ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • my ಕಥೆ 30
  • ಉರಿಯುತ್ತಿರುವ ಪೊದೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಉರಿಯುತ್ತಿರುವ ಪೊದೆ
  • ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಅನುರೂಪ ಮಾಹಿತಿ
  • ಉರಿಯುತ್ತಿರುವ ಪೊದೆ
    ಬೈಬಲ್‌ ನಮಗೆ ಕಲಿಸುವ ಪಾಠಗಳು
  • ಮೋಶೆ ಓಡಿಹೋಗಲು ಕಾರಣ
    ಬೈಬಲ್‌ ಕಥೆಗಳ ನನ್ನ ಪುಸ್ತಕ
  • ಯೆಹೋವನ ಮಾರ್ಗಗಳನ್ನು ತಿಳಿದುಕೊಳ್ಳುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ಯೇಸು ಕ್ರಿಸ್ತನು ಮೋಶೆಯಂಥ ಪ್ರವಾದಿ ಆಗಿದ್ದನು ಹೇಗೆ?
    ಕಾವಲಿನಬುರುಜು—1992
ಇನ್ನಷ್ಟು
ಬೈಬಲ್‌ ಕಥೆಗಳ ನನ್ನ ಪುಸ್ತಕ
my ಕಥೆ 30
ಮೋಶೆ ಮತ್ತು ಉರಿಯುತ್ತಿರುವ ಪೊದೆ

ಅಧ್ಯಾಯ 30

ಉರಿಯುತ್ತಿರುವ ಪೊದೆ

ಮೋಶೆ ತನ್ನ ಕುರಿಗಳಿಗೆ ಮೇವನ್ನು ಹುಡುಕುತ್ತಾ ದೂರದ ಹೋರೇಬ್‌ ಬೆಟ್ಟಕ್ಕೆ ಬಂದಿದ್ದನು. ಅಲ್ಲಿ ಒಂದು ಪೊದೆಯು ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಕಂಡನು. ಆದರೂ ಅದು ಸುಟ್ಟುಹೋಗದೆ ಇತ್ತು!

‘ಅರೆ, ಇದೇನು ವಿಚಿತ್ರವಾಗಿ ಕಾಣುತ್ತಿದೆಯಲ್ಲಾ, ಹತ್ತಿರ ಹೋಗಿ ಸರಿಯಾಗಿ ನೋಡುತ್ತೇನೆ’ ಎಂದು ಮೋಶೆ ಅಂದುಕೊಂಡನು. ಅವನು ಹತ್ತಿರ ಹೋದಾಗ ಪೊದೆಯೊಳಗಿಂದ ಒಂದು ವಾಣಿಯು ಕೇಳಿಬಂತು. ಅದು, ‘ಹೆಚ್ಚು ಹತ್ತಿರ ಬರಬೇಡ. ನಿನ್ನ ಚಪ್ಪಲಿಯನ್ನು ಬಿಚ್ಚಿಡು. ಯಾಕೆಂದರೆ ನೀನು ನಿಂತಿರುವ ಸ್ಥಳವು ಪರಿಶುದ್ಧಭೂಮಿ’ ಎಂದಿತು. ಹೌದು ಒಬ್ಬ ದೇವದೂತನ ಮೂಲಕ ದೇವರು ಮಾತಾಡುತ್ತಿದ್ದನು. ಆದುದರಿಂದ ಮೋಶೆಯು ತನ್ನ ಮುಖವನ್ನು ಮುಚ್ಚಿಕೊಂಡನು.

ದೇವರು ಅನಂತರ ಹೇಳಿದ್ದು: ‘ಐಗುಪ್ತದಲ್ಲಿ ನನ್ನ ಜನರ ಕಷ್ಟಾನುಭವವನ್ನು ನಾನು ಕಂಡಿದ್ದೇನೆ. ಆದುದರಿಂದ ನಾನು ಅವರನ್ನು ಬಿಡಿಸಲಿದ್ದೇನೆ, ಮತ್ತು ಐಗುಪ್ತದೊಳಗಿಂದ ನನ್ನ ಜನರನ್ನು ಹೊರಗೆ ನಡಿಸಲು ನಾನು ನಿನ್ನನ್ನು ಕಳುಹಿಸುತ್ತೇನೆ.’ ಯೆಹೋವನು ತನ್ನ ಜನರನ್ನು ಸುಂದರವಾದ ಕಾನಾನ್‌ ದೇಶಕ್ಕೆ ಕರೆತರಲಿದ್ದನು.

ಆದರೆ ಮೋಶೆ, ‘ನಾನೊಬ್ಬ ಸಾಧಾರಣ ಮನುಷ್ಯ. ಇದನ್ನು ನಾನು ಹೇಗೆ ಮಾಡಬಲ್ಲೆ? ಒಂದುವೇಳೆ ನೀನು ಹೇಳಿದ ಹಾಗೆ ನಾನು ಹೋದರೂ ನಿನ್ನನ್ನು ಕಳುಹಿಸಿದವರಾರು ಎಂದು ಇಸ್ರಾಯೇಲ್ಯರು ಕೇಳುವರು. ಆಗ ನಾನೇನು ಹೇಳಲಿ?’ ಎಂದು ಹೇಳಿದನು.

ಆಗ ದೇವರು, ‘ಅಬ್ರಹಾಮ ಇಸಾಕ ಯಾಕೋಬರ ದೇವರಾಗಿರುವ ಯೆಹೋವನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ನೀನು ಹೇಳಬೇಕು. ಇದು ಸದಾಕಾಲಕ್ಕೂ ನನ್ನ ಹೆಸರು.’ ಎಂದು ತಿಳಿಸಿದನು.

ಅದಕ್ಕೆ ಮೋಶೆಯು, ‘ಆದರೆ ನೀನು ನನ್ನನ್ನು ಕಳುಹಿಸಿದಿ ಎಂದು ನಾನು ಹೇಳುವಾಗ ಅವರು ಒಂದುವೇಳೆ ನನ್ನನ್ನು ನಂಬದೆ ಹೋದರೆ’ ಎಂದು ಕೇಳಿದನು.

ಆಗ ದೇವರು, ‘ಅದೇನು ನಿನ್ನ ಕೈಯಲ್ಲಿರುವುದು?’ ಎಂದನು.

‘ಇದು ಕೋಲು’ ಎಂದುತ್ತರಿಸಿದನು ಮೋಶೆ.

‘ಅದನ್ನು ನೆಲದಲ್ಲಿ ಬಿಸಾಡು’ ಅಂದನು ದೇವರು. ಮೋಶೆ ಬಿಸಾಡಿದಾಗ ಆ ಕೋಲು ಹಾವಾಯಿತು. ಯೆಹೋವನು ಅನಂತರ ಮೋಶೆಗೆ ಇನ್ನೊಂದು ಅದ್ಭುತವನ್ನು ತೋರಿಸಿದನು. ಅವನಂದದ್ದು: ‘ನಿನ್ನ ಕೈಯನ್ನು ಉಡಿಯಲ್ಲಿ ಇಟ್ಟುಕೋ.’ ಮೋಶೆ ಹಾಗೆಯೆ ಮಾಡಿದನು ಮತ್ತು ತನ್ನ ಕೈಯನ್ನು ಹೊರಗೆ ತೆಗೆದಾಗ ಅದು ಹಿಮದಂತೆ ಬೆಳ್ಳಗಿತ್ತು! ಕುಷ್ಠ ಎಂದು ಕರೆಯಲ್ಪಡುವ ಕೆಟ್ಟ ರೋಗವು ಕೈಗೆ ಹತ್ತಿತೋ ಎಂಬಂತೆ ಅದು ಕಂಡಿತು. ಆಮೇಲೆ ಯೆಹೋವನು ಮೋಶೆಗೆ ಮೂರನೆಯ ಅದ್ಭುತವನ್ನು ಮಾಡುವ ಶಕ್ತಿಯನ್ನು ಕೊಟ್ಟನು. ಕೊನೆಗೆ ಅವನಂದದ್ದು: ‘ನೀನು ಈ ಅದ್ಭುತಗಳನ್ನು ಮಾಡುವಾಗ ನಾನೇ ನಿನ್ನನ್ನು ಕಳುಹಿಸಿದವನೆಂದು ಇಸ್ರಾಯೇಲ್ಯರು ನಂಬುವರು.’

ತದನಂತರ ಮೋಶೆ ಮನೆಗೆ ಹೋಗಿ ಇತ್ರೋವಿಗೆ, ‘ನಾನು ಐಗುಪ್ತದಲ್ಲಿರುವ ನನ್ನ ಸಂಬಂಧಿಕರ ಬಳಿಗೆ ಹೋಗಿ ಅವರು ಹೇಗಿದ್ದಾರೆಂದು ನೋಡಲು ದಯವಿಟ್ಟು ಅನುಮತಿಸು’ ಎಂದು ಹೇಳಿದನು. ಆಗ ಇತ್ರೋ ಮೋಶೆಯನ್ನು ಬೀಳ್ಕೊಟ್ಟನು ಮತ್ತು ಮೋಶೆಯು ಐಗುಪ್ತಕ್ಕೆ ಹೊರಟನು.

ವಿಮೋಚನಕಾಂಡ 3:1-22; 4:1-20.

ಅಧ್ಯಯನ ಪ್ರಶ್ನೆಗಳು

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