ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • g25 ನಂ. 1 ಪು. 6-9
  • ಯೋಚ್ನೆ ಮಾಡಿ ಖರ್ಚು ಮಾಡಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೋಚ್ನೆ ಮಾಡಿ ಖರ್ಚು ಮಾಡಿ
  • ಎಚ್ಚರ!—2025
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಇದನ್ನ ತಿಳ್ಕೊಳ್ಳೋದು ಯಾಕೆ ಮುಖ್ಯ?
  • ನೀವೇನು ಮಾಡಬಹುದು?
  • ಕಮ್ಮಿ ಕಾಸಲ್ಲಿ ಬಂಪರ್‌ ಬದುಕು
    ಇತರ ವಿಷಯಗಳು
  • 2 | ಜೀವನರೀತಿಯನ್ನು ಕಾಪಾಡಿಕೊಳ್ಳಿ
    ಎಚ್ಚರ!—2022
  • ಹಣವನ್ನು ಬುದ್ಧಿವಂತಿಕೆಯಿಂದ ಹೇಗೆ ಖರ್ಚುಮಾಡಲಿ?
    ಎಚ್ಚರ!—2010
  • ಆದಾಯಕ್ಕೆ ತಕ್ಕಂತೆ ಜೀವನ ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2012
ಇನ್ನಷ್ಟು
ಎಚ್ಚರ!—2025
g25 ನಂ. 1 ಪು. 6-9

ಬೆಲೆ ಏರಿಕೆಯ ಬರೆಗೆ ಔಷಧಿ!

ಯೋಚ್ನೆ ಮಾಡಿ ಖರ್ಚು ಮಾಡಿ

ಬೆಲೆ ಏರಿಕೆ ನಮ್ಮೆಲ್ರ ಬದುಕಲ್ಲಿ ಬರೆ ಎಳೆದಿದೆ. ಆದ್ರೆ, ಬೇರೆ ದಾರಿನೇ ಇಲ್ಲದೆ ನೀವು ಇದ್ರಲ್ಲಿ ಬೆಂದು ಹೋಗಬೇಕು ಅಂತೇನಿಲ್ಲ. ಯೋಚ್ನೆ ಮಾಡಿ ಖರ್ಚು ಮಾಡಿದ್ರೆ ನಿಮ್ಮ ಪರಿಸ್ಥಿತಿನ ನೀವು ಸುಧಾರಿಸಬಹುದು.

ಇದನ್ನ ತಿಳ್ಕೊಳ್ಳೋದು ಯಾಕೆ ಮುಖ್ಯ?

ನೀವು ಕಣ್ಮುಚ್ಚಿ ಖರ್ಚು ಮಾಡ್ತಾ ಹೋದ್ರೆ, ನಿಮ್ಮ ಹತ್ರ ಇರೋ ಹಣ ಎಲ್ಲ ನೀರಿನ ತರ ಖರ್ಚು ಆಗಿ ಹೋಗುತ್ತೆ. ಆಗ ಚಿಂತೆ, ಒತ್ತಡ ಜಾಸ್ತಿ ಆಗಿ ಬಿಡುತ್ತೆ. ಆದ್ರೆ ನಿಮ್ಮ ಹತ್ರ ಸ್ವಲ್ಪನೇ ಹಣ ಇದ್ರೂ ಚೆನ್ನಾಗಿ ಪ್ಲಾನ್‌ ಮಾಡೋದಾದ್ರೆ ನಿಮ್ಮ ಪರಿಸ್ಥಿತಿನ ನೀವು ಬದಲಾಯಿಸಬಹುದು.

ನೀವೇನು ಮಾಡಬಹುದು?

ಹಾಸಿಗೆ ಇದ್ದಷ್ಟೇ ಕಾಲು ಚಾಚಿ. ನೀವಿದನ್ನ ಮಾಡಿದ್ರೆ ಯೋಚ್ನೆ ಮಾಡಿ ಖರ್ಚು ಮಾಡ್ತೀರ. ಆಗ ದಿಢೀರ್‌ ಅಂತ ಯಾವುದೇ ಖರ್ಚು ಬಂದ್ರೂ ನಿಮ್ಮ ಕೈಯಲ್ಲಿ ಸ್ವಲ್ಪ ಕಾಸು ಇರುತ್ತೆ.

