ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwbr17 ಜೂನ್‌ ಪು. 1-2
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
  • ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2017
  • ಉಪಶೀರ್ಷಿಕೆಗಳು
  • ಜೂನ್‌ 5-11
  • ಜೂನ್‌ 12-18
  • ಜೂನ್‌ 19-25
ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು—ಕೂಟದ ಕೈಪಿಡಿ—2017
mwbr17 ಜೂನ್‌ ಪು. 1-2

ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು

ಜೂನ್‌ 5-11

ಬೈಬಲಿನಲ್ಲಿರುವ ರತ್ನಗಳು | ಯೆರೆಮೀಯ 51-52

“ಯೆಹೋವನ ಪ್ರತಿಯೊಂದು ಮಾತು ತಪ್ಪದೇ ನೆರವೇರುತ್ತದೆ”

it-2 360 ¶2-3

ಮೇದ್ಯರು, ಮೇದ್ಯ

ಮೇದ್ಯರು ಫಾರಸೀಯರೊಂದಿಗೆ ಬಾಬೆಲನ್ನು ಸೋಲಿಸಿದರು. ಯೆಹೋವನು ಬಾಬೆಲಿನ ವಿರುದ್ಧವಾಗಿ ಮೇದ್ಯರನ್ನು ಎಬ್ಬಿಸುವನೆಂದು ಕ್ರಿ.ಪೂ. ಎಂಟನೆಯ ಶತಮಾನದಲ್ಲಿ ಪ್ರವಾದಿ ಯೆಶಾಯನು ಪ್ರವಾದಿಸಿದ್ದನು. ಮೇದ್ಯರು “ಬೆಳ್ಳಿಯನ್ನು ಲಕ್ಷಿಸರು, ಬಂಗಾರವನ್ನು ಪ್ರೀತಿಸರು, ಇವರ ಬಿಲ್ಲುಗಳು ಯುವಕರನ್ನು ಚೂರುಚೂರು ಮಾಡುವವು” ಎಂದೂ ಹೇಳಿದ್ದನು. (ಯೆಶಾ 13:17-19; 21:2) ಇಲ್ಲಿ ತಿಳಿಸಿದ ‘ಮೇದ್ಯರು’ ಎಂಬ ಪದದಲ್ಲಿ ಪಾರಸೀಯರು ಕೂಡ ಸೇರಿದ್ದಿರಸಾಧ್ಯವಿದೆ. ಏಕೆಂದರೆ ಪ್ರಾಚೀನ ಗ್ರೀಕ್‌ ಚರಿತ್ರೆಗಾರರು ಮೇದ್ಯರು ಎಂಬ ಹೆಸರನ್ನು ಬಳಸುವಾಗ ಸಾಮಾನ್ಯವಾಗಿ ಪಾರಸೀಯರಿಗೆ ಮತ್ತು ಮೇದ್ಯರಿಗೆ ಇಬ್ಬರಿಗೂ ಸೂಚಿಸಿ ಹೇಳುತ್ತಿದ್ದರು. ಮೇದ್ಯರು ಬೆಳ್ಳಿ ಬಂಗಾರವನ್ನು ಲಕ್ಷಿಸರು ಎಂದು ಹೇಳಿರುವುದು ಏಕೆಂದರೆ ಅವರ ಮುಖ್ಯ ಉದ್ದೇಶ ಬಾಬೆಲನ್ನು ಜಯಿಸುವುದಾಗಿತ್ತು, ಕೊಳ್ಳೆ ಹೊಡೆಯುವುದಲ್ಲ. ಜಯಗಳಿಸುವುದೇ ಅವರ ದೃಢನಿರ್ಧಾರವಾಗಿತ್ತು. ಲಂಚವಾಗಲಿ ಕಪ್ಪಗಳಾಗಲಿ ಅದನ್ನು ಬದಲಾಯಿಸುವಂತಿರಲಿಲ್ಲ. ಪಾರಸೀಯರಂತೆ ಮೇದ್ಯರ ಮುಖ್ಯ ಶಸ್ತ್ರ ಬಿಲ್ಲುಬಾಣವಾಗಿತ್ತು. ಮರದ ಬಿಲ್ಲುಗಳಿಗೆ ಕೆಲವೊಮ್ಮೆ ತಾಮ್ರ ಅಥವಾ ಕಂಚಿನ ಲೇಪವನ್ನು ಹಾಕುತ್ತಿದ್ದರು. (ಕೀರ್ತ 18:34 ಹೋಲಿಸಿ.) ಬಾಣಗಳು ಆಳವಾಗಿ ತೂರುವಂತೆ ಅವನ್ನು ಚೆನ್ನಾಗಿ ಮಸೆಯಲಾಗುತ್ತಿತ್ತು. ಎಸೆಯಲಾದ ಬಿಲ್ಲು ಬಾಣಗಳ ಸುರಿಮಳೆಯು ಬಾಬೆಲಿನ ಯುವಕರನ್ನು ನಿಜವಾಗಿ ಚೂರು ಚೂರು ಮಾಡಿದ್ದಿರಬೇಕು.—ಯೆರೆ 51:11.

