ಜೀವನ ಮತ್ತು ಸೇವೆ ಕೂಟದ ಕೈಪಿಡಿಯ ರೆಫರೆನ್ಸ್‌ಗಳು
ಜೂನ್ 4-10
ಬೈಬಲಿನಲ್ಲಿರುವ ರತ್ನಗಳು | ಮಾರ್ಕ 15-16
“ಯೇಸು ಪ್ರವಾದನೆಯನ್ನು ನೆರವೇರಿಸಿದನು”
ಮಾರ್ಕ 15:24, 29ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಅವನ ಮೇಲಂಗಿಗಳನ್ನು ಹಂಚಿಕೊಂಡರು: ಯೋಹಾ 19:23, 24ರ ವೃತ್ತಾಂತವು ಮತ್ತಾಯ, ಮಾರ್ಕ ಮತ್ತು ಲೂಕರಿಂದ ತಿಳಿಸಲ್ಪಡದ ಕೆಲವು ಸಹಾಯಕರ ವಿವರಗಳನ್ನು ಕೂಡಿಸುತ್ತದೆ. ರೋಮನ್ ಸೈನಿಕರು ಯೇಸುವಿನ ಮೇಲಂಗಿ ಮತ್ತು ಒಳ ಅಂಗಿ ಎರಡಕ್ಕೂ ಚೀಟಿಹಾಕಿದರು. ಅವರು ಮೇಲಂಗಿಯನ್ನು ತೆಗೆದುಕೊಂಡು “ನಾಲ್ಕು ಪಾಲುಗಳಾಗಿ ಮಾಡಿ ಪ್ರತಿಯೊಬ್ಬ ಸೈನಿಕನಿಗೆ ಒಂದರಂತೆ ಹಂಚಿಕೊಂಡರು.” ಒಳಂಗಿಯನ್ನು ಹಂಚಿಕೊಳ್ಳಲು ಅವರು ಬಯಸಲಿಲ್ಲ ಹಾಗಾಗಿ ಅವರು ಚೀಟುಹಾಕಿ ನಿರ್ಧರಿಸಿದರು. ಹೀಗೆ ಮೆಸ್ಸೀಯನ ಬಟ್ಟೆಗಾಗಿ ಚೀಟುಹಾಕಿದರು ಎಂಬ ಕೀರ್ತ 22:18ರ ಮಾತು ನೆರವೇರಿತು. ಕೊಲ್ಲುವವರು ಅಪರಾಧಿಗಳ ಬಟ್ಟೆಗಳನ್ನು ತಮಗಾಗಿ ಇಟ್ಟುಕೊಳ್ಳುವ ಪದ್ಧತಿಯಿತ್ತೆಂಬುದು ವ್ಯಕ್ತ. ಆದ್ದರಿಂದ ಪಾತಕಿಗಳನ್ನು ಕೊಲ್ಲುವ ಮುಂಚೆ ಅವರ ಬಟ್ಟೆಗಳನ್ನು ಮತ್ತು ಸೊತ್ತುಗಳನ್ನು ತೆಗೆದುಕೊಳ್ಳುತ್ತಿದ್ದರು. ಇದು ಅಪರಾಧಿಗಳ ಸಂಕಟವನ್ನು ಇನ್ನಷ್ಟು ಅವಮಾನಕರವಾಗಿ ಮಾಡುತ್ತಿತ್ತು.
ತಮ್ಮ ತಲೆಗಳನ್ನು ಆಡಿಸುತ್ತಾ: ಈ ಭಾವಾಭಿನಯದಲ್ಲಿ ಸಾಮಾನ್ಯವಾಗಿ ಮಾತುಗಳು ಮಾತ್ರವಲ್ಲದೆ ಅಪಹಾಸ್ಯ, ತಿರಸ್ಕಾರ ಮತ್ತು ಕುಚೋದ್ಯವು ಸೇರಿರುತ್ತದೆ. ಆ ದಾರಿಹೋಕರು ತಿಳಿಯದೆ ಕೀರ್ತ 22:7ರ ಪ್ರವಾದನೆಯನ್ನು ನೆರವೇರಿಸಿದರು.
ಮಾರ್ಕ 15:43ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಯೋಸೇಫ: ಯೋಸೇಫನ ಬಗ್ಗೆ ವಿವಿಧ ವಿವರಗಳನ್ನು ಸುವಾರ್ತಾ ಲೇಖಕರು ಕೊಟ್ಟಿದ್ದಾರೆ. ಇದು ಅವರ ವೈಯಕ್ತಿಕ ಅಭಿರುಚಿಗಳನ್ನು ತೋರಿಸಿಕೊಡುತ್ತದೆ. ಉದಾಹರಣೆಗೆ ತೆರಿಗೆ ವಸೂಲಿಗಾರ ಮತ್ತಾಯನು ದೇವರ ರಾಜ್ಯಕ್ಕಾಗಿ ಕಾಯುತ್ತಾ ಇದ್ದ ಯೋಸೇಫನನ್ನು “ಐಶ್ವರ್ಯವಂತನು” ಎಂದು ಕರೆದಿದ್ದಾನೆ. ಮಾರ್ಕನು ಮುಖ್ಯವಾಗಿ ರೋಮನ್ನರಿಗೆ ಬರೆಯುವಾಗ ಅವನನ್ನು “ಹಿರೀಸಭೆಯ ಘನವಂತ ಸದಸ್ಯನೆಂದು” ಹೇಳಿದ್ದಾನೆ. ಸಹಾನುಭೂತಿಯ ವೈದ್ಯನಾದ ಲೂಕನು ಯೋಸೇಫನನ್ನು “ಒಳ್ಳೆಯ ವ್ಯಕ್ತಿಯೂ ನೀತಿವಂತನೂ” ಎಂದು ಕರೆಯುತ್ತಾ, ಅವನು ಯೇಸುವಿನ ವಿರುದ್ಧ ಹಿರೀಸಭೆಯ ಕೃತ್ಯವನ್ನು ಬೆಂಬಲಿಸಲಿಲ್ಲವೆಂದು ಹೇಳಿದ್ದಾನೆ. ಆದರೆ ಯೋಹಾನನು ಮಾತ್ರ ಯೋಸೇಫನು ‘ಯೆಹೂದ್ಯರ ಭಯದಿಂದ ರಹಸ್ಯವಾಗಿ ಯೇಸುವಿನ ಒಬ್ಬ ಶಿಷ್ಯನಾಗಿದನು’ ಎಂದು ತಿಳಿಸಿದನು.—ಮತ್ತಾ 27:57-60; ಮಾರ್ಕ 15:43-46; ಲೂಕ 23:50-53; ಯೋಹಾ 19:38-42.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಮಾರ್ಕ 15:25ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಮೂರನೆಯ ಗಳಿಗೆ: ಅಂದರೆ ಬೆಳಿಗ್ಗೆ ಸುಮಾರು 9 ಗಂಟೆ. ಈ ಹೇಳಿಕೆ ಮತ್ತು ಯೋಹಾ 19:14-16ರ ಹೇಳಿಕೆಯ ಮಧ್ಯೆ ಹೊಂದಿಕೆಯಿಲ್ಲವೆಂದು ಕೆಲವರು ಹೇಳುತ್ತಾರೆ. ಯೇಸುವನ್ನು ಕೊಲ್ಲಿಸಲಿಕ್ಕಾಗಿ ಪಿಲಾತನು ಅವನನ್ನು ಒಪ್ಪಿಸಿಕೊಟ್ಟದ್ದು “ಮಧ್ಯಾಹ್ನ ಸುಮಾರು ಹನ್ನೆರಡು ಗಂಟೆ (ಆರನೆಯ ಗಳಿಗೆ)” ಎಂದು ಯೋಹಾನ ಹೇಳುತ್ತಾನೆ. ಶಾಸ್ತ್ರಗ್ರಂಥವು ಈ ವ್ಯತ್ಯಾಸವನ್ನು ಪೂರ್ಣವಾಗಿ ವಿವರಿಸುವುದಿಲ್ಲ. ಆದರೂ ಕೆಲವು ನಿಜಾಂಶಗಳು ಹೀಗಿವೆ: ಯೇಸುವಿನ ಭೂಜೀವಿತದ ಕೊನೆಯ ದಿನದಲ್ಲಿ ಘಟನೆಗಳು ಯಾವಾಗ ನಡೆದವು ಎಂಬ ವಿಷಯದಲ್ಲಿ ಸಾಮಾನ್ಯವಾಗಿ ಸುವಾರ್ತಾ ವೃತ್ತಾಂತಗಳು ಹೊಂದಿಕೆಯಲ್ಲಿವೆ. ಯಾಜಕರು ಮತ್ತು ಹಿರೀ ಪುರುಷರು ಬೆಳಗಾದ ನಂತರ ಒಟ್ಟುಸೇರಿದರೆಂದೂ ಆ ಬಳಿಕ ಅವರು ಯೇಸುವನ್ನು ರೋಮನ್ ರಾಜ್ಯಪಾಲ ಪೊಂತ್ಯ ಪಿಲಾತನ ಬಳಿ ಕರೆದುಕೊಂಡು ಹೋದರೆಂದು ನಾಲ್ಕು ವೃತ್ತಾಂತಗಳೂ ತಿಳಿಸುತ್ತವೆ. (ಮತ್ತಾ 27:1, 2; ಮಾರ್ಕ 15:1; ಲೂಕ 22:66–23:1; ಯೋಹಾ 18:28) ಯೇಸುವನ್ನು ಕಂಬಕ್ಕೆ ಜಡಿಯಲಾದಾಗ ದೇಶದಲ್ಲೆಲ್ಲಾ ‘ಹನ್ನೆರಡು ಗಂಟೆಯಿಂದ (6ನೆಯ ಗಳಿಗೆ) ಮೂರು ಗಂಟೆಯ ವರೆಗೆ (9ನೆಯ ಗಳಿಗೆ)’ ಕತ್ತಲೆ ಕವಿದಿತ್ತೆಂದು ಮತ್ತಾಯ, ಮಾರ್ಕ ಮತ್ತು ಲೂಕ ಮೂವರೂ ವರದಿ ಮಾಡಿದ್ದಾರೆ. (ಮತ್ತಾ 27:45, 46; ಮಾರ್ಕ 15:33, 34; ಲೂಕ 23:44) ಯೇಸು ಯಾವಾಗ ಕೊಲ್ಲಲ್ಪಟ್ಟನೆಂಬದನ್ನು ನಿರ್ಧರಿಸಬಹುದಾದ ಒಂದು ನಿಜಾಂಶವು ಹೀಗಿದೆ: ಅಪರಾಧಿಯನ್ನು ಕೊಲ್ಲುವ ಮುಂಚೆ ಕೊರಡೆ ಅಥವಾ ಚಾವಟಿಗಳಿಂದ ಹೊಡೆದು ದಂಡಿಸುತ್ತಾರೆಂದು ಕೆಲವರು ಹೇಳುತ್ತಾರೆ. ಕೆಲವೊಮ್ಮೆ ಆ ಕೊರಡೆ ಹೊಡೆತಗಳು ಎಷ್ಟು ಭೀಕರವಾಗಿತ್ತೆಂದರೆ ಅಪರಾಧಿ ಸತ್ತೇ ಹೋಗುತ್ತಿದ್ದನು. ಯೇಸುವಿನ ಮೇಲೆ ಬಿದ್ದ ಹೊಡೆತಗಳು ಸಹ ಸಾಕಷ್ಟು ತೀಕ್ಷ್ಣವಾಗಿದ್ದವು. ಹಾಗಾಗಿ ಅವನು ಹೊತ್ತುಕೊಂಡು ಹೋಗುತ್ತಿದ್ದ ಯಾತನಾ ಕಂಬವನ್ನು ಬೇರೊಬ್ಬನು ಹೊತ್ತುಕೊಂಡು ಹೋಗುವ ಅಗತ್ಯವು ಉಂಟಾಯಿತು. (ಲೂಕ 23:26; ಯೋಹಾ 19:17) ಅಪರಾಧಿಯನ್ನು ಕೊಲ್ಲುವುದಕ್ಕೆ ಮುಂಚೆ ಕೊರಡೆಯಿಂದ ಹೊಡೆಯುವ ಪದ್ಧತಿ ಇತ್ತೆಂದಾದರೆ ಯೇಸುವನ್ನು ನಿಜವಾಗಿ ಕಂಬಕ್ಕೆ ಜಡಿಯುವ ಮುಂಚೆ ಸ್ವಲ್ಪ ಸಮಯವಾದರೂ ಕಳೆದಿರಬೇಕು. ಇದನ್ನು ಬೆಂಬಲಿಸುತ್ತಾ ಮತ್ತಾ 27:26 ಮತ್ತು ಮಾರ್ಕ 15:15 ಕೊರಡೆ ಅಥವಾ ಛಾವಟಿಯ ಹೊಡೆತ ಮತ್ತು ಕಂಬಕ್ಕೇರಿಸುವುದನ್ನು ಒಟ್ಟಾಗಿ ತಿಳಿಸುತ್ತದೆ. ಹಾಗಾಗಿ ಯೇಸುವನ್ನು ಕಂಬಕ್ಕೇರಿಸಿ ಕೊಂದ ಸಮಯವನ್ನು ಬೇರೆ-ಬೇರೆ ವ್ಯಕ್ತಿಗಳು ತಮ್ಮ ವೀಕ್ಷಣೆಗನುಸಾರ ಬೇರೆ ಬೇರೆಯಾಗಿ ತಿಳಿಸಬಹುದು. ಕಂಬಕ್ಕೆ ಜಡಿದ ಬಳಿಕ ಯೇಸು ಅಷ್ಟು ಬೇಗನೆ ಸತ್ತದ್ದಕ್ಕಾಗಿ ಪಿಲಾತನು ಆಶ್ಚರ್ಯಪಟ್ಟದ್ದೇಕೆಂದು ಇದು ವಿವರಿಸಬಹುದು. (ಮಾರ್ಕ 15:44) ಅದಲ್ಲದೆ ಬೈಬಲ್ ಲೇಖಕರು ದಿನವನ್ನು ಮೂರು-ಮೂರು ತಾಸುಗಳ ನಾಲ್ಕು ಭಾಗಗಳಾಗಿ ವಿಂಗಡಿಸುವ ಪದ್ಧತಿಯನ್ನು ಹೆಚ್ಚಾಗಿ ಅನುಸರಿಸಿದ್ದಾರೆ. ರಾತ್ರಿಯ ಸಮಯವನ್ನು ಸಹ ಹಾಗೆ ವಿಂಗಡಿಸಿದ್ದಾರೆ. ಹಾಗಾಗಿ ದಿನವೊಂದನ್ನು ಹೆಚ್ಚಾಗಿ ಬೆಳಿಗ್ಗೆ ಸುಮಾರು 6 ಗಂಟೆಯಿಂದ ಆರಂಭಿಸಿ ಮೂರನೇ, ಆರನೇ, ಒಂಬತ್ತನೇ ಗಳಿಗೆಗಳಾಗಿ ಬೈಬಲು ಸೂಚಿಸಿರುತ್ತದೆ. (ಮತ್ತಾ 20:1-5; ಯೋಹಾ 4:6; ಅ.ಕಾ. 2:15; 3:1; 10:3, 9, 30) ಅಷ್ಟು ಮಾತ್ರವಲ್ಲ ಆಗ ಸಾಮಾನ್ಯವಾಗಿ ಜನರಲ್ಲಿ ಗಡಿಯಾರಗಳಿರಲಿಲ್ಲ. ಹಾಗಾಗಿ ವೇಳೆಯನ್ನು ಹೆಚ್ಚಾಗಿ ತಿಳಿಸುವಾಗ ‘ಸುಮಾರು’ ಇಂತಿಷ್ಟು ಗಂಟೆ ಎಂದು ಹೇಳಿರುವುದನ್ನು ಯೋಹಾ 19:14ರಲ್ಲಿ ನಾವು ನೋಡುತ್ತೇವೆ. (ಮತ್ತಾ 27:46; ಲೂಕ 23:44; ಯೋಹಾ 4:6; ಅ.ಕಾ. 10:3, 9) ಒಟ್ಟಾರೆ ಹೇಳುವುದಾದರೆ, ಮಾರ್ಕನ ವರದಿಯು ಹೊಡೆತ ಮತ್ತು ಕಂಬಕ್ಕೆ ಜಡಿಯುವುದನ್ನು ಒಟ್ಟಿಗೆ ಸೇರಿಸಿ ಮೂರನೇ ಗಳಿಗೆ ಎಂದು ತಿಳಿಸುತ್ತದೆ. ಯೋಹಾನನ ವರದಿಯು ಕಂಬಕ್ಕೇರಿಸುವುದನ್ನು ಮಾತ್ರವೇ ತಿಳಿಸುತ್ತದೆ. ಇಬ್ಬರು ಲೇಖಕರೂ ದಿನದ ಸಮಯವನ್ನು ಮೂರು ತಾಸಿನ ಅವಧಿಗೆ ಅತಿ ಹತ್ತಿರಕ್ಕೆ ಅನುಕೂಲಕರವಾಗುವಂತೆ ತಿಳಿಸಿರಬಹುದು. ಯೋಹಾನನು ತಾನು ತಿಳಿಸಿದ ಸಮಯವನ್ನು “ಸುಮಾರು” ಎಂಬ ಪದ ಬಳಸಿ ಹೇಳಿದ್ದಾನೆ. ವೃತ್ತಾಂತಗಳಲ್ಲಿರುವ ಸಮಯದ ವ್ಯತ್ಯಾಸಕ್ಕೆ ಇವು ಕಾರಣವಾಗಿರಬಹುದು. ಅಲ್ಲದೇ, ಯೋಹಾನನು ತನ್ನ ಸುವಾರ್ತೆಯನ್ನು ಬರೆದದ್ದು ಮಾರ್ಕನು ಬರೆದು ಮುಗಿಸಿ ದಶಮಾನಗಳು ಕಳೆದ ಬಳಿಕವೆ. ಮಾರ್ಕನು ತಿಳಿಸಿದ ಸಮಯಕ್ಕಿಂತ ವ್ಯತ್ಯಾಸವಾದ ಸಮಯವನ್ನು ಯೋಹಾನನು ತಿಳಿಸಿದನೆಂಬ ವಿಷಯ ಅವನು ಮಾರ್ಕನ ಬರಹವನ್ನು ಕೇವಲ ನಕಲುಮಾಡಿಲ್ಲ ಎಂದು ತೋರಿಸುತ್ತದೆ.
