ಗೀತೆ 13
ಕೃತಜ್ಞತೆಯ ಪ್ರಾರ್ಥನೆ
1. ಕೃಪಾಳು ಯೆಹೋವ ಸ್ತುತಿಪಾತ್ರ,
ಹಾಡುವೆವು ನಿಂಗೆ ನಮ್ಮ ಸ್ತೋತ್ರ.
ಪ್ರಾರ್ಥನೆಯ ಆಲಿಸುವವನೇ,
ಬರುತ್ತೇವೆ ನಿನ್ನ ಕೈಕೆಳಗೆ.
ನಮ್ಮ ದೌರ್ಬಲ್ಯ ವ್ಯಕ್ತ ನಿನಗೆ,
ಬೇಡುವೆವು ಕ್ಷಮೆಯ ಇದಕ್ಕೆ.
ಕ್ರಿಸ್ತ ರಕ್ತ ಕೊಟ್ಟಿತು ರಕ್ಷಣೆ.
ನಿನ್ನ ಮಾರ್ಗವ ಕಲಿಸೆಮಗೆ.
2. ಧನ್ಯರು ನಿನ್ನ ಆಹ್ವಾನಿತರು,
ರಕ್ಷಣಾಂಗಣಕ್ಕೆ ಬಂದವರು.
ನಿನ್ನ ಪರಿಚಯವ ಮಾಡಿಸು,
ಇಷ್ಟವೆಮಗೆ ನಿನ್ನಾಲಯವು.
ನಿನ್ನ ಹಸ್ತ ಶಕ್ತಿಯನ್ನು ಕೊಟ್ಟು,
ಧೈರ್ಯ ನೀಡುತೆ ಎದ್ದು ನಿಲ್ಲಲು.
ನಿನ್ನ ರಾಜ್ಯಕ್ಕೆ ಜೈ ಎನ್ನುತ್ತಿದ್ದು,
ಆ ರಾಜ್ಯವ ಸಾರುವೆವು ನಾವು.
3. ನಿನ್ನ ಲಕ್ಷ್ಯ ಕೊಡಲಿ ಸಂತೋಷ,
ಆರಾಧನೆ ಕಾಣಲಿ ಎಲ್ಲೆಲ್ಲೂ.
ನಿನ್ನ ರಾಜ್ಯ ತೋರಿಬರುವಾಗ
ಇಲ್ಲವಾಗೋವು ರೋಗ, ಮರಣ.
ಪುತ್ರನು ತೆಗೆಯುವ ದುಷ್ಟರ,
ಸೃಷ್ಟಿಯು ಮಾಡೋದಾಗ ಜೈಘೋಷ.
ಹಾಡೋಣ ಕೃತಜ್ಞತಾ ಗೀತೆಯ,
“ಯೆಹೋವ ರಾಜನಿಗೆ ಸ್ತುತಿಯ.”
(ಕೀರ್ತ. 65:2, 4, 11; ಫಿಲಿ. 4:6 ಸಹ ನೋಡಿ.)