ಬೈಬಲಿನಲ್ಲಿರುವ ರತ್ನಗಳು | ಕೀರ್ತನೆ 52–59
“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು”
ದಾವೀದನು ತನ್ನ ಜೀವನದಲ್ಲಿ ಅತ್ಯಂತ ಕಷ್ಟಕರವಾದ ಅನೇಕ ಸನ್ನಿವೇಶಗಳನ್ನು ಅನುಭವಿಸಿದನು. ಕೀರ್ತನೆ 55 ನ್ನು ಬರೆಯುವುದರೊಳಗೆ ಅವನು ಈ ಕಷ್ಟಗಳನ್ನು ಎದುರಿಸಿದ್ದನು:
ಅವಮಾನ
ಹಿಂಸೆ
ದೋಷಿ ಮನೋಭಾವ
ಕುಟುಂಬದಲ್ಲಿ ದುರಂತ
ಅನಾರೋಗ್ಯ
ನಂಬಿಕೆ ದ್ರೋಹ
ದಾವೀದನಿಗೆ ಕಷ್ಟಗಳು ಸಹಿಸಲಾರದಷ್ಟಿವೆ ಎಂದು ಅನಿಸಿದಾಗಲೂ ಅವನು ಅವುಗಳಿಂದ ಹೊರ ಬರಲು ದಾರಿ ಕಂಡುಕೊಂಡನು. ಯಾರಿಗೆಲ್ಲಾ ಈ ರೀತಿ ಅನಿಸುತ್ತದೋ ಅವರಿಗೆ ದಾವೀದನು ಈ ದೇವಪ್ರೇರಿತ ಸಲಹೆ ಕೊಟ್ಟಿದ್ದಾನೆ: “ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು”
ಈ ವಚನವನ್ನು ಇಂದಿನ ದಿನಗಳಲ್ಲಿ ಹೇಗೆ ಅನ್ವಯಿಸಬಹುದು?
ಯಾವುದೇ ಸಮಸ್ಯೆ, ಚಿಂತೆಯಲ್ಲಿ ಮುಳುಗಿರುವಾಗ ಯೆಹೋವನ ಕಡೆಗೆ ತಿರುಗಿ ಹೃದಯದಿಂದ ಪ್ರಾರ್ಥಿಸಬೇಕು
ದೇವರ ವಾಕ್ಯ ಮತ್ತು ಸಂಘಟನೆಯ ನಿರ್ದೇಶನ ಮತ್ತು ಸಹಾಯ ಪಡೆದುಕೊಳ್ಳಬೇಕು
ಸಮಸ್ಯೆಗಳಿಂದ ಬಿಡುಗಡೆ ಹೊಂದಲು ದೇವರ ಮೂಲತತ್ವ ಪಾಲಿಸುತ್ತಾ ನಮ್ಮಿಂದಾದದ್ದನ್ನು ಮಾಡಬೇಕು