ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
ಜುಲೈ 10-16
ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 15-17
“ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೀರಾ?”
w88 9/15 17 ¶8
ಯೆಹೋವನು ಖಡ್ಗವನ್ನು ಒರೆಯಿಂದ ಹೊರಕ್ಕೆ ತೆಗೆಯುತ್ತಾನೆ!
8 ಆಮೇಲೆ ಬಾಬೆಲ್ ಮತ್ತು ಈಜಿಪ್ಟಿನ ಅರಸರನ್ನು ದೊಡ್ಡ ಹದ್ದುಗಳಿಗೆ ಹೋಲಿಸಲಾಯಿತು. ಒಂದು ದೊಡ್ಡ ಹದ್ದು ದೇವದಾರು ಮರದ ಮೇಲ್ಗಡೆಯ ರೆಂಬೆಯನ್ನು ಕಿತ್ತಿತು ಅಂದರೆ ರಾಜ ಯೆಹೋಯಾಖೀನನನ್ನು ತೆಗೆದುಹಾಕಿ ಅವನ ಸ್ಥಾನದಲ್ಲಿ ಚಿದ್ಕೀಯನನ್ನು ಇಡಲಾಯಿತು. ಚಿದ್ಕೀಯನು ನೆಬೂಕದ್ನೆಚ್ಚರನೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದನು. ಆದರೆ ನಂತರ ಅದನ್ನು ಮುರಿದುಬಿಟ್ಟನು. ಹೇಗಂದರೆ ಇನ್ನೊಂದು ದೊಡ್ಡ ಹದ್ದು ಆಗಿದ್ದ ಈಜಿಪ್ಟಿನ ಅರಸನ ಮಿಲಿಟರಿ ಸಹಾಯವನ್ನು ಕೋರಿದ ಮೂಲಕ. ಹೀಗೆ ಅವನು ದೇವರ ಹೆಸರಿನ ಮೇಲೆ ಆಣೆಯಿಟ್ಟು ಮಾಡಿದ ಒಡಂಬಡಿಕೆಯನ್ನು ಪಾಲಿಸಲಿಲ್ಲ. ಯೆಹೋವನ ನಾಮಕ್ಕೆ ನಿಂದೆಯನ್ನು ತಂದನು. ನಾವಾದರೋ ಕೊಟ್ಟ ಮಾತನ್ನು ಪಾಲಿಸಲು ಎಂದೂ ತಪ್ಪಬಾರದು. ತಪ್ಪಿದರೆ ಅದು ಯೆಹೋವನ ನಾಮಕ್ಕೆ ನಿಂದೆ ತರುತ್ತದೆ. ಯೆಹೋವನ ಸಾಕ್ಷಿಗಳೆಂಬ ದಿವ್ಯನಾಮದಿಂದ ಕರೆಯಲ್ಪಡುವುದು ನಮಗಿರುವ ದೊಡ್ಡ ಸುಯೋಗ!—ಯೆಹೆಜ್ಕೇಲ 17:1-21.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w88 9/15 17 ¶7
ಯೆಹೋವನು ಖಡ್ಗವನ್ನು ಒರೆಯಿಂದ ಹೊರಕ್ಕೆ ತೆಗೆಯುತ್ತಾನೆ!
