ಭಾಗ 3
“ನಾನು ನಿಮ್ಮನ್ನ . . . ಒಟ್ಟುಸೇರಿಸ್ತಿನಿ”—ಶುದ್ಧ ಆರಾಧನೆಯ ಪುನಃಸ್ಥಾಪನೆ ಬಗ್ಗೆ ಕೊಟ್ಟ ಮಾತು
ಮುಖ್ಯ ವಿಷಯ: ಯೆಹೆಜ್ಕೇಲನ ಭವಿಷ್ಯವಾಣಿಗಳಲ್ಲಿರೋ ಪುನಃಸ್ಥಾಪನೆಯ ಮಾತುಗಳು
ಇಸ್ರಾಯೇಲ್ ಚೆಲ್ಲಾಪಿಲ್ಲಿಯಾಗಿತ್ತು. ಧರ್ಮಭ್ರಷ್ಟತೆಯಿಂದಾಗಿ ಅಲ್ಲಿನ ಐಕ್ಯತೆ ಹಾಳಾಗಿತ್ತು. ‘ಮಾಡಿದ್ದುಣ್ಣೋ ಮಾರಾಯ’ ಅನ್ನೋ ಹಾಗೆ ಆ ದೇಶ ತನ್ನ ತಪ್ಪಿನ ಪರಿಣಾಮಗಳನ್ನ ಅನುಭವಿಸಿತ್ತು. ಯಾಕಂದ್ರೆ ಅಲ್ಲಿನ ಜನರು ಶುದ್ಧ ಆರಾಧನೆಯನ್ನ ಅಶುದ್ಧ ಮಾಡಿದ್ರು ಮತ್ತು ದೇವರ ಹೆಸರಿಗೆ ಮಸಿಬಳಿದಿದ್ರು. ಅವ್ರು ಹೀಗೆಲ್ಲಾ ಮಾಡಿದ್ರೂ ಯೆಹೋವನು ನಿರೀಕ್ಷೆ ತುಂಬುವ ಅನೇಕ ಭವಿಷ್ಯವಾಣಿಗಳನ್ನ ತಿಳಿಸುವಂತೆ ಯೆಹೆಜ್ಕೇಲನನ್ನ ಪ್ರೇರಿಸಿದನು. ಮನಮುಟ್ಟುವ ಅಲಂಕಾರಗಳ, ಆಶ್ಚರ್ಯಗೊಳಿಸುವ ದರ್ಶನಗಳ ಮೂಲಕ ಯೆಹೋವನು ಕೈದಿಗಳಾಗಿದ್ದ ಇಸ್ರಾಯೇಲ್ಯರಿಗೆ ಉತ್ತೇಜನ ಕೊಟ್ಟನು. ಇವು ಈಗಿನ ಕಾಲದಲ್ಲೂ ಯಾರು ಶುದ್ಧ ಆರಾಧನೆ ಪುನಃಸ್ಥಾಪನೆ ಆಗಬೇಕು ಅಂತ ಕಾಯುತ್ತಿದ್ದಾರೋ ಅವ್ರಿಗೂ ಪ್ರೋತ್ಸಾಹ ಕೊಡುತ್ತವೆ.