್ತ ರಾಷ್ಟ್ರವನ್ನು ಪ್ರಭಾವಿಸಲು ಅವರು ಬಯಸುತ್ತಾರೆ. ಪ್ರಾಚೀನ ಇಸ್ರಾಯೇಲಿನ ಅಪನಂಬಿಗಸ್ತ ಮುಖಂಡರಂತೆ, “ಶಾಂತಿಯಿಲ್ಲದಿರುವಾಗ ಶಾಂತಿ ಇದೆ! ಶಾಂತಿ ಇದೆ!” ಎಂದು ಅವರು ಕೂಗುತ್ತಾರೆ. (ಯೆರೆಮೀಯ 6:14, NW) ಶಾಂತಿಗಾಗಿ ಅವರ ಕೂಗುಗಳು ಅಪೊಸ್ತಲ ಪೌಲನು ಯಾವುದರ ಕುರಿತು ಪ್ರವಾದಿಸಿದನೋ, ಅದರ ಪರಾಕಾಷ್ಠೆಯ ಬೆಂಬಲದಲ್ಲಿ ಮುಂದುವರಿಯುವವು ಎಂಬುದಕ್ಕೆ ಸಂದೇಹವಿಲ್ಲ: “ರಾತ್ರಿ ಕಾಲದಲ್ಲಿ ಕಳ್ಳನು ಹೇಗೆ ಬರುತ್ತಾನೋ ಹಾಗೆಯೇ ಕರ್ತನ ದಿನವು ಬರುವುದೆಂದು ನೀವೇ ಚೆನ್ನಾಗಿ ತಿಳಿದಿದ್ದೀರಲ್ಲಾ. ಸಮಾಧಾನವಾಗಿಯೂ ನಿರ್ಭಯವಾಗಿಯೂ ಇರುತ್ತೇವೆಂದು ಜನರು ಹೇಳುತ್ತಿರುವಾಗಲೇ ಅವರ ಮೇಲೆ ನಾಶನವು ಗರ್ಭಿಣಿಗೆ ಪ್ರಸವವೇದನೆ ಬರುವ ಪ್ರಕಾರ ಬರುವದು; ಅವರು ಹೇಗೂ ತಪ್ಪಿಸಿಕೊಳ್ಳಲಾರರು.”—1 ಥೆಸಲೊನೀಕ 5:2, 3.
14. “ಶಾಂತಿ ಮತ್ತು ಭದ್ರತೆ!”ಯ ಕೂಗು ಯಾವ ರೂಪವನ್ನು ತೆಗೆದುಕೊಳ್ಳುವುದು, ಮತ್ತು ಅದರಿಂದ ತಪ್ಪುದಾರಿಗೆಳೆಯಲ್ಪಡುವುದನ್ನು ಒಬ್ಬನು ಹೇಗೆ ತಡೆಯಸಾಧ್ಯವಿದೆ?
14 “ಶಾಂತಿ ಮತ್ತು ಭದ್ರತೆ!”ಯ ಈ ಮಹತ್ವದ ಕೂಗು ಯಾವ ರೂಪವನ್ನು ತೆಗೆದುಕೊಳ್ಳಲಿರುವುದು? ಆ ಕೂಗನ್ನು ಮಾಡುವವರ ಮೇಲೆ ಬರುವ ಕ್ಷಿಪ್ರ ನಾಶನದ ಸ್ವಲ್ಪ ಮುಂಚೆ, ಅದು ಗಮನಾರ್ಹವಾಗಿರುವುದು ಎಂದು ಇಲ್ಲಿ ಹೇಳಲಾಗಿದೆ. ಆದಕಾರಣ, ಲೋಕ ಧುರೀಣರಿಂದ ಈ ಮುಂಚೆ ಘೋಷಿಸಿರುವುದಕ್ಕಿಂತಲೂ ಇದೇನೋ ಹೆಚ್ಚು ಪ್ರಮಾಣದ್ದಾಗಿರಬೇಕು. ಇದು ಒಂದು ಭೂವ್ಯಾಪಕ ಪ್ರಮಾಣದ್ದಾಗಿರುವುದು ಎಂಬುದರಲ್ಲಿ ಸಂದೇಹವೇನೂ ಇಲ್ಲ. ಆದರೂ, ಅದು ಒಂದು ಮುಖವಾಡಕ್ಕಿಂತ ಹೆಚ್ಚೇನೂ ಆಗಿರದು. ಕೆಳಗಡೆ, ನಿಜವಾಗಿ ಯಾವ ಬದಲಾವಣೆಯೂ ಆಗಿರದು. ಸ್ವಾರ್ಥ, ದ್ವೇಷ, ದುಷ್ಕೃತ್ಯ, ಕುಟುಂಬ ಕುಸಿತ, ಅನೈತಿಕತೆ, ರೋಗ, ವ್ಯಥೆ, ಮತ್ತು ಮರಣವು ಇನ್ನೂ ಇಲ್ಲಿ ಇರುವುದು. ಬೈಬಲಿನ ಪ್ರವಾದನೆಗೆ ಎಚ್ಚರವಾಗಿರದೇ ಇರುವವರನ್ನು ಬರಲಿರುವ ಕೂಗು ತಪ್ಪುದಾರಿಗೆ ನಡಿಸುವುದು. ಆದರೆ, ನೀವು ಲೋಕ ಘಟನೆಗಳ ಅರ್ಥಕ್ಕೆ ಜಾಗ್ರತರಾಗಿರುವುದಾದರೆ, ಮತ್ತು ದೇವರ ವಾಕ್ಯದಲ್ಲಿನ ಪ್ರವಾದನಾ ಎಚ್ಚರಿಕೆಗಳಿಗೆ ಕಿವಿಗೊಟ್ಟಿರುವುದಾದರೆ, ಅದು ನಿಮ್ಮನ್ನು ತಪ್ಪುದಾರಿಗೆ ನಡಿಸುವ ಜರೂರಿಯೇನೂ ಇಲ್ಲ.—ಮಾರ್ಕ 13:32-37; ಲೂಕ 21:34-36.
-
-
ಮಹಾ ಬಾಬೆಲನ್ನು ಹತಿಸುವುದುಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
-
-
1. ಕಡುಗೆಂಪು ಬಣ್ಣದ ಕಾಡು ಮೃಗವನ್ನು ದೂತನು ಹೇಗೆ ವರ್ಣಿಸುತ್ತಾನೆ, ಮತ್ತು ಪ್ರಕಟನೆಯ ಸಂಕೇತಗಳನ್ನು ಅರ್ಥಮಾಡಿಕೊಳ್ಳಲು ಯಾವ ರೀತಿಯ ವಿವೇಕದ ಅಗತ್ಯವಿದೆ?
ಪ್ರಕಟನೆ 17:3ರ ಕಡುಗೆಂಪು ಬಣ್ಣದ ಕಾಡು ಮೃಗವನ್ನು ಇನ್ನೂ ಹೆಚ್ಚು ವಿವರಿಸುತ್ತಾ ದೇವದೂತನು ಯೋಹಾನನಿಗೆ ಹೀಗನ್ನುತ್ತಾನೆ: “ವಿವೇಕವಿರುವ ಬುದ್ಧಿಯು ಒಳಬರುವುದು ಇಲ್ಲಿಯೇ. ಆ ಏಳು