ಹಾಸಿಗೆ ಇದ್ದಷ್ಟೇ ಕಾಲು ಚಾಚೋಕೆ ಏನು ಮಾಡಬೇಕು? ಒಂದು ಬಜೆಟ್‌ ಮಾಡಬೇಕು. ಅಂದ್ರೆ ಒಂದು ತಿಂಗಳಿಗೆ ನಿಮಗೆ ಎಷ್ಟು ಆದಾಯ ಬರುತ್ತೆ, ಎಷ್ಟು ಖರ್ಚು ಆಗುತ್ತೆ ಅಂತ ಬರೀಬೇಕು. ಖರ್ಚು ಬಗ್ಗೆ ಬರೀವಾಗ ನಿಜವಾಗಿ ನಿಮಗೆ ಆ ತಿಂಗಳಲ್ಲಿ ಏನು ಬೇಕಿದ್ಯೋ ಅದನ್ನ ಮಾತ್ರ ಬರೀಬೇಕು. ಒಂದುವೇಳೆ, ವಸ್ತುಗಳ ಬೆಲೆ ಅಥವಾ ನಿಮ್ಮ ಆದಾಯದಲ್ಲಿ ಏನಾದ್ರೂ ಬದಲಾವಣೆ ಆದ್ರೆ ಅದಕ್ಕೆ ತಕ್ಕಂತೆ ನಿಮ್ಮ ಬಜೆಟ್‌ನ ಹೊಂದಿಸ್ಕೊಬೇಕು. ಒಂದುವೇಳೆ ನಿಮಗೆ ಮದುವೆ ಆಗಿರೋದಾದ್ರೆ ಹಣಕಾಸಿನ ಬಗ್ಗೆ ನೀವು ಯಾವುದೇ ನಿರ್ಧಾರ ಮಾಡೋ ಮುಂಚೆ ನಿಮ್ಮ ಸಂಗಾತಿ ಹತ್ರ ಅದ್ರ ಬಗ್ಗೆ ಮಾತಾಡಬೇಕು ಅಂತ ನೆನಪಿಡಿ.

ಹೀಗೆ ಮಾಡಿ ನೋಡಿ: ಸಾಲಕ್ಕೆ (EMI) ವಸ್ತುಗಳನ್ನ ಕೊಡ್ತಾರೆ ಅಂತ ಮುಗಿಬಿದ್ದು ತಗೊಳ್ಳೋಕೆ ಹೋಗಬೇಡಿ. ಸಾಲ ಮಾಡದೆ, ಇರೋ ದುಡ್ಡಲ್ಲೇ ವಸ್ತುಗಳನ್ನ ತಗೊಂಡ್ರೆ ತುಂಬ ಪ್ರಯೋಜ್ನ ಇದೆ. ಹೀಗೆ ಮಾಡಿದ್ರೆ ‘ನೀವು ಮಾಡಿರೋ ಬಜೆಟ್‌ ಪ್ರಕಾರ ನಡ್ಕೊಬಹುದು. ಸಾಲದ ಸುಳಿಯಿಂದ ತಪ್ಪಿಸ್ಕೊಬಹುದು’ ಅಂತ ಕೆಲವರು ಹೇಳ್ತಾರೆ. ಇದ್ರ ಜೊತೆಗೆ ನೀವು ಆಗಿಂದಾಗ್ಗೆ ನಿಮ್ಮ ಬ್ಯಾಂಕ್‌ ಸ್ಟೇಟ್‌ಮೆಂಟ್‌ ನೋಡ್ತಾ ಇರಬೇಕು. ಇಲ್ಲಿವರೆಗೂ ಎಷ್ಟು ಖರ್ಚು ಮಾಡಿದ್ದೀರ, ಇನ್ನು ಎಷ್ಟು ಉಳಿದಿದೆ ಮತ್ತು ಮುಂದೆ ಹೇಗೆ ಜೀವನ ಮಾಡಬೇಕು ಅಂತ ಅದ್ರಿಂದ ನಿಮಗೆ ಗೊತ್ತಾಗುತ್ತೆ. ಆಗ ನಿಮಗೆ ಜಾಸ್ತಿ ಒತ್ತಡ ಆಗಲ್ಲ.