ಮಾರ್ಕ 16:8ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಏಕೆಂದರೆ ಅವರು ಹೆದರಿ ಹೋಗಿದ್ದರು: ಲಭ್ಯವಿರುವ ಅತಿ ಹಳೆಯ ಹಸ್ತಪ್ರತಿಗಳಿಗೆ ಅನುಸಾರವಾಗಿ ಮಾರ್ಕನ ಸುವಾರ್ತೆಯ ಸಮಾಪ್ತಿಯ ಮಾತುಗಳು ವಚನ 8ಕ್ಕೆ ಕೊನೆಗೊಳ್ಳುತ್ತವೆ. ಇದು ಹಠಾತ್ತಾದ ಸಮಾಪ್ತಿಯಾಗಿ ಕಾಣುವುದರಿಂದ ಮೂಲಪ್ರತಿಯ ಸಮಾಪ್ತಿ ಅದಾಗಿರಲಿಕ್ಕಿಲ್ಲ ಎಂದು ಕೆಲವರು ಆಕ್ಷೇಪಿಸುತ್ತಾರೆ. ಆದರೆ ಮಾರ್ಕನ ಲೇಖನ ಶೈಲಿಯೇ ಸಾಮಾನ್ಯವಾಗಿ ಚುಟುಕೂ ಸಂಕ್ಷಿಪ್ತವೂ ಆಗಿರುತ್ತದೆ. ಈ ರೀತಿಯಲ್ಲಿ ನೋಡಿದರೆ, ಅವರ ಆಕ್ಷೇಪ ನಿಜವಾಗಿದೆ ಎನ್ನಲು ಆಗುವುದಿಲ್ಲ. ಅಲ್ಲದೇ, ನಾಲ್ಕನೆಯ ಶತಮಾನದ ವಿದ್ವಾಂಸರಾದ ಜೆರೋಮ್ ಮತ್ತು ಯೂಸ್ಬಿಯಸ್‌ರವರು ಭರವಸಾರ್ಹ ದಾಖಲೆಯು ಮಾರ್ಕನ “ಯಾಕೆಂದರೆ ಅವರು ಹೆದರಿ ಹೋಗಿದ್ದರು” ಎಂಬ ಮಾತುಗಳಿಂದಲೇ ಸಮಾಪ್ತಿಯಾಗುತ್ತದೆಂದು ತಿಳಿಸಿದ್ದಾರೆ.
ಹಲವಾರು ಗ್ರೀಕ್ ಹಸ್ತಪ್ರತಿಗಳು ಮತ್ತು ಬೇರೆ ಭಾಷೆಯ ಅನುವಾದಗಳು ಈ 8ನೆಯ ವಚನದ ಬಳಿಕ ಒಂದು ಸಂಕ್ಷಿಪ್ತ ಅಥವಾ ದೀರ್ಘ ಸಮಾಪ್ತಿಯನ್ನು ಕೂಡಿಸಿವೆ. ಈ (ದೀರ್ಘ ಸಮಾಪ್ತಿಯಲ್ಲಿ 12 ಹೆಚ್ಚುವರಿ ವಚನಗಳಿರುತ್ತವೆ.) ಐದನೆಯ ಶತಮಾನದ ಅಲೆಕ್ಸಾಂಡ್ರಿನಸ್ ಕೋಡೆಕ್ಸ್, ಎಪ್ರಾಯಿಮಿ ಸರಿ ರಿಸ್ಕ್ರಿಪ್ಟಸ್ ಮತ್ತು ಕೋಡೆಕ್ಸ್ ಬೆಜೇ ಕೆಂಟಾಬ್ರಿಜಿನ್ಸಿಸ್ ಕೋಡೆಕ್ಸ್‌ಗಳಲ್ಲಿ ಕಂಡುಬರುತ್ತದೆ. ಜೊತೆಗೆ ಇದು, ಲ್ಯಾಟಿನ್ ವಲ್ಗೇಟ್, ಕ್ಯುರ್ ಟೋನಿಯನ್ ಸಿರಿಯಾಕ್ ಮತ್ತು ಸಿರಿಯಾಕ್ ಪೆಶ್ಶಿಟ್ಟಾದಲ್ಲೂ ಇದೆ. ಆದರೆ ನಾಲ್ಕನೆಯ ಶತಮಾನದ ಆರಂಭದ ಎರಡು ಗ್ರೀಕ್ ಹಸ್ತಪ್ರತಿಗಳಾದ ಕೋಡೆಕ್ಸ್ ಸೈನೈಟಿಕಸ್ ಮತ್ತು ಕೋಡೆಕ್ಸ್ ವೆಟಿಕೆನಸ್‌ನಲ್ಲಿ ಇದು ಕಂಡು ಬರುವುದಿಲ್ಲ. 4ನೆಯ ಅಥವಾ 5ನೆಯ ಶತಮಾನದ ಕೋಡೆಕ್ಸ್ ಸೈನೈಟಿಕಸ್ ಸಿರಿಯಕಸ್‌ನಲ್ಲಿ ಅಥವಾ ಮಾರ್ಕ್ ಆಫ್ ದ ಫಿಫ್ತ್ ಸೆಂಚ್ಯುರಿಯ ಅತಿ ಹಳೆಯ ಸ್ಯಾಹಿಡಿಕ್ ಕೋಪ್ಟಿಕ್ ಹಸ್ತಪ್ರತಿಯಲ್ಲೂ ಇದಿಲ್ಲ. ತದ್ರೀತಿಯಲ್ಲಿ ಅತಿ ಹಳೆಯ ಅರ್ಮೇನಿಯನ್ ಮತ್ತು ಜಾರ್ಜಿಯನ್ ಮಾರ್ಕ್ ಹಸ್ತಪ್ರತಿಗಳು ವಚನ 8ರಲ್ಲಿಯೇ ಸಮಾಪ್ತಿಗೊಳಿಸುತ್ತವೆ.