7 ಯೆಹೂದದ ನಿವಾಸಿಗಳು ಅಪನಂಬಿಗಸ್ತರಾಗಿದ್ದರು. ಹಾಗಾಗಿ ಯೆಹೂದವನ್ನು ಒಳ್ಳೇ ಫಲಕೊಡದ ಕಾಡು ದ್ರಾಕ್ಷಾಲತೆಗೆ ಹೋಲಿಸಲಾಗಿದೆ. ಅದು ಸೌದೆಯಾಗಿ ಉರಿಸಲಷ್ಟೇ ಯೋಗ್ಯ. (ಯೆಹೆಜ್ಕೇಲ 15:1-8) ಯೆಹೂದವನ್ನು ತಬ್ಬಲಿಯಾದ ಅನಾಥ ಕೂಸಿಗೆ ಕೂಡ ಹೋಲಿಸಲಾಗಿದೆ. ಯೆಹೋವನು ಐಗುಪ್ತದಿಂದ ಅದನ್ನು ಬಿಡಿಸಿ ರಕ್ಷಿಸಿ ತಂದನು. ಅದು ಬೆಳೆದು ಪ್ರಾಯಕ್ಕೆ ಬಂದ ಸ್ತ್ರೀಯಾಯಿತು. ಯೆಹೋವನು ಅದನ್ನು ತನ್ನ ಪತ್ನಿಯಾಗಿ ಸ್ವೀಕರಿಸಿದನು. ಆದರೆ ಯೆಹೂದವು ಸುಳ್ಳು ದೇವರುಗಳನ್ನು ಪೂಜಿಸಿ ಆಧ್ಯಾತ್ಮಿಕವಾಗಿ ವ್ಯಭಿಚಾರ ಮಾಡಿತು. ಆದ್ದರಿಂದ ನಾಶನವನ್ನು ಅನುಭವಿಸಬೇಕಾಯಿತು. ಆದರೂ ದೇವರು ನಂಬಿಗಸ್ತ ಜನರೊಂದಿಗೆ ‘ತಪ್ಪದ ಒಡಂಬಡಿಕೆಯನ್ನು ಮಾಡಿಕೊಳ್ಳುವನು’ ಅಂದರೆ ಆಧ್ಯಾತ್ಮಿಕ ಇಸ್ರಾಯೇಲಿನ ಜೊತೆ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವನು.—ಯೆಹೆಜ್ಕೇಲ 16:1-63; ಯೆರೆಮೀಯ 31:31-34; ಗಲಾತ್ಯ 6:16.
ಜುಲೈ 17-23
ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 18-20
“ಯೆಹೋವನು ಒಂದು ತಪ್ಪನ್ನು ಕ್ಷಮಿಸಿದ ಮೇಲೆ ಅದನ್ನು ನೆನಪಿಟ್ಟುಕೊಳ್ಳುತ್ತಾನಾ?”
w12 7/1 18 ¶2
ದೇವರು ಒಂದು ತಪ್ಪನ್ನು ಕ್ಷಮಿಸಿದ ಮೇಲೆ ಅದನ್ನು ನೆನಪಿಟ್ಟುಕೊಳ್ಳುತ್ತಾನಾ?
ಯೆಹೋವನು ಪ್ರವಾದಿ ಯೆಹೆಜ್ಕೇಲನ ಮೂಲಕ ಅಪನಂಬಿಗಸ್ತ ಯೆಹೂದ ಮತ್ತು ಯೆರೂಸಲೇಮಿನ ವಿರುದ್ಧ ತೀರ್ಪನ್ನು ಘೋಷಿಸಿದನು. ಇಡೀ ಜನಾಂಗವೇ ಯೆಹೋವನ ಆರಾಧನೆಯನ್ನು ತೊರೆದುಬಿಟ್ಟಿತ್ತು. ದೇಶವನ್ನೆಲ್ಲಾ ಹಿಂಸಾಚಾರದಿಂದ ತುಂಬಿಸಿತ್ತು. ಹಾಗಾಗಿ ಯೆರೂಸಲೇಮಿಗೆ ನಾಶನವನ್ನು ಯೆಹೋವನು ಮುಂತಿಳಿಸಿದನು. ಬಾಬೆಲಿನವರ ಕೈಯಿಂದ ನಾಶವಾಗುವರೆಂದು ಹೇಳಿದನು. ಆದರೂ ತೀರ್ಪಿನ ಮಧ್ಯೆ ನಿರೀಕ್ಷೆಯ ಸಂದೇಶವನ್ನೂ ಒದಗಿಸಿದನು. ಪ್ರತಿಯೊಬ್ಬನಿಗೆ ಸ್ವಂತ ಆಯ್ಕೆ ಮಾಡುವ ಅವಕಾಶ ಇತ್ತು; ಪ್ರತಿಯೊಬ್ಬನು ತನ್ನ ಕೃತ್ಯಗಳಿಗೆ ತಾನೇ ಜವಾಬ್ದಾರನಾಗಿದ್ದನು. —ವಚನಗಳು 19, 20.
w12 7/1 18 ¶3-7
ದೇವರು ಒಂದು ತಪ್ಪನ್ನು ಕ್ಷಮಿಸಿದ ಮೇಲೆ ಅದನ್ನು ನೆನಪಿಟ್ಟುಕೊಳ್ಳುತ್ತಾನಾ?