ಬಾಬೆಲನ್ನು ಆಕ್ರಮಿಸಿದವರಲ್ಲಿ “ಮೇದ್ಯರ ಅರಸರು” ಸೇರಿದ್ದರೆಂದು ಯೆರೆಮೀಯನು (51:11, 28) ಹೇಳಿರುವುದನ್ನು ಗಮನಿಸಿ. ಇಲ್ಲಿ ಅರಸರು ಎಂದು ಬಹುವಚನದಲ್ಲಿ ಹೇಳಿರುವುದು ಪ್ರಾಯಶಃ ರಾಜ ಕೊರೇಷನಿಗೆ ಅಧೀನರಾಗಿದ್ದ ರಾಜರುಗಳ ಬಗ್ಗೆ. ಅವನ ಕೈಕೆಳಗೂ ಮೇದ್ಯರ ರಾಜರುಗಳು ಇದ್ದರೆಂದು ಇದು ಸೂಚಿಸುತ್ತದೆ. ಇಂಥ ಸನ್ನಿವೇಶವು ಪುರಾತನ ಕಾಲದ ಪದ್ಧತಿಗಳಿಗೆ ಏನೂ ಹೊಸದಲ್ಲ. (ಯೆರೆ 25:25ನ್ನೂ ಹೋಲಿಸಿ.) ಅದಲ್ಲದೆ ಮೇದ್ಯ, ಪಾರಸಿಯ, ಎಲಾಮ್ಯ ಮತ್ತು ಇತರ ನೆರೆಹೊರೆಯ ರಾಜ್ಯಗಳಿಂದ ಬಾಬೆಲು ಸೋಲಿಸಲ್ಪಟ್ಟಾಗ ದಾರ್ಯಾವೆಷನೆಂಬ ಮೇದ್ಯಯನು (ಕಸ್ದೀಯರ) “ರಾಜ್ಯವನ್ನು ತೆಗೆದುಕೊಂಡನು” ಎಂದು ಹೇಳಲಾಗಿದೆ. ಇವನು ಪಾರಸಿ ರಾಜ ಕೋರೆಷನಿಂದಲೇ ನೇಮಿಸಲ್ಪಟ್ಟಿದ್ದಿರಬೇಕು.—ದಾನಿ 5:31; 9:1.

it-2 459 ¶4

ನೆಬೊನೈಡಸ್‌

ಬಾಬೆಲಿನ ಪತನದ ರಾತ್ರಿಯ ಕುರಿತು ದಾಖಲೆ ಹೀಗೆ ಹೇಳಿರುವುದು ಆಸಕ್ತಿಕರ: “ಕೋರೆಷನ ಸೈನ್ಯವು ಯಾವ ಹೋರಾಟವೂ ಇಲ್ಲದೆ ಬಾಬೆಲಿನೊಳಗೆ ಪ್ರವೇಶಿಸಿತು.” ಯಾವುದೇ ಸಾಮಾನ್ಯ ಯುದ್ಧಹೋರಾಟಗಳಿಲ್ಲದೆ ಬಾಬೆಲನ್ನು ಪ್ರವೇಶಿಸಿದ ಈ ಸಂಗತಿ ಯೆರೆಮೀಯನ ಈ ಪ್ರವಾದನೆಗೆ ಹೊಂದಿಕೆಯಲ್ಲಿದೆ: ‘ಬಾಬೆಲಿನ ಶೂರರು ಯುದ್ಧಕ್ಕೆ ಹಿಂತೆಗೆದು ನಿಂತಿದ್ದಾರೆ.’—ಯೆರೆ 51:30.