ಅನಂತರದ ಕೆಲವು ಗ್ರೀಕ್ ಹಸ್ತಪ್ರತಿಗಳು ಮತ್ತು ಬೇರೆ ಭಾಷಾ ಅನುವಾದಗಳು ಸಂಕ್ಷಿಪ್ತ ಸಮಾಪ್ತಿಯನ್ನು ಒಳಗೊಂಡಿವೆ (ಅದರಲ್ಲಿ ಕೆಲವೇ ವಾಕ್ಯಗಳಿವೆ). ಕ್ರಿ.ಶ. ಎಂಟನೇ ಶತಮಾನದ ಕೋಡೆಕ್ಸ್ ರೆಜಿಯಸ್‌ನಲ್ಲಿ ಸಂಕ್ಷಿಪ್ತ ಮತ್ತು ದೀರ್ಘ ಸಮಾಪ್ತಿಗಳೆರಡೂ ಇವೆ. ಇವುಗಳಲ್ಲಿ ಸಂಕ್ಷಿಪ್ತ ಸಮಾಪ್ತಿಯನ್ನು ಮೊದಲು ಕೊಡಲಾಗಿದೆ. ಪ್ರತಿ ಸಮಾಪ್ತಿಯ ಮುನ್ನುಡಿಯಲ್ಲಿ ಅದು ತಿಳಿಸುವುದೇನಂದರೆ ಈ ಸಮಾಪ್ತಿಯ ಮಾತುಗಳು ಕೆಲವು ಭಾಗಗಳಲ್ಲಿ ಬಳಕೆಯಲ್ಲಿರುವುದಾದರೂ ಅವನ್ನು ಅಧಿಕೃತ ಹೇಳಿಕೆಗಳಾಗಿ ಅಂಗೀಕರಿಸುವುದಿಲ್ಲ.
ಸಂಕ್ಷಿಪ್ತ ಸಮಾಪ್ತಿ:
ಮಾರ್ಕ 16:8ರ ನಂತರ ಇರುವ ಸಂಕ್ಷಿಪ್ತ ಸಮಾಪ್ತಿಯು ಪ್ರೇರಿತ ಶಾಸ್ತ್ರಗ್ರಂಥದ ಭಾಗವಲ್ಲ. ಅಲ್ಲಿ ಹೀಗಿದೆ:
ಆದರೆ ಆಜ್ಞಾಪಿಸಲ್ಪಟ್ಟಿದ್ದ ಎಲ್ಲ ವಿಷಯಗಳನ್ನು ಅವರು ಪೇತ್ರನ ಸುತ್ತಲೂ ಇದ್ದವರಿಗೆ ಸಂಕ್ಷಿಪ್ತವಾಗಿ ತಿಳಿಯಪಡಿಸಿದರು. ಅಲ್ಲದೆ, ಇದಾದ ಬಳಿಕ ಯೇಸು ತಾನೇ ಅವರ ಮೂಲಕ ನಿತ್ಯ ರಕ್ಷಣೆಯ ಪವಿತ್ರವೂ ಅನಶ್ವರವೂ ಆದ ಘೋಷಣೆಯನ್ನು ಪೂರ್ವದಿಂದ ಪಶ್ಚಿಮದ ತನಕ ಕಳುಹಿಸಿದನು.
ದೀರ್ಘ ಸಮಾಪ್ತಿ:
ಮಾರ್ಕ 16:8ರ ಬಳಿಕ ಇರುವ ದೀರ್ಘ ಸಮಾಪ್ತಿಯು ಪ್ರೇರಿತ ಶಾಸ್ತ್ರಗ್ರಂಥದ ಭಾಗವಲ್ಲ. ಅದು ಹೀಗಿದೆ:
9ವಾರದ ಮೊದಲನೆಯ ದಿನ ಬೆಳಗ್ಗೆ ಅವನು ಜೀವಿತನಾಗಿ ಎದ್ದ ಮೇಲೆ, ತಾನು ಯಾರಿಂದ ಏಳು ದೆವ್ವಗಳನ್ನು ಬಿಡಿಸಿದ್ದನೋ ಆ ಮಗ್ದಲದ ಮರಿಯಳಿಗೆ ಮೊದಲು ಕಾಣಿಸಿಕೊಂಡನು. 10 ಅವನ ಸಂಗಡ ಇದ್ದವರು ಶೋಕಿಸುತ್ತಾ ಅಳುತ್ತಾ ಇದ್ದಾಗ ಅವಳು ಹೋಗಿ ಅವರಿಗೆ ವಿಷಯವನ್ನು ತಿಳಿಸಿದಳು. 11 ಆದರೆ ಅವನು ಜೀವಂತನಾಗಿದ್ದಾನೆ ಮತ್ತು ಅವಳಿಗೆ ಕಾಣಿಸಿಕೊಂಡಿದ್ದಾನೆ ಎಂಬುದನ್ನು ಕೇಳಿಸಿಕೊಂಡಾಗ ಅವರು ಅದನ್ನು ನಂಬಲಿಲ್ಲ. 12 ಇದಾದ ಮೇಲೆ ಶಿಷ್ಯರಲ್ಲಿ ಇಬ್ಬರು ಒಂದು ಹಳ್ಳಿಗೆ ನಡೆದುಕೊಂಡು ಹೋಗುತ್ತಿದ್ದಾಗ ಅವನು ಅವರಿಗೆ ಬೇರೊಂದು ರೀತಿಯಲ್ಲಿ ಕಾಣಿಸಿಕೊಂಡನು; 13 ಅವರು ಹಿಂದಿರುಗಿ ಬಂದು ಉಳಿದವರಿಗೆ ಅದನ್ನು ತಿಳಿಸಿದರು. ಆದರೆ ಇವರ ಮಾತನ್ನೂ ಅವರು ನಂಬಲಿಲ್ಲ. 14 ತರುವಾಯ ಹನ್ನೊಂದು ಮಂದಿ ಶಿಷ್ಯರು ಊಟಕ್ಕೆ ಕುಳಿತಿದ್ದಾಗ ಅವನು ಅವರಿಗೆ ಕಾಣಿಸಿಕೊಂಡನು; ಮತ್ತು ತಾನು ಜೀವಿತನಾಗಿ ಎದ್ದ ಮೇಲೆ ತನ್ನನ್ನು ನೋಡಿದವರ ಮಾತನ್ನು ಅವರು ನಂಬದಿದ್ದ ಕಾರಣ ಅವನು ಅವರ ಅಪನಂಬಿಕೆಯನ್ನೂ ಅವರ ಹೃದಯದ ಕಾಠಿಣ್ಯವನ್ನೂ ಖಂಡಿಸಿದನು. 15 ಅನಂತರ ಅವನು ಅವರಿಗೆ, “ನೀವು ಲೋಕದ ಎಲ್ಲ ಕಡೆಗೂ ಹೋಗಿ ಸರ್ವ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ. 16 ನಂಬಿ ದೀಕ್ಷಾಸ್ನಾನ ಪಡೆದುಕೊಳ್ಳುವವನು ರಕ್ಷಣೆಹೊಂದುವನು, ನಂಬದೆಹೋಗುವವನು ದಂಡನೆಗೆ ಗುರಿಯಾಗುವನು. 17 ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು: ನನ್ನ ಹೆಸರನ್ನು ಉಪಯೋಗಿಸಿ ಅವರು ದೆವ್ವಗಳನ್ನು ಬಿಡಿಸುವರು, ಬೇರೆ ಬೇರೆ ಭಾಷೆಗಳಲ್ಲಿ ಮಾತಾಡುವರು, 18 ತಮ್ಮ ಕೈಗಳಿಂದ ಹಾವುಗಳನ್ನು ಎತ್ತುವರು ಮತ್ತು ಅವರು ಮಾರಕವಾದ ಏನನ್ನಾದರೂ ಕುಡಿದರೆ ಅವರಿಗೆ ಯಾವುದೇ ಹಾನಿಯಾಗುವುದಿಲ್ಲ. ಅವರು ರೋಗಿಗಳ ಮೇಲೆ ಕೈಯಿಟ್ಟರೆ ಅವರಿಗೆ ಗುಣವಾಗುವುದು” ಎಂದು ಹೇಳಿದನು.