ಹಾಗಾದರೆ ಒಬ್ಬನು ಕೆಟ್ಟತನವನ್ನು ಬಿಟ್ಟು ಒಳ್ಳೇದನ್ನು ಮಾಡಲು ಆರಿಸಿ ಕೊಂಡರೆ ಆಗೇನು? ಯೆಹೋವನು ಹೇಳಿದ್ದು: “ಆದರೆ ದುಷ್ಚನು ತಾನು ಮಾಡುತ್ತಿದ್ದ ಪಾಪಗಳನ್ನೆಲ್ಲ ಬಿಟ್ಟುಬಿಟ್ಟು ನನ್ನ ಸಕಲ ವಿಧಿಗಳನ್ನು ಕೈಕೊಂಡು ನೀತಿನ್ಯಾಯಗಳನ್ನು ನಡಿಸಿದರೆ ಸಾಯನು, ಬಾಳೇಬಾಳುವನು.” (ವಚನ 21) ಹೌದು, ಯೆಹೋವನು “ಕ್ಷಮಿಸುವವನೂ” ಆಗಿದ್ದಾನೆ. ಪಾಪಿಯು ತನ್ನ ದುಷ್ಟತನವನ್ನು ಬಿಟ್ಟು ನಿಜ ಪಶ್ಚಾತ್ತಾಪವನ್ನು ತೋರಿಸಿ ದೇವರ ಕಡೆಗೆ ತಿರುಗಿಕೊಂಡರೆ ದೇವರು ಅವನನ್ನು ಕ್ಷಮಿಸುವನು.—ಕೀರ್ತನೆ 86:5.
ಅವನು ಗೈದ ಪಾಪ ಕೃತ್ಯಗಳ ವಿಷಯದಲ್ಲೇನು? “ಅವನು ಮಾಡಿದ ಯಾವ ಅಪರಾಧವೂ ಅವನ ಲೆಕ್ಕಕ್ಕೆ ಸೇರಿಸಲ್ಪಡದು (ನೆನಪಿಸಲ್ಪಡದು, NW)” ಎಂದನು ಯೆಹೋವನು. (ವಚನ 22) ಗಮನಿಸಿ, ಪಶ್ಚಾತ್ತಾಪಪಟ್ಟವನ ಪಾಪ, ಅಪರಾಧಗಳು ‘ನೆನಪಿಸಲ್ಪಡವು’ ಎಂದು ಹೇಳಲಾಗಿದೆ. ಇದು ಏಕೆ ಗಮನಾರ್ಹ?
ಬೈಬಲಿನಲ್ಲಿ ‘ನೆನಪಿಸು’ ಎಂದು ಭಾಷಾಂತರವಾದ ಹೀಬ್ರೂ ಪದಕ್ಕೆ ಹಿಂದೆ ನಡೆದ ವಿಷಯವನ್ನು ಪುನಃ ನೆನಪಿಗೆ ತರುವುದು ಎಂದಷ್ಟೇ ಅಲ್ಲ, ಹೆಚ್ಚಿನ ಅರ್ಥವಿದೆ. ಈ ಪದದ ಬಗ್ಗೆ ಒಂದು ಪರಾಮರ್ಶೆ ಕೃತಿಯು ಹೇಳುವುದು: “ಈ ಕ್ರಿಯಾಪದವು ಹೆಚ್ಚಾಗಿ ಕ್ರಿಯೆಗೈಯುವುದಕ್ಕೆ ಸೂಚಿಸುತ್ತದೆ.” ಹಾಗಾಗಿ “ನೆನಪಿಸಲ್ಪಡು” ಎಂದು ಹೇಳುವಾಗ “ಕ್ರಿಯೆಕೈಕೊಳ್ಳು” ಎಂಬ ಅರ್ಥ ಸಿಗುತ್ತದೆ. ಹಾಗಾದರೆ ಪಶ್ಚಾತ್ತಾಪಪಟ್ಟ ಪಾಪಿಯ ಪಾಪ ಅಪರಾಧಗಳು “ನೆನಪಿಸಲ್ಪಡವು” ಎಂದು ಯೆಹೋವನು ಹೇಳಿದ್ದರ ಅರ್ಥವೇನು? ಆ ವ್ಯಕ್ತಿಯ ಅಪರಾಧಗಳಿಗಾಗಿ ಯೆಹೋವನು ಇನ್ನು ಮುಂದೆ ಅವನ ವಿರುದ್ಧ ಯಾವ ಕ್ರಿಯೆಯನ್ನೂ ತೆಗೆದುಕೊಳ್ಳುವುದಿಲ್ಲ. ಅವನನ್ನು ದೋಷಿಯೆಂದು ಹೇಳುವುದೂ ಇಲ್ಲ, ಶಿಕ್ಷಿಸುವುದೂ ಇಲ್ಲ ಎಂದಾಗಿದೆ.
