ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g20 ನಂ. 1 ಪು. 14-15
  • ಒತ್ತಡಕ್ಕೆ ಶಾಶ್ವತ ಪರಿಹಾರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಒತ್ತಡಕ್ಕೆ ಶಾಶ್ವತ ಪರಿಹಾರ
  • ಎಚ್ಚರ!—2020
  • ಅನುರೂಪ ಮಾಹಿತಿ
  • ಪರಿವಿಡಿ
    ಎಚ್ಚರ!—2020
  • ಮಾನಸಿಕ ಒತ್ತಡ ನಿಯಂತ್ರಿಸುವುದು ಹೇಗೆ?
    ಎಚ್ಚರ!—2010
  • ದೇವರ ಸರಕಾರದಿಂದ ‘ಸಮಾಧಾನ’ ಸಾಧ್ಯ
    ಎಚ್ಚರ!—2019
  • ಹಿತಕರ ಒತ್ತಡ, ಅಹಿತಕರ ಒತ್ತಡ
    ಎಚ್ಚರ!—1998
ಇನ್ನಷ್ಟು
ಎಚ್ಚರ!—2020
g20 ನಂ. 1 ಪು. 14-15
ಒಬ್ಬ ಚಿಕ್ಕ ಹುಡುಗ ತನ್ನ ತಂದೆಯೊಂದಿಗೆ ಸಮುದ್ರದಲ್ಲಿ ಆಡುತ್ತಿದ್ದಾನೆ, ಅದನ್ನು ನೋಡಿ ಅವನ ತಾಯಿ ಮತ್ತು ಅಕ್ಕತಂಗಿ ಆನಂದಿಸುತ್ತಿದ್ದಾರೆ.

ಒತ್ತಡದಿಂದ ಹೊರಗೆ ಬನ್ನಿ

ಒತ್ತಡಕ್ಕೆ ಶಾಶ್ವತ ಪರಿಹಾರ

ಬೈಬಲ್‌ ಕೊಡೋ ಸಲಹೆಗಳನ್ನು ಪಾಲಿಸಿದರೆ ಒತ್ತಡದ ಸನ್ನಿವೇಶಗಳನ್ನು ನಿಭಾಯಿಸಲು ಸಹಾಯ ಆಗುತ್ತೆ. ಮನುಷ್ಯರಾದ ನಮಗೆ ಎಲ್ಲಾ ರೀತಿಯ ಒತ್ತಡಗಳನ್ನು ತೆಗೆದು ಹಾಕಲು ಆಗಲ್ಲ ನಿಜ. ಆದರೆ ನಮ್ಮನ್ನು ಸೃಷ್ಟಿಸಿದ ದೇವರಿಂದ ಇದು ಸಾಧ್ಯ. ಇದಕ್ಕೆ ಅಂತಾನೇ ದೇವರು ಒಬ್ಬ ವ್ಯಕ್ತಿನಾ ನೇಮಿಸಿದ್ದಾನೆ. ಅದು ಯಾರು ಗೊತ್ತಾ? ಯೇಸು ಕ್ರಿಸ್ತ. ಅವನು ಮಾನವನಾಗಿ ಭೂಮಿಯಲ್ಲಿ ಇದ್ದಾಗ ಅನೇಕ ಅದ್ಭುತಗಳನ್ನು ಮಾಡಿದ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಅದ್ಭುತಗಳನ್ನು ಮಾಡಲಿದ್ದಾನೆ. ಇದಕ್ಕೆ ಕೆಲವು ಆಧಾರಗಳು ಕೆಳಗಿವೆ:

ಯೇಸು ಎಲ್ಲಾ ರೋಗಗಳನ್ನು ಗುಣಪಡಿಸುತ್ತಾನೆ.

“ಬೇರೆ ಬೇರೆ ರೋಗಗಳಿಂದ ಮತ್ತು ಯಾತನೆಗಳಿಂದ ಬಾಧೆಪಡುತ್ತಿದ್ದವರನ್ನೂ . . . . [ಯೇಸುವಿನ] ಬಳಿಗೆ ತಂದರು ಮತ್ತು ಅವನು ಅವರನ್ನು ಗುಣಪಡಿಸಿದನು.”—ಮತ್ತಾಯ 4:24.

ಯೇಸು ಎಲ್ಲರಿಗೆ ಮನೆ ಮತ್ತು ಆಹಾರ ಕೊಡುತ್ತಾನೆ.

“ಜನರು [ಕ್ರಿಸ್ತನ ಪ್ರಜೆಗಳು] ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”—ಯೆಶಾಯ 65:21, 22.