ತಲೆಗಳು ಅಂದರೆ ಶಿಖರದಲ್ಲಿ ಆ ಸ್ತ್ರೀ ಕೂತಿರುವ ಏಳು ಬೆಟ್ಟಗಳು; ಮತ್ತು ಅಲ್ಲಿ ಏಳು ಮಂದಿ ಅರಸರು ಇದ್ದಾರೆ: ಐದು ಮಂದಿ ಬಿದ್ದುಹೋಗಿದ್ದಾರೆ, ಒಬ್ಬನು ಇದ್ದಾನೆ, ಮತ್ತೊಬ್ಬನು ಇನ್ನೂ ಬಂದಿಲ್ಲ, ಆದರೆ ಅವನು ಬಂದು ಸೇರಿದಾಗ ಸ್ವಲ್ಪಕಾಲ ಇರಬೇಕು.” (ಪ್ರಕಟನೆ 17:9, 10, NW) ದೇವದೂತನು ಇಲ್ಲಿ ಮೇಲಣ ವಿವೇಕವನ್ನು, ಪ್ರಕಟನೆಯಲ್ಲಿನ ಚಿಹ್ನೆಗಳ ತಿಳಿವಳಿಕೆಯನ್ನು ಕೊಡಸಾಧ್ಯವಿರುವ ಒಂದೇ ವಿವೇಕವನ್ನು ತಿಳಿಯಪಡಿಸುತ್ತಿದ್ದಾನೆ. (ಯಾಕೋಬ 3:17) ಈ ವಿವೇಕವು ನಾವು ಜೀವಿಸುವ ಸಮಯಗಳ ಗಂಭೀರತೆಯ ಸಂಬಂಧವಾಗಿ ಯೋಹಾನ ವರ್ಗ ಮತ್ತು ಅದರ ಸಂಗಾತಿಗಳಿಗೆ ಜ್ಞಾನೋದಯವನ್ನು ಉಂಟುಮಾಡುತ್ತದೆ. ಅದು ಅರ್ಪಿತ ಹೃದಯಗಳಲ್ಲಿ ಈಗ ಜಾರಿಗೊಳಿಸಲ್ಪಡಲಿರುವ ಯೆಹೋವನ ತೀರ್ಪುಗಳಿಗೆ ಗಣ್ಯತೆಯನ್ನು ಕಟ್ಟುತ್ತದೆ, ಮತ್ತು ಯೆಹೋವನೆಡೆಗೆ ಒಂದು ಹಿತಕರ ಭಯವನ್ನು ಮನಸ್ಸಿಗೆ ಹತ್ತಿಸುತ್ತದೆ. ಜ್ಞಾನೋಕ್ತಿ 9:10 ತಿಳಿಸುವಂತೆ: “ಯೆಹೋವನ ಭಯವೇ ಜ್ಞಾನಕ್ಕೆ (ವಿವೇಕ, NW) ಮೂಲವು, ಪರಿಶುದ್ಧನ ತಿಳುವಳಿಕೆಯೇ (ಜ್ಞಾನವೇ, NW) ವಿವೇಕವು (ತಿಳಿವಳಿಕೆ, NW).” ದೈವಿಕ ವಿವೇಕವು ನಮಗೆ ಕಾಡು ಮೃಗದ ಕುರಿತು ಏನನ್ನು ಅರುಹುತ್ತದೆ?
2. ಕಡುಗೆಂಪು ಬಣ್ಣದ ಕಾಡು ಮೃಗದ ಏಳು ತಲೆಗಳ ಅರ್ಥವೇನಾಗಿದೆ, ಮತ್ತು “ಐದು ಮಂದಿ ಬಿದ್ದು ಹೋಗಿದ್ದಾರೆ, ಒಬ್ಬನು ಇದ್ದಾನೆ” ಹೇಗೆ?
