ನಮ್ಮ ಕ್ರೈಸ್ತ ಜೀವನ
ದೈವಿಕ ಗುಣಗಳನ್ನು ಬೆಳೆಸಿಕೊಳ್ಳಿ—ಧೈರ್ಯ
ಏಕೆ ಪ್ರಾಮುಖ್ಯ:
ಸಾರಲು ಧೈರ್ಯ ಅಗತ್ಯ.—ಅಕಾ 5:27-29, 41, 42
ಮಹಾಸಂಕಟದಲ್ಲಿ ನಮ್ಮ ಧೈರ್ಯದ ಪರೀಕ್ಷೆಯಾಗಲಿದೆ.—ಮತ್ತಾ 24:15-21
ಮನುಷ್ಯನ ಭಯ ದುರಂತಕ್ಕೆ ನಡಿಸುತ್ತದೆ. —ಯೆರೆ 38:17-20; 39:4-7
ಹೇಗೆ ಬೆಳೆಸಿಕೊಳ್ಳುವುದು:
ಯೆಹೋವನ ರಕ್ಷಣಾ ಕಾರ್ಯಗಳ ಬಗ್ಗೆ ಧ್ಯಾನಿಸಿ.—ವಿಮೋ 14:13
ಯೆಹೋವನಲ್ಲಿ ಭರವಸೆಯಿಡಿ.—ಕೀರ್ತ 118:6
ಯಾವ ಸನ್ನಿವೇಶಗಳಲ್ಲಿ ಮತ್ತು ಯಾರಿಗೆ ಸುವಾರ್ತೆ ಸಾರಲು ನನಗೆ ಭಯವಾಗುತ್ತದೆ? ಅದನ್ನು ನಾನು ಹೇಗೆ ಎದುರಿಸಬೇಕು?
ನಿಷ್ಠೆಯನ್ನು ಕೆಡಿಸುವ ವಿಷಯಗಳಿಂದ ದೂರವಿರಿ—ಮನುಷ್ಯರ ಭಯ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:
ಸೇವೆಯಲ್ಲಿ ಧೈರ್ಯ ಏಕೆ ಬೇಕು?
ಜ್ಞಾನೋಕ್ತಿ 29:25 ರಲ್ಲಿ ಒಂದಕ್ಕೊಂದು ಭಿನ್ನವಾಗಿರುವ ಯಾವ ವಿಷಯಗಳನ್ನು ತಿಳಿಸಲಾಗಿದೆ?
ದೈವಿಕ ಗುಣವಾದ ಧೈರ್ಯವನ್ನು ನಾವೇಕೆ ಈಗಲೇ ಬೆಳೆಸಿಕೊಳ್ಳಬೇಕು?