ಭಾಗ 4
ತನ್ನ ಉದ್ದೇಶಗಳ ಕುರಿತು ದೇವರು ನಮಗೆ ಅರುಹುತ್ತಾನೆ
1, 2. ಯಥಾರ್ಥವಾಗಿ ಕೇಳುವವರಿಗೆ ದೇವರು ಉತ್ತರವನ್ನು ಒದಗಿಸುವನು ಎಂಬುದನ್ನು ನಮಗೆ ತಿಳಿದಿರುವುದು ಹೇಗೆ?
ಪ್ರೀತಿಯ ಒಬ್ಬ ದೇವರು ಅವನನ್ನು ಹುಡುಕುವ ಯಥಾರ್ಥವಂತರಿಗೆ ತನ್ನ ಉದ್ದೇಶಗಳನ್ನು ಖಂಡಿತವಾಗಿಯೂ ಪ್ರಕಟಿಸುತ್ತಾನೆ. ಅವನು ಕಷ್ಟಾನುಭವವನ್ನು ಅನುಮತಿಸಿರುವದರ ಕಾರಣದಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ವಿಚಾರಿಸುವ ಮಾನವರಿಗೆ ಆತನು ಒದಗಿಸುತ್ತಾನೆ.
2 ಬೈಬಲ್ ತಿಳಿಸುವುದು: “ನೀನು ಆತನನ್ನು [ದೇವರನ್ನು] ಹುಡುಕುವದಾದರೆ ಆತನು ನಿನಗೆ ಸಿಕ್ಕುವನು.” “ಆದರೆ ರಹಸ್ಯಗಳನ್ನು ವ್ಯಕ್ತಿಗೊಳಿಸುವ ಒಬ್ಬನಿದ್ದಾನೆ, ಆತನು ದೇವರು, ಪರಲೋಕದಲ್ಲಿದ್ದಾನೆ.” “[ಸಾರ್ವಭೌಮ, NW] ಕರ್ತನಾದ ಯೆಹೋವನು ತನ್ನ ಸೇವಕರಾದ ಪ್ರವಾದಿಗಳಿಗೆ ತನ್ನ ರಹಸ್ಯವನ್ನು ತಿಳಿಸದೆ ಏನೂ ಮಾಡನು.”—1 ಪೂರ್ವಕಾಲವೃತ್ತಾಂತ 28:9; ದಾನಿಯೇಲ 2:28; ಆಮೋಸ 3:7.
ಉತ್ತರಗಳು ಎಲ್ಲಿವೆ?
3. ದೇವರು ಕಷ್ಟಾನುಭವವನ್ನು ಯಾಕೆ ಅನುಮತಿಸುತ್ತಾನೆ ಎಂಬುದನ್ನು ನಾವು ಎಲ್ಲಿಂದ ಕಂಡುಕೊಳ್ಳುವೆವು?
3 ದೇವರು ಕಷ್ಟಾನುಭವವನ್ನು ಯಾಕೆ ಅನುಮತಿಸಿದ್ದಾನೆ ಮತ್ತು ಅದರ ಕುರಿತಾಗಿ ಅವನು ಏನು ಮಾಡಲಿರುವನು ಎಂಬಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ನಮ್ಮ ಪ್ರಯೋಜನಕ್ಕಾಗಿ ಅವನು ಪ್ರೇರಿಸಿದ ದಾಖಲೆಯಲ್ಲಿ ನಾವು ಕಂಡುಕೊಳ್ಳುತ್ತೇವೆ. ಆ ದಾಖಲೆಯು ಆತನ ವಾಕ್ಯವಾದ ಪವಿತ್ರ ಬೈಬಲ್. “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ. ಅದರಿಂದ ದೇವರ ಮನುಷ್ಯನು ಪ್ರವೀಣನಾಗಿ ಸಕಲಸತ್ಕಾರ್ಯಕ್ಕೆ ಸನ್ನದ್ಧನಾಗುವನು.”—2 ತಿಮೊಥೆಯ 3:16, 17.
4, 5. ಬೈಬಲನ್ನು ಒಂದು ಅಸದೃಶ ಪುಸ್ತಕವನ್ನಾಗಿ ಮಾಡುವುದು ಯಾವುದು?
4 ಬೈಬಲ್ ನಿಜವಾಗಿಯೂ ಒಂದು ಅಸದೃಶವಾದ ಪುಸ್ತಕವಾಗಿದೆ. ಅದರಲ್ಲಿ ಮಾನವ ಇತಿಹಾಸದ ಅತಿ ನಿಖರವಾದ ದಾಖಲೆಯು ಇದೆ ಮತ್ತು ಅದು ಮಾನವರ ನಿರ್ಮಾಣಕ್ಕಿಂತಲೂ ಮುಂದಕ್ಕೆ ಹೋಗುತ್ತದೆ. ಅದು ಸದ್ಯೋಚಿತವೂ ಆಗಿದೆ ಏಕೆಂದರೆ ಅದರ ಪ್ರವಾದನೆಗಳು ನಮ್ಮ ಕಾಲದ ಘಟನೆಗಳಿಗೂ ಸಮೀಪ ಭವಿಷ್ಯದ ಘಟನೆಗಳಿಗೂ ಸಂಬಂಧಿಸಿವೆ.
