ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 3-5
ಮೊದಲ ಸುಳ್ಳಿನ ಕೆಟ್ಟ ಪರಿಣಾಮಗಳು
ಸೈತಾನ, ಹವ್ವಳಿಗೆ ಸುಳ್ಳು ಹೇಳಿದಾಗಿನಿಂದ ಇಂದಿನವರೆಗೂ ಮಾನವರನ್ನು ದಾರಿತಪ್ಪಿಸುತ್ತಲೇ ಇದ್ದಾನೆ. (ಪ್ರಕ 12:9) ಸೈತಾನ ಸೃಷ್ಟಿಸಿದ ಸುಳ್ಳಿನ ಪಟ್ಟಿಯನ್ನು ಕೆಳಗೆ ಕೊಡಲಾಗಿದೆ. ಇವು ಹೇಗೆ ಜನರನ್ನು ದೇವರಿಂದ ದೂರ ಮಾಡುತ್ತವೆ?
ದೇವರೇ ಇಲ್ಲ
ಅವನು ತ್ರಿಯೇಕ ದೇವರು
ದೇವರಿಗೆ ಹೆಸರಿಲ್ಲ
ದೇವರು ಜನರನ್ನು ನರಕದಲ್ಲಿ ಹಾಕಿ ಚಿತ್ರಹಿಂಸೆ ಕೊಡುತ್ತಾನೆ
ಒಳ್ಳೆದು ಕೆಟ್ಟದು ಎಲ್ಲದ್ದಕ್ಕೂ ದೇವರೇ ಕಾರಣ
ಮನುಷ್ಯರ ಬಗ್ಗೆ ದೇವರಿಗೆ ಕಾಳಜಿ ಇಲ್ಲ
ದೇವರ ಬಗ್ಗೆ ಈ ರೀತಿಯ ಸುಳ್ಳುಗಳನ್ನು ಕೇಳಿದಾಗ ನಿಮಗೆ ಹೇಗನಿಸುತ್ತೆ?
ದೇವರ ಹೆಸರಿಗೆ ಹಾಕಿರುವ ಅಪಮಾನವನ್ನು ನೀವು ಹೇಗೆ ತೆಗೆಯಬಹುದು?