ನಮ್ಮ ಕ್ರೈಸ್ತ ಜೀವನ
ಒಳ್ಳೇ ನಡತೆ ಮತ್ತು ಆಳವಾದ ಗೌರವ ತೋರಿಸುತ್ತಾ ಹೃದಯಗಳನ್ನು ಗೆಲ್ಲಿರಿ
ತಮ್ಮ ಒಳ್ಳೇ ಕ್ರೈಸ್ತ ನಡತೆಯಿಂದಾಗಿ ಅನೇಕ ಸಹೋದರಿಯರು, ತಮ್ಮ ಗಂಡಂದಿರು ಸತ್ಯಕ್ಕೆ ಬರಲು ಸಹಾಯ ಮಾಡಿದ್ದಾರೆ. ಆದರೆ ಇದನ್ನು ಮಾಡುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ, ತುಂಬ ವರ್ಷಗಳು ಕಷ್ಟಪಡಬೇಕಾಗುತ್ತೆ, ತುಂಬ ವಿಷಯಗಳನ್ನು ತಾಳಿಕೊಳ್ಳಬೇಕಾಗುತ್ತೆ. (1ಪೇತ್ರ 2:21-23; 3:1, 2) ನಿಮ್ಮ ಗಂಡ ನಿಮಗೆ ತುಂಬ ಕಷ್ಟ ಕೊಡುತ್ತಿದ್ದರೆ, ಒಳ್ಳೇತನದಿಂದ ಕೆಟ್ಟತನವನ್ನು ಜಯಿಸುವುದನ್ನು ಮುಂದುವರಿಸಿ. (ರೋಮ 12:21) ನಿಮ್ಮ ಮಾತಿಗಿಂತ, ನಿಮ್ಮ ಈ ಮಾದರಿ ಅವರ ಮೇಲೆ ಒಳ್ಳೇ ಪ್ರಭಾವ ಬೀರಬಹುದು.
ವಿಷಯಗಳನ್ನು ನಿಮ್ಮ ಸಂಗಾತಿಯ ಸ್ಥಾನದಲ್ಲಿ ನಿಂತು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. (ಫಿಲಿ 2:3, 4) ಪರಾನುಭೂತಿ, ಅನುಕಂಪ ಮತ್ತು ಗೌರವ ತೋರಿಸಿ. ನಿಮ್ಮ ಜವಾಬ್ದಾರಿಗಳನ್ನು ಪೂರೈಸಲು ನಿಮ್ಮಿಂದಾಗುವ ಎಲ್ಲವನ್ನೂ ಮಾಡಿ. ಅವರ ಮಾತಿಗೆ ಯಾವಾಗಲೂ ಕಿವಿಗೊಡಿ. (ಯಾಕೋ 1:19) ತಾಳ್ಮೆ ತೋರಿಸಿ ಮತ್ತು ನೀವು ಅವರನ್ನು ತುಂಬ ಪ್ರೀತಿಸುತ್ತೀರಿ ಅನ್ನೋ ಭರವಸೆ ಅವರಲ್ಲಿ ಮೂಡಿಸಿ. ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸದಿದ್ದರೂ ಇದನ್ನು ಮಾಡಿ. ಯೆಹೋವನು ನಿಮ್ಮ ಈ ಪ್ರಯತ್ನವನ್ನು ನೋಡಿ ಖಂಡಿತ ಮೆಚ್ಚುತ್ತಾನೆ.—1ಪೇತ್ರ 2:19, 20.
ತಾಳಿಕೊಂಡು ಹೋಗಲು ಯೆಹೋವನು ಬಲ ಕೊಟ್ಟನು ಎಂಬ ವಿಡಿಯೋ ನೋಡಿ. ನಂತರ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಕೊಡಿ:
ಮದುವೆ ಆದ ಹೊಸದರಲ್ಲಿ ಗ್ರೇಸ್ ಲೀ ಅವರ ಜೀವನ ಹೇಗಿತ್ತು?
ಬೈಬಲ್ ಸತ್ಯದ ಕಡೆಗೆ ಅವರನ್ನು ಯಾವುದು ಆಕರ್ಷಿಸಿತು?
ದೀಕ್ಷಾಸ್ನಾನ ಆದಮೇಲೆ ಬಂದ ಕಷ್ಟಗಳನ್ನು ಸಹೋದರಿ ಲೀ ಅವರು ಹೇಗೆ ತಾಳಿಕೊಂಡರು?
ಸಹೋದರಿ ಲೀ ಯಾವ ವಿಷಯದ ಬಗ್ಗೆ ಪ್ರಾರ್ಥಿಸಿದರು?
ಒಳ್ಳೇ ನಡತೆ ಮತ್ತು ಆಳವಾದ ಗೌರವದಿಂದ ಯಾವ ಆಶೀರ್ವಾದಗಳು ಅವರಿಗೆ ಸಿಕ್ಕಿತು?
ಒಳ್ಳೇ ನಡತೆ ಮತ್ತು ಆಳವಾದ ಗೌರವಕ್ಕೆ ತುಂಬ ಶಕ್ತಿ ಇದೆ!