ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕ್ಯಾಮರಾ ಅಥವಾ ಇಂಟರ್ಕಾಮ್ ಮೂಲಕ ಸಾಕ್ಷಿ
ಯಾಕೆ ಪ್ರಾಮುಖ್ಯ: ಕೆಟ್ಟತನ ಜಾಸ್ತಿ ಆಗಿರೋದ್ರಿಂದ ತುಂಬ ಜನ ತಮ್ಮ ಮನೆಗಳ ಸೆಕ್ಯುರಿಟಿಗೆ ಕ್ಯಾಮರಾ ಮತ್ತು ಇಂಟರ್ಕಾಮ್ಗಳಂಥ ಹೊಸ ಟೆಕ್ನಾಲಜಿಗಳನ್ನ ಬಳಸುತ್ತಿದ್ದಾರೆ. ಇದರಿಂದ ಮನೆಯವರು ಬಾಗಿಲು ತೆಗೆಯದೆ ಕ್ಯಾಮರಾ ಅಥ್ವಾ ಇಂಟರ್ಕಾಮ್ಗಳ ಮೂಲಕ ಒಳಗಿಂದಾನೇ ಮಾತಾಡುತ್ತಾರೆ. ಹಾಗಾಗಿ ಜನರ ಮುಖ ನೋಡದೆ ಮಾತಾಡೋಕೆ ನಮಗೆ ಕೆಲವೊಮ್ಮೆ ಕಷ್ಟ, ಭಯ ಆಗಬಹುದು. ಈ ಕೆಳಗಿನ ಹೆಜ್ಜೆಗಳನ್ನ ಪಾಲಿಸಿದ್ರೆ ಯಾವುದೇ ಭಯ ಇಲ್ಲದೆ ಮಾತಾಡೋದು ಹೇಗೆ ಅಂತ ನಾವು ಕಲಿಬಹುದು.
ಹೇಗೆ ಮಾಡಬಹುದು:
ಮನೆಯವರು ಕೇಳ್ತಾರೆ ಅನ್ನೋ ಭರವಸೆ ಇರಲಿ. ಬಾಗಿಲು ತೆಗಿದಿದ್ರೂ ನಮ್ಮ ಹತ್ರ ಮಾತಾಡೋಕೆ ಹೆಚ್ಚಿನವ್ರು ಇಷ್ಟಪಡ್ತಾರೆ
ನೀವು ಮನೆ ಬಾಗಿಲು ತಟ್ಟುವ ಅಥವಾ ಬೆಲ್ ರಿಂಗ್ ಮಾಡುವ ಮುಂಚೆನೇ ಕ್ಯಾಮರಾ ರೆಕಾರ್ಡ್ ಆಗುತ್ತಾ ಎಲ್ಲವನ್ನು ಮನೆಯವ್ರಿಗೆ ತೋರಿಸುತ್ತೆ. ನೀವು ಮನೆ ಹತ್ರ ಬರುತ್ತಿದ್ದ ಹಾಗೆ ಮನೆಯವರು ನಿಮ್ಮ ಹಾವ-ಭಾವ ಮತ್ತು ಮಾತುಗಳನ್ನ ಗಮನಿಸುತ್ತಾ ಇರುತ್ತಾರೆ ಅನ್ನೋದನ್ನ ಮರೀಬೇಡಿ
ಮನೆಯವರು ಮಾತಾಡುವಾಗ ಕ್ಯಾಮರಾ ಅಥವಾ ಇಂಟರ್ಕಾಮ್ ನೋಡಿ ಮಾತಾಡಿ. ಹೀಗೆ ಮಾಡಿದ್ರೆ ಮನೆಯವರ ಎದುರು ನಿಂತು ಮಾತಾಡಿದ ತರ ಇರುತ್ತೆ. ನಗುಮುಖದಿಂದ ಸ್ವಾಭಾವಿಕವಾಗಿ ಮಾತಾಡಿ. ಮನೆ ಮನೆಲಿ ಸಾರುವಾಗ ಏನು ಮಾತಾಡಬೇಕು ಅಂತ ಪ್ಲಾನ್ ಮಾಡಿದ್ದೀರೋ ಅದನ್ನೇ ಕ್ಯಾಮರಾದ ಎದುರು ನಿಂತು ಮಾತಾಡಿ. ಆದ್ರೆ ಮುಖ ತುಂಬ ಹತ್ರ ತಗೊಂಡು ಹೋಗಬೇಡಿ. ಒಂದು ವೇಳೆ ಮನೆಯವರು ಏನೂ ಮಾತಾಡಲಿಲ್ಲ ಅಂದ್ರೆ ನೀವು ಏನೂ ಸಂದೇಶ ಕೊಡಬೇಡಿ
ಸಂಭಾಷಣೆ ಮುಗಿದ ಮೇಲೂ ಮನೆಯವರು ನಿಮ್ಮನ್ನ ಗಮನಿಸುತ್ತಿರುತ್ತಾರೆ, ನಿಮ್ಮ ಮಾತು ಕೇಳಿಸಿಕೋತ್ತಿರುತ್ತಾರೆ ಅನ್ನೋದು ಮನಸ್ಸಲ್ಲಿ ಇರಲಿ