5 ಐತಿಹಾಸಿಕ ನಿಖರತೆಗಾಗಿ ಅಂತಹ ರುಜುವಾತು ಪತ್ರಗಳು ಬೇರೆ ಯಾವುದೇ ಪುಸ್ತಕಕ್ಕೆ ಇಲ್ಲ. ಉದಾಹರಣೆಗೆ, ಪುರಾತನ ಶ್ರೇಷ್ಠ ಲೇಖಕರ ಕೇವಲ ಕೆಲವೇ ಹಸ್ತಪ್ರತಿಗಳು ಅಸ್ತಿತ್ವದಲ್ಲಿವೆ. ಆದರೆ ಬೈಬಲಿನ ಅನೇಕ ಹಸ್ತಪ್ರತಿಗಳು, ಕೆಲವು ಅಂಶಿಕವಾಗಿ ಮತ್ತು ಕೆಲವು ಪೂರ್ಣವಾಗಿ ಅಸ್ತಿತ್ವದಲ್ಲಿವೆ: ಹೀಬ್ರು ಶಾಸ್ತ್ರಗ್ರಂಥಗಳ (“ಹಳೇ ಒಡಂಬಡಿಕೆ”ಯ 39 ಪುಸ್ತಕಗಳು) ಸುಮಾರು 6,000 ಮತ್ತು ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥಗಳ (“ಹೊಸ ಒಡಂಬಡಿಕೆ”ಯ 27 ಪುಸ್ತಕಗಳು) ಸುಮಾರು 13,000 ಹಸ್ತಪ್ರತಿಗಳು ಇವೆ.
6. ದೇವರು ಅದನ್ನು ಪ್ರೇರಿಸಿದಾಗ ಹೇಗಿತ್ತೋ ಮೂಲತಃ ಹಾಗೆಯೇ ಇಂದು ಬೈಬಲ್ ಇದೆ ಎಂದು ನಾವು ಹೇಗೆ ನಿಶ್ಚಯದಿಂದಿರಬಲ್ಲೆವು?
6 ಬೈಬಲನ್ನು ಪ್ರೇರಿಸಿದ ಸರ್ವಶಕ್ತ ದೇವರು ಆ ಹಸ್ತಪ್ರತಿಗಳ ನಕಲುಗಳಲ್ಲಿ ಅದರ ಮೂಲಪಾಠದ ಯಥಾರ್ಥತ್ವವು ಕಾಪಾಡಲ್ಪಡುವಂತೆ ನೋಡಿಕೊಂಡಿದ್ದಾನೆ. ಆದುದರಿಂದ ಇಂದು ನಮ್ಮ ಬೈಬಲುಗಳು ಸಾರಭೂತವಾಗಿ ಮೂಲ ಪ್ರೇರಿತ ಬರಹಗಳಂತೆಯೇ ಇವೆ. ಇದನ್ನು ಗಣ್ಯ ಮಾಡಲು ನಮಗೆ ಸಹಾಯ ಮಾಡುವ ಇನ್ನೊಂದು ಅಂಶವೇನಂದರೆ ಕ್ರೈಸ್ತ ಗ್ರೀಕ್ ಶಾಸ್ತ್ರಗ್ರಂಥಗಳ ಕೆಲವು ಹಸ್ತಪ್ರತಿ ನಕಲುಗಳು ಮೂಲ ಬರೆವಣಿಗೆಯ ಸಮಯದಿಂದ ಕೇವಲ ಒಂದು ನೂರು ವರ್ಷಗಳಷ್ಟು ಮಾತ್ರ ಹಿಂದಕ್ಕೆ ಹೋಗುತ್ತದೆಂಬುದೇ. ಪುರಾತನ ಲೌಕಿಕ ಲೇಖಕರ ಇನ್ನೂ ಅಸ್ತಿತ್ವದಲ್ಲಿರುವ ಕೆಲವೇ ಹಸ್ತಪ್ರತಿ ನಕಲುಗಳು ಮೂಲ ಗ್ರಂಥಕರ್ತರುಗಳ ಸಮಯದಿಂದ ಹಲವಾರು ಶತಮಾನಗಳೊಳಗೂ ಬರುವುದು ವಿರಳ.
ದೇವರ ಕೊಡುಗೆ
7. ಬೈಬಲಿನ ಪ್ರಸಾರವು ಎಷ್ಟೊಂದು ವ್ಯಾಪಕವಾಗಿದೆ?
7 ಇತಿಹಾಸದಲ್ಲಿ ಬೈಬಲ್ ಅತಿ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಪುಸ್ತಕ. ಸುಮಾರು 300 ಕೋಟಿ ಪ್ರತಿಗಳು ಮುದ್ರಿಸಲ್ಪಟ್ಟಿವೆ. ಇನ್ಯಾವ ಪುಸ್ತಕವೂ ಆ ಸಂಖ್ಯೆಗೆ ಸಮೀಪ ಸಹ ಬರುವುದಿಲ್ಲ. ಮತ್ತು ಬೈಬಲ್ ಯಾ ಅದರ ಭಾಗಗಳು ಕೆಲವು 2,000 ಭಾಷೆಗಳಲ್ಲಿ ತರ್ಜುಮೆಗೊಂಡಿವೆ. ಹೀಗೆ ನಮ್ಮ ಗ್ರಹದ ಜನಸಂಖ್ಯೆಯ 98 ಪ್ರತಿಶತಕ್ಕೆ ಬೈಬಲನ್ನು ಓದುವ ಅವಕಾಶವಿದೆ.
8-10. ನಮ್ಮ ಪರೀಕ