ಯೇಸು ಇಡೀ ಭೂಮಿಯಲ್ಲಿ ಶಾಂತಿ ಮತ್ತು ಭದ್ರತೆ ತರಲಿದ್ದಾನೆ.

“ಅವನ ದಿವಸಗಳಲ್ಲಿ ನೀತಿಯು ವೃದ್ಧಿಯಾಗಲಿ; ಚಂದ್ರನಿರುವ ವರೆಗೂ ಪರಿಪೂರ್ಣಸೌಭಾಗ್ಯವಿರಲಿ. ಅವನು ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕಟ್ಟಕಡೆಯ ವರೆಗೂ ಆಳಲಿ. . . . ಅವನ ವೈರಿಗಳು ಮಣ್ಣುಮುಕ್ಕಲಿ.”—ಕೀರ್ತನೆ 72:7-9.

ಯೇಸು ಅನ್ಯಾಯವನ್ನು ತೆಗೆದುಹಾಕುತ್ತಾನೆ.

“ದೀನದರಿದ್ರರ ಮೇಲೆ ಕರುಣೆಯುಳ್ಳವನಾಗಿ ಅವರ ಪ್ರಾಣಗಳನ್ನು ಸಂತೈಸುವನು. ಕುಯುಕ್ತಿಬಲಾತ್ಕಾರಗಳಿಗೆ ತಪ್ಪಿಸಿ ಅವರನ್ನು ಕಾಯುವನು.”—ಕೀರ್ತನೆ 72:13, 14.

ಯೇಸು ಕಷ್ಟ ಮತ್ತು ಮರಣವನ್ನು ತೆಗೆದುಹಾಕುತ್ತಾನೆ.

“ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ.”—ಪ್ರಕಟನೆ 21:4.

ಇದು “ವಿಪರೀತ ಒತ್ತಡದ ಕಠಿಣ ಕಾಲ”

“ಒತ್ತಡ, ಚಿಂತೆ, ದುಃಖ, ನೋವು ಇವೆಲ್ಲಾ ಹಿಂದೆಂದಿಗಿಂತ ಈಗ ಹೆಚ್ಚಾಗುವುದನ್ನು ನಾವು ನೋಡುತ್ತಾ ಇದ್ದೀವಿ.”—ಮೊಹಮ್ಮದ್‌ ಎಸ್‌ ಯೂನಿಸ್‌, ಗ್ಯಾಲಪ್ಪಿನ ಮ್ಯಾನೇಜಿಂಗ್‌ ಎಡಿಟರ್‌.

ಒತ್ತಡ ಯಾಕೆ ಹೆಚ್ಚಾಗಿದೆ? ಇದಕ್ಕೆ ಸರಿಯಾದ ಉತ್ತರ ಬೈಬಲ್‌ ಕೊಡುತ್ತೆ. “ಕಡೇ ದಿವಸಗಳಲ್ಲಿ ವಿಪರೀತ ಒತ್ತಡ ಮತ್ತು ತೊಂದರೆಯ ಕಠಿನಕಾಲಗಳು ಬರುವವು” ಅಂತ 2 ತಿಮೊಥೆಯ 3:1 ಹೇಳುತ್ತೆ. (ದ ಆಂಪ್ಲಿಫೈಡ್‌ ಬೈಬಲ್‌) ಒತ್ತಡ ಜಾಸ್ತಿ ಆಗಕ್ಕೆ ಒಂದು ಮುಖ್ಯ ಕಾರಣ ಸುತ್ತ ಮುತ್ತ ಜನರಲ್ಲಿರುವ ಗುಣಗಳೇ ಅಂತ ಬೈಬಲ್‌ ಹೇಳುತ್ತೆ. ಈ ಗುಣಗಳಲ್ಲಿ ಕೆಲವು ಅತಿಯಾಸೆ, ಅಹಂಕಾರ, ಕಪಟತನ, ಹಿಂಸಾತ್ಮಕ ಮನೋಭಾವ, ಪ್ರೀತಿಯ ಕೊರತೆ ಮತ್ತು ಸ್ವನಿಯಂತ್ರಣದ ಕೊರತೆ. (2 ತಿಮೊಥೆಯ 3:2-5) ದೇವರ ಸರ್ಕಾರದ ಅಧಿಪತಿಯಾಗಿ ಯೇಸು ಇಡೀ ಭೂಮಿಯನ್ನು ತನ್ನ ವಶಕ್ಕೆ ತಗೊಂಡಾಗ ಈ ಕಡೇ ದಿವಸಗಳು ಕೊನೆಗೊಳ್ಳುತ್ತೆ.—ದಾನಿಯೇಲ 2:44.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