19 ಹೀಗೆ ಕರ್ತನಾದ ಯೇಸು ಅವರೊಂದಿಗೆ ಮಾತಾಡಿದ ಬಳಿಕ ಸ್ವರ್ಗಕ್ಕೆ ಒಯ್ಯಲ್ಪಟ್ಟು ದೇವರ ಬಲಗಡೆಯಲ್ಲಿ ಆಸನಾರೂಢನಾದನು. 20 ಅವರು ಹೊರಟುಹೋಗಿ ಎಲ್ಲ ಕಡೆಗಳಲ್ಲಿ ಸಾರಿದರು; ಮತ್ತು ಕರ್ತನು ಅವರ ಸಂಗಡ ಕೆಲಸ ಮಾಡುತ್ತಾ ಸೂಚಕಕಾರ್ಯಗಳ ಮೂಲಕ ಸಂದೇಶವನ್ನು ಬಲಪಡಿಸಿದನು.
ಜೂನ್ 11-17
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಲೂಕ 1:69ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ರಕ್ಷಣೆಯ ಒಂದು ಕೊಂಬು: ಅಥವಾ “ಶಕ್ತಿಶಾಲಿಯಾದ ರಕ್ಷಕನು.” ಬೈಬಲಿನಲ್ಲಿ ಪ್ರಾಣಿಯ ಕೊಂಬುಗಳು ಹೆಚ್ಚಾಗಿ ಬಲ, ಆಕ್ರಮಣ ಮತ್ತು ವಿಜಯವನ್ನು ಸೂಚಿಸುತ್ತವೆ. (1 ಸಮು 2:1; ಕೀರ್ತ 75:4, 5, 10; 148:14) ಅಲ್ಲದೇ, ರಾಜರು ಮತ್ತು ರಾಜ ಮನೆತನಗಳು ಅವರು ನೀತಿವಂತರಾಗಿರಲಿ ಅಥವಾ ದುಷ್ಟರಾಗಿರಲಿ, ಕೊಂಬುಗಳಿಂದ ಸೂಚಿಸಲ್ಪಟ್ಟಿದ್ದಾರೆ. ಅವರು ಪಡೆಯುವ ವಿಜಯಗಳನ್ನು ಕೊಂಬುಗಳ ಎತ್ತಲ್ಪಡುವಿಕೆಗೆ ಹೋಲಿಸಲಾಗಿದೆ. (ಧರ್ಮೋ 33:17; ದಾನಿ 7:24; 8:2-10, 20-24) ಈ ಹಿನ್ನೆಲೆಯಲ್ಲಿ “ರಕ್ಷಣೆಯ ಒಂದು ಕೊಂಬು” ಮೆಸ್ಸೀಯನಿಗೆ ಸೂಚಿತವಾಗಿದೆ. ಅವನಲ್ಲಿ ರಕ್ಷಿಸುವ ಶಕ್ತಿಯಿದೆ ಮಾತ್ರವಲ್ಲ ಅವನು ಪರಾಕ್ರಮಿಯಾದ ರಕ್ಷಕನು.
ಲೂಕ 1:76ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ನೀನು ಯೆಹೋವನ ಮುಂದೆ ಹೋಗುವಿ: ಸ್ನಾನಿಕನಾದ ಯೋಹಾನನು ‘ಯೆಹೋವನ . . . ಮುಂದೆ ಹೋಗುವನು’ ಅಂದರೆ ಅವನು ಯೇಸುವಿಗೆ ಮುಂದೂತನಾಗಲಿದ್ದನು ಎಂದರ್ಥ. ಯಾಕೆಂದರೆ ಯೇಸು ತನ್ನ ತಂದೆಯ ಪ್ರತಿನಿಧಿಯಾಗಿದ್ದನು ಮತ್ತು ತನ್ನ ತಂದೆಯ ಹೆಸರಿನಲ್ಲಿ ಬಂದನು.—ಯೋಹಾ 5:43; 8:29; ಈ ವಚನದಲ್ಲಿ ಯೆಹೋವನ ಬಗ್ಗೆ ಕೊಡಲಾಗಿರುವ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ.
ಜೂನ್ 18-24
ಬೈಬಲಿನಲ್ಲಿರುವ ರತ್ನಗಳು | ಲೂಕ 2-3
“ಮಕ್ಕಳೇ, ಯೆಹೋವನ ಜೊತೆ ನಿಮ್ಮ ಸ್ನೇಹ ಹೇಗಿದೆ?”
ಲೂಕ 2:41ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಅವನ ತಂದೆತಾಯಿಗಳಿಗೆ . . . ಪದ್ಧತಿಯಿತ್ತು: ಧರ್ಮಶಾಸ್ತ್ರವು ಸ್ತ್ರೀಯರನ್ನು ಪಸ್ಕ ಹಬ್ಬದ ಆಚರಣೆಗೆ ಹಾಜರಾಗುವಂತೆ ಅವಶ್ಯಪಡಿಸಿರಲಿಲ್ಲ. ಆದರೂ ವಾರ್ಷಿಕವಾಗಿ ಆ ಹಬ್ಬ ಆಚರಿಸಲು ಯೋಸೇಫನೊಂದಿಗೆ ಯೆರೂಸಲೇಮಿಗೆ ಹೋಗುವುದು ಮರಿಯಳ ಪದ್ಧತಿಯಾಗಿತ್ತು. (ವಿಮೋ 23:17; 34:23) ಪ್ರತಿವರ್ಷ ಅವರು ತಮ್ಮ ಬೆಳೆಯುತ್ತಿರುವ ಕುಟುಂಬದೊಟ್ಟಿಗೆ ಹೋಗಿ ಬರಲು ಸುಮಾರು 300 ಕಿ.ಮೀ. (190 ಮೈಲು) ಪ್ರಯಾಣ ಮಾಡುತ್ತಿದ್ದರು.
ಲೂಕ 2:46, 47ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಅವರಿಗೆ ಪ್ರಶ್ನೆಗಳನ್ನು ಕೇಳುತ್ತಾ ಇದ್ದನು: ಯೇಸುವಿಗೆ ಕಿವಿಗೊಡುತ್ತಿದ್ದವರು ತೋರಿಸಿದ ಪ್ರತಿಕ್ರಿಯೆಯಿಂದ, ಅವನು ಕೇಳಿದ ಪ್ರಶ್ನೆಗಳು ಕೇವಲ ಕುತೂಹಲ ತಣಿಸಿಕೊಳ್ಳಲು ಹುಡುಗನೊಬ್ಬ ಕೇಳುವ ಪ್ರಶ್ನೆಗಳಾಗಿರಲಿಲ್ಲ ಅನ್ನೋದು ಸ್ಪಷ್ಟ. (ಲೂಕ 2:47) ‘ಪ್ರಶ್ನೆಗಳನ್ನು . . . ಕೇಳುವುದು’ ಎಂದು ಭಾಷಾಂತರವಾದ ಗ್ರೀಕ್ ಪದರೂಪವು, ಕೆಲವು ಸಂದರ್ಭಗಳಲ್ಲಿ, ನ್ಯಾಯಾಲಯಗಳಲ್ಲಿ ಕೇಳಲಾಗುವ ಪ್ರಶ್ನೆಗಳು ಮತ್ತು ಮರುಪ್ರಶ್ನೆಗಳಿಗೆ ಸೂಚಿಸಬಲ್ಲದು. (ಮತ್ತಾ 27:11; ಮಾರ್ಕ 14:60, 61; 15:2, 4; ಅ.ಕಾ. 5:27) ಇತಿಹಾಸಕಾರರ ಪ್ರಕಾರ, ಕೆಲವು ಪ್ರಮುಖ ಧಾರ್ಮಿಕ ಮುಖಂಡರು ಹಬ್ಬಗಳು ಮುಗಿದ ಬಳಿಕ ಆಲಯದಲ್ಲೇ ಉಳಿದುಕೊಳ್ಳುವ ಪದ್ಧತಿಯಿತ್ತು. ಅಲ್ಲಿನ ಒಂದು ವಿಶಾಲ ದ್ವಾರ ಮಂಟಪದಲ್ಲಿ ಕೂತು ಅವರು ಬೋಧಿಸುತ್ತಿದ್ದರು. ಜನರು ಅವರ ಪಾದಗಳ ಬಳಿ ಕುಳಿತು ಆಲಿಸಬಹುದು ಮತ್ತು ಪ್ರಶ್ನೆಗಳನ್ನು ಕೇಳಬಹುದಿತ್ತು.