2 ಆ ಭಯಂಕರ ಕಾಡು ಮೃಗದ ಏಳು ತಲೆಗಳು ಏಳು “ಬೆಟ್ಟಗಳಿಗೆ” ಯಾ ಏಳು “ಅರಸರಿಗೆ” ಸೂಚಕವಾಗಿವೆ. ಎರಡು ಪದಗಳನ್ನೂ ಶಾಸ್ತ್ರೀಯವಾಗಿ ಸರಕಾರೀ ಶಕ್ತಿಗಳನ್ನು ಸೂಚಿಸಲು ಉಪಯೋಗಿಸಲಾಗುತ್ತದೆ. (ಯೆರೆಮೀಯ 51:24, 25; ದಾನಿಯೇಲ 2:34, 35, 44, 45) ಬೈಬಲಿನಲ್ಲಿ ದೇವರ ಜನರ ವ್ಯವಹಾರಗಳ ಮೇಲೆ ಪರಿಣಾಮ ಬೀರಿದ ಆರು ಲೋಕ ಶಕ್ತಿಗಳನ್ನು ತಿಳಿಸಲಾಗಿದೆ: ಐಗುಪ್ತ, ಅಶ್ಶೂರ್ಯ, ಬಾಬೆಲ್, ಮೇದ್ಯ-ಪಾರಸಿಯ, ಗ್ರೀಸ್ ಮತ್ತು ರೋಮ್. ಇವುಗಳ ಪೈಕಿ ಯೋಹಾನನು ಪ್ರಕಟನೆಯನ್ನು ಪಡೆದ ಸಮಯದ ತನಕ ಐದು ಈಗಾಗಲೇ ಬಂದು ಹೋಗಿದ್ದವು, ಆದರೆ ರೋಮ್ ಬಹುಮಟ್ಟಿಗೆ ಇನ್ನೂ ಒಂದು ಲೋಕ ಶಕ್ತಿಯಾಗಿತ್ತು. “ಐದು ಮಂದಿ ಬಿದ್ದುಹೋಗಿದ್ದಾರೆ, ಒಬ್ಬನು ಇದ್ದಾನೆ” ಎಂಬ ಮಾತುಗಳೊಂದಿಗೆ ಇದು ಉತ್ತಮವಾಗಿ ಸರಿದೂಗುತ್ತದೆ. ಆದರೆ ಸಕಾಲಕ್ಕೆ ಬರಲಿದ್ದ “ಮತ್ತೊಬ್ಬನ” ಕುರಿತೇನು?
3. (ಎ) ರೋಮನ್ ಸಾಮ್ರಾಜ್ಯವು ಹೇಗೆ ವಿಭಾಗಿಸಲ್ಪಟ್ಟಿತು? (ಬಿ) ಪಶ್ಚಿಮದಲ್ಲಿ ಯಾವೆಲ್ಲಾ ಬೆಳವಣಿಗೆಗಳು ಆದವು? (ಸಿ) ಪವಿತ್ರ ರೋಮನ್ ಸಾಮ್ರಾಜ್ಯವನ್ನು ಹೇಗೆ ದೃಷ್ಟಿಸಬೇಕು?
3 ರೋಮನ್ ಸಾಮ್ರಾಜ್ಯವು ಬಾಳಿತು ಮತ್ತು ಯೋಹಾನನ ದಿನಗಳ ಅನಂತರ ನೂರಾರು ವರ್ಷಗಳ ತನಕ ವಿಸ್ತರಿಸಿತು ಸಹ. ಸಾ. ಶ. 330 ರಲ್ಲಿ ಚಕ್ರವರ್ತಿ ಕಾನ್‌ಸ್ಟ್ಯಾಂಟೀನ್ ತನ್ನ ರಾಜಧಾನಿಯನ್ನು ರೋಮಿನಿಂದ ಬಜ್ಯಾನ್‌ಟೀಯಮ್‌ಗೆ ಸ್ಥಳಾಂತರಿಸಿದನು. ಅದಕ್ಕೆ ಅವನು ಅನಂತರ ಕಾನ್‌ಸ್ಟ್ಯಾಂಟಿನೋಪಲ್ ಎಂದು ಪುನಃ ನಾಮಕರಣ ಮಾಡಿದನು. ಸಾ. ಶ. 