ಬಹುಭಾಷಾ ಟ್ರ್ಯಾಕ್ಟ್ಗಳ ಪ್ಯಾಕ್ಗಳು
1 ಭಾರತದ 28 ರಾಜ್ಯಗಳಲ್ಲಿ 1,600ಕ್ಕಿಂತಲೂ ಹೆಚ್ಚು ಭಾಷೆಗಳನ್ನಾಡುವ ಜನರಿದ್ದಾರೆ. ಅವರೆಲ್ಲರಿಗೆ ಸುವಾರ್ತೆಯನ್ನು ಸಾರುವ ಪಂಥಾಹ್ವಾನಕರ ನೇಮಕವು ನಮಗಿದೆ. (ಮತ್ತಾ. 24:14; ಪ್ರಕ. 7:9) ಅನೇಕ ಪ್ರಚಾರಕರು ಇದನ್ನು ಉತ್ತಮವಾಗಿ ಮಾಡುತ್ತಾರೆ ಹೇಗಂದರೆ ಅವರು ತಮ್ಮ ಸ್ಥಳೀಕ ಭಾಷೆಯನ್ನು ಮಾತಾಡುವ ಜನರಿಗೆ ಮಾತ್ರವಲ್ಲ ತಮ್ಮ ಟೆರಿಟೊರಿಯಲ್ಲಿ ಜೀವಿಸುತ್ತಿರುವ ಇತರ ವಿಭಿನ್ನ ‘ಜನಾಂಗದವರಿಗೆ’ ಹಾಗೂ ‘ಸಕಲಭಾಷೆಗಳನ್ನಾಡುವವರಿಗೆ’ ಪರಿಣಾಮಕಾರಿಯಾದ ಸಾಕ್ಷಿಯನ್ನು ನೀಡುವ ಮೂಲಕವೇ. ಪ್ರಾಯಶಃ ನಿಮಗೂ ಹಲವಾರು ಭಾಷೆಗಳು ತಿಳಿದಿರಬಹುದು ಅಥವಾ ಹಿಂದಿ ಅಥವಾ ಇಂಗ್ಲಿಷ್ನಂಥ ಸಾಮಾನ್ಯ ಸಂಪರ್ಕ ಭಾಷೆಗಳ ಸಹಾಯದಿಂದ ಮಾತಾಡಲು ನಿಮಗೆ ಸಾಧ್ಯವಿರಬಹುದು. ಇಲ್ಲವಾದರೆ, ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಪುಸ್ತಿಕೆಯನ್ನು ಅಗತ್ಯಬೀಳುವಾಗ ನೀವು ಯಶಸ್ವಿಯಾಗಿ ಬಳಸುತ್ತಿರುವುದು ಸಂಭಾವ್ಯ.
2 ದೃಶ್ಯ ಸಂಘಟನೆಯು ಬೈಬಲ್ ಸಾಹಿತ್ಯಗಳನ್ನು 26 ಭಾರತೀಯ ಭಾಷೆಗಳಲ್ಲಿ ಒದಗಿಸುತ್ತಿರುವ ಮೂಲಕ ನೀಡುವ ಬೆಂಬಲವನ್ನು ನಾವೆಲ್ಲರು ಗಣ್ಯಮಾಡುತ್ತೇವೆ. ಹಾಗಿದ್ದರೂ, ಆಸಕ್ತಿ ತೋರಿಸುವ ವ್ಯಕ್ತಿಯು ಓದುವಂಥ ಭಾಷೆಯ ಸಾಹಿತ್ಯವು ನಿಮ್ಮ ಬ್ಯಾಗಿನಲ್ಲಿ ಅಥವಾ ನಿಮ್ಮ ಸಭೆಯ ಸ್ಟಾಕಿನಲ್ಲಿ ಇಲ್ಲದಿರುವಾಗ ನಿಮಗೆ ಹತಾಶೆಯಾಗಬಹುದು. ಆಸಕ್ತಿ ತೋರಿಸುವ ಪ್ರತಿಯೊಬ್ಬ ವ್ಯಕ್ತಿಗೆ ಒಂದು ಬೈಬಲ್ ಆಧರಿತ ಪ್ರಕಾಶನವನ್ನು, ಅದು ಕೂಡಾ ಅವನು ಚೆನ್ನಾಗಿ ಓದಬಲ್ಲ ಭಾಷೆಯಲ್ಲೇ ನೀಡುವುದು ನಿಮಗೆ ಸಂತೋಷವನ್ನು ತರುವುದಿಲ್ಲವೇ?
