ಬೈಬಲಿನಲ್ಲಿರುವ ರತ್ನಗಳು | ಜ್ಞಾನೋಕ್ತಿ 12-16
ವಿವೇಕವು ಬಂಗಾರಕ್ಕಿಂತ ಅಮೂಲ್ಯ
ಮುದ್ರಿತ ಸಂಚಿಕೆ
ದೈವಿಕ ವಿವೇಕವು ತುಂಬಾ ಅಮೂಲ್ಯ. ಏಕೆಂದರೆ ದೈವಿಕ ವಿವೇಕ ಪಡೆದಿರುವವರನ್ನು ಅದು ತಪ್ಪಾದ ಮಾರ್ಗಗಳಿಂದ ಕಾಪಾಡಿ ರಕ್ಷಣೆಗೆ ನಡೆಸುತ್ತದೆ. ಇದು ಆ ವ್ಯಕ್ತಿಯ ಮಾತು, ನಡತೆ ಮತ್ತು ಕೆಲಸದ ಮೇಲೆ ಒಳ್ಳೇ ಪರಿಣಾಮ ಬೀರುತ್ತೆ.
ವಿವೇಕವು ಹೆಮ್ಮೆ ಬರದಂತೆ ಕಾಪಾಡುತ್ತದೆ
ಯೆಹೋವನೇ ಸಕಲ ವಿವೇಕದ ಮೂಲ ಎಂದು ವಿವೇಕಿ ಗ್ರಹಿಸುತ್ತಾನೆ
ಮುಖ್ಯವಾಗಿ, ಯಶಸ್ಸು ಗಳಿಸಿದವರು ಅಥವಾ ಹೆಚ್ಚಿನ ಜವಾಬ್ದಾರಿಗಳು ಇರುವವರು ತಮ್ಮಲ್ಲಿ ಹೆಮ್ಮೆ ಅಥವಾ ಅಹಂಕಾರ ಬರದಂತೆ ಎಚ್ಚರವಹಿಸಬೇಕು
ವಿವೇಕಿಯ ಮಾತುಗಳು ಹಿತಕರವಾಗಿರುತ್ತವೆ
ವಿವೇಕಿಯು ಬೇರೆಯವರಲ್ಲಿ ಒಳ್ಳೇದನ್ನು ಹುಡುಕುತ್ತಾನೆ ಮತ್ತು ಬೇರೆಯವರ ಬಗ್ಗೆ ಒಳ್ಳೇದನ್ನೇ ಮಾತಾಡುತ್ತಾನೆ
ವಿವೇಕಯುತ ಮಾತುಗಳು ಕಠೋರವಾಗಿರುವುದಿಲ್ಲ. ಅದು ಜೇನಿನಂತೆ ಸಿಹಿಯಾಗಿದ್ದು ಬೇರೆಯವರನ್ನು ಆಕರ್ಷಿಸುತ್ತದೆ