ಯೆಹೆಜ್ಕೇಲ 18:21, 22ರಲ್ಲಿ ದೇವರ ಕ್ಷಮಾಪಣೆಯ ವಿಶಾಲತೆಯನ್ನು ಮನತಟ್ಟುವಂತೆ ಚಿತ್ರಿಸಲಾಗಿದೆ. ಯೆಹೋವನು ನಮ್ಮ ಪಾಪಗಳನ್ನು ಕ್ಷಮಿಸುವಾಗ ಭವಿಷ್ಯದಲ್ಲಿ ಮುಂದೆಂದೂ ಅವುಗಳನ್ನು ನಮ್ಮ ಲೆಕ್ಕಕ್ಕೆ ಹಿಡಿಯುವುದಿಲ್ಲ. ಪಶ್ಚಾತ್ತಾಪಪಟ್ಟವನ ಪಾಪಗಳನ್ನು ಆತನು ತನ್ನ ಬೆನ್ನಹಿಂದೆ ಹಾಕಿಬಿಡುತ್ತಾನೆ. (ಯೆಶಾಯ 38:17) ಅದು, ಆ ಪಾಪಗಳ ದಾಖಲೆಯನ್ನೇ ಆತನು ಪೂರ್ತಿಯಾಗಿ ಒರಸಿ, ಅಳಿಸಿಬಿಡುತ್ತಾನೋ ಎಂಬಂತಿದೆ.—ಅಪೊಸ್ತಲರ ಕಾರ್ಯಗಳು 3:19.
ಅಪರಿಪೂರ್ಣ ಮನುಷ್ಯರಾದ ನಮಗೆ ದೇವರ ಕರುಣೆ ಬೇಕು. ಎಷ್ಟೆಂದರೂ ನಾವು ಅನೇಕ ಸಲ ಪಾಪ ಮಾಡುತ್ತೇವೆ. (ರೋಮನ್ನರಿಗೆ 3:23) ಆದರೆ ನಾವು ಮನಃಪೂರ್ವಕವಾಗಿ ಪಶ್ಚಾತ್ತಾಪಪಟ್ಟರೆ ಆತನು ಕ್ಷಮಿಸಲು ಸಿದ್ಧನು. ಆತನು ಕ್ಷಮಿಸುವುದರ ಅರ್ಥ ಪುನಃ “ನೆನಪಿಗೆ ತರದೆ ಇರುವುದು,” ಮರೆತುಬಿಡುವುದು ಆಗಿದೆ. ನಮ್ಮ ಪಾಪಗಳನ್ನು ಆತನೆಂದೂ ಪುನಃ ನೆನಪಿಗೆ ತಂದು ನಮ್ಮ ಮೇಲೆ ತಪ್ಪುಹೊರಿಸುವುದಿಲ್ಲ, ಶಿಕ್ಷಿಸುವುದಿಲ್ಲ. ಇವು ನಿಜಕ್ಕೂ ಸಾಂತ್ವನದ ಮಾತುಗಳು! ದೇವರ ಕರುಣೆ ಕನಿಕರದ ಈ ಗುಣವು ಆತನಿಗೆ ಇನ್ನೂ ಸಮೀಪವಾಗಲು ನಮ್ಮನ್ನು ಪ್ರೇರಿಸುವುದಿಲ್ಲವೇ?