it-1 237 ¶1

ಬಾಬೆಲ್‌

ಆ ಸ್ಮರಣೀಯ ತಾರೀಖಾದ ಕ್ರಿ.ಪೂ. 539 ರಿಂದ ಆರಂಭಿಸಿ ಬಾಬೆಲಿನ ಕೀರ್ತಿಯು ಕಳೆಗುಂದತೊಡಗಿತು. ಪಟ್ಟಣವು ಅವನತಿಗಿಳಿಯಿತು. ಎರಡು ಸಾರಿ ಅದು ಪಾರಸೀಯ ಸಾಮ್ರಾಟ Iನೇ ಕೊರೇಷನ (ಹಿಸ್ಟೇಸ್ಪಿಸ್‌) ವಿರುದ್ಧ ದಂಗೆಯೆದ್ದಿತು. ಎರಡನೇ ಸಲದ ದಂಗೆಯಲ್ಲಿ ಬಾಬೆಲನ್ನು ಕೆಡವಿಹಾಕಲಾಯಿತು. ಅರ್ಧ ಪುನಃಕಟ್ಟಲ್ಪಟ್ಟ ಆ ಪಟ್ಟಣ Iನೆಯ ಅರ್ತಷಸ್ತನ ವಿರುದ್ಧ ದಂಗೆಯೆದ್ದಾಗ ಪೂರಾ ಸೂರೆಮಾಡಲ್ಪಟ್ಟಿತು. ಮಹಾ ಅಲೆಕ್ಸಾಂಡರ್‌ ಬಾಬೆಲನ್ನು ತನ್ನ ರಾಜಧಾನಿಯಾಗಿ ಮಾಡಲು ಯೋಚಿಸಿದ್ದನಾದರೂ ಕ್ರಿ.ಪೂ. 323 ರಲ್ಲಿ ಅಕಾಲ ಮೃತ್ಯುಗೀಡಾದನು. ನಿಕೆಟರನು ಕ್ರಿ.ಪೂ. 312 ರಲ್ಲಿ ಪಟ್ಟಣವನ್ನು ವಶಪಡಿಸಿಕೊಂಡನು ಮತ್ತು ಅದರ ಹೆಚ್ಚಿನ ಸರಕು ಸಾಮಾನುಗಳನ್ನು ಟೈಗ್ರಿಸ್‌ ನದಿ ತೀರಗಳಿಗೆ ಸಾಗಿಸಿ ತನ್ನ ಹೊಸ ರಾಜ್ಯಧಾನಿ ಸೆಲ್ಯೂಸಿಯವನ್ನು ಕಟ್ಟಲು ಬಳಸಿದನು. ಆ ನಗರ ಮತ್ತು ಯೆಹೂದ್ಯರ ಒಂದು ವಸಾಹತು ಆರಂಭದ ಕ್ರೈಸ್ತರ ಕಾಲದಲ್ಲಿ ಇನ್ನೂ ಉಳಿದಿತ್ತು. ಇದು ಅಪೊಸ್ತಲ ಪೇತ್ರನಿಗೆ ಬಾಬೆಲನ್ನು ಭೇಟಿ ಮಾಡಲು ಕಾರಣವನ್ನಿತ್ತಿತು. (1ಪೇತ್ರ 5:13) ಬಾಬೆಲಿನ ಬೇಲ್‌ ದೇವಸ್ಥಾನವು ಕ್ರಿ.ಶ. 75 ರವರೆಗೂ ಅಸ್ತಿತ್ವದಲ್ಲಿತ್ತೆಂದು ಅಲ್ಲಿ ಸಿಕ್ಕಿದ ಶಿಲಾಶಾಸನಗಳು ತೋರಿಸುತ್ತವೆ. ಪಟ್ಟಣವು ಕ್ರಿ.ಶ. ನಾಲ್ಕನೆಯ ಶತಮಾನದೊಳಗೆ ಹಾಳುಗೆಡವಲ್ಪಟ್ಟು ಕಟ್ಟಕಡೆಗೆ ಇಲ್ಲದೆ ಹೋಯಿತು. ಅಲ್ಲಿ “ಹಾಳುದಿಬ್ಬಗಳಲ್ಲದೆ” ಬೇರೇನೂ ಉಳಿದಿಲ್ಲ.—ಯೆರೆ 51:37.

ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ

it-2 444 ¶9

ಬೆಟ್ಟ, ಪರ್ವತ

ಸರ್ಕಾರಗಳನ್ನು ಪ್ರತಿನಿಧಿಸುತ್ತವೆ. ಬೈಬಲಿನಲ್ಲಿ ರಾಜ್ಯಗಳನ್ನು ಅಥವಾ ಆಳುವ ಸರ್ಕಾರಗಳನ್ನು ಸೂಚಿಸಲಿಕ್ಕಾಗಿ ಬೆಟ್ಟಗಳನ್ನು ಅಥವಾ ಪರ್ವತಗಳನ್ನು ಸಾಂಕೇತಿವಾಗಿ ಬಳಸಲಾಗಿದೆ. (ದಾನಿ 2:35, 44, 45; ಹೋಲಿಸಿ ಯೆಶಾ 41:15; ಪ್ರಕ 17:9-11, 18.) ಬಾಬೆಲು ತನ್ನ ಮಿಲಿಟರಿ ವಿಜಯಗಳ ಮೂಲಕ ಬೇರೆ ಬೇರೆ ದೇಶಗಳನ್ನು ದ್ವಂಸಗೊಳಿಸಿತ್ತು. ಆದಕಾರಣ “ನಾಶಕ ಪರ್ವತ” ಎಂದು ಕರೆಯಲ್ಪಟ್ಟಿದೆ. (ಯೆರೆ 51:24, 25) ಜಗಳಹೂಡುವ ಮನುಷ್ಯರ ವಿರುದ್ಧವಾಗಿ ಯೆಹೋವನು ಹೇಗೆ ವರ್ತಿಸುತ್ತಾನೆಂದು ತಿಳಿಸುತ್ತಾ ಒಂದು ಕೀರ್ತನೆಯು ‘ಕೊಳ್ಳೆಹೊಡೆಯುವ ಬೆಟ್ಟಗಳಿಗಿಂತ ನೀನು ತೇಜೋಮಯನು’ ಎಂದು ವರ್ಣಿಸಿದೆ. (ಕೀರ್ತ 76:4, NW) ಕೊಳ್ಳೆಹೊಡೆಯುವ ಬೆಟ್ಟಗಳು ಆಕ್ರಮಣಕಾರಿ ರಾಜ್ಯಗಳನ್ನು ಸೂಚಿಸಬಹುದು. (ನಹೂ 2:11-13 ಹೋಲಿಸಿ.) ಯೆಹೋವನ ಬಗ್ಗೆ ದಾವೀದನು ಹೇಳಿದ್ದು: “ನಾನಿರುವ ಬೆಟ್ಟಕ್ಕೆ ಸ್ಥಿರವಾದ ಬಲವನ್ನು ಅನುಗ್ರಹಿಸಿದಿಯಲ್ಲಾ.” ಯೆಹೋವನು ದಾವೀದನ ರಾಜ್ಯವನ್ನು ಉನ್ನತಕ್ಕೇರಿಸಿ ಸ್ಥಿರಪಡಿಸಿದ್ದನೆಂಬ ಅರ್ಥವನ್ನು ಇದು ಕೊಡಬಹುದು. (ಕೀರ್ತ 30:7; 2ಸಮು 5:12 ಹೋಲಿಸಿ.) ಬೆಟ್ಟಗಳು ರಾಜ್ಯಗಳನ್ನು ಪ್ರತಿನಿಧಿಸಬಹುದೆಂಬ ನಿಜತ್ವವು ಪ್ರಕಟನೆ 8:8 ರ ಮಹತ್ವಾರ್ಥವನ್ನು ತಿಳಿದುಕೊಳ್ಳಲು ನಮಗೆ ಸಹಾಯಕರ. ಅಲ್ಲಿ “ಬೆಂಕಿಹತ್ತಿ ಉರಿಯುವ ದೊಡ್ಡ ಬೆಟ್ಟದಂತಿರುವ ಒಂದು ವಸ್ತು” ಎಂದು ಹೇಳಿದೆ. ಬೆಂಕಿಹತ್ತಿ ಉರಿಯುವ ಬೆಟ್ಟದಂತೆ ಕಾಣುವ ಆ ವಸ್ತು ಪ್ರಾಯಶಃ ಬೆಂಕಿಯ ಹಾಗೆ ನಾಶಕಾರಕ ಗುಣವಿರುವ ಒಂದು ರಾಜ್ಯದ ಆಳ್ವಿಕೆಯನ್ನು ಸೂಚಿಸಬಹುದು.

