ಚೌಕ 13ಎ
ಎರಡು ಆಲಯಗಳು ಮತ್ತು ಅವುಗಳಿಂದ ಕಲಿಯೋ ಪಾಠಗಳು
ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ಆಲಯ:
ಈ ಆಲಯದ ಬಗ್ಗೆ ಯೆಹೆಜ್ಕೇಲನು ಬಾಬೆಲಿನಲ್ಲಿ ಕೈದಿಗಳಾಗಿದ್ದ ಯೆಹೂದ್ಯರಿಗೆ ವಿವರಿಸಿದನು
ಇದ್ರಲ್ಲಿ ಒಂದು ಯಜ್ಞವೇದಿ ಇತ್ತು, ಅದರ ಮೇಲೆ ಅನೇಕ ಪ್ರಾಣಿಗಳ ಬಲಿಯನ್ನ ಅರ್ಪಿಸಲಾಯ್ತು
ಇದು ಯೆಹೋವನ ಶುದ್ಧ ಆರಾಧನೆಯ ಮಟ್ಟಗಳನ್ನ ಎತ್ತಿ ತೋರಿಸುತ್ತಿತ್ತು
ಇದು 1919 ರಲ್ಲಿ ಶುರುವಾಗಿರೋ ಶುದ್ಧ ಆರಾಧನೆಯ ಪುನಃಸ್ಥಾಪನೆಯ ಕಡೆಗೆ ನಮ್ಮ ಗಮನ ಸೆಳೆಯುತ್ತೆ
ಆಧ್ಯಾತ್ಮಿಕ ಆಲಯ:
ಈ ಆಲಯದ ಬಗ್ಗೆ ಪೌಲನು ಇಬ್ರಿಯ ಕ್ರೈಸ್ತರಿಗೆ ತಿಳಿಸಿದನು
ಇದ್ರಲ್ಲಿ ಒಂದು ಯಜ್ಞವೇದಿ ಇತ್ತು, ಅದರ ಮೇಲೆ “ಎಲ್ಲ ಕಾಲಕ್ಕೂ ಒಂದೇ ಸಲ” ಬಲಿಯನ್ನ ಅರ್ಪಿಸಲಾಯ್ತು (ಇಬ್ರಿ. 10:10)
ಯೆಹೋವನು ಶುದ್ಧ ಆರಾಧನೆಗಾಗಿ ಯೇಸು ಕ್ರಿಸ್ತನ ಬಿಡುಗಡೆಯ ಬಲಿಯನ್ನ ಆಧಾರಿಸಿ ಮಾಡಿದ ಏರ್ಪಾಡನ್ನ ಈ ಆಲಯ ಸೂಚಿಸುತ್ತೆ. ಪವಿತ್ರ ಗುಡಾರ ಮತ್ತು ಯೆರೂಸಲೇಮಲ್ಲಿದ್ದ ದೇವಾಲಯ ಸಹ ಈ ಏರ್ಪಾಡನ್ನೇ ಸೂಚಿಸುತ್ತಿತ್ತು
ಇದು ಮಹಾ ಪುರೋಹಿತನಾಗಿ ಯೇಸು ಕ್ರಿ.ಶ. 29 ರಿಂದ 33 ರವರೆಗೆ ಮಾಡಿದ ಕೆಲಸಗಳ ಕಡೆಗೆ ನಮ್ಮ ಗಮನ ಸೆಳೆಯುತ್ತೆ