ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 32-34
ಕಾವಲುಗಾರನ ಮಹತ್ವದ ಜವಾಬ್ದಾರಿ
ಕಾವಲುಗಾರರು ಪಟ್ಟಣದ ಗೋಡೆ ಮತ್ತು ಬುರುಜಿನ ಮೇಲೆ ನಿಂತು ಅಪಾಯ ಬಂದಾಗ ಎಚ್ಚರಿಸುತ್ತಿದ್ದರು. ಯೆಹೋವನು ಸಾಂಕೇತಿಕ ರೀತಿಯಲ್ಲಿ ಯೆಹೆಜ್ಕೇಲನನ್ನು “ಇಸ್ರಾಯೇಲ್ ವಂಶದವರಿಗೆ ಕಾವಲುಗಾರನನ್ನಾಗಿ” ನೇಮಿಸಿದನು.
ಇಸ್ರಾಯೇಲ್ಯರು ಕೆಟ್ಟ ಕೆಲಸಗಳನ್ನು ಮಾಡುವುದನ್ನು ನಿಲ್ಲಸದಿದ್ದರೆ ಅವರ ಮೇಲೆ ನಾಶನ ಬರುತ್ತದೆ ಎಂದು ಯೆಹೆಜ್ಕೇಲನು ಎಚ್ಚರಿಸಿದನು
ಯೆಹೋವನ ಯಾವ ಸಂದೇಶವನ್ನು ನಾವಿಂದು ಪ್ರಕಟಿಸುತ್ತಿದ್ದೇವೆ?
ಎಚ್ಚರಿಕೆಯನ್ನು ಪ್ರಕಟಿಸುವ ಮೂಲಕ ಯೆಹೆಜ್ಕೇಲನು ತನ್ನ ಮತ್ತು ಇತರರ ಪ್ರಾಣಗಳನ್ನು ಕಾಪಾಡಸಾಧ್ಯವಿತ್ತು
ಯೆಹೋವನು ನಮಗೆ ಕೊಟ್ಟ ತುರ್ತಿನ ಸಂದೇಶವನ್ನು ಪ್ರಕಟಿಸಲು ನಮ್ಮನ್ನು ಯಾವುದು ಪ್ರೇರೇಪಿಸಬೇಕು?