w08 4/1 8 ¶4
ಹರ್ಮಗೆದೋನ್—ಎಲ್ಲ ಯುದ್ಧಗಳನ್ನು ಕೊನೆಗೊಳಿಸುವ ದೇವರ ಯುದ್ಧ
ಯೆಹೋವನು ನಮ್ಮ ನ್ಯಾಯಾಧಿಪತಿ. ಆದ್ದರಿಂದ ದುಷ್ಟನ ವಿರುದ್ಧ ಆತನು ನೀಡುವ ಪ್ರತಿಯೊಂದು ತೀರ್ಪು ನ್ಯಾಯವುಳ್ಳದ್ದು ಎಂಬ ಖಾತ್ರಿ ನಮಗಿದೆ. “ಸರ್ವಲೋಕಕ್ಕೆ ನ್ಯಾಯತೀರಿಸುವವನು ನ್ಯಾಯವನ್ನೇ ನಡಿಸುವವನಲ್ಲವೇ?” ಎಂದು ಕೇಳಿದನು ಅಬ್ರಹಾಮ. ಯೆಹೋವನು ಯಾವಾಗಲೂ ನ್ಯಾಯವನ್ನೇ ನಡಿಸುವಾತನು ಎಂದು ಅಬ್ರಹಾಮ ಕಲಿತುಕೊಂಡನು. (ಆದಿಕಾಂಡ 18:25) ಅದಲ್ಲದೆ ದುಷ್ಟರ ನಾಶದಲ್ಲಿ ಯೆಹೋವನಿಗೆ ಸ್ವಲ್ಪವೂ ಸಂತೋಷವಿಲ್ಲ ಎಂದು ಬೈಬಲು ಆಶ್ವಾಸನೆ ನೀಡುತ್ತದೆ. ದುಷ್ಟನು ಕೊನೆತನಕ ತಿದ್ದಿಕೊಳ್ಳದೆ ಹೋದಾಗ ಮಾತ್ರ ಆತನು ನಾಶಮಾಡುತ್ತಾನೆ.—ಯೆಹೆಜ್ಕೇಲ 18:32; 2 ಪೇತ್ರ 3:9.
ಜೂನ್ 31–ಆಗಸ್ಟ್ 6
ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 24-27
“ಯೆಹೋವನ ವಾಗ್ದಾನದಲ್ಲಿ ಭರವಸೆ ಹೆಚ್ಚಿಸುವ ತೂರಿನ ಪ್ರವಾದನೆ”
ce 216 ¶3
ಬೈಬಲ್ ನಿಜವಾಗಲೂ ದೇವರಿಂದ ಪ್ರೇರಿತವಾಗಿದೆಯಾ?
3 ಫೋನಿಶಿಯದ ಪ್ರಧಾನ ರೇವು ಪಟ್ಟಣವೇ ತೂರ್. ಅದರ ದಕ್ಷಿಣದಲ್ಲಿ ಯೆಹೋವನ ಆರಾಧಕರಾದ ಇಸ್ರಾಯೇಲ್ಯರ ರಾಜ್ಯವಿತ್ತು. ತೂರ್ ತನ್ನ ನೆರೆಯವರಾದ ಇಸ್ರಾಯೇಲಿಗೆ ವಿಶ್ವಾಸಘಾತ ಮಾಡಿತ್ತು. ಹಾಗಾಗಿ ಅದು ಪೂರ್ತಿಯಾಗಿ ನಾಶವಾಗುವುದೆಂದು ಯೆಹೋವನು ತನ್ನ ಪ್ರವಾದಿ ಯೆಹೆಜ್ಕೇಲನ ಮೂಲಕ 250 ವರ್ಷಕ್ಕಿಂತ ಮುಂಚೆಯೇ ತಿಳಿಸಿದನು. ಯೆಹೋವನು ಹೇಳಿದ್ದು: “ನಾನು ಬಹು ಜನಾಂಗಗಳನ್ನು ನಿನ್ನ ಮೇಲೆ ಎಬ್ಬಿಸುವೆನು. ಅವು ತೂರಿನ ಪೌಳಿಗೋಡೆಯನ್ನು ಉರುಳಿಸಿ ಅದರ ಕೊತ್ತಲಗಳನ್ನು ಕೆಡವಿ ಹಾಕುವವು. ನಾನು ಅದರ ಮಣ್ಣನ್ನು ಕೆರೆದು ಅದನ್ನು ಗುಡಿಸಿ ಗುಂಡಾಂತರ ಮಾಡುವೆನು. ಅದು ಸಮುದ್ರದ ನಡುವೆ ಬಲೆಗಳಿಗೆ ಹಾಸಬಂಡೆಯಾಗುವದು.” ತೂರನ್ನು ಹಾಳುಮಾಡುವ ಮೊದಲನೇ ಜನಾಂಗ ಮತ್ತು ಅದರ ಮುಖಂಡನ ಹೆಸರುಗಳನ್ನು ಸಹ ಯೆಹೆಜ್ಕೇಲನು ಮುಂತಿಳಿಸಿದನು: “ಇಗೋ, ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನನ್ನು ತೂರಿನ ಮೇಲೆ ಬರಮಾಡುವೆನು.”—ಯೆಹೆಜ್ಕೇಲ 26:3-5, 7.
