ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ijwex ಲೇಖನ 3
  • ನೆರವು ನೀಡಿದ ನೆರೆಯವರು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ನೆರವು ನೀಡಿದ ನೆರೆಯವರು
  • ಅನುಭವಗಳು
  • ಅನುರೂಪ ಮಾಹಿತಿ
  • ಮನಗುಂದದೆ ಇರ್ರಿ
    1991 ನಮ್ಮ ರಾಜ್ಯದ ಸೇವೆ
  • ಟೈರುಗಳು ನಿಮ್ಮ ಜೀವ ಅವುಗಳ ಮೇಲೆ ಹೊಂದಿಕೊಂಡಿರಸಾಧ್ಯವಿದೆ!
    ಎಚ್ಚರ!—2004
  • ನಾನು ಕುಡಿಯುವುದನ್ನು ಹೇಗೆ ನಿಲ್ಲಿಸಬಲ್ಲೆ?
    ಎಚ್ಚರ!—1993
  • “ನಾವಿದ್ದೇವೆ! ನಮ್ಮನ್ನು ಕಳ್ಸಿ!”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
ಇನ್ನಷ್ಟು
ಅನುಭವಗಳು
ijwex ಲೇಖನ 3
ಬಾಬ್‌ ಹೈವೇ ಬದಿಯಲ್ಲಿ ವೀಲ್‌ಚೇರ್‌ನಲ್ಲಿ ಕೂತಿದ್ದಾರೆ. ಯುವ ಸಾಕ್ಷಿಗಳು ಅವ್ರ ಗಾಡಿಯ ಟಯರನ್ನ ಬದಲಾಯಿಸ್ತಿದ್ದಾರೆ

ನೆರವು ನೀಡಿದ ನೆರೆಯವರು

ಒಂದಿನ ಬಾಬ್‌ ಅನ್ನುವವ್ರು ಕೆನಡಾದ ಆಲ್ಬರ್ಟಾದಲ್ಲಿನ ಹೈವೇಯಲ್ಲಿ ನೂರು ಕಿ.ಮೀ. ವೇಗದಲ್ಲಿ ವ್ಯಾನ್‌ ಡ್ರೈವ್‌ ಮಾಡ್ಕೊಂಡು ಹೋಗ್ತಿದ್ರು. ಆಗ ಹಿಮ ಬೀಳ್ತಾ ಜೋರಾಗಿ ಗಾಳಿ ಬೀಸ್ತಿಸ್ತು, ಕೊರೆಯೋ ಚಳಿ ಇತ್ತು. ಆಗ ಇದ್ದಕ್ಕಿದ್ದಂತೆ ವ್ಯಾನಿನ ಎಡಬದಿಯ ಹಿಂದಿನ ಟಯರ್‌ ಒಡೆದೋಯ್ತು. ಏನಾಯ್ತು ಅಂತ ಶುರುವಲ್ಲಿ ಬಾಬ್‌ಗೆ ಗೊತ್ತಾಗ್ಲಿಲ್ಲ. ಅಲ್ಲಿಂದ ಮನೆಗೆ ಐದೇ ಕಿ.ಮೀ. ಇದ್ದಿದ್ರಿಂದ ಹಾಗೇ ವ್ಯಾನನ್ನ ಓಡಿಸಿಕೊಂಡು ಹೋಗಿಬಿಡೋಣ ಅಂತ ಅಂದ್ಕೊಂಡ್ರು.

