ನಮ್ಮ ಕ್ರೈಸ್ತ ಜೀವನ
ದೈವಿಕ ಗುಣಗಳನ್ನು ಬೆಳೆಸಿಕೊಳ್ಳಿ—ನಂಬಿಕೆ
ಏಕೆ ಪ್ರಾಮುಖ್ಯ:
ದೇವರನ್ನು ಮೆಚ್ಚಿಸಲು ನಂಬಿಕೆ ಅಗತ್ಯ.—ಇಬ್ರಿ 11:6
ದೇವರ ವಾಗ್ದಾನಗಳ ಮೇಲಿನ ನಂಬಿಕೆ ನಮಗೆ ಪರೀಕ್ಷೆಗಳನ್ನು ತಾಳಿಕೊಳ್ಳಲು ಸಹಾಯಮಾಡುತ್ತದೆ.—1ಪೇತ್ರ 1:6, 7
ಅಪನಂಬಿಕೆ ಅಥವಾ ನಂಬಿಕೆಯ ಕೊರತೆ ಪಾಪಕ್ಕೆ ನಡೆಸುತ್ತದೆ.—ಇಬ್ರಿ 3:12, 13
ಹೇಗೆ ಬೆಳೆಸಿಕೊಳ್ಳುವುದು:
ದೇವರ ವಾಕ್ಯವನ್ನು ಓದಿ ಮತ್ತು ಅದರ ಕುರಿತು ಧ್ಯಾನಿಸಿ.—ರೋಮ 10:17; 1ತಿಮೊ 4:15
ಬಲವಾದ ನಂಬಿಕೆಯಿರುವ ಜನರೊಟ್ಟಿಗೆ ಕ್ರಮವಾಗಿ ಸಹವಾಸಮಾಡಿ.—ರೋಮ 1:11, 12
ನನ್ನ ಮತ್ತು ನನ್ನ ಕುಟುಂಬ ಸದಸ್ಯರ ನಂಬಿಕೆಯನ್ನು ನಾನು ಹೇಗೆ ಬಲಪಡಿಸಬಹುದು?
ನಿಷ್ಠೆಯನ್ನು ಬೆಳೆಸುವಂಥ ಗುಣಗಳನ್ನು ತೋರಿಸಿ—ನಂಬಿಕೆ ಎಂಬ ವಿಡಿಯೋ ನೋಡಿ. ನಂತರ, ಈ ಪ್ರಶ್ನೆಗಳನ್ನು ಉತ್ತರಿಸಿ:
‘ನಿಷ್ಕಪಟವಾದ ನಂಬಿಕೆ’ ಅಂದರೇನು? (1ತಿಮೊ 1:5)
ಬಲವಾದ ನಂಬಿಕೆಯನ್ನು ಬೆಳೆಸಿಕೊಳ್ಳಬೇಕಾದರೆ, ನಮ್ಮ ಮೇಲೆ ಯಾವ ಕೆಟ್ಟ ಪ್ರಭಾವ ಬೀಳದಂತೆ ಜಾಗ್ರತೆವಹಿಸಬೇಕು?
ಮಹಾ ಸಂಕಟದ ಸಮಯದಲ್ಲಿ ನಂಬಿಕೆಯು ಏಕೆ ಅಗತ್ಯ? (ಇಬ್ರಿ 10:39)