ಬೆಲೆ ಏರಿಕೆಯ ಬರೆಗೆ ಔಷಧಿ!
ಪರಿಸ್ಥಿತಿನ ಅರ್ಥ ಮಾಡ್ಕೊಳಿ
ಕೈ ತುಂಬ ಸಂಬಳ ಬಂದ್ರೆ ನಾವು ಬೆಲೆ ಏರಿಕೆ ಬಗ್ಗೆ ತಲೆ ಕೆಡಿಸ್ಕೊಳ್ಳಲ್ಲ. ಆರಾಮಾಗಿ ಖರ್ಚು ಮಾಡ್ತೀವಿ. ಆದ್ರೆ ಸಂಬಳ ಇದ್ದಷ್ಟೇ ಇದ್ದು, ಬೆಲೆ ಮಾತ್ರ ಜಾಸ್ತಿ ಆಗ್ತಾನೇ ಇದ್ರೆ ‘ಆಕಾಶನೇ ತಲೆ ಮೇಲೆ ಬಿದ್ದಂತೆ’ ಇರುತ್ತೆ. ಅದ್ರಲ್ಲೂ ನಮಗೆ ಕುಟುಂಬ ಇದ್ರಂತೂ ‘ಹೆಂಗಪ್ಪಾ ಈ ಸ್ವಲ್ಪ ಕಾಸಲ್ಲಿ ಕುಟುಂಬನ ನಡೆಸೋದು’ ಅಂತ ಚಿಂತೆ ಆಗುತ್ತೆ.
ಬೆಲೆ ಏರಿಕೆನ ನಿಲ್ಲಿಸೋಕೆ ನಮ್ಮ ಕೈಯಲ್ಲಿ ಆಗಲ್ಲ ಅನ್ನೋದನ್ನ ನಾವು ಅರ್ಥ ಮಾಡ್ಕೊಬೇಕು. ಆಗ ಪ್ಲಾನ್ ಮಾಡಿ ಸರಿಯಾಗಿ ಜೀವನ ಮಾಡೋದು ಹೇಗೆ ಅಂತ ಕಲಿತೀವಿ. ಇದನ್ನ ಕಲಿತ್ರೆ ನಮಗೆ ಮುಂದೆ ತುಂಬ ಪ್ರಯೋಜ್ನ ಸಿಗುತ್ತೆ.
ಇದನ್ನ ತಿಳ್ಕೊಳ್ಳೋದು ಯಾಕೆ ಮುಖ್ಯ?
ಬೆಲೆ ಏರಿಕೆನ ತಡೆಯೋಕೆ ನಮ್ಮ ಕೈಯಲ್ಲಿ ಆಗಲ್ಲ ಅಂತ ಒಪ್ಕೊಂಡ್ರೆ . . .
ನಾವು ಜಾಸ್ತಿ ತಲೆ ಕೆಡಿಸ್ಕೊಳ್ಳಲ್ಲ, ಸಮಾಧಾನವಾಗಿ ಇರ್ತೀವಿ. ಹೀಗೆ ಸರಿಯಾಗಿ ಯೋಚ್ನೆ ಮಾಡಿ ಒಳ್ಳೇ ನಿರ್ಧಾರ ಮಾಡ್ತೀವಿ.
ಜಾಣತನ ತೋರಿಸ್ತೀವಿ. ಉದಾಹರಣೆಗೆ, ಸರಿಯಾದ ಟೈಮ್‌ಗೆ ಬಿಲ್‌ಗಳನ್ನ ಕಟ್ತೀವಿ. ಹೀಗೆ ದಂಡ ಕಟ್ಟೋದನ್ನ ತಪ್ಪಿಸ್ತೀವಿ, ಹಣನ ನೀರು ತರ ಖರ್ಚು ಮಾಡಲ್ಲ.
ಹಣದ ಬಗ್ಗೆ ಕುಟುಂಬದವ್ರ ಹತ್ರ ಜಗಳ ಆಡಲ್ಲ.
ಯಾವುದು ಮುಖ್ಯ ಅಂತ ತಿಳ್ಕೊಂಡು ಪ್ಲಾನ್ ಮಾಡಿ ಖರ್ಚು ಮಾಡ್ತೀವಿ.
ನೀವೇನು ಮಾಡಬಹುದು?
ಹೊಂದಾಣಿಕೆ ಮಾಡ್ಕೊಳ್ಳೋಕೆ ರೆಡಿ ಇರಿ. ಬೆಲೆ ಗಗನ ಮುಟ್ಟುತ್ತಿದ್ದಾಗ ಖರ್ಚನ್ನ ಕಮ್ಮಿ ಮಾಡೋದು ಬುದ್ಧಿವಂತರ ಲಕ್ಷಣ. ಆದ್ರೆ ಕೆಲವು ಜನ ರಾಜರ ತರ ಬದುಕೋಕೆ ಸಿಕ್ಕಾಪಟ್ಟೆ ಖರ್ಚು ಮಾಡ್ತಾರೆ. ಬೆಲೆ ಏರಿಕೆ ಜಾಸ್ತಿ ಆದಾಗ ಇವ್ರ ಪರಿಸ್ಥಿತಿ ವೇಗವಾಗಿ ಹರಿಯೋ ನದಿ ವಿರುದ್ಧ ಈಜಿದಂತೆ ಆಗಿಬಿಡುತ್ತೆ. ಈಜುತ್ತಾ ಈಜುತ್ತಾ ಇವ್ರೇ ಸುಸ್ತಾಗಿ ಬಿಡ್ತಾರೆ. ಆದ್ರೆ ಏನೇ ಆದ್ರೂ ನಿಮ್ಮ ಕುಟುಂಬನ ನೋಡ್ಕೊಳ್ಳೋದು ನಿಮ್ಮ ಕರ್ತವ್ಯ ಅಂತ ನೆನಪಿಡಿ! ಹಾಗಂತ ಕೆಲಸದಲ್ಲೇ ಮುಳುಗಬೇಡಿ. ದುಡ್ಡಿಗಿಂತ ನಿಮ್ಮ ಕುಟುಂಬಕ್ಕೆ ನೀವು ಕೊಡೋ ಸಮಯ ಮತ್ತು ಪ್ರೀತಿ ತುಂಬ ಮುಖ್ಯ!
ರಾಜನ ತರ ಬದುಕಬೇಕು ಅಂತ ಕೆಲವರು ಸಿಕ್ಕಾಪಟ್ಟೆ ಖರ್ಚು ಮಾಡ್ತಾರೆ. ಆದ್ರೆ ಇವ್ರ ಪರಿಸ್ಥಿತಿ ವೇಗವಾಗಿ ಹರಿಯೋ ನದಿ ವಿರುದ್ಧ ಈಜಿದಂತೆ ಇರುತ್ತೆ