it-2 882 ¶3

ಸಮುದ್ರ

ಅಪಾರ ಸೇನಾಬಲ. ಬಾಬೆಲನ್ನು ಆಕ್ರಮಣ ಮಾಡಿದ ಸೈನ್ಯದ ಅಬ್ಬರದ ಧ್ವನಿಯನ್ನು ವರ್ಣಿಸುತ್ತಾ ಅದು ‘ಸಮುದ್ರದಂತೆ ಮೊರೆಯುವ’ ಧ್ವನಿ ಎಂದು ಯೆರೆಮೀಯ ವರ್ಣಿಸಿದನು. (ಯೆರೆ 50:42) “ಸಮುದ್ರವು” ಬಾಬೆಲಿನ ಮೇಲೆ ನುಗ್ಗುವುದು ಎಂದು ಅವನು ಮುಂತಿಳಿಸಿದ್ದು ಏಕೆಂದರೆ ಮೇದ್ಯ ಮತ್ತು ಫಾರಸೀಯರ ಕೈಕೆಳಗಿನ ಸೈನ್ಯಗಳು ಮಹಾ ಪ್ರವಾಹದಂತೆ ಬಾಬೆಲಿನ ವಿರುದ್ಧ ಮುನ್ನುಗ್ಗಿ ಜಯಗಳಿಸಿದವು ಎಂಬ ಅರ್ಥದಲ್ಲಿ.—ಯೆರೆ 51:42; ದಾನಿ 9:26 ಹೋಲಿಸಿ.

ಜೂನ್‌ 12-18

ಬೈಬಲಿನಲ್ಲಿರುವ ರತ್ನಗಳು | ಪ್ರಲಾಪಗಳು 1-5

“ಕಾಯುವ ಮನೋಭಾವ ನಮಗೆ ತಾಳಿಕೊಳ್ಳಲು ಸಹಾಯ ಮಾಡುತ್ತದೆ”

w12 6/1 14 ¶3-4

“ನಿನ್ನ ಆತ್ಮವು . . . ನನ್ನೆಡೆಗೆ ಬಾಗುವುದು”

ದುಃಖದ ಸನ್ನಿವೇಶದ ಮಧ್ಯೆಯೂ ಯೆರೆಮೀಯನು ನಿರೀಕ್ಷೆಯಿಂದ ಇದ್ದನು. ಅವನು ಯೆಹೋವನಿಗೆ ಮೊರೆಯಿಡುತ್ತಾ ಹೇಳಿದ್ದು: “ನಿನ್ನ ಆತ್ಮವು (ಯೆಹೋವನು ತಾನೇ) ಇವುಗಳನ್ನು ನಿತ್ಯವೂ ಜ್ಞಾಪಿಸಿಕೊಂಡು ನನ್ನೆಡೆಗೆ ಬಾಗುವುದು.” (20 ನೇ ವಚನ, NW) ಯೆರೆಮೀಯನಿಗೆ ಈ ವಿಷಯದಲ್ಲಿ ಯಾವ ಸಂದೇಹವೂ ಇರಲಿಲ್ಲ. ಯೆಹೋವನು ತನ್ನನ್ನೆಂದೂ ಮರೆಯನು, ಪಶ್ಚಾತ್ತಾಪಪಟ್ಟ ತನ್ನ ಜನರನ್ನೆಂದೂ ಕೈಬಿಡನು ಎಂದು ಅವನಿಗೆ ಚೆನ್ನಾಗಿ ತಿಳಿದಿತ್ತು. ಆದರೆ ಸರ್ವಶಕ್ತನಾದ ದೇವರು ತಾನೇ ಈಗ ಏನು ಮಾಡಲಿದ್ದನು?—ಪ್ರಕಟನೆ 15:3.

