ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಡಿಸೆಂಬರ್‌ ಪು. 7
  • ಯಾವುದು ನಿಜ ಪ್ರೀತಿ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯಾವುದು ನಿಜ ಪ್ರೀತಿ?
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಕುಟುಂಬಕ್ಕಾಗಿ ಇನ್ನಷ್ಟು ನೆರವು
    ಎಚ್ಚರ!—2018
  • ನಿಮ್ಮ ಮದುವೆಯ ಬಂಧವನ್ನ ಕಾಪಾಡಿಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ವಿವೇಕಕ್ಕಾಗಿ JW.ORGನಲ್ಲಿ ಹುಡುಕಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
  • ಅವಿವಾಹಿತ ಸ್ಥಿತಿ ಮತ್ತು ಮದುವೆ ಬಗ್ಗೆ ಬೈಬಲ್‌ ಏನು ಹೇಳುತ್ತೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಡಿಸೆಂಬರ್‌ ಪು. 7

ನಮ್ಮ ಕ್ರೈಸ್ತ ಜೀವನ

ಯಾವುದು ನಿಜ ಪ್ರೀತಿ?

ವಿವಾಹಬಂಧ ಒಂದು ಗಂಡು ಮತ್ತು ಒಂದು ಹೆಣ್ಣಿನ ಮಧ್ಯೆ ಶಾಶ್ವತ ಬಂಧ ಆಗಿರಬೇಕೆಂದು ಯೆಹೋವನು ಏರ್ಪಡಿಸಿದನು. (ಆದಿ 2:22-24) ಲೈಂಗಿಕ ಅನೈತಿಕತೆ ನಡೆದರೆ ಮಾತ್ರ ವಿಚ್ಛೇದನ ಕೊಡುವ ಆಯ್ಕೆ ಇದೆ. (ಮಲಾ 2:16; ಮತ್ತಾ 19:9) ನಮ್ಮ ಮದುವೆ ಜೀವನ ಸಂತೋಷವಾಗಿರಬೇಕೆಂದು ಯೆಹೋವನು ಬಯಸುತ್ತಾನೆ. ಆದ್ದರಿಂದ ಬಾಳಸಂಗಾತಿಯನ್ನು ವಿವೇಕದಿಂದ ಆರಿಸಿ, ಮುಂದೆ ಸಂತೋಷಕರ ಮದುವೆ ಜೀವನ ನಡೆಸಲು ಕ್ರೈಸ್ತರಿಗೆ ಸಹಾಯ ಮಾಡುವ ತತ್ವಗಳನ್ನು ಆತನು ಕೊಟ್ಟಿದ್ದಾನೆ.—ಪ್ರಸಂ 5:4-6.

ಯಾವುದು ನಿಜ ಪ್ರೀತಿ? ವಿಡಿಯೋವನ್ನು ಮೊದಲೇ ನೋಡಿ ಬನ್ನಿ. ಕೆಳಗಿನ ಪ್ರಶ್ನೆಗಳನ್ನು ಉತ್ತರಿಸಿ:

  • ಫ್ರ್ಯಾಂಕ್‌ ತನ್ನ ಮಗಳಾದ ಜೆನಿ ಜೊತೆ ಮಾತಾಡುತ್ತಿದ್ದಾನೆ

    ಫ್ರಾಂಕ್‌ ಮತ್ತು ಲಿಲ್ಲಿ ತಮ್ಮ ಮಗಳಾದ ಜೆನಿಯನ್ನು ತಿದ್ದಲು ಹೇಳಿದ ಮಾತು ವಿವೇಕ ಮತ್ತು ಪ್ರೀತಿಯಿಂದ ಕೂಡಿದ್ದಾಗಿತ್ತು ಎಂದು ಯಾಕೆ ಹೇಳಬಹುದು?

  • ನೀವು ಮದುವೆಯಾಗಬೇಕೆಂದಿರುವ ವ್ಯಕ್ತಿಯನ್ನು ಬದಲಾಯಿಸಬಲ್ಲಿರಿ ಎಂದು ನೆನಸುವುದು ಏಕೆ ಮೂರ್ಖತನವಾಗಿದೆ?