ಅವರು ಆಶ್ಚರ್ಯಪಡುತ್ತಾ ಇದ್ದರು: ಇಲ್ಲಿ ‘ಆಶ್ಚರ್ಯಪಡು’ ಎಂಬ ಗ್ರೀಕ್ ಕ್ರಿಯಾಪದ ರೂಪವು ಆಶ್ಚರ್ಯಪಡುತ್ತಾ ಮುಂದುವರಿಯುವುದನ್ನು ಅಥವಾ ಪದೇ ಪದೇ ಆಶ್ಚರ್ಯಚಕಿತರಾಗುವುದನ್ನು ಸೂಚಿಸಬಹುದು.
ಲೂಕ 2:51, 52ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಅಧೀನನಾಗಿ ಮುಂದುವರಿದನು: ಅಥವಾ ‘ಅಧೀನನಾಗಿ ಉಳಿದನು; ವಿಧೇಯನಾಗಿ ಉಳಿದನು.’ ಈ ಗ್ರೀಕ್ ಕ್ರಿಯಾಪದ ಮುಂದುವರಿದ ಕ್ರಿಯೆಯಾಗಿದೆ. ಇದು ಸೂಚಿಸುವುದೇನಂದರೆ, ತನ್ನಲ್ಲಿದ್ದ ದೇವರ ವಾಕ್ಯದ ಜ್ಞಾನದಿಂದ ಯೇಸು ಆಲಯದ ಬೋಧಕರನ್ನು ಅಚ್ಚರಿಪಡಿಸಿದ ಬಳಿಕ, ಮನೆಗೆ ಹೋದನು ಮತ್ತು ದೀನತೆಯಿಂದ ತನ್ನ ಹೆತ್ತವರಿಗೆ ಅಧೀನನಾಗಿ ಉಳಿದನು. ಈ ವಿಧೇಯತೆಯು ಬೇರೆ ಯಾವುದೇ ಹುಡುಗನು ತೋರಿಸುವ ವಿಧೇಯತೆಗಿಂತಲೂ ಹೆಚ್ಚು ಅರ್ಥವತ್ತಾಗಿತ್ತು. ಯಾಕೆಂದರೆ ಮೋಶೆಯ ಧರ್ಮಶಾಸ್ತ್ರದ ನಿಯಮಗಳ ಪ್ರತಿಯೊಂದು ಸೂಕ್ಷ್ಮ ವಿವರವನ್ನು ಅವನು ಪೂರ್ಣವಾಗಿ ನೆರವೇರಿಸಿದನು.—ವಿಮೋ 20:12; ಗಲಾ 4:4.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಲೂಕ 2:14ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಮತ್ತು ಭೂಮಿಯಲ್ಲಿ [ದೇವರ] ಪ್ರಸನ್ನತೆ ಇರುವ ಜನರ ಮಧ್ಯೆ ಶಾಂತಿ: ಕೆಲವು ಹಸ್ತಪ್ರತಿಗಳಲ್ಲಿರುವ ಮಾಹಿತಿಗನುಸಾರ ಈ ವಚನವನ್ನು “ಭೂಮಿಯಲ್ಲಿ ಶಾಂತಿ ಮನುಷ್ಯರಿಗೆ ಪ್ರಸನ್ನತೆ” ಎಂದು ಭಾಷಾಂತರಿಸಲು ಸಾಧ್ಯವಿದೆ. ಈ ಪದಗಳನ್ನೇ ಕೆಲವು ಬೈಬಲ್ ಭಾಷಾಂತರಗಳು ಉಪಯೋಗಿಸಿವೆ. ಆದರೆ ನೂತನ ಲೋಕ ಭಾಷಾಂತರವು ಬಳಸಿರುವ ಪದಗಳಿಗೆ ಹಸ್ತಪ್ರತಿಯು ಇನ್ನೂ ಪ್ರಬಲ ಆಧಾರ ಕೊಡುತ್ತದೆ. ದೇವದೂತರ ಈ ಪ್ರಕಟನೆಯು ಮಾನವರ ನಡೆನುಡಿ, ಕ್ರಿಯೆಗಳು ಹೇಗೆಯೇ ಇರಲಿ ಅವರಿಗೆ ದೇವರ ಪ್ರಸನ್ನತೆ ಇದೆ ಎಂದು ಸೂಚಿಸುವುದಿಲ್ಲ. ಬದಲಾಗಿ, ಯಾರು ಆತನಲ್ಲಿ ನಿಜ ನಂಬಿಕೆ ತೋರಿಸುತ್ತಾರೋ ಮತ್ತು ಆತನ ಪುತ್ರನ ಹಿಂಬಾಲಕರಾಗುತ್ತಾರೋ ಅವರು ಮಾತ್ರ ಆತನ ಪ್ರಸನ್ನತೆಯನ್ನು ಪಡೆಯುತ್ತಾರೆ ಎಂದು ತಿಳಿಸುತ್ತದೆ.—ಈ ವಚನದಲ್ಲಿರುವ ಪ್ರಸನ್ನತೆ ಇರುವ ಜನರು ಎಂಬ ಅಧ್ಯಯನ ಬೈಬಲಿನ ಮಾಹಿತಿಯನ್ನು ನೋಡಿ.
ಪ್ರಸನ್ನತೆ ಇರುವ ಜನರು: ದೇವದೂತರು ಘೋಷಿಸಿದ ಈ ‘ಪ್ರಸನ್ನತೆಯನ್ನು’ ತೋರಿಸುವಾತನು ದೇವರೇ ಹೊರತು ಮನುಷ್ಯರಲ್ಲ. ಇದಕ್ಕೆ ಸಮಾನವಾದ ಗ್ರೀಕ್ ಪದ ಯು-ಡೋಕಿ-ಯ ವನ್ನು “ಅನುಗ್ರಹ, ಒಲವು, ಮೆಚ್ಚುಗೆ” ಎಂದೂ ಭಾಷಾಂತರಿಸಬಹುದು. ಸಂಬಂಧಿತ ಕ್ರಿಯಾಪದ ಯುಡೋಕಿಯೊವನ್ನು ಮತ್ತಾ 3:17; ಮಾರ್ಕ 1:11 ಮತ್ತು ಲೂಕ 3:22ರಲ್ಲಿ ಬಳಸಲಾಗಿದೆ. (ಮತ್ತಾ 3:17; ಮಾರ್ಕ 1:11ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿಯನ್ನು ನೋಡಿ) ಇಲ್ಲಿ ದೇವರು ತನ್ನ ಮಗ ದೀಕ್ಷಾಸ್ನಾನ ಪಡೆದ ತಕ್ಷಣ ಅವನ ಜೊತೆ ಮಾತಾಡಿದನು. ಇದು ಮೂಲತಃ “ಮೆಚ್ಚು, ಸಂತೋಷಪಡು, ಅನುಗ್ರಹ ತೋರಿಸು, ಆನಂದಿಸು” ಎಂಬರ್ಥವನ್ನು ಕೊಡುತ್ತದೆ. ಈ ಅರ್ಥಕ್ಕೆ ಹೊಂದಿಕೊಂಡೇ “ದೇವರ ಪ್ರಸನ್ನತೆ ಇರುವ ಜನರು” (ಏನ್-ತ್ರೋಪೈಸ್‌ಯು-ಡೋಕಿ-ಯಾಸ್) ಎಂಬ ಅಭಿವ್ಯಕ್ತಿಯನ್ನು ಬಳಸಲಾಗಿದೆ. ಇದು ದೇವರ ಮೆಚ್ಚುಗೆ ಮತ್ತು ಆತನ ಅಂಗೀಕಾರ ಅಥವಾ ಪ್ರಸನ್ನತೆ ಇರುವ ಜನರಿಗೆ ಸೂಚಿತವಾಗಿದೆ. ಇದನ್ನು “ದೇವರು ಅಂಗೀಕರಿಸುವ ಜನರು ಅಥವಾ ಆತನ ಅನುಗ್ರಹವಿರುವ ಜನರು” ಎಂದೂ ಅನುವಾದಿಸಬಹುದು. ಹಾಗಾಗಿ ಈ ದೇವದೂತನ ಘೋಷಣೆಯು ಎಲ್ಲಾ ಮನುಷ್ಯರ ಕಡೆಗೆ ದೇವರ ಪ್ರಸನ್ನತೆ ಇದೆ ಎಂದು ಹೇಳುವುದಿಲ್ಲ, ಬದಲಿಗೆ ಯಾರು ನಿಜ ನಂಬಿಕೆಯ ಮೂಲಕ ಮತ್ತು ಆತನ ಪುತ್ರನ ಹಿಂಬಾಲಕರಾಗುವ ಮೂಲಕ ಆತನನ್ನು ಮೆಚ್ಚಿಸುತ್ತಾರೋ ಅವರ ಕಡೆಗೆ ಆತನ ಪ್ರಸನ್ನತೆ ಇದೆ ಎಂದು ಸೂಚಿಸುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಗ್ರೀಕ್ ಪದ ಯುಡೋಕಿಯ ಮನುಷ್ಯರ ಪ್ರಸನ್ನತೆಯ (ಸದಿಚ್ಛೆಯ) ಬಗ್ಗೆಯೂ ಸೂಚಿಸುತ್ತದೆ. (ರೋಮ 10:1; ಫಿಲಿ 1:15) ಆದರೂ ಆಗಿಂದಾಗ್ಗೆ ದೇವರ ಪ್ರಸನ್ನತೆ, ದೇವರ ಒಲವು ಅಥವಾ ದೇವರ ಮೆಚ್ಚುಗೆ ಎಂಬ ಪದರೂಪವನ್ನೇ ಬಳಸಲಾಗಿದೆ. (ಮತ್ತಾ 11:26; ಲೂಕ 10:21; ಎಫೆ 1:5, 9; ಫಿಲಿ 2:13; 2ಧೆಸ 1:11) ಸೆಪ್ಟೂಅಜಂಟ್ ಬೈಬಲ್ ಕೀರ್ತ 51:18ರಲ್ಲಿ [50:20, LXX] ದೇವರ “ಪ್ರಸನ್ನತೆ” ಎಂಬ ಪದವನ್ನೇ ಬಳಸಿದೆ.