ನಿಜ ಪಶ್ಚಾತ್ತಾಪ ತೋರಿಸುವ ತನ್ನ ಜನರನ್ನು ಜ್ಞಾಪಿಸಿಕೊಂಡು ಅವರ ಸಹಾಯಕ್ಕಾಗಿ ಯೆಹೋವನು ಬಾಗುವನು ಎಂಬ ಖಾತ್ರಿ ಯೆರೆಮೀಯನಿಗಿತ್ತು. ಅದನ್ನೇ ಇನ್ನೊಂದು ಭಾಷಾಂತರವು “ನನ್ನನ್ನು ಜ್ಞಾಪಿಸಿಕೊಂಡು ನನ್ನೆಡೆಗೆ ಬಗ್ಗಿಕೊಂಡಿರು” ಎಂದು ಹೇಳುತ್ತದೆ. ಈ ಮಾತುಗಳು ಒಂದು ಕೋಮಲ ಭಾವನೆಯನ್ನು ನಮ್ಮ ಮನಸ್ಸಿಗೆ ತರುತ್ತದೆ. ಅದೇನಂದರೆ ಯೆಹೋವನು “ಭೂಲೋಕದಲ್ಲೆಲ್ಲಾ ಸರ್ವೋನ್ನತನಾದ” ದೇವರಾದರೂ ತನ್ನ ಆರಾಧಕರ ಸಹಾಯಕ್ಕಾಗಿ ಬಾಗುತ್ತಾನೆ ಅಂದರೆ ಅವರನ್ನು ದೀನ-ಹೀನ ಸ್ಥಿತಿಯಿಂದ ಕೈಹಿಡಿದು ಎಬ್ಬಿಸಿ ತನ್ನ ಅನುಗ್ರಹದ ಕೆಳಗೆ ತರುತ್ತಾನೆ. (ಕೀರ್ತನೆ 83:18) ಈ ನಿರೀಕ್ಷೆಯು ಯೆರೆಮೀಯನ ನೊಂದ ಹೃದಯವನ್ನು ಬಲಪಡಿಸಿತು. ನಿಜ ಸಾಂತ್ವನ ಕೊಟ್ಟಿತು. ಹಾಗಾಗಿ, ಪಶ್ಚಾತ್ತಾಪಪಟ್ಟ ತನ್ನ ಜನರನ್ನು ಬಿಡಿಸುವ ಯೆಹೋವನ ನೇಮಿತ ಸಮಯವು ಬರುವ ತನಕ ತಾಳ್ಮೆಯಿಂದ ಕಾಯಲು ಆ ನಂಬಿಗಸ್ತ ಪ್ರವಾದಿಯು ದೃಢನಿಶ್ಚಯ ಮಾಡಿದನು.—21 ನೇ ವಚನ.

ಜೂನ್‌ 19-25

ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 1-5

“ಯೆಹೆಜ್ಕೇಲ ದೇವರ ಸಂದೇಶವನ್ನು ಸಂತೋಷದಿಂದ ಸಾರಿದನು”

it-1 1214

ಕರುಳುಗಳು

ಕರುಳುಗಳು ನಾವು ತಿನ್ನುವ ಆಹಾರವನ್ನು ಜೀರ್ಣಿಸುತ್ತವೆ. ಇದನ್ನು ರೂಪಕವಾಗಿ ಮಾನಸಿಕ ಅಥವಾ ಆಧ್ಯಾತ್ಮಿಕ ಜೀರ್ಣಿಸುವಿಕೆಗೆ ಬಳಸಿದ್ದಾರೆ. ಸುರುಳಿಯನ್ನು ತಿಂದು ಹೊಟ್ಟೆ (ಹಿಬ್ರೂ, ಮೀ-ಇಮ್‌) ತುಂಬಿಸಿಕೋ ಎಂದು ಯೆಹೆಜ್ಕೇಲನಿಗೆ ದರ್ಶನದಲ್ಲಿ ಹೇಳಲಾಯಿತು. ಆ ಸುರುಳಿಯಲ್ಲಿ ಬರೆದಿದ್ದ ವಾಕ್ಯಗಳನ್ನು ಧ್ಯಾನಿಸುವ ಮೂಲಕ ಮತ್ತು ಸ್ಮರಣೆಯಲ್ಲಿ ಇಟ್ಟುಕೊಳ್ಳುವ ಮೂಲಕ ಯೆರೆಮೀಯನಿಗೆ ಆಧ್ಯಾತ್ಮಿಕ ಬಲ ಸಿಗಲಿತ್ತು. ಆ ಮೂಲಕ ಅವನಿಗೆ ಆಧ್ಯಾತ್ಮಿಕ ಪೋಷಣೆ ದೊರೆಯಿತು ಮತ್ತು ಸಾರಲು ಸಂದೇಶವೂ ಸಿಕ್ಕಿತು.—ಯೆಹೆ 3:1-6; ಪ್ರಕ 10:8-10 ಹೋಲಿಸಿ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