395 ರಲ್ಲಿ ರೋಮನ್ ಸಾಮ್ರಾಜ್ಯವು ಪೂರ್ವ ಮತ್ತು ಪಶ್ಚಿಮ ಭಾಗಗಳಾಗಿ ಒಡೆಯಿತು. ಸಾ. ಶ. 410 ರಲ್ಲಿ, ರೋಮ್ ತಾನೇ ವಿಸಿಗೋತ್‌ಗಳ (“ಕ್ರೈಸ್ತತ್ವ”ದ ಅರೀಯನ್ ಗುಂಪಿಗೆ ಮತಾಂತರಿಸಲ್ಪಟ್ಟ ಜರ್ಮನಿಯ ಒಂದು ಕುಲ) ಅಲಾರಿಕ್ ರಾಜನ ಹಸ್ತಗತವಾಯಿತು. ಜರ್ಮನಿಯ ಕುಲಗಳು (ಇವರೂ “ಕ್ರೈಸ್ತರು”) ಸ್ಪೆಯಿನನ್ನು ಮತ್ತು ಉತ್ತರ ಆಫ್ರಿಕದಲ್ಲಿನ ರೋಮಿನ ಬಹು ಅಂಶ ಪ್ರದೇಶವನ್ನು ಆಕ್ರಮಣ ಮಾಡಿ ಜಯಿಸಿದವು. ಯೂರೋಪಿನಲ್ಲಿ ಶತಮಾನಗಳ ಉತ್ಕ್ರಾಂತಿ, ಅವಿಶ್ರಾಂತಿ ಮತ್ತು ಹೊಂದಾಣಿಸುವಿಕೆ ಇತ್ತು. ಯಾರು 9 ನೆಯ ಶತಮಾನದಲ್ಲಿ ಪೋಪ್ ಲಿಯೋ III, ಮತ್ತು 13 ನೆಯ ಶತಮಾನದಲ್ಲಿ ಅಳಿಕ್ವೆ ನಡಿಸಿದ ಫ್ರೆಡರಿಕ್ II ರೊಂದಿಗೆ ಮೈತ್ರಿಸಂಧಾನವನ್ನು ರಚಿಸಿದನೋ, ಆ ಷಾರ್ಲ್‌ಮೇನ್‌ನಂತಹ ಪ್ರಮುಖ ಚಕ್ರವರ್ತಿಗಳು ಪಶ್ಚಿಮದಲ್ಲಿ ಎದ್ದರು. ಆದರೆ ಅವರ ರಾಜ್ಯವು ಪವಿತ್ರ ರೋಮನ್ ಸಾಮ್ರಾಜ್ಯವಾಗಿ ಹೆಸರಿಸಲ್ಪಟ್ಟರೂ, ಅದರ ಅಧಿಕಾರ ಕ್ಷೇತ್ರವು ಹಿಂದಣ ರೋಮನ್ ಸಾಮ್ರಾಜ್ಯವು ಉಚ್ಛಾಯ್ರ ಸ್ಥಿತಿಯಲ್ಲಿದ್ದಾಗಿನ ಕ್ಷೇತ್ರಕ್ಕಿಂತ ತೀರಾ ಚಿಕ್ಕದಾಗಿತ್ತು. ಅದು ಹೊಸ ಸಾಮ್ರಾಜ್ಯಕ್ಕಿಂತ ಹೆಚ್ಚಾಗಿ ಈ ಪುರಾತನ ಶಕ್ತಿಯ ಪುನಃ ಸ್ಥಾಪನೆ ಅಥವಾ ಮುಂದುವರಿಸುವಿಕೆಯಾಗಿತ್ತು.
4. ಪ್ರಾಚ್ಯ ಸಾಮ್ರಾಜ್ಯಕ್ಕೆ ಯಾವೆಲ್ಲಾ ಯಶಸ್ಸುಗಳು ಸಿಕ್ಕಿದವು, ಆದರೆ ಪುರಾತನ ರೋಮಿನ ಮೊದಲಿನ ಕ್ಷೇತ್ರವಾಗಿದ್ದ ಉತ್ತರ ಆಫ್ರಿಕ, ಸ್ಪೆಯಿನ್, ಮತ್ತು ಸಿರಿಯದ ಹೆಚ್ಚಿನ ಭಾಗಗಳಿಗೆ ಏನು ಸಂಭವಿಸಿತು?
