ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಸೆಪ್ಟೆಂಬರ್‌ ಪು. 7
  • ಯೆಹೋವನ ಸೇವೆಯನ್ನು ಬಿಡದೆ ಮಾಡಲು ತರಬೇತಿ ನೀಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನ ಸೇವೆಯನ್ನು ಬಿಡದೆ ಮಾಡಲು ತರಬೇತಿ ನೀಡಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು
    2005 ನಮ್ಮ ರಾಜ್ಯದ ಸೇವೆ
  • ಸಾರಲು ಹೊಸಬರಿಗೆ ತರಬೇತಿ ಕೊಡುವುದು ಹೇಗೆ?
    2010 ನಮ್ಮ ರಾಜ್ಯದ ಸೇವೆ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಹೊಸ ಪ್ರಚಾರಕರಿಗೆ ತರಬೇತಿ ಕೊಡಿ
    2015 ನಮ್ಮ ರಾಜ್ಯದ ಸೇವೆ
  • ಪ್ರಗತಿಪರ ಬೈಬಲ್‌ ಅಧ್ಯಯನಗಳನ್ನು ನಡೆಸುವುದು
    2005 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಸೆಪ್ಟೆಂಬರ್‌ ಪು. 7

ನಮ್ಮ ಕ್ರೈಸ್ತ ಜೀವನ

ಯೆಹೋವನ ಸೇವೆಯನ್ನು ಬಿಡದೆ ಮಾಡಲು ತರಬೇತಿ ನೀಡಿ

ಒಬ್ಬ ಹೊಸ ಪ್ರಚಾರಕನಿಗೆ ಸೇವೆಯಲ್ಲಿ ಕ್ರಮವಾಗಿ ಮತ್ತು ಹರುಪಿನಿಂದ ಭಾಗವಹಿಸಲು ಆರಂಭದಿಂದಲೇ ತರಬೇತಿ ನೀಡಬೇಕು. ಆಗ ಅವನು ನಿಪುಣ ಪ್ರಚಾರಕನಾಗುತ್ತಾನೆ ಎಂದು ಅನೇಕ ಅನುಭವಗಳಿಂದ ಗೊತ್ತಾಗಿದೆ. (ಜ್ಞಾನೋ 22:6; ಫಿಲಿ 3:16) ಉತ್ತಮ ರೀತಿಯಲ್ಲಿ ಸೇವೆ ಮಾಡುವುದನ್ನು ವಿದ್ಯಾರ್ಥಿಗೆ ಕಲಿಸಲು ನಿಮಗೆ ಈ ಸಲಹೆಗಳು ಸಹಾಯಮಾಡುತ್ತವೆ:

  • ನಿಮ್ಮ ವಿದ್ಯಾರ್ಥಿಯು ಯಾವಾಗ ಪ್ರಚಾರಕನಾಗುವ ಅರ್ಹತೆ ಪಡೆಯುತ್ತಾನೋ ಆಗಿನಿಂದಲೇ ತರಬೇತಿ ಕೊಡಲು ಆರಂಭಿಸಿ. (km 8/15 ಪು. 1) ಪ್ರತಿ ವಾರ ಸೇವೆಯಲ್ಲಿ ಭಾಗವಹಿಸುವ ರೂಢಿಯನ್ನು ಬೆಳೆಸಿಕೊಳ್ಳುವುದರ ಪ್ರಾಮುಖ್ಯತೆಯನ್ನು ಅವನಿಗೆ ಅರ್ಥ ಮಾಡಿಸಿ. (ಫಿಲಿ 1:10) ಟೆರಿಟೊರಿಯ ಬಗ್ಗೆ ಯಾವಾಗಲೂ ಸಕಾರಾತ್ಮಕವಾಗಿ ಮಾತಾಡಿ. (ಫಿಲಿ 4:8) ಗುಂಪು ಮೇಲ್ವಿಚಾರಕನೊಂದಿಗೆ ಮತ್ತು ಇತರ ಪ್ರಚಾರಕರೊಂದಿಗೆ ಸೇವೆಮಾಡಲು ಅವನಿಗೆ ಪ್ರೋತ್ಸಾಹ ನೀಡಿ. ಹೀಗೆ ಅವರ ಅನುಭವಗಳಿಂದ ನಿಮ್ಮ ವಿದ್ಯಾರ್ಥಿ ಪ್ರಯೋಜನ ಪಡೆಯಬಹುದು.—ಜ್ಞಾನೋ 1:5; km 10/12 ಪು. 6, ಪ್ಯಾ. 3

    ಒಬ್ಬ ಸಹೋದರನು ಹೊಸ ಪ್ರಚಾರಕನಿಗೆ ಕ್ಷೇತ್ರಸೇವೆಗಾಗಿ ತಯಾರಿಮಾಡಲು ಸಹಾಯಮಾಡುತ್ತಿದ್ದಾನೆ
  • ನಿಮ್ಮ ವಿದ್ಯಾರ್ಥಿ ದೀಕ್ಷಾಸ್ನಾನ ಪಡೆದ ನಂತರ ಸೇವೆಯಲ್ಲಿ ಪ್ರೋತ್ಸಾಹ ಮತ್ತು ತರಬೇತಿ ಕೊಡುವುದನ್ನು ನಿಲ್ಲಿಸಬೇಡಿ. ಅದರಲ್ಲೂ ವಿಶೇಷವಾಗಿ “ದೇವರ ಪ್ರೀತಿ” ಪುಸ್ತಕದ ಅಧ್ಯಯನ ಮುಗಿಯದಿದ್ದರೆ ಇದನ್ನು ತಪ್ಪದೇ ಮಾಡಿ. —km 12/13 ಪು. 7

    ಹೊಸ ಪ್ರಚಾರಕಳೊಂದಿಗೆ ಸೇವೆಮಾಡುತ್ತಿರುವ ಸಹೋದರಿ
  • ಹೊಸ ಪ್ರಚಾರಕನೊಂದಿಗೆ ಸೇವೆಮಾಡುವಾಗ ಸರಳ ನಿರೂಪಣೆಯನ್ನು ಬಳಸಿ. ಅವನ ನಿರೂಪಣೆಯನ್ನು ಕೇಳಿದ ನಂತರ ಉದಾರವಾಗಿ ಶ್ಲಾಘಿಸಿ. ಇನ್ನೂ ಹೆಚ್ಚು ನಿಪುಣನಾಗಲು ಸಲಹೆಗಳನ್ನು ಕೊಡಿ.—km 5/10 ಪು. 7

    ತಂದೆ ಮತ್ತು ಮಗ ಜೊತೆಯಾಗಿ ಸೇವೆ ಮಾಡುತ್ತಿದ್ದಾರೆ
    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