ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 3
  • ದಯೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದಯೆ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸು ಏನು ಮಾಡಿದನು?
  • ನಮಗೇನು ಪಾಠ?
  • ಯೇಸು ತರ ನೀವೂ ಮಾಡಿ
  • ಆಸಕ್ತಿ
    ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಕರುಣೆಯಿಂದ ಕೂಡಿದ ನಿಯಮ ನಿಮ್ಮನ್ನ ಪ್ರೇರಿಸಲಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ದ್ವೇಷ ತುಂಬಿರುವ ಜಗತ್ತಿನಲ್ಲಿ ದಯೆಯನ್ನು ತೋರಿಸಲು ಪ್ರಯಾಸಪಡುವುದು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
  • ದೇವಜನರು ದಯೆಯನ್ನು ಪ್ರೀತಿಸಬೇಕು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2004
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 3

ಸಂಭಾಷಣೆ ಶುರುಮಾಡಿ

ಯೇಸು ಪ್ರೀತಿಯಿಂದ ಒಬ್ಬ ಕುರುಡನನ್ನ ವಾಸಿ ಮಾಡ್ತಿದ್ದಾನೆ.

ಯೋಹಾನ 9:1-7

ಪಾಠ 3

ದಯೆ

ತತ್ವ: “ಪ್ರೀತಿ ಇರುವವನು . . . ದಯೆ ತೋರಿಸ್ತಾನೆ.” —1 ಕೊರಿಂ. 13:4.

ಯೇಸು ಏನು ಮಾಡಿದನು?

ಯೇಸು ಪ್ರೀತಿಯಿಂದ ಒಬ್ಬ ಕುರುಡನನ್ನ ವಾಸಿ ಮಾಡ್ತಿದ್ದಾನೆ.

ವಿಡಿಯೋ: ಯೇಸು ಒಬ್ಬ ಕುರುಡನನ್ನ ವಾಸಿ ಮಾಡಿದನು

1. ವಿಡಿಯೋ ನೋಡಿ ಅಥವಾ ಯೋಹಾನ 9:1-7 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಯೇಸು ಮೊದಲು ಏನು ಮಾಡಿದನು? ಕುರುಡನನ್ನ ವಾಸಿ ಮಾಡಿದ್ನಾ ಅಥವಾ ಅವನಿಗೆ ಸಿಹಿಸುದ್ದಿ ಸಾರಿದ್ನಾ?—ಯೋಹಾನ 9:35-38 ನೋಡಿ.

  2. ಬಿ. ಯೇಸು ಹೇಳಿದ್ದನ್ನ ಆ ವ್ಯಕ್ತಿ ಕೇಳಿಸ್ಕೊಳ್ಳೋಕೆ ಕಾರಣ ಏನು?

ನಮಗೇನು ಪಾಠ?

2. ಜನ್ರಿಗೆ ನಾವು ಕಾಳಜಿ ತೋರಿಸ್ತೀವಿ ಅಂತ ಅನಿಸಿದ್ರೆ ನಾವು ಹೇಳೋದನ್ನ ಅವರು ಕೇಳೋಕೆ ಮನಸ್ಸು ಮಾಡ್ತಾರೆ.

ಯೇಸು ತರ ನೀವೂ ಮಾಡಿ

3. ಒಬ್ಬ ವ್ಯಕ್ತಿಯ ಪರಿಸ್ಥಿತಿಯನ್ನ ಚೆನ್ನಾಗಿ ಅರ್ಥಮಾಡ್ಕೊಳ್ಳಿ.

  1. ಎ. ‘ಅವರ ಮನಸ್ಸಲ್ಲಿ ಏನೆಲ್ಲಾ ಓಡ್ತಿದೆ? ನಾನು ಅವ್ರಿಗೆ ಏನ್‌ ಹೇಳಿದ್ರೆ ಸಹಾಯ ಆಗುತ್ತೆ, ಖುಷಿಯಾಗುತ್ತೆ?’ ಅಂತ ಯೋಚ್ನೆ ಮಾಡಿ. ಆಗ ನಾವು ಏನೋ ದಯೆ ತೋರಿಸಬೇಕಲ್ಲ ಅಂತಲ್ಲ ಮನಸಾರೆ ದಯೆ ತೋರಿಸ್ತೀವಿ.

  2. ಬಿ. ಅವರು ಯಾವುದಾದ್ರೂ ಒಂದು ವಿಷ್ಯದ ಬಗ್ಗೆ ಅಭಿಪ್ರಾಯ ಹೇಳಿದಾಗ ಅಥವಾ ತಮ್ಮ ಕಷ್ಟನ ಹೇಳ್ಕೊಂಡಾಗ ಚೆನ್ನಾಗಿ ಕೇಳಿಸ್ಕೊಳ್ಳಿ, ವಿಷ್ಯ ಬದಲಾಯಿಸೋಕೆ ಹೋಗಬೇಡಿ. ಹೀಗೆ ಕಾಳಜಿ ತೋರಿಸಿ.

4. ಪ್ರೀತಿ ಮತ್ತು ಗೌರವದಿಂದ ಮಾತಾಡಿ. ನಮಗೆ ಜನರ ಮೇಲೆ ದಯೆ ಇದ್ರೆ, ಅವರಿಗೆ ಸಹಾಯ ಮಾಡಬೇಕು ಅಂತ ಮನಸ್ಸಿದ್ರೆ ಅದು ನಮ್ಮ ಮಾತಲ್ಲೇ ಗೊತ್ತಾಗುತ್ತೆ. ಹಾಗಾಗಿ ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಅನ್ನೋದಕ್ಕೆ ಗಮನ ಕೊಡಿ. ಅವ್ರಿಗೆ ಬೇಜಾರ್‌ ಆಗೋ ತರ ಮಾತಾಡಬೇಡಿ.

5. ಸಹಾಯ ಮಾಡಿ. ನಿಮ್ಮ ಕೈಲಾದ ಸಹಾಯ ಮಾಡೋಕೆ ಅವಕಾಶಗಳನ್ನ ಹುಡುಕ್ತಾ ಇರಿ. ಈ ತರ ಚಿಕ್ಕಪುಟ್ಟ ಸಹಾಯ ಮಾಡಿದಾಗ ಜನರು ಸಿಹಿಸುದ್ದಿ ಕೇಳೋಕೆ ಮನಸ್ಸು ಮಾಡಬಹುದು.

ಇದನ್ನೂ ನೋಡಿ

ರೋಮ. 12:15, 16; ಗಲಾ. 6:10; ಇಬ್ರಿ. 13:16

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