ಗೀತೆ 122
ಲಕ್ಷಾಂತರ ಸೋದರರು
1. ಲಕ್ಷಾಂತರ ಸೋದರರು
ಇದ್ದಾರೆ ಎಲ್ಲೆಲ್ಲೂ;
ವಿಶ್ವಸ್ಥ ಸಾಕ್ಷಿಗಳು
ಸಮಗ್ರರವರು.
ಲಕ್ಷಾಂತರ ಸಂಖ್ಯೇಲಿ
ಆಗುತ್ತಾರೆ ವೃದ್ಧಿ;
ಪ್ರತಿ ಹಿನ್ನಲೆಯಿಂದ ಹೊಮ್ಮಿ
ಹಾಡುತ್ತೇವೆ ಸ್ತುತಿ.
2. ಲಕ್ಷಾಂತರ ಸೋದರರು
ಸಾರುತ್ತೇವೆಲ್ಲೆಲ್ಲೂ;
ವಾರ್ತೆ ಕೇಳೋ ಹಂಬಲ
ಅನೇಕರಿಗುಂಟು.
ಹೀಗೆ ಸಾರುತ್ತಿರ್ವಾಗ
ಬಂದರೂ ಒತ್ತಡ,
ಯೇಸು ಕೊಡುತ್ತಾನೆ ವಿಶ್ರಮ,
ಶಾಂತಿಯನು ಸಹ.
3. ಲಕ್ಷಾಂತರ ಸೋದರರ
ದೇವ ಕಾಯುತ್ತಾನೆ;
ಭೂಅಂಗಣದಲ್ಲಿದ್ದು
ಸೇವಿಸುತ್ತಿದ್ದಾರೆ.
ಲಕ್ಷಾಂತರ ಜನರು
ರಾಜ್ಯ ಸಾರುತ್ತೇವೆ.
ದೇವರ ಜೊತೆ ಕಾರ್ಮಿಕರು,
ಇದೇ ನಮ್ಮ ಸೇವೆ.
(ಯೆಶಾ. 52:7; ಮತ್ತಾ. 11:29; ಪ್ರಕ. 7:15 ಸಹ ನೋಡಿ.)