ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • lmd ಪಾಠ 4
  • ದೀನತೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ದೀನತೆ
  • ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಪೌಲ ಏನು ಮಾಡಿದನು?
  • ನಮಗೇನು ಪಾಠ?
  • ಪೌಲನ ತರ ನೀವೂ ಮಾಡಿ
  • ದೀನರು ಯೆಹೋವನಿಗೆ ಅಮೂಲ್ಯರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2019
  • ಅನುಕರಿಸಲಿಕ್ಕಾಗಿ ದೈನ್ಯದ ಮಾದರಿಗಳು
    ಕಾವಲಿನಬುರುಜು—1993
  • ನಿಜವಾದ ದೀನಭಾವವನ್ನು ಬೆಳೆಸಿಕೊಳ್ಳಿರಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • ‘ನಾನು . . . ದೀನಹೃದಯದವನು’
    “ನನ್ನನ್ನು ಹಿಂಬಾಲಿಸಿರಿ”
ಇನ್ನಷ್ಟು
ಜನರನ್ನ ಪ್ರೀತಿಸಿ—ಶಿಷ್ಯರಾಗೋಕೆ ಕಲಿಸಿ
lmd ಪಾಠ 4

ಸಂಭಾಷಣೆ ಶುರುಮಾಡಿ

ಪೌಲ ಅಗ್ರಿಪ್ಪ ರಾಜ, ರಾಜ್ಯಪಾಲ ಫೆಸ್ತ ಮತ್ತು ಬೆರ್ನಿಕೆ ಮುಂದೆ ಗೌರವದಿಂದ ಮಾತಾಡ್ತಿದ್ದಾನೆ. ಅವನ ಒಂದು ಕೈಗೆ ಬೇಡಿ ಹಾಕಿದ್ದಾರೆ, ಆ ಬೇಡಿಯ ಇನ್ನೊಂದು ತುದಿಯನ್ನ ಸೈನಿಕನ ಕೈಗೆ ಹಾಕಿದ್ದಾರೆ.

ಅಪೊಸ್ತಲರ ಕಾರ್ಯ 26:2, 3

ಪಾಠ 4

ದೀನತೆ

ತತ್ವ: “ದೀನತೆ ತೋರಿಸಿ, ನಿಮಗಿಂತ ಬೇರೆಯವ್ರನ್ನ ಶ್ರೇಷ್ಠವಾಗಿ ನೋಡಿ.”—ಫಿಲಿ. 2:3.

ಪೌಲ ಏನು ಮಾಡಿದನು?

ಪೌಲ ಅಗ್ರಿಪ್ಪ ರಾಜ, ರಾಜ್ಯಪಾಲ ಫೆಸ್ತ ಮತ್ತು ಬೆರ್ನಿಕೆ ಮುಂದೆ ಗೌರವದಿಂದ ಮಾತಾಡ್ತಿದ್ದಾನೆ. ಅವನ ಒಂದು ಕೈಗೆ ಬೇಡಿ ಹಾಕಿದ್ದಾರೆ, ಆ ಬೇಡಿಯ ಇನ್ನೊಂದು ತುದಿಯನ್ನ ಸೈನಿಕನ ಕೈಗೆ ಹಾಕಿದ್ದಾರೆ.

ವಿಡಿಯೋ: ಪೌಲ ಅಗ್ರಿಪ್ಪ ರಾಜನಿಗೆ ಸಾರಿದ

1. ವಿಡಿಯೋ ನೋಡಿ ಅಥವಾ ಅಪೊಸ್ತಲರ ಕಾರ್ಯ 26:2, 3 ಓದಿ. ಆಮೇಲೆ ಈ ಪ್ರಶ್ನೆಗಳ ಬಗ್ಗೆ ಯೋಚ್ನೆ ಮಾಡಿ:

  1. ಎ. ಪೌಲ ಅಗ್ರಿಪ್ಪ ರಾಜನ ಹತ್ರ ಮಾತಾಡುವಾಗ ದೀನತೆಯನ್ನ ಹೇಗೆ ತೋರಿಸಿದ?

  2. ಬಿ. ಪೌಲ ಅಗ್ರಿಪ್ಪ ರಾಜನ ಗಮನವನ್ನ ತನ್ನ ಕಡೆಗೆ ಅಲ್ಲ, ಯೆಹೋವನ ಕಡೆಗೆ ಮತ್ತು ವಚನಗಳ ಕಡೆಗೆ ಹೇಗೆ ಸೆಳೆದ?—ಅಪೊಸ್ತಲರ ಕಾರ್ಯ 26:22 ನೋಡಿ.

ನಮಗೇನು ಪಾಠ?

2. ನಾವು ದೀನತೆಯಿಂದ, ಗೌರವದಿಂದ ಮಾತಾಡಿದ್ರೆ ಜನರು ನಾವು ಹೇಳೋ ಸಂದೇಶವನ್ನ ಕೇಳಿಸ್ಕೊಳ್ತಾರೆ.

ಪೌಲನ ತರ ನೀವೂ ಮಾಡಿ

3. ಜಂಬದಿಂದ ಮಾತಾಡಬೇಡಿ. ‘ನಮಗೇ ಎಲ್ಲ ಗೊತ್ತು, ನಿಮಗೇನೂ ಗೊತ್ತಿಲ್ಲ’ ಅನ್ನೋ ತರ ಮಾತಾಡಬೇಡಿ. ಗೌರವದಿಂದ ಮಾತಾಡಿ.

4. ನೀವು ಹೇಳೋ ವಿಷ್ಯ ಬೈಬಲಿಂದ ಅಂತ ಅವ್ರಿಗೆ ಗೊತ್ತಾಗೋ ತರ ಮಾತಾಡಿ. ಬೈಬಲಲ್ಲಿರೋ ಮಾತುಗಳಿಗೆ ಜನರ ಜೀವನವನ್ನ ಬದಲಾಯಿಸೋ ಶಕ್ತಿಯಿದೆ. ಅದಕ್ಕೇ ನಾವು ಬೈಬಲನ್ನ ಬಳಸಿದಾಗ ಅವರು ನಮ್ಮ ಮೇಲೆ ಅಲ್ಲ, ಬೈಬಲ್‌ ಮೇಲೆ ನಂಬಿಕೆ ಇಡೋಕೆ ಆಗುತ್ತೆ.

5. ಸಮಾಧಾನವಾಗಿ ಇರಿ. ನೀವು ಹೇಳಿದ್ದೇ ಸರಿ ಅನ್ನೋ ತರ ಮಾತಾಡಬೇಡಿ, ವಾದ ಮಾಡಬೇಡಿ. ದೀನತೆ ಇರೋರು ಶಾಂತವಾಗಿ ಇರ್ತಾರೆ. ಯಾವಾಗ ಮಾತನ್ನ ನಿಲ್ಲಿಸಿ, ಅಲ್ಲಿಂದ ಹೋಗಬೇಕು ಅಂತ ಅವ್ರಿಗೆ ಗೊತ್ತಿರುತ್ತೆ. (ಜ್ಞಾನೋ. 17:14; ತೀತ 3:2) ನಾವು ಈಗ ಸಮಾಧಾನವಾಗಿ ಮಾತಾಡಿದ್ರೆ ಮುಂದೊಂದು ದಿನ ಅವರು ಸಿಹಿಸುದ್ದಿಯನ್ನ ಕೇಳಿಸ್ಕೊಬಹುದು.

ಇದನ್ನೂ ನೋಡಿ

ರೋಮ. 12:16-18; 1 ಕೊರಿಂ. 8:1; 2 ಕೊರಿಂ. 3:5

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