ಬೈಬಲಿನಲ್ಲಿರುವ ರತ್ನಗಳು | ಯೆಹೆಜ್ಕೇಲ 46-48
ಪುನಃಸ್ಥಾಪಿಸಲ್ಪಟ್ಟ ಇಸ್ರಾಯೇಲ್ಯರಿಗೆ ಸಿಗಲಿದ್ದ ಆಶೀರ್ವಾದಗಳು
ಯೆಹೆಜ್ಕೇಲನ ದೇವಾಲಯದ ದರ್ಶನವು ಸೆರೆಯಲ್ಲಿದ್ದ ಇಸ್ರಾಯೇಲ್ಯರಿಗೆ ಉತ್ತೇಜನ ನೀಡಿತು ಮತ್ತು ಪುನಃಸ್ಥಾಪನೆಯ ಕುರಿತಾದ ಪ್ರವಾದನೆ ನೆರವೇರುತ್ತದೆಂಬ ಖಾತ್ರಿಯನ್ನು ಒದಗಿಸಿತು. ಜೊತೆಗೆ, ಯೆಹೋವನ ಆಶೀರ್ವಾದ ಹೊಂದಿದವರ ಜೀವನದಲ್ಲಿ ಶುದ್ಧಾರಾಧನೆ ಮಹಿಮಾನ್ವಿತ ಸ್ಥಾನ ಪಡೆಯುತ್ತದೆ ಎಂಬ ಆಶ್ವಾಸನೆ ನೀಡಿತು.
ದರ್ಶನವು ಸಂಘಟನೆ, ಸಹಕಾರ ಮತ್ತು ಸಂರಕ್ಷಣೆ ಇರುತ್ತದೆಂಬ ಆಶ್ವಾಸನೆ ನೀಡಿತು
ಸಮೃದ್ಧ, ಫಲವತ್ತಾದ ಭೂಮಿ
ಪ್ರತಿಯೊಂದು ಕುಟುಂಬಕ್ಕೂ ಒಂದೊಂದು ಸ್ವಾಸ್ತ್ಯ
ಭೂಮಿಯನ್ನು ಜನರಿಗೆ ಹಂಚುವ ಮೊದಲು ಯೆಹೋವನಿಗೆ ‘ಸಮರ್ಪಿಸಲಿಕ್ಕಾಗಿ’ ಒಂದು ವಿಶೇಷ ಭೂಭಾಗವನ್ನು ‘ಮೀಸಲಾಗಿಡಲಾಯಿತು’
ನನ್ನ ಜೀವನದಲ್ಲಿ ಯೆಹೋವನ ಸೇವೆಗೆ ಪ್ರಥಮಸ್ಥಾನ ಕೊಡುತ್ತೇನೆಂದು ನಾನು ಹೇಗೆ ತೋರಿಸಬಹುದು? (w06 4/15 ಪು. 27-28, ಪ್ಯಾ. 13-14)