ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 7
  • ಸತತ ಪ್ರಯತ್ನ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸತತ ಪ್ರಯತ್ನ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪೌಲ ಏನು ಮಾಡಿದನು?
  • ನಮಗೇನು ಪಾಠ?
  • ಪೌಲನ ತರ ನೀವೂ ಮಾಡಿ
  • ದೀನತೆ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಆಸಕ್ತಿ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ತಾಳ್ಮೆ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಎಷ್ಟು ಸಮಯಾನಂತರ ಪುನರ್ಭೇಟಿ ಮಾಡಬೇಕು?
    2009 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 7

ಮತ್ತೆ ಭೇಟಿ ಮಾಡಿ

ಅಪೊಸ್ತಲ ಪೌಲ ಒಂದು ಶಾಲೆಯಲ್ಲಿದ್ದ ಸಭಾಗೃಹದಲ್ಲಿ ಜನರ ಗುಂಪಿಗೆ ಸಿಹಿಸುದ್ದಿ ಹೇಳ್ತಿದ್ದಾನೆ.

ಅಪೊಸ್ತಲರ ಕಾರ್ಯ 19:8-10

ಪಾಠ 7

ಸತತ ಪ್ರಯತ್ನ

ತತ್ವ: ‘ಅವರು ಜನ್ರಿಗೆ ಕಲಿಸ್ತಾ ಇದ್ರು. ಸಿಹಿಸುದ್ದಿಯನ್ನ ಹೇಳ್ತಾ ಇದ್ರು.’—ಅಪೊಸ್ತಲರ ಕಾರ್ಯ 5:42.

ಪೌಲ ಏನು ಮಾಡಿದನು?

ಅಪೊಸ್ತಲ ಪೌಲ ಒಂದು ಶಾಲೆಯಲ್ಲಿದ್ದ ಸಭಾಗೃಹದಲ್ಲಿ ಜನರ ಗುಂಪಿಗೆ ಸಿಹಿಸುದ್ದಿ ಹೇಳ್ತಿದ್ದಾನೆ.

ವಿಡಿಯೋ: ಪೌಲ ಎಫೆಸದಲ್ಲಿ ಬಿಡದೆ ಸಾರಿದ

1. ವಿಡಿಯೋ ನೋಡಿ ಅಥವಾ ಅಪೊಸ್ತಲರ ಕಾರ್ಯ 19:8-10 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಕೆಲವರು ವಿರೋಧ ಮಾಡಿದ್ರೂ ಆಸಕ್ತಿ ಇರೋರಿಗೆ ಸಾರೋಕೆ ಪೌಲ ಏನು ಮಾಡಿದ?

  2. ಬಿ. ಪೌಲ ಆಸಕ್ತಿ ಇರೋ ಜನರನ್ನ ಎಷ್ಟು ಸಾರಿ ಭೇಟಿ ಮಾಡಿದ? ಎಷ್ಟು ಸಮಯದ ತನಕ ಅವ್ರಿಗೆ ಕಲಿಸಿದ?

ನಮಗೇನು ಪಾಠ?

2. ಒಳ್ಳೊಳ್ಳೆ ಪುನರ್ಭೇಟಿಗಳು ಸಿಗಬೇಕಂದ್ರೆ, ಬೈಬಲ್‌ ಅಧ್ಯಯನ ಶುರು ಮಾಡಬೇಕಂದ್ರೆ ನಮ್ಮ ಸಮಯ, ಶಕ್ತಿ ಬಳಸಿ ಪ್ರಯತ್ನ ಮಾಡ್ತಾ ಇರಬೇಕು.

ಪೌಲನ ತರ ನೀವೂ ಮಾಡಿ

3. ಅವರು ಹೇಳಿದ ಸಮಯಕ್ಕೆ ಹೋಗಿ. ‘ಅವರನ್ನ ಎಲ್ಲಿ ಮತ್ತು ಯಾವಾಗ ಭೇಟಿ ಆಗೋಕೆ ನಂಗಾಗುತ್ತೆ? ಅವರಿಗೆ ಯಾವಾಗ ಆಗುತ್ತೆ?’ ಅಂತ ಕೇಳ್ಕೊಳ್ಳಿ. ಒಂದುವೇಳೆ ಅವರು ಹೇಳಿದ ಸಮಯಕ್ಕೆ ಹೋಗೋಕೆ ನಿಮಗೆ ಕಷ್ಟ ಆದ್ರೂ ನಿಮ್ಮ ಶೆಡ್ಯೂಲನ್ನ ಹೊಂದಿಸ್ಕೊಂಡು ಅವರನ್ನ ಭೇಟಿಮಾಡಿ.

4. ‘ಮತ್ತೆ ಯಾವಾಗ ಸಿಗ್ತೀರ’ ಅಂತ ಕೇಳಿ. ಪ್ರತಿ ಸಲ ಮಾತಾಡಿದಾಗ್ಲೂ ಕೊನೇಲಿ ‘ಮುಂದಿನ ಸಲ ಯಾವಾಗ ಸಿಗ್ತೀರ’ ಅಂತ ಕೇಳಿ, ಟೈಮ್‌ ಫಿಕ್ಸ್‌ ಮಾಡ್ಕೊಳ್ಳಿ. ಅದೇ ಟೈಮಿಗೆ ಅವರನ್ನ ಭೇಟಿ ಮಾಡಿ.

5. ನಿರೀಕ್ಷೆ ಕಳ್ಕೊಬೇಡಿ. ಹೋದಾಗೆಲ್ಲ ಅವರು ಮನೇಲಿ ಸಿಕ್ತಾ ಇಲ್ಲ, ಕೇಳಿದಾಗೆಲ್ಲ ಬಿಜ಼ಿ ಇರ್ತೀನಿ ಅಂತ ಹೇಳ್ತಾ ಇದ್ದಾರೆ ಅಂದ್ಕೊಳ್ಳಿ. ಹಾಗಂತ ಅವ್ರಿಗೆ ಆಸಕ್ತಿ ಇಲ್ಲ ಅಂತ ಅಂದ್ಕೊಬೇಡಿ. (1 ಕೊರಿಂ. 13:4, 7) ಅವರನ್ನ ಮತ್ತೆ ಭೇಟಿ ಮಾಡೋಕೆ ಸತತ ಪ್ರಯತ್ನ ಮಾಡ್ತಾ ಇರಿ. ಸಮಯನೂ ವ್ಯರ್ಥ ಮಾಡಬೇಡಿ.—1 ಕೊರಿಂ. 9:26.

ಇದನ್ನೂ ನೋಡಿ

ಅ. ಕಾ. 10:42; 1 ಕೊರಿಂ. 9:22, 23; 2 ಕೊರಿಂ. 4:1; ಗಲಾ. 6:9

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