ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
ಡಿಸೆಂಬರ್ 25-31
ಬೈಬಲಿನಲ್ಲಿರುವ ರತ್ನಗಳು | ಮಲಾಕಿಯ 1-4
“ನಿಮ್ಮ ವಿವಾಹ ಜೀವನ ಯೆಹೋವನು ಮೆಚ್ಚುವಂಥ ರೀತಿಯಲ್ಲಿದೆಯಾ?”
jd 125-126 ¶4-5
ನಿಮ್ಮ ಕುಟುಂಬ ಜೀವನ ದೇವರು ಮೆಚ್ಚುವಂತಿರಲಿ
4 5 ನೇ ಶತಮಾನದ ಯೆಹೂದ್ಯರಲ್ಲಿ ವಿವಾಹ ವಿಚ್ಛೇದನ ಸಾಮಾನ್ಯವಾಗಿ ಬಿಟ್ಟಿತ್ತು. ಮಲಾಕಿಯನು ಅವರಿಗೆ, “ನಿನಗೂ ನಿನ್ನ ಯೌವನದ ಹೆಂಡತಿಗೂ ಆದ ಒಡಂಬಡಿಕೆಗೆ ಯೆಹೋವನೇ ಸಾಕ್ಷಿಯಾಗಿದ್ದಾನಲ್ಲಾ. . . . ಆಕೆಗೆ ದ್ರೋಹಮಾಡಿದ್ದೀ.” ಗಂಡಂದಿರು ದ್ರೋಹ ಮಾಡಿದ್ದರಿಂದ ಯೆಹೋವನ ಯಜ್ಞವೇದಿಯು ಮೋಸಗೊಳಿಸಲ್ಪಟ್ಟ ಹೆಂಡತಿಯರ “ಕಣ್ಣೀರಿನಿಂದಲೂ ಅಳುವಿಕೆಯಿಂದಲೂ ನರಳಾಟದಿಂದಲೂ” ತುಂಬಿಹೋಗಿತ್ತು. ಭ್ರಷ್ಟ ಯಾಜಕರು ಈ ಕ್ರೂರ ಕೃತ್ಯವನ್ನು ಕಂಡೂ ಕಾಣದಂತೆ ಇದ್ದರು.—ಮಲಾಕಿಯ 2:13, 14.
5 ಮಲಾಕಿಯನ ದಿನಗಳಲ್ಲಿ ಮದುವೆಯ ಬಗ್ಗೆ ಇದ್ದ ಈ ಕೆಟ್ಟ ಮನೋಭಾವವನ್ನು ಯೆಹೋವನು ಹೇಗೆ ವೀಕ್ಷಿಸಿದನು? ಇದರ ಬಗ್ಗೆ ಮಲಾಕಿಯನು ಹೀಗೆ ಬರೆದನು: “ಇಸ್ರಾಯೇಲಿನ ದೇವರಾದ ಯೆಹೋವನು ಇಂತೆನ್ನುತ್ತಾನೆ—ನಾನು ಪತ್ನೀತ್ಯಾಗವನ್ನೂ ಹೆಂಡತಿಗೆ ಅನ್ಯಾಯ ಮಾಡುವವನನ್ನೂ ಹಗೆಮಾಡುತ್ತೇನೆ.” ಯೆಹೋವನು “ಮಾರ್ಪಟ್ಟಿಲ್ಲ” ಎಂದೂ ಅವನು ಹೇಳಿದನು. (ಮಲಾಕಿಯ 2:16; 3:6) ಇದರಿಂದ ನಿಮಗೇನು ತಿಳಿಯಿತು? ಇದಕ್ಕೂ ಮುಂಚೆಯೇ ಯೆಹೋವನು ವಿವಾಹ ವಿಚ್ಛೇದನವನ್ನು ಖಂಡಿಸಿದ್ದನು. (ಆದಿಕಾಂಡ 2:18, 24) ಮಲಾಕಿಯ ದಿನಗಳಲ್ಲೂ ಖಂಡಿಸಿದನು. ಈಗಲೂ ಖಂಡಿಸುತ್ತಾನೆ. ತಮ್ಮ ಸಂಗಾತಿಯಲ್ಲಿ ತೃಪ್ತಿ ಕಾಣದ ಕಾರಣ ಕೆಲವರು ತಮ್ಮ ಮದುವೆಯನ್ನು ರದ್ದು ಮಾಡುವ ನಿರ್ಣಯಮಾಡುತ್ತಾರೆ. ಇಂಥವರ ಹೃದಯ ವಂಚಕವಾಗಿದ್ದರೂ ಯೆಹೋವನು ಅದನ್ನು ಪರೀಕ್ಷಿಸುತ್ತಾನೆ. (ಯೆರೆಮೀಯ 17:9, 10) ವಿಚ್ಛೇದನ ಪಡೆಯಲು ಯಾವುದೇ ಕಾರಣ ಕೊಡುವುದಾದರೂ ಅದರ ಹಿಂದಿರಬಹುದಾದ ಯಾವುದೇ ಮೋಸಕರ ಕುತಂತ್ರಗಳ ಬಗ್ಗೆ ಯೆಹೋವನಿಗೆ ಗೊತ್ತಿರುತ್ತದೆ. “ನಾವು ಯಾರಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ಕಣ್ಣುಗಳಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದೂ ಬಟ್ಟಬಯಲಾದದ್ದೂ ಆಗಿದೆ.”—ಇಬ್ರಿಯ 4:13.