3 ಇದನ್ನು ಸಾಧ್ಯಗೊಳಿಸಲು, ವಾಚ್ಟವರ್ ಪಬ್ಲಿಕೇಷನ್ಸ್ ಲಿಸ್ಟ್ನಲ್ಲಿ ಕೊಡಲ್ಪಟ್ಟಿರುವ ಎಲ್ಲ ಭಾಷೆಗಳ ಟ್ರ್ಯಾಕ್ಟ್ಗಳ ಚಿಕ್ಕ ಪ್ರಮಾಣವನ್ನು ಹಾಗೂ ಚೈನೀಸ್, ಪರ್ಷಿಯನ್ ಮತ್ತು ಫ್ರೆಂಚ್ನಂಥ ಹೆಚ್ಚು ಸಾಮಾನ್ಯವಾದ ವಿದೇಶೀ ಭಾಷೆಗಳ ಕೆಲವೊಂದು ಟ್ರ್ಯಾಕ್ಟ್ಗಳಿಗಾಗಿ ಸಭೆಗಳು ಇದೀಗ ವಿನಂತಿಸಬಹುದು. ಅವುಗಳನ್ನು ಪಡೆದ ಬಳಿಕ ಪ್ರತಿ ಪ್ರಚಾರಕನು ಸೂಕ್ತ ರೀತಿಯಲ್ಲಿ ಆ ಟ್ರ್ಯಾಕ್ಟ್ಗಳನ್ನು 10, 15, ಅಥವಾ 20 ವಿಭಿನ್ನ ಭಾಷೆಗಳ ಒಂದು ಪ್ಯಾಕನ್ನಾಗಿ ಜೋಡಿಸಬಲ್ಲನು. ಈ ಮೂಲಕ ಅವನು ಶುಶ್ರೂಷೆಯಲ್ಲಿ ಭೇಟಿಯಾಗಬಹುದಾದ ಎಲ್ಲ ಇತರ ಭಾಷೆಗಳ ಜನರಿಗೆ ಒಂದು ಮುದ್ರಿತ ಸಂದೇಶವನ್ನು ನೀಡಸಾಧ್ಯವಾಗುತ್ತದೆ. ಸಭಾ ಸೇವಾ ಕಮಿಟಿಯು ವಾಚ್ಟವರ್ ಪಬ್ಲಿಕೇಷನ್ಸ್ ಲಿಸ್ಟ್ನ ಮೇಲಾಧರಿಸಿ ಟೆರಿಟೊರಿಗೆ ಅತಿ ಸೂಕ್ತವಾಗಿರುವ ಇತರ ಹೆಚ್ಚಿನ ಭಾಷೆಗಳು ಯಾವುವು ಮತ್ತು ಈ ಭಾಷೆಗಳನ್ನು ಮಾತಾಡುವವರಿಗೆ ಒಪ್ಪುವಂಥ ಟ್ರ್ಯಾಕ್ಟ್ಗಳು ಯಾವುವು ಎಂಬುದನ್ನು ಪರಿಗಣಿಸಿ “ಪ್ಯಾಕನ್ನು” ರಚಿಸಬಹುದು.