4 ಕಾನ್‌ಸ್ಟ್ಯಾಂಟಿನೋಪಲ್‌ನಲ್ಲಿ ಕೇಂದ್ರೀಕೃತವಾದ ರೋಮಿನ ಪೂರ್ವ ಸಾಮ್ರಾಜ್ಯವು ಪಾಶ್ಚಾತ್ಯ ಸಾಮ್ರಾಜ್ಯದೊಂದಿಗೆ ಹೆಚ್ಚು ಕಡಿಮೆ ಆತಂಕದ ಸಂಬಂಧದಲ್ಲಿ ಬಾಳಿತು. ಪೌರಸ್ತ್ಯ ಚಕ್ರವರ್ತಿಯಾದ I ನೆಯ ಜಸಿನ್ಟಿಯನ್ ಉತ್ತರ ಆಫ್ರಿಕದ ಬಹುಭಾಗವನ್ನು ಪುನಃ ಜಯಿಸಶಕ್ತನಾದನು. ಮತ್ತು ಅವನು ಸ್ಪೆಯಿನ್ ಮತ್ತು ಇಟೆಲಿಯಲ್ಲಿಯೂ ಹಸ್ತಕ್ಷೇಪಮಾಡಿದನು. ಏಳನೆಯ ಶತಮಾನದಲ್ಲಿ II ನೆಯ ಜಸಿನ್ಟಿಯನ್ ಸ್ಲಾವ್ ಬಣದವರಿಂದ ಜಯಿಸಲಾದ ಮೆಕೆದೋನ್ಯದ ಕ್ಷೇತ್ರಗಳನ್ನು ಸಾಮ್ರಾಜ್ಯಕ್ಕಾಗಿ ಮರಳಿ ಪಡೆದನು. ಆದಾಗ್ಯೂ, ಎಂಟನೆಯ ಶತಮಾನದೊಳಗೆ ಉತ್ತರ ಆಫ್ರಿಕ, ಸ್ಪೆಯಿನ್ ಮತ್ತು ಸಿರಿಯದಲ್ಲಿನ ಪ್ರಾಚೀನ ರೋಮಿನ ಹಿಂದಿನ ಪ್ರದೇಶದ ಬಹುಭಾಗವು ಇಸ್ಲಾಮಿನ ಹೊಸ ಸಾಮ್ರಾಜ್ಯದ ಕೆಳಗೆ ಬಂದುಬಿಟ್ಟಿತು, ಮತ್ತು ಹೀಗೆ ಕಾನ್‌ಸ್ಟ್ಯಾಂಟಿನೋಪಲ್ ಮತ್ತು ರೋಮ್—ಇವೆರಡರ ಹತೋಟಿಯಿಂದ ತಪ್ಪಿ ಹೋಯಿತು.
5. ರೋಮ್ ನಗರವು ಸಾ. ಶ. 410 ರಲ್ಲಿ ಪತನಗೊಂಡರೂ, ರಾಜಕೀಯ ರೋಮನ್ ಸಾಮ್ರಾಜ್ಯದ ಎಲ್ಲಾ ಸುಳಿವುಗಳನ್ನು ಲೋಕರಂಗದಿಂದ ಅಳಿಸಿಬಿಡಲು ಇನ್ನೂ ಹೆಚ್ಚು ಶತಮಾನಗಳನ್ನು ತೆಗೆದುಕೊಂಡದ್ದು ಹೇಗೆ?
5 ಕಾನ್‌ಸ್ಟ್ಯಾಂಟಿನೋಪಲ್ ನಗರವು ತಾನೇ ತುಸು ದೀರ್ಘಕಾಲ ಬಾಳಿತು. ಅದು ಪರ್ಸಿಯನರಿಂದ, ಅರಬಿಗಳಿಂದ, ಬಲ್ಗಾರರಿಂದ ಮತ್ತು ರಷ್ಯನರಿಂದ ಪದೇ ಪದೇ ಬಂದ ಆಕ್ರಮಣಗಳನ್ನು ಪಾರಾಗಿ ಕೊನೆಗೆ 1203 ರಲ್ಲಿ ಮುಸ್ಲಿಮರೆದುರಲ್ಲ, ಬದಲಾಗಿ ಪಶ್ಚಿಮದಿಂದ ಬಂದ ಕ್ರುಸೇಡರೆದುರು ಪತನಗೊಂಡಿತು. ಆದರೂ, 1453 ರಲ್ಲಿ ಅದು ಮುಸ್ಲಿಮ್ ಆಟೊಮನ್ ರಾಜನಾದ II ನೆಯ ಮೆಹ್ಮೆಡ್‌ನ ಅಧಿಕಾರದ ಕೆಳಗೆ ಬಂತು, ಮತ್ತು ಬೇಗನೇ ಆಟೊಮನ್‌ನ ಯಾ ಟರ್ಕಿಶ್ ಸಾಮ್ರಾಜ್ಯದ ರಾಜಧಾನಿಯಾಯಿತು. ಹೀಗೆ, ರೋಮ್ ನಗರವು ಸಾ. ಶ. 410 ರಲ್ಲಿ ಪತನಗೊಂಡರೂ, ರಾಜಕೀಯ ರೋಮನ್ ಸಾಮ್ರಾಜ್ಯದ ಎಲ್ಲಾ ಕುರುಹುಗಳು ಲೋಕದೃಶ್ಯದಿಂದ ಗತಿಸಿ ಹೋಗಲು ಅನೇಕ ಶತಮಾನಗಳನ್ನು ತೆಗೆದುಕೊಂಡಿತು. ಮತ್ತು ಆಗಲೂ, ಅದರ ಪ್ರಭಾವವನ್ನು ರೋಮಿನ ಪೋಪನ ಹುದ್ದೆಯ ಮೇಲೆ ಮತ್ತು ಈಸರ್ನ್ಟ್ ಆರ್ತೊಡಾಕ್ಸ್ ಚರ್ಚುಗಳ ಮೇಲೆ ಆಧಾರಿತವಾದ ಧಾರ್ಮಿಕ ಸಾಮ್ರಾಜ್ಯಗಳಲ್ಲಿ ಇನ್ನೂ ಗ್ರಹಿಸಬಹುದಾಗಿತ್ತು.
6. ಯಾವ ಹೊಚ್ಚ ಹೊಸ ಸಾಮ್ರಾಜ್ಯಗಳು ವಿಕಸಿಸಿದವು, ಮತ್ತು ಅದರಲ್ಲಿ ಅತಿ ಯಶಸ್ವಿಯಾದ ಒಂದು ಯಾವುದು?
6 ಆದಾಗ್ಯೂ, 15 ನೆಯ ಶತಮಾನದೊಳಗೆ, ಕೆಲವು ದೇಶಗಳು ಪೂರ್ಣ ಹೊಸ ಸಾಮ್ರಾಜ್ಯಗಳನ್ನು ಕಟ್ಟುತ್ತಿದ್ದವು. ಈ ಕೆಲವು ಹೊಸ ಚಕ್ರಾಧಿಪತ್ಯ ಅಧಿಕಾರಗಳು ರೋಮಿನ ಪೂರ್ವ ವಸಾಹತುಗಳ ಪ್ರದೇಶದಲ್ಲಿ ಕಂಡುಬಂದು, ಅವರ ಸಾಮ್ರಾಜ್ಯಗಳು ರೋಮನ್ ಸಾಮ್ರಾಜ್ಯದ ಕೇವಲ ಮುಂದುವರಿಸುವಿಕೆಗಳಾಗಿರಲಿಲ್ಲ. ಪೋರ್ಚುಗಲ್, ಸ್ಪೆಯಿನ್, ಫ್ರಾನ್ಸ್ ಮತ್ತು ಹಾಲ್ಲಿಂಡ್ ಎಲ್ಲವೂ ಬಹುದೂರ ವ್ಯಾಪಿಸಿದ ಪ್ರಭುತ್ವಗಳ ಪೀಠಗಳಾದವು. ಆದರೆ ಬ್ರಿಟನ್ ಅತಿ ಯಶಸ್ವಿಯಾಗಿ, ‘ಸೂರ್ಯನು ಎಂದೂ ಅಸ್ತಮಿಸದ’ ಒಂದು ಬಲುದೊಡ್ಡ ಸಾಮ್ರಾಜ್ಯದ ಮೇಲೆ ಅಧ್ಯಕ್ಷತೆ ನಡೆಸಿತು. ಈ ಸಾಮ್ರಾಜ್ಯವು ಬೇರೆ ಬೇರೆ ಸಮಯಗಳಲ್ಲಿ ಉತ್ತರ ಅಮೆರಿಕ, ಆಫ್ರಿಕ, ಭಾರತ, ಮತ್ತು ಆಗ್ನೇಯ ಏಶ್ಯಾದ ಹೆಚ್ಚಿನ ಭಾಗಗಳಲ್ಲಿ ಮಾತ್ರವಲ್ಲದೆ ದಕ್ಷಿಣ ಪೆಸಿಫಿಕ್‌ನ ವೈಶಾಲ್ಯದ ಮೇಲೆ ಹರಡಿತು.