wp-E-16.3 9 ¶1-3
ನಿಮಗೆ ಗೊತ್ತಿತ್ತೋ?
ಯೋಸೇಫನ ತಂದೆ ಯಾರು?
ನಜರೇತಿನಲ್ಲಿ ಬಡಗಿಯಾಗಿದ್ದ ಯೋಸೇಫನು ಯೇಸುವಿನ ಮಲತಂದೆಯಾಗಿದ್ದನು. ಆದರೆ ಯೋಸೇಫನ ತಂದೆ ಯಾರು? ಮತ್ತಾಯನ ಸುವಾರ್ತೆ ಯಾಕೋಬ ಎಂಬವನು ಯೋಸೇಫನ ತಂದೆ ಎಂದು ಹೇಳಿದರೆ, ಲೂಕನ ಸುವಾರ್ತೆ ಯೋಸೇಫನು “ಹೇಲೀಯ ಮಗನು” ಎಂದು ಹೇಳುತ್ತದೆ. ಇಲ್ಲಿ ಹೊಂದಾಣಿಕೆ ಇಲ್ಲದಂತೆ ತೋರುತ್ತದೆ. ಅದೇಕೆ?—ಲೂಕ 3:23; ಮತ್ತಾಯ 1:16.
ಮತ್ತಾಯನ ವೃತ್ತಾಂತ ಹೇಳುವುದು: “ಯಾಕೋಬನು . . . ಯೋಸೇಫನಿಗೆ ತಂದೆಯಾದನು.” ಇಲ್ಲಿ ಬಳಸಲಾದ ಗ್ರೀಕ್ ಪದ ಯಾಕೋಬನೇ ಯೋಸೇಫನ ಹೆತ್ತ ತಂದೆಯೆಂದು ಸ್ಪಷ್ಟಪಡಿಸುತ್ತದೆ. ಮತ್ತಾಯನು ಇಲ್ಲಿ ದಾವೀದನ ರಾಜವಂಶದಲ್ಲಿ ಯೋಸೇಫನ ಮಾಂಸಿಕ ವಂಶಾವಳಿಯನ್ನು ಪತ್ತೆ ಮಾಡುತ್ತಿದ್ದನು. ಈ ಮೂಲಕ ದಾವೀದನ ಸಿಂಹಾಸನಕ್ಕೆ ಯೋಸೇಫನ ದತ್ತು ಪುತ್ರ ಯೇಸು ಹೇಗೆ ಬಾಧ್ಯಸ್ಥನೆಂದು ತೋರಿಸಿದನು.
ಇನ್ನೊಂದು ಕಡೆ ಲೂಕನ ವೃತ್ತಾಂತವು “ಯೋಸೇಫನು ಹೇಲೀಯ ಮಗನು” ಎನ್ನುತ್ತದೆ. ಕೆಲವೊಮ್ಮೆ “ಮಗನು” (son) ಎಂಬ ಹೇಳಿಕೆ “ಅಳಿಯ” (son-in-law) ಎಂದೂ ಅರ್ಥವಾಗುತ್ತದೆ. ಇಂಥ ಒಂದು ಸಂದರ್ಭವನ್ನು ಲೂಕ 3:27ರಲ್ಲಿ ನಾವು ನೋಡುತ್ತೇವೆ. ಅಲ್ಲಿ ಶೆಯಲ್ತಿಯೇಲನನ್ನು ‘ನೇರಿಯ ಮಗನು’ ಎಂದು ಹೇಳಿದೆ. ಆದರೆ ಶೆಯಲ್ತಿಯೇಲನ ನಿಜವಾದ ತಂದೆ ಯೆಕೊನ್ಯ. (1 ಪೂರ್ವಕಾಲವೃತ್ತಾಂತ 3:17; ಮತ್ತಾಯ 1:12) ಬಹುಶಃ ನೇರಿಯನ ಒಬ್ಬ ಅನಾಮಧೇಯ ಮಗಳನ್ನು ಶೆಯಲ್ತಿಯೇಲನು ಮದುವೆಯಾಗಿದ್ದಿರಬೇಕು. ಹಾಗಾಗಿ ಅವನು ನೇರಿಯ ಅಳಿಯನಾದನು. ಇದೇ ಅರ್ಥದಲ್ಲಿ, ಯೋಸೇಫನು ಹೇಲೀಯ ಮಗಳಾದ ಮರಿಯಳನ್ನು ಮದುವೆಯಾದಾಗ ಹೇಲೀಯನ ‘ಮಗನಾದನು.’ ಹೀಗೆ ಲೂಕನು ಯೇಸುವಿನ ಮಾಂಸಿಕ ವಂಶವನ್ನು “ಶರೀರಾನುಸಾರವಾಗಿ” ಅವನ ಮಾಂಸಿಕ ತಾಯಿಯಾದ ಮರಿಯಳ ಮೂಲಕ ಪತ್ತೆಮಾಡಿದ್ದಾನೆ. (ರೋಮನ್ನರಿಗೆ 1:3) ಹೀಗೆ ಯೇಸುವಿನ ಎರಡು ಸ್ಪಷ್ಟವಾದ ಹಾಗೂ ಉಪಯುಕ್ತ ವಂಶಾವಳಿಗಳನ್ನು ಬೈಬಲು ನಮಗೆ ಕೊಡುತ್ತದೆ.