it-1 ¶70
ಅಲೆಗ್ಸಾಂಡರ್
ಅಲೆಗ್ಸಾಂಡರನಿಗೆ ಏಷ್ಯಾ ಮೈನರ್‌ನಲ್ಲಿ ಎರಡು ನಿರ್ಣಾಯಕ ಯುದ್ಧ ವಿಜಯಗಳು ಸಿಕ್ಕಿದವು. (ಒಂದನೇದು ಗ್ರೆನೈಕಸ್ ರಿವರ್ ಯುದ್ಧ ಮತ್ತು ಎರಡನೇದು ಪ್ಲೇನ್ ಆಫ್ ಐಸ್ಸಸ್. ಇಲ್ಲಿ ಮಹಾ ಪಾರಸೀಯ ಸೇನೆಯ ಸುಮಾರು 5 ಲಕ್ಷ ಸೈನಿಕರಿಗೆ ಪೂರ್ತಿ ಸೋಲುಣಿಸಿದನು.) ಯುದ್ಧಾನಂತರ ಸೋತು ಪಲಾಯನಗೈಯುತ್ತಿದ್ದ ಪಾರಸೀಯರನ್ನು ಹಿಂದಟ್ಟಿಕೊಂಡು ಹೋಗುವ ಬದಲಿಗೆ ಅಲೆಗ್ಸಾಂಡರನು ತೂರಿನ ದ್ವೀಪ ಪಟ್ಟಣದ ಕಡೆಗೆ ಮುನ್ನಡೆದನು. ತೂರಿನ ಪೌಳಿಗೋಡೆಗಳು, ಕೊತ್ತಲಗಳು, ಮನೆಗಳು ಕೆಡವಿಹಾಕಲ್ಪಟ್ಟು ಕಲ್ಲು ಮರ ಮಣ್ಣು ಸಹಿತ ಧೂಳಾಗಿ ಸಮುದ್ರದ ಪಾಲಾಗುವುದೆಂದು ಶತಮಾನಗಳ ಮುಂಚೆಯೇ ಮುಂತಿಳಿಸಲಾಗಿತ್ತು. (ಯೆಹೆ 26:4, 12) ಆದ್ದರಿಂದ, ವರ್ಷಗಳ ಮುಂಚೆ ನೆಬೂಕದ್ನೆಚ್ಚರನಿಂದ ನಾಶಮಾಡಲಾದ ಈ ನಗರದ ಅಳಿದುಳಿದ ಇಟ್ಟಿಗೆ ಕಲ್ಲು ಮಣ್ಣುಗಳನ್ನು ಅಲೆಕ್ಸಾಂಡರನು ತೆಗೆದು, ಅದರಿಂದ ದ್ವೀಪಪಟ್ಟಣಕ್ಕೆ 800 ಮೀ. (0.5 ಮೈಲು) ಉದ್ದದ ಎತ್ತರವಾದ ಕಾಲುದಾರಿಯನ್ನು ನಿರ್ಮಿಸಿದ್ದು ಗಮನಾರ್ಹ. ಹೀಗೆ ಅಲೆಗ್ಸಾಂಡರನು ನೌಕಾಪಡೆಯಿಂದಾಗಿ ಮತ್ತು ಯುದ್ಧ ತಂತ್ರಗಳಿಂದ ಕಡಲ ರಾಣಿಯಾದ ತೂರನ್ನು ಸದೆಬಡಿದನು. ಅಹಂಕಾರದಿಂದ ಮೆರೆದ ಆ ತೂರ್ ಪಟ್ಟಣ ಕ್ರಿ.ಪೂ. 332 ರ ಜುಲೈಯಲ್ಲಿ ನಾಶವಾಯಿತು.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
w88 9/15 21 ¶24
ಯೆಹೋವನು ಖಡ್ಗವನ್ನು ಒರೆಯಿಂದ ಹೊರಕ್ಕೆ ತೆಗೆಯುತ್ತಾನೆ!
24 ಆಮೇಲೆ ಯೆಹೆಜ್ಕೇಲನು ಒಂದು ಅಸಹಜ ರೀತಿಯಲ್ಲಿ ನಡೆದುಕೊಳ್ಳಬೇಕಾಗಿ ಬಂತು. (ಯೆಹೆಜ್ಕೇಲ 24:15-18 ಓದಿ) ಅವನ ಪತ್ನಿಯು ತೀರಿಹೋದಾಗ ಅವನು ವಿಯೋಗ ದುಃಖ ತೋರಿಸಬಾರದಿತ್ತು, ಶೋಕಿಸಬಾರದಿತ್ತು. ಏಕೆ? ಯೆರೂಸಲೇಮು, ಅದರ ನಿವಾಸಿಗಳು ಮತ್ತು ದೇವಾಲಯ ನಾಶವಾಗುವಾಗ ಯೆಹೂದ್ಯರು ತೀವ್ರ ಆಘಾತಗೊಂಡು ಸ್ತಬ್ಧರಾಗಿ ಹೋಗುವರೆಂದು ತೋರಿಸಲಿಕ್ಕಾಗಿ. ಅವರಿಗೆ ತಮ್ಮ ದುಃಖವನ್ನು ಹೊರಗೆಡವಲು ಆಗದ ಪರಿಸ್ಥಿತಿ ಬರಲಿಕ್ಕಿತ್ತು. ನಾಶದ ಬಗ್ಗೆ ಯೆಹೆಜ್ಕೇಲನು ಅವರಿಗೆ ಈಗಾಗಲೇ ಸಾಕಷ್ಟನ್ನು ತಿಳಿಸಿದ್ದನು. ಇನ್ನು ಯೆರೂಸಲೇಮಿನ ನಾಶದ ಸುದ್ದಿ ಅವನ ಕಿವಿಗೆ ಬೀಳುವ ತನಕ ಅವನು ದೇವರ ಸಂದೇಶವನ್ನು ಪುನಃ ತಿಳಿಸುವಂತಿರಲಿಲ್ಲ. ತದ್ರೀತಿ ಕ್ರೈಸ್ತ ಪ್ರಪಂಚ ಮತ್ತು ಅದರ ಕಪಟಿ ಸದಸ್ಯರು ಸಹ ತಮ್ಮ ನಾಶನದ ಸಮಯದಲ್ಲಿ ಆಘಾತಗೊಂಡು ಸ್ತಬ್ಧರಾಗಿ ಹೋಗುವರು. “ಮಹಾಸಂಕಟ” ಆರಂಭಿಸುವಷ್ಟರಲ್ಲಿ ಅಭಿಷಿಕ್ತ ಕಾವಲುಗಾರ ವರ್ಗವು ಕ್ರೈಸ್ತ ಪ್ರಪಂಚದ ನಾಶದ ಬಗ್ಗೆ ಸಾಕಷ್ಟನ್ನು ಅವರಿಗೆ ತಿಳಿಸಿರುವುದು. (ಮತ್ತಾಯ 24:21) ಕೊನೆಗೆ ದೇವರ “ಖಡ್ಗವು” ಕ್ರೈಸ್ತಪ್ರಪಂಚದ ಮೇಲೆ ಬೀಳುವಾಗ ಅವರು ಮತ್ತು ಇತರರು ಆಘಾತದಿಂದ ಸ್ತಬ್ಧರಾಗುವರು ಮಾತ್ರವಲ್ಲ ‘ಯೆಹೋವನೇ ದೇವರೆಂದು ಅವರಿಗೆ ಗೊತ್ತಾಗುವುದು.’—ಯೆಹೆಜ್ಕೇಲ 24:19-27.