ಆಮೇಲೆ ಏನಾಯ್ತಂತ ಬಾಬ್‌ ಅವ್ರು ಅಲ್ಲಿನ ಯೆಹೋವನ ಸಾಕ್ಷಿಗಳ ರಾಜ್ಯಸಭಾಗೃಹಕ್ಕೆ ಪತ್ರ ಬರೆದು ತಿಳಿಸಿದ್ರು. ಅವ್ರು ಹೀಗೆ ಬರೆದ್ರು: “ಐದು ಜನ ಯುವಕ ಯುವತಿಯರು ಒಂದು ಕಾರಲ್ಲಿ ಹೋಗ್ತಾ ಇದ್ರು. ಅವ್ರು ತಮ್ಮ ಕಾರನ್ನ ನನ್ನ ವ್ಯಾನಿನ ಹತ್ರಕ್ಕೆ ತಂದು ಕಾರಿನ ಗ್ಲಾಸನ್ನ ಇಳಿಸಿ ‘ನಿಮ್ಮ ವ್ಯಾನಿನ ಟಯರ್‌ ಒಡೆದು ಹೋಗಿದೆ’ ಅಂತ ಹೇಳಿದ್ರು. ನಂತ್ರ ನಾವು ನಮ್ಮ ಗಾಡಿಗಳನ್ನ ರಸ್ತೆ ಬದಿಯಲ್ಲಿ ನಿಲ್ಲಿಸಿದ್ವಿ. ಅವ್ರು ನನ್ನ ವ್ಯಾನಿನ ಟಯರನ್ನ ಬದಲಾಯಿಸಿ ಕೊಡ್ತೀವಿ ಅಂತ ಹೇಳಿದ್ರು. ನನ್ನ ವ್ಯಾನಲ್ಲಿ ಸ್ಟೆಪ್ನಿ ಟಯರ್‌ ಇದ್ಯಾ, ವ್ಯಾನನ್ನ ಎತ್ತೋಕೆ ಜ್ಯಾಕ್‌ ಇದ್ಯಾ ಅಂತ ನನಗೆ ಗೊತ್ತಿರಲಿಲ್ಲ. ನಾನು ಆ ಹೈವೇಯ ಒಂದು ಬದಿಯಲ್ಲಿ ನನ್ನ ವೀಲ್‌ಚೇರಲ್ಲಿ ಕೂತ್ಕೊಂಡೆ. ಅವ್ರು ವ್ಯಾನ್‌ ಅಡಿ ಹೋಗಿ ಸ್ಟೆಪ್ನಿ ಟಯರ್‌ ಮತ್ತು ಜ್ಯಾಕ್‌ ತಗೊಂಡು ಟಯರನ್ನ ಬದಲಾಯಿಸಿದ್ರು. ಆಗ ಕೊರೆಯೋ ಚಳಿ ಇತ್ತು, ಹಿಮ ಬೀಳ್ತಾ ಇತ್ತು. ಅವ್ರು ಒಳ್ಳೇ ಬಟ್ಟೆ ಹಾಕಿಕೊಂಡಿದ್ರು. ಆದ್ರೂ ನಂಗೆ ಸಹಾಯ ಮಾಡಿದ್ರು. ಇದ್ರಿಂದ ನಂಗೆ ಸುರಕ್ಷಿತವಾಗಿ ಮನೆಗೆ ಹೋಗೋಕಾಯ್ತು. ಈ ಕೆಲ್ಸನ ನಾನು ಒಬ್ಬನೇ ಮಾಡೋಕಾಗ್ತಿರಲಿಲ್ಲ.”

“ನಂಗೆ ಸಹಾಯ ಮಾಡಿದ ಆ ಐದು ಯುವ ಸಾಕ್ಷಿಗಳಿಗೆ ತುಂಬ ಥ್ಯಾಂಕ್ಸ್‌. ಅವ್ರು ಆ ಏರಿಯಾದಲ್ಲಿ ಸಾರೋಕಂತ ಹೋಗ್ತಾ ಇದ್ರು. ಅವ್ರು ಬೇರೆಯವ್ರಿಗೆ ಏನನ್ನ ಕಲಿಸ್ತಾರೋ ಅದ್ರ ಪ್ರಕಾರ ಖಂಡಿತ ನಡಿತಾರೆ. ಆದಿನ ಅವ್ರು ನನ್ನನ್ನ ಒಂದು ದೊಡ್ಡ ಕಷ್ಟದಿಂದ ತಪ್ಪಿಸಿದ್ರು. ನಾನು ನಿಜವಾಗಿಯೂ ಅವ್ರಿಗೆ ಕೃತಜ್ಞನಾಗಿದ್ದೇನೆ. ಆ ದಿನ ಹೈವೆಯಲ್ಲಿ ದೇವದೂತರ ತರ ಯುವಜನರು ಬಂದು ಸಹಾಯ ಮಾಡ್ತಾರೆ ಅಂತ ನಾನು ಕನಸು ಮನಸ್ಸಿನಲ್ಲೂ ನೆನಸಿರಲಿಲ್ಲ.”

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