ಹಾಸಿಗೆ ಇದ್ದಷ್ಟೇ ಕಾಲು ಚಾಚೋದು ಹೇಳಿದಷ್ಟು ಸುಲಭ ಅಲ್ಲ ಅಂತ ನಿಮಗೆ ಅನಿಸಬಹುದು. ಆದ್ರೆ ಚೆನ್ನಾಗಿ ಯೋಚ್ನೆ ಮಾಡಿ ಬಜೆಟ್‌ ಮಾಡಿದ್ರೆ, ಅದ್ರ ಪ್ರಕಾರ ಖರ್ಚು ಮಾಡಿದ್ರೆ ನಿಮಗೇ ಸಹಾಯ ಆಗುತ್ತೆ. ನಿಮ್ಮ ಹಣನ ಜಾಣತನದಿಂದ ಹೇಗೆ ಖರ್ಚು ಮಾಡಬೇಕು ಅಂತ ತಿಳ್ಕೊತೀರ.

“ಹಣ ಇದ್ಯಾ ಇಲ್ವಾ ಅಂತ ಮೊದಲು ಕೂತು ಲೆಕ್ಕ ಹಾಕಲ್ವಾ?”—ಲೂಕ 14:28.


ಕೆಲಸ ಕಳ್ಕೊಬೇಡಿ. ಇರೋ ಕೆಲ್ಸಾನ ಕಳ್ಕೊಂಡ್ರೆ ತುಂಬ ಕಷ್ಟ ಆಗಬಹುದು. ಹಾಗಾದ್ರೆ ಕೆಲಸನ ಕಳ್ಕೊಳ್ಳದೆ ಇರೋಕೆ ಏನು ಮಾಡಬೇಕು? ಹೀಗೆ ಮಾಡಿ: ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಿ, ಕೆಲಸದ ಬಗ್ಗೆ ತಪ್ಪಾಗಿ ಯೋಚ್ನೆ ಮಾಡಬೇಡಿ. ಏನೇ ಕೆಲಸ ಇದ್ರು ಮುಂದೆ ಹೋಗಿ ಅದನ್ನ ಮಾಡಿ. ಕಷ್ಟಪಟ್ಟು ಕೆಲಸ ಮಾಡಿ, ಎಲ್ರ ಜೊತೆ ಗೌರವದಿಂದ ನಡ್ಕೊಳ್ಳಿ. ಕಂಪನಿ ಹೇಳೋ ರೂಲ್ಸ್‌ನ ಫಾಲೋ ಮಾಡಿ. ನಿಮ್ಮ ಕೆಲಸಕ್ಕೆ ಬೇಕಾಗೋ ಕೌಶಲ್ಯನ ಬೆಳೆಸ್ಕೊಳ್ತಾ ಇರಿ.


ಹಣನ ವೇಸ್ಟ್‌ ಮಾಡ್ಬೇಡಿ. ಇವತ್ತು ತುಂಬ ಜನ ಬೆವರು ಸುರಿಸಿ ದುಡಿದಿರೋ ಹಣನ ಡ್ರಗ್ಸ್‌ ತಗೊಳೋದ್ರಲ್ಲಿ, ಜೂಜಾಡೋದ್ರಲ್ಲಿ, ಸಿಗರೇಟ್‌ ಸೇದೋದ್ರಲ್ಲಿ ಮತ್ತು ಕುಡಿಯೋದ್ರಲ್ಲಿ ಕಳೆದು ಬಿಡ್ತಾರೆ. ಈ ಕೆಟ್ಟ ಅಭ್ಯಾಸಗಳಿಂದ ಅವ್ರ ಆರೋಗ್ಯನ ಹಾಳು ಮಾಡ್ಕೊಳ್ತಾರೆ. ಅಲ್ಲದೇ ಇರೋ ಕೆಲಸಾನೂ ಕಳ್ಕೊಳ್ತಾರೆ. ಹಾಗಾಗಿ ನೀವು ನಿಮ್ಮನ್ನೇ ಹೀಗೆ ಕೇಳ್ಕೊಳ್ಳಿ, ‘ನಾನು ಹಣನ ಬೇಕಾಬಿಟ್ಟಿ ಖರ್ಚು ಮಾಡ್ತೀನಾ? ನನಗೆ ಈ ತರ ಕೆಟ್ಟ ಅಭ್ಯಾಸಗಳಿದ್ಯಾ?’