  • ಪೌಲ್‌ ಮತ್ತು ಪ್ರೆಸಿಲ್ಲಾ ಜೆನಿಗೆ ಯಾವ ಬುದ್ಧಿವಾದ ಕೊಟ್ಟರು?

  • ಸಭಾ ಕೂಟದಲ್ಲಿ ಜ್ಯಾಕ್‌ ಮತ್ತು ಮೊನಿಕಾ

    ಜ್ಯಾಕ್‌ ಮತ್ತು ಮೊನಿಕಾರ ಮದುವೆ ಜೀವನದಲ್ಲಿ ಸಮಸ್ಯೆಗಳು ಯಾಕೆ ಬಂದವು?

  • ಸಭಾ ಕೂಟದಲ್ಲಿ ಜೆನಿ ಮತ್ತು ಜಾನ್‌

    ಜಾನ್‌ ಮತ್ತು ಜೆನಿ ಯಾವ ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದರು?

  • ಒಬ್ಬರನ್ನು ಮದುವೆಯಾಗುವ ಮುಂಚೆಯೇ ಅವರ ‘ಹೃದಯದ ಗುಪ್ತ ವ್ಯಕ್ತಿಯನ್ನು’ ಯಾಕೆ ತಿಳಿದುಕೊಳ್ಳಬೇಕು? (1ಪೇತ್ರ 3:4)

  • ಯಾವುದನ್ನು ನಿಜ ಪ್ರೀತಿ ಎನ್ನಬಹುದು? (1ಕೊರಿಂ 13:4-8)

ಭಾವೀ ಸಂಗಾತಿಯನ್ನು ತಿಳಿದುಕೊಳ್ಳುವುದರ ಬಗ್ಗೆ ಕ್ರೈಸ್ತರು ಹೆಚ್ಚಿನ ಮಾಹಿತಿಯನ್ನು ಎಲ್ಲಿ ಪಡೆದುಕೊಳ್ಳಬಹುದು?

  • JW ಪ್ರಸಾರದ ಪ್ರಿಪೇರ್‌ ಫಾರ್‌ ಮ್ಯಾರೇಜ್‌ ಎಂಬ ಸರಣಿ ವಿಡಿಯೋ

  • JW.ORGನ ಇದು ಪ್ರೀತಿನಾ? ಆಕರ್ಷಣೆನಾ? ವಿಡಿಯೋ

  • ಯುವ ಜನರ ಪ್ರಶ್ನೆಗಳು—ಕಾರ್ಯಸಾಧಕ ಉತ್ತರಗಳು ಎಂಬ ಪುಸ್ತಕದ 1 ಮತ್ತು 2​ನೇ (ಇಂಗ್ಲಿಷ್‌) ಆವೃತ್ತಿ

  • ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ (“ಕುಟುಂಬ ಜೀವನ” ಎಂಬ ಅಂಶದ ಕೆಳಗೆ “ಪ್ರೀತಿ ಪ್ರೇಮ” ಎಂಬಲ್ಲಿ ನೋಡಿ.)

ವಿವಾಹಿತರಿಗೆ ಪ್ರಯೋಜನವಾಗುವ ಸಲಹೆಗಳು ಎಲ್ಲಿ ಸಿಗುತ್ತವೆ?

  • JW.ORG ಲೇಖನಗಳು (BIBLE TEACHINGS > HELP FOR THE FAMILY ನೋಡಿ.)

  • ಸುಖೀ ಸಂಸಾರ ಸಾಧ್ಯ! ಕಿರುಹೊತ್ತಗೆ

  • ಕುಟುಂಬ ಸಂತೋಷದ ರಹಸ್ಯ ಪುಸ್ತಕ

  • ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ (“ಕುಟುಂಬ ಜೀವನ” ಎಂಬ ಅಂಶದ ಕೆಳಗೆ “ವಿವಾಹ” ಎಂಬಲ್ಲಿ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