ಪಾಠ 16
ಭರವಸೆ ಮತ್ತು ಪ್ರೋತ್ಸಾಹ
ಯೋಬ 16:5
ಏನು ಮಾಡಬೇಕು: ಸಮಸ್ಯೆ ಬಗ್ಗೆ ಹೆಚ್ಚು ಮಾತಾಡದೆ ಪರಿಹಾರದ ಬಗ್ಗೆ ಮಾತಾಡಿ. ಕೇಳುಗರಲ್ಲಿ ಭರವಸೆ ಮೂಡಿಸಿ.
ಹೇಗೆ ಮಾಡಬೇಕು:
ಕೇಳುಗರ ಬಗ್ಗೆ ಒಳ್ಳೇದು ನೆನಸಿ. ಸಹೋದರ-ಸಹೋದರಿಯರು ಯೆಹೋವನಿಗೆ ಇಷ್ಟವಾಗುವ ವಿಷಯಗಳನ್ನು ಮಾಡಲು ಬಯಸುತ್ತಾರೆ ಅನ್ನುವ ಭಾವನೆಯಿಂದ ಮಾತಾಡಿ. ಬುದ್ಧಿವಾದ ಕೊಡಬೇಕಾದಾಗಲೂ ಮೊದಲು ಶ್ಲಾಘಿಸಿ.
ನಕಾರಾತ್ಮಕ ವಿಷಯಗಳ ಬಗ್ಗೆ ಹೆಚ್ಚು ಮಾತಾಡಬೇಡಿ. ನಕಾರಾತ್ಮಕ ವಿಷಯಗಳನ್ನು ಕೆಲವೊಮ್ಮೆ ಹೇಳಬೇಕಾಗುತ್ತದೆ, ಆದರೆ ಅದರ ಬಗ್ಗೆ ತುಂಬ ಹೊತ್ತು ಮಾತಾಡುವ ಆವಶ್ಯಕತೆ ಇಲ್ಲ. ಒಟ್ಟಾರೆ ನಿಮ್ಮ ಭಾಷಣದಿಂದ ಜನರಿಗೆ ಪ್ರೋತ್ಸಾಹ ಸಿಗಬೇಕು.
ದೇವರ ವಾಕ್ಯವನ್ನು ಚೆನ್ನಾಗಿ ಉಪಯೋಗಿಸಿ. ಯೆಹೋವನು ಮಾನವರಿಗಾಗಿ ಏನು ಮಾಡಿದ್ದಾನೆ, ಮಾಡುತ್ತಿದ್ದಾನೆ, ಮಾಡಲಿದ್ದಾನೆ ಅನ್ನುವುದರ ಕಡೆಗೆ ಗಮನ ಹೋಗುವಂತೆ ಮಾಡಿ. ನಿಮ್ಮ ಭಾಷಣ ಕೇಳಿ ಜನರಲ್ಲಿ ಆಶಾಕಿರಣ ಮೂಡಬೇಕು, ಧೈರ್ಯ ಬರಬೇಕು.