“ವಿವೇಚನಾ ಶಕ್ತಿಯನ್ನ ಸಂಪಾದಿಸುವವನು ಖುಷಿಯಾಗಿ ಇರ್ತಾನೆ . . . ಬೆಳ್ಳಿ ಪಡಿಯೋದಕ್ಕಿಂತ ವಿವೇಕ ಪಡಿಯೋದು ಒಳ್ಳೆದು.”—ಜ್ಞಾನೋಕ್ತಿ 3:13, 14.


ಕಷ್ಟ ಕಾಲಕ್ಕೆ ಅಂತ ಎತ್ತಿಡಿ. “ಹನಿ ಹನಿ ಕೂಡಿದ್ರೆ ಹಳ್ಳ” ಅನ್ನೋ ತರ ನಿಮ್ಮ ಕೈಲಾದಾಗ ಸ್ವಲ್ಪ-ಸ್ವಲ್ಪ ಹಣನ ಎತ್ತಿಡಿ. ಆಗ ನಿಮ್ಮ ಕಷ್ಟ ಕಾಲಕ್ಕೆ ಅದು ಸಹಾಯ ಮಾಡುತ್ತೆ. ನಿಮ್ಮ ಕುಟುಂಬದವ್ರಲ್ಲಿ ಯಾರಿಗಾದ್ರೂ ಕಾಯಿಲೆ ಬಂದ್ರೆ, ನೀವೇ ಕೆಲಸ ಕಳ್ಕೊಂಡ್ರೆ ಅಥವಾ ದಿಢೀರ್‌ ಅಂತ ಒಂದು ಕಷ್ಟ ಬಂದ್ರೆ ಅದು ಸ್ವಲ್ಪ ಮಟ್ಟಿಗೆ ನಿಮಗೆ ಸಹಾಯ ಮಾಡುತ್ತೆ.

“ನೆನಸದ ಸಮಯದಲ್ಲಿ ಅನಿರೀಕ್ಷಿತ ಘಟನೆಗಳು ಎಲ್ರ ಜೀವನದಲ್ಲೂ ನಡಿಯುತ್ತೆ.”—ಪ್ರಸಂಗಿ 9:11.

ಕಾಸು ಕೂಡಿಸೋಕೆ ಸಲಹೆ . . .

ಹೊರಗಡೆ ಜಾಸ್ತಿ ತಿನ್ನಬೇಡಿ.

ಆಗಾಗ ಹೋಟೆಲ್‌ಗೆ ಹೋಗಿ ಊಟ ಮಾಡಿದ್ರೆ ತುಂಬ ಹಣ ಖರ್ಚಾಗುತ್ತೆ. ಅದ್ರ ಬದಲು ಮನೆಯಲ್ಲೇ ಅಡುಗೆ ಮಾಡಿದ್ರೆ ಹಣ ಉಳಿಸಬಹುದು. ಇದಕ್ಕೆ ಟೈಮ್‌ ಮತ್ತು ಪ್ರಯತ್ನ ಬೇಕಾಗುತ್ತೆ ನಿಜ. ಆದ್ರೆ ನೀವು ಈ ತರ ಮಾಡಿದ್ರೆ ಆರೋಗ್ಯವಾಗಿರೋ ಕ್ವಾಲಿಟಿ ಆಹಾರನ ಮನೆಯಲ್ಲೇ ತಿನ್ನಬಹುದು.