4 ಪ್ರಚಾರಕರು ಆಗಾಗ ತಮ್ಮ ವೈಯಕ್ತಿಕ ಪ್ಯಾಕ್ಗಳಿಂದ ಪ್ರತಿಗಳನ್ನು ನೀಡಿದಾಗ ಆ ಒಂದೊಂದು ಪ್ರತಿಯನ್ನು ಸಭೆಯಲ್ಲಿರುವ ಟ್ರ್ಯಾಕ್ಟ್ನ ಸ್ಟಾಕ್ಗಳಿಂದ ಭರ್ತಿಮಾಡಬಹುದು. ಹೀಗೆ ಕ್ಷೇತ್ರಕ್ಕೆ ಹೋಗುವಾಗ ಎಲ್ಲ ಭಾಷೆಗಳ ಸಂಪೂರ್ಣ ಕೋಟ ಯಾವಾಗಲು ಅವರ ಬಳಿ ಇರುವುದು. ಅದಕ್ಕೆ ಕೂಡಿಸಿ, ಟ್ರ್ಯಾಕ್ಟ್ಗಳ ಇಡೀ ಪ್ಯಾಕನ್ನು ದೃಶ್ಯ ಸಾಧನದಂತೆ ಬಳಸಿ ನಮ್ಮ ಕೆಲಸದ ನಿಷ್ಪಕ್ಷಪಾತ ವ್ಯಾಪ್ತಿಯನ್ನು ತೋರಿಸಲು ಮತ್ತು ಎಲ್ಲ ಜನಾಂಗ ಹಾಗೂ ಭಾಷೆಗಳವರನ್ನು ತಲಪುವ ಆಜ್ಞೆಯನ್ನು ನಾವು ಎಷ್ಟು ಗಂಭೀರವಾಗಿ ತೆಗೆದುಕೊಳ್ಳುತ್ತೇವೆಂದು ತೋರಿಸಲು ಉಪಯೋಗಿಸಬಲ್ಲೆವು.
5 ಕೆಲವೊಂದು ಪ್ರತಿಗಳು ಅಪರೂಪವಾಗಿ ಬಳಕೆಗೆ ಬರುವುದಾದರೂ ಅವುಗಳನ್ನು ನಮ್ಮ ಸೇವಾ ಸಲಕರಣೆಗಳ ಜೊತೆಯಲ್ಲಿ ಜೋಪಾನವಾಗಿಡಬೇಕು. ಹೀಗೆ, ಅವುಗಳ ತೋರಿಕೆಯು ಎಲ್ಲ ಸಮಯಗಳಲ್ಲಿ ನೀಟಾಗಿದ್ದು ನಾವು ಸಾರುವ ಸಂದೇಶಕ್ಕೆ ‘ಅಲಂಕಾರವಾಗಿರುತ್ತವೆ.’ (ತೀತ 2:10) ಹಳೇದಾದ ಅಥವಾ ಹರಿದಿರುವ ಪ್ರತಿಗಳನ್ನು ತೆಗೆದು ಅವುಗಳ ಸ್ಥಾನದಲ್ಲಿ ಹೊಸದನ್ನು ಭರ್ತಿಮಾಡಿರಿ.
6 ಪ್ರತಿ ವರ್ಷ ಭಾರತದ ಬ್ರಾಂಚ್ 26 ವಿಭಿನ್ನ ಭಾಷೆಗಳಲ್ಲಿ 46,00,000ಕ್ಕಿಂತಲೂ ಹೆಚ್ಚು ಟ್ರ್ಯಾಕ್ಟ್ಗಳನ್ನು ಮುದ್ರಿಸುತ್ತದೆ. ಎಲ್ಲ ಭಾಷೆಗಳನ್ನಾಡುವ ಇನ್ನಷ್ಟು ಹೆಚ್ಚು ಮಂದಿ ಜನರು ಯೆಹೋವನನ್ನು ಆರಾಧಿಸಲು ನಮ್ಮೊಂದಿಗೆ ಜೊತೆಗೂಡುವಂತೆ ಸಹಾಯಮಾಡಲು ಇವುಗಳನ್ನು ನಾವು ಹೆಚ್ಚು ಪೂರ್ಣವಾಗಿ ಉಪಯೋಗಿಸೋಣ.—ಯೆಶಾಯ 2:2, 3.