ಜೂನ್ 25– ಜುಲೈ 1
ಬೈಬಲಿನಲ್ಲಿರುವ ರತ್ನಗಳು | ಲೂಕ 4-5
“ಯೇಸುವಿನಂತೆ ಪ್ರಲೋಭನೆಗಳನ್ನು ಎದುರಿಸಿ”
ಅಧ್ಯಯನ ಬೈಬಲಿನಲ್ಲಿರುವ ಮೀಡಿಯಾ
ದೇವಾಲಯದ ಕೈಪಿಡಿ ಗೋಡೆ
ಸೈತಾನನು ಯೇಸುವನ್ನು ಕರೆದುಕೊಂಡು ಹೋಗಿ ಅಕ್ಷರಶಃ “ದೇವಾಲಯದ ಕೈಪಿಡಿ ಗೋಡೆಯ ಮೇಲೆ” [ಅಥವಾ ಆಲಯದ ‘ತುತ್ತ ತುದಿಯಲ್ಲಿ’] ನಿಲ್ಲಿಸಿರಬಹುದು ಮತ್ತು ಅಲ್ಲಿಂದ ಕೆಳಗೆ ಧುಮುಕುವಂತೆ ಅವನಿಗೆ ಹೇಳಿರಬಹುದು. ಆದರೆ ಯಾವ ನಿರ್ದಿಷ್ಟ ಸ್ಥಳದಲ್ಲಿ ಯೇಸು ನಿಂತಿರಬಹುದು ಎಂದು ನಮಗೆ ತಿಳಿದಿಲ್ಲ. ಇಲ್ಲಿ ಹೇಳಲಾದ “ದೇವಾಲಯ” ಎಂಬ ಪದವು ಇಡೀ ದೇವಾಲಯದ ಸಂಕೀರ್ಣಕ್ಕೆ ಸೂಚಿಸಿರಬಹುದು. ಆದ್ದರಿಂದ, (1) ಆಲಯ ಪ್ರದೇಶದ ಆಗ್ನೇಯ (ದಕ್ಷಿಣ-ಪೂರ್ವ) ದಿಕ್ಕಿನ ಮೂಲೆಯಲ್ಲಿ ಯೇಸು ನಿಂತಿದ್ದಿರಬೇಕು. ಇಲ್ಲವೇ ಆಲಯ ಸಂಕೀರ್ಣದ ಇನ್ನೊಂದು ಮೂಲೆಯಲ್ಲಿ ನಿಂತಿದ್ದಿರಬಹುದು. ಯೆಹೋವನ ಸಹಾಯವಿಲ್ಲದೇ ಹೋದರೆ, ಈ ಯಾವುದೇ ಸ್ಥಳಗಳಿಂದ ಕೆಳಗೆ ಧುಮುಕುವವನಿಗೆ ಸಾವು ಖಂಡಿತ.
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ
ಲೂಕ 4:17ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಪ್ರವಾದಿ ಯೆಶಾಯನ ಸುರುಳಿ: ಮೃತ ಸಮುದ್ರದ ಬಳಿ ಸಿಕ್ಕಿದ ಯೆಶಾಯನ ಸುರುಳಿಯನ್ನು 17 ಚರ್ಮಕಾಗದದ ಪಟ್ಟಿಗಳಿಂದ ಮಾಡಲಾಗಿತ್ತು. ಆ ಪಟ್ಟಿಗಳನ್ನು ಒಂದಕ್ಕೊಂದು ಜೋಡಿಸಲಾಗಿತ್ತು. ಹೀಗೆ ಆ ಸುರುಳಿಯು 7.3 ಮೀಟರ್ (24 ಅಡಿ) ಉದ್ದವಾಗಿದ್ದು ಅದರಲ್ಲಿ 54 ಕಲಮುಗಳಿದ್ದವು (Column). ನಜರೇತಿನ ಸಭಾಮಂದಿರದಲ್ಲಿ ಬಳಸಲಾದ ಸುರುಳಿಯ ಉದ್ದವು ಸಹ ಇಷ್ಟೇ ಇದ್ದಿರಬಹುದು. ಒಂದನೆಯ ಶತಮಾನದಲ್ಲಿ ಅಧ್ಯಾಯ ಮತ್ತು ವಚನಗಳ ಸಂಖ್ಯೆಗಳು ಇರಲಿಲ್ಲ. ಹಾಗಾಗಿ ಯೇಸು ತಾನು ಓದಲು ಬಯಸಿದ್ದ ಭಾಗವನ್ನು ಅವುಗಳ ಸಹಾಯವಿಲ್ಲದೆ ಹುಡುಕಿ ಓದಬೇಕಿತ್ತು. ಆದರೆ ಅವನು ಆ ಪ್ರವಾದನೆ ಬರೆದಿರುವ ಸ್ಥಳವನ್ನು ಕಂಡುಕೊಂಡನು ಎಂದು ತಿಳಿಸಿದೆ. ಈ ನಿಜಾಂಶವು, ಅವನಿಗೆ ದೇವರ ವಾಕ್ಯದ ಒಳ್ಳೇ ಪರಿಚಯವಿತ್ತೆಂದು ತೋರಿಸುತ್ತದೆ.
ಲೂಕ 4:25ರ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ
ಮೂರು ವರ್ಷ ಆರು ತಿಂಗಳು: 1ಅರ 18:1ಕ್ಕೆ ಅನುಸಾರ ಬರಗಾಲವು “ಮೂರನೆಯ ವರುಷದಲ್ಲಿ” ಅಂತ್ಯವಾಗುವುದೆಂದು ಎಲೀಯನು ಪ್ರಕಟಿಸಿದನು. ಹಾಗಾಗಿ ಲೂಕ 4:25ರ ಯೇಸುವಿನ ಮಾತುಗಳಿಗೂ 1ಅರಸುಗಳ ವೃತ್ತಾಂತಕ್ಕೂ ಹೊಂದಿಕೆಯಿಲ್ಲವೆಂದು ಕೆಲವರು ವಾದಿಸಿದ್ದಾರೆ. ಆದರೂ ನೀರಿಲ್ಲದೆ ಬರಗಾಲ ಮೂರು ವರ್ಷಕ್ಕಿಂತ ಕಡಿಮೆ ಸಮಯವಿತ್ತೆಂದು ಹೀಬ್ರೂ ಶಾಸ್ತ್ರವು ಸೂಚಿಸುವುದಿಲ್ಲ. ಎಲೀಯನು ಆಹಾಬನಿಗೆ ಬರಗಾಲದ ಬಗ್ಗೆ ಮೊದಲನೆ ಸಲ ಪ್ರಕಟಿಸಿದಾಗ ಆರಂಭಿಸಿದ ಅವಧಿಗೆ “ಮೂರನೆಯ ವರುಷದಲ್ಲಿ” ಎಂಬ ಹೇಳಿಕೆ ಅನ್ವಯಿಸುತ್ತದೆಂಬುದು ವ್ಯಕ್ತ. (1ಅರ 17:1) ಆ ಪ್ರಕಟನೆಯನ್ನು ಅವನು ಮಾಡಿದಾಗ ಬರಗಾಲವು ಆಗಲೇ ಆರಂಭವಾಗಿದ್ದಿರಬೇಕು. ಅದು ಸಾಮಾನ್ಯವಾಗಿ ಆರು ತಿಂಗಳುಗಳ ತನಕ ಇರುತ್ತಿತ್ತು. ಆದರೆ ಆಗ ಅದು ಹಿಂದಿಗಿಂತಲೂ ಹೆಚ್ಚು ಸಮಯವಿತ್ತೆಂದು ಕಾಣುತ್ತದೆ. ಅದಲ್ಲದೆ ಎಲೀಯನು ಪುನಃ ಆಹಾಬನ ಬಳಿಗೆ ಬಂದಾಗ ಅಂದರೆ ಆ ‘ಮೂರನೆಯ ವರುಷದಲ್ಲಿ’ ಬರಗಾಲ ಕೂಡಲೇ ಕೊನೆಗೊಳ್ಳಲಿಲ್ಲ. ಕರ್ಮೆಲ್ ಬೆಟ್ಟದಲ್ಲಾದ ಅಗ್ನಿಪರೀಕ್ಷೆಯ ಬಳಿಕವೇ ಅದು ಕೊನೆಗೊಂಡಿತು. (1ಅರ 18:18-45) ಹಾಗಾಗಿ ಇಲ್ಲಿ ದಾಖಲೆಯಾದ ಯೇಸುವಿನ ಮಾತುಗಳು ಹಾಗೂ ಯಾಕೋ 5:17ರಲ್ಲಿ ದಾಖಲೆಯಾದ ಕ್ರಿಸ್ತನ ಮಲತಮ್ಮನ ತದ್ರೀತಿಯ ಮಾತುಗಳು 1ಅರ 18:1ರಲ್ಲಿ ಸೂಚಿಸಲಾದ ಕಾಲಗಣನೆಗೆ ಚೆನ್ನಾಗಿ ಹೊಂದಿಕೆಯಲ್ಲಿದೆ ಎಂಬುದು ವ್ಯಕ್ತ.