ಯೋಚ್ನೆ ಮಾಡಿ ಶಾಪಿಂಗ್‌ ಮಾಡಿ.

  • ಏನೆಲ್ಲ ಸಾಮಾನು ಬೇಕು ಅಂತ ಲಿಸ್ಟ್‌ ಮಾಡಿ. ಕಣ್ಣಿಗೆ ಬಿದ್ದಿದ್ದನ್ನೆಲ್ಲ ತಗೊಳ್ಳಬೇಡಿ.

  • ಆಫರ್‌ ಇದ್ಯಾ ಅಂತ ಮೊದಲು ನೋಡಿ. ನಿಮ್ಮತ್ರ ಸ್ವಲ್ಪ ಜಾಸ್ತಿ ಹಣ ಇದ್ರೆ ಮತ್ತು ನಿಮಗೆ ಬೇಕಾದ ವಸ್ತುಗಳು ಕಮ್ಮಿ ಬೆಲೆಗೆ ಸಿಗುತ್ತೆ ಅಂದ್ರೆ ಒಂದೇ ಸಲ ಜಾಸ್ತಿ ತಗೊಳ್ಳಿ. ಆದ್ರೆ ಈ ವಸ್ತುಗಳನ್ನ ಸ್ಟೋರ್‌ ಮಾಡೋಕೆ ನಿಮ್ಮತ್ರ ಜಾಗ ಇರಬೇಕು, ಇಲ್ಲಾಂದ್ರೆ ಅದೆಲ್ಲ ಹಾಳಾಗುತ್ತೆ.

  • ಕಮ್ಮಿ ಕಾಸಿಗೆ ಒಳ್ಳೆ ಕ್ವಾಲಿಟಿ ವಸ್ತು ಸಿಕ್ಕಿದ್ರೆ ತಗೊಳ್ಳಿ, ಬ್ರ್ಯಾಂಡ್‌ ಬಗ್ಗೆ ಜಾಸ್ತಿ ಯೋಚ್ನೆ ಮಾಡಬೇಡಿ.

  • ನೇರವಾಗಿ ಅಂಗಡಿಗೆ ಹೋದ್ರೆ ಕಣ್ಣಿಗೆ ಬಿದ್ದಿದ್ದೆಲ್ಲ ತಗೊಬೇಕು ಅನಿಸುತ್ತೆ. ಅದ್ರ ಬದಲು ಆನ್‌ಲೈನಲ್ಲಿ ಶಾಪಿಂಗ್‌ ಮಾಡಿ, ಅಲ್ಲಿ ಒಳ್ಳೆ ಆಫರ್‌ ಸಿಗಬಹುದು. ನಿಮಗೆ ಬೇಡದಿರೋದನ್ನ ಯಾವಾಗ ಬೇಕಾದ್ರೂ ಕ್ಯಾನ್ಸಲ್‌ ಮಾಡಬಹುದು.

  • ಒಂದು ವಸ್ತುನ ತಗೊಳೋಕೆ ಮುಂಚೆ ಎರಡು ಮೂರು ಅಂಗಡಿಯಲ್ಲಿ ಅದ್ರ ಬೆಲೆ ವಿಚಾರಿಸಿ, ಹೋಲಿಸಿ ನೋಡಿ. ಈ ತರ ಮಾಡಿದ್ರೆ ಚಿಕ್ಕಪುಟ್ಟ ವಸ್ತುಗಳಲ್ಲೂ ನೀವು ಸ್ವಲ್ಪ ಹಣ ಉಳಿಸಬಹುದು.

ಹೊಸ ವಸ್ತು ತಗೊಳ್ಳೋ ಮುಂಚೆ ಯೋಚ್ನೆ ಮಾಡಿ.