7. ಒಂದು ರೀತಿಯ ಉಭಯ ಶಕ್ತಿಯು ಹೇಗೆ ಅಸ್ತಿತ್ವಕ್ಕೆ ಬಂತು, ಮತ್ತು ಏಳನೆಯ ‘ತಲೆ’ ಯಾ ಲೋಕ ಶಕ್ತಿಯು ಎಷ್ಟು ಕಾಲದ ವರೆಗೆ ಮುಂದುವರಿಯುತ್ತದೆಂದು ಯೋಹಾನನು ಹೇಳುತ್ತಾನೆ?
7 ಹತ್ತೊಂಬತ್ತನೆಯ ಶತಮಾನದೊಳಗೆ ಉತ್ತರ ಅಮೆರಿಕದ ಕೆಲವು ವಸಾಹತುಗಳು ಸ್ವತಂತ್ರ ಅಮೆರಿಕವಾಗಿ ರಚಿಸಿಕೊಳ್ಳಲು, ಬ್ರಿಟನಿನಿಂದ ತಮ್ಮನ್ನು ಆಗಲೇ ಕಡಿದುಕೊಂಡಿದ್ದವು. ರಾಜಕೀಯವಾಗಿ, ಹೊಸ ರಾಷ್ಟ್ರ ಮತ್ತು ಹಿಂದಣ ಮಾತೃ ಭೂಮಿಯ ಮಧ್ಯೆ ಕೆಲವು ಘರ್ಷಣೆಗಳು ಮುಂದುವರಿದವು. ಹಾಗಿದ್ದರೂ, ಮೊದಲನೇ ಲೋಕಯುದ್ಧವು ಇವೆರಡೂ ದೇಶಗಳು ತಮ್ಮ ಸಾಮಾನ್ಯ ಅಭಿರುಚಿಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಿತು ಮತ್ತು ಅವರ ನಡುವೆ ಒಂದು ವಿಶೇಷ ಸಂಬಂಧವು ರಚಿಸಲ್ಪಟ್ಟಿತು. ಹೀಗೆ, ಈಗ ಭೂಮಿಯ ಅತಿ ಸಮೃದ್ಧ ದೇಶವಾದ ಅಮೆರಿಕ, ಮತ್ತು ಈಗ ಲೋಕದ ಅತಿ ದೊಡ್ಡ ಸಾಮ್ರಾಜ್ಯದ ಪೀಠವಾದ ಗ್ರೇಟ್ ಬ್ರಿಟನ್ ಕೂಡಿದ ಒಂದು ರೀತಿಯ ಉಭಯ ಲೋಕ ಶಕ್ತಿಯು ಅಸ್ತಿತ್ವಕ್ಕೆ ಬಂತು. ಹಾಗಾದರೆ ಇಲ್ಲಿ ಲೋಕಾಂತ್ಯದ ಸಮಯದೊಳಗೆ ಮುಂದುವರಿಯುವ, ಮತ್ತು ಯೆಹೋವನ ಆಧುನಿಕ ದಿನದ ಸಾಕ್ಷಿಗಳು ಮೊದಲು ದೃಢವಾಗಿ ನೆಲೆಗೊಂಡ ಪ್ರದೇಶಗಳಲ್ಲಿ ಏಳನೆಯ ‘ತಲೆ’ ಯಾ ಲೋಕಶಕ್ತಿ ಇದೆ. ಆರನೆಯ ತಲೆಯ ದೀರ್ಘ ಆಳಿಕ್ವೆಯೊಂದಿಗೆ ಹೋಲಿಸುವಾಗ, ಏಳನೆಯದು ಕೇವಲ “ಸ್ವಲ್ಪಕಾಲ”, ದೇವರ ರಾಜ್ಯವು ಎಲ್ಲಾ ರಾಷ್ಟ್ರೀಯ ಅಸ್ತಿತ್ವಗಳನ್ನು ನಾಶಮಾಡುವ ವರೆಗೆ, ಉಳಿಯುತ್ತದೆ.
-