ಬೈಬಲಿನಲ್ಲಿರುವ ರತ್ನಗಳು | 2 ಕೊರಿಂಥ 7-10
ಪರಿಹಾರಕಾರ್ಯನೂ ಒಂದು ಶುಶ್ರೂಷೆ
ಕ್ರೈಸ್ತರು ಎರಡು ರೀತಿಯ ಸೇವೆ ಮಾಡಬೇಕು. ಒಂದು, “ಸಮಾಧಾನ ಸಂಬಂಧದ ಶುಶ್ರೂಷೆ” ಅಂದರೆ ಸಾರುವ, ಕಲಿಸುವ ಕೆಲಸ. ಎರಡು, ಸಹೋದರರ “ಶುಶ್ರೂಷೆ” ಅಂದರೆ ಪರಿಹಾರಕಾರ್ಯ. (2ಕೊರಿಂ 5:18-20; 8:4) ಹಾಗಾಗಿ, ಸಹಾಯದ ಅಗತ್ಯದಲ್ಲಿರುವ ಕ್ರೈಸ್ತರಿಗೆ ನೆರವು ನೀಡುವುದು ನಮ್ಮ ಪವಿತ್ರ ಸೇವೆಯ ಭಾಗವಾಗಿದೆ. ಇದನ್ನು ನಾವು ಹೇಗೆ ಮಾಡಬಹುದು?
ನಮ್ಮ ಸಹೋದರ-ಸಹೋದರಿಯರಿಗೆ ಬೇಕಾದ ಅಗತ್ಯಗಳನ್ನು ಆದಷ್ಟು ಪೂರೈಸಬೇಕು.—2ಕೊರಿಂ 9:12ಎ
ಅವರು ವೈಯಕ್ತಿಕ ಅಧ್ಯಯನವನ್ನು, ಕೂಟಕ್ಕೆ ಹೋಗುವುದನ್ನು, ಸಾರುವುದನ್ನು ಪುನಃ ಆರಂಭಿಸಲು ಸಹಾಯ ಮಾಡಬೇಕು. ಯಾಕೆಂದರೆ ಇದನ್ನೆಲ್ಲ ಮಾಡಿದರೆ ದೇವರಿಗೆ ಕೃತಜ್ಞತೆ ಹೇಳಿದಂತಿರುತ್ತದೆ.—2 ಕೊರಿಂ. 9:12ಬಿ
ಯೆಹೋವನನ್ನು ಮಹಿಮೆಪಡಿಸಬೇಕು. (2ಕೊರಿಂ 9:13) ಪರಿಹಾರಕಾರ್ಯದಿಂದ ಎಲ್ಲ ಜನರಿಗೆ ಸಾಕ್ಷಿ ಸಿಗುತ್ತದೆ. ಸಾಕ್ಷಿಗಳ ಬಗ್ಗೆ ಒಳ್ಳೇ ಅಭಿಪ್ರಾಯ ಇಲ್ಲದವರಿಗೂ ಸಾಕ್ಷಿ ಸಿಗುತ್ತದೆ