“ಹೊಸ ಫೋನ್‌, ಲೇಟೆಸ್ಟ್‌ ಟಿವಿ, ಹೊಚ್ಚ ಹೊಸ ಕಾರು” ಅಂತ ಕಂಪನಿಯವರು ಒಂದಲ್ಲಾ ಒಂದು ಜಾಹೀರಾತು ಕೊಡ್ತಾನೇ ಇರ್ತಾರೆ. ಅವ್ರಿಗೆ ಲಾಭ ಮಾಡೋದು ಮಾತ್ರನೇ ಯೋಚ್ನೆ. ಆದ್ರೆ ಖರ್ಚು ಮಾಡೋದು ನೀವು ಅಲ್ವಾ? ಅದಕ್ಕೆ “ಈ ಹೊಸ ಫೀಚರ್‌ ಇರೋ ಫೋನ್‌ ನನಗೆ ಬೇಕಾ?” “ಇದ್ರಿಂದ ನಿಜವಾಗ್ಲೂ ನನಗೆ ಅಷ್ಟು ಪ್ರಯೋಜ್ನ ಆಗುತ್ತಾ? ಇದನ್ನ ತಗೊಂಡಿಲ್ಲ ಅಂದ್ರೆ ನಂಗೇನಾದ್ರೂ ನಷ್ಟ ಆಗುತ್ತಾ?” ಅಂತ ಯೋಚ್ನೆ ಮಾಡಿ.

ರಿಪೇರಿ ಮಾಡಿ.

ನಿಮ್ಮ ಹತ್ರ ಇರೋ ವಸ್ತುಗಳು ಜಾಸ್ತಿ ಕಾಲ ಬಾಳಿಕೆ ಬರಬೇಕಂದ್ರೆ ಅವುಗಳನ್ನ ನೀವು ಚೆನ್ನಾಗಿ ನೋಡ್ಕೊಬೇಕು. ಒಂದು ವಸ್ತು ಕೆಟ್ಟು ಹೋದ್ರೆ ಪಟ್‌ ಅಂತ ಹೊಸದು ತಗೊಳ್ಳೋ ಬದಲು ಕಡಿಮೆ ಕಾಸಲ್ಲೇ ಆಗುತ್ತೆ ಅಂದ್ರೆ ಅದನ್ನೇ ರಿಪೇರಿ ಮಾಡಿ ಮತ್ತೆ ಬಳಕೆ ಮಾಡಿ. ಯಾವಾಗ್ಲೂ ಹೊಸದು ತಗೊಳೋ ಬದಲು ಸೆಕೆಂಡ್‌ ಹ್ಯಾಂಡ್‌ ವಸ್ತುಗಳನ್ನ ತಗೊಂಡ್ರೆ ನೀವು ಹಣ ಉಳಿಸಬಹುದು ಅಂತ ನೆನಪಿಡಿ.

ತರಕಾರಿನ ನೀವೇ ಬೆಳೀರಿ.

ತರಕಾರಿ ಬೆಳೆಯೋಕೆ ನೀವು ಮನೆ ಹತ್ರ ಸ್ವಲ್ಪ ಜಾಗ ಮಾಡ್ಕೊಳೋಕೆ ಆಗುತ್ತಾ ಅಂತ ಯೋಚ್ನೆ ಮಾಡಿ. ಇಲ್ಲಾಂದ್ರೆ ತರಕಾರಿ ತಗೊಳ್ಳೋಕೆ ಜಾಸ್ತಿ ಖರ್ಚಾಗುತ್ತೆ. ಹೆಚ್ಚು ತರಕಾರಿ ಬೆಳೆದ್ರೆ ಅದನ್ನ ಬೇರೆವ್ರಿಗೆ ಕೊಡಬಹುದು ಅಥವಾ ನೀವೇ ಮಾರಬಹುದು.

“ಕಷ್ಟಪಟ್ಟು ಕೆಲಸ ಮಾಡುವವನ ಯೋಜನೆಗಳು ಯಶಸ್ಸು ಪಡಿಯುತ್ತೆ.”—ಜ್ಞಾನೋಕ್ತಿ 21:5.

“ನಾವು ಯಾವಾಗ್ಲೂ ತಗೊಳ್ಳೋ ವಸ್ತುಗಳ ಬೆಲೆ ಎಷ್ಟು ಅಂತ ಆಗಾಗ ಚೆಕ್‌ ಮಾಡ್ತಾ ಇರ್ತೀವಿ. ನಮ್ಮ ಕ್ರೆಡಿಟ್‌ ಕಾರ್ಡ್‌ನ ಯಾವುದಕ್ಕೆ ಬಳಸ್ತಿದ್ದೀವಿ, ಹೇಗೆ ಬಳಸ್ತಿದ್ದೀವಿ ಅಂತಾನೂ ಚೆಕ್‌ ಮಾಡ್ತಾ ಇರ್ತೀವಿ.”—ಮೈಲ್ಸ್‌, ಇಂಗ್ಲೆಂಡ್‌.

“ನಾವು ಸಾಮಾನು ತರೋಕೆ ಹೋಗೋ ಮುಂಚೆ ಏನೆಲ್ಲಾ ಬೇಕು ಅಂತ ಒಂದು ಲಿಸ್ಟ್‌ ಮಾಡ್ತೀವಿ.”—ಜೆರೆಮಿ, ಅಮೆರಿಕ.

“ನಾವು ಮಾಡಿರೋ ಬಜೆಟ್‌ ಅಲ್ಲಿ ಏನಾದ್ರೂ ಹೊಂದಾಣಿಕೆ ಮಾಡಬೇಕಾ ಅಂತ ನಾವು ಆಗಾಗ ಚೆಕ್‌ ಮಾಡ್ತಾ ಇರ್ತೀವಿ. ಕಷ್ಟ ಕಾಲಕ್ಕೆ ಅಂತ ಒಂದು ಸ್ವಲ್ಪ ಕಾಸು ಕೂಡ ಎತ್ತಿಡ್ತೀವಿ.”—ಯಾಯೆಲ್‌, ಇಸ್ರೇಲ್‌.

“ಮನೆಯಲ್ಲಿರೋ ವಸ್ತುಗಳು ಕೆಟ್ಟು ಹೋದ್ರೆ ಹೊಸದು ತಗೊಳ್ಳೋದ್ರ ಬದಲು ಅದನ್ನ ರಿಪೇರಿ ಮಾಡೋದು ಹೇಗೆ ಅಂತ ನಮ್ಮ ಮಕ್ಕಳಿಗೆ ಹೇಳ್ಕೊಟ್ಟಿದ್ದೀವಿ. ನಮ್ಮ ಕಾರು ಮತ್ತೆ ಮನೇಲಿರೋ ವಸ್ತುಗಳನ್ನ ರಿಪೇರಿ ಮಾಡೋದು ಹೇಗೆ ಅಂತಾನೂ ಕಲ್ಸಿದ್ದೀವಿ. ನಾನು ಮತ್ತೆ ನನ್ನ ಹೆಂಡ್ತಿನೂ ಹೊಸ ಮಾಡೆಲ್‌ ವಸ್ತುಗಳನ್ನ ತಗೊಳ್ಳೋದ್ರ ಬಗ್ಗೆ ಯೋಚ್ನೆ ಮಾಡೋಕೆ ಹೋಗಲ್ಲ.”—ಜೆಫ್ರೀ, ಅಮೆರಿಕ.

“ನಾನೇ ತರಕಾರಿನ ಬೆಳಿತಿದ್ದೀನಿ, ಕೋಳಿ ಮರಿಗಳನ್ನ ಸಾಕ್ತಿದ್ದೀನಿ. ಇದ್ರಿಂದ ಸ್ವಲ್ಪ ಹಣ ಉಳಿಸೋಕಾಗಿದೆ. ನನ್ನ ಹತ್ರ ಬೆಳೆದಿರೋ ತರಕಾರಿಗಳನ್ನ ನಾನು ಬೇರೆಯವ್ರಿಗೂ ಕೊಡ್ತೀನಿ.”—ಹೊನೊ, ಮಯನ್ಮಾರ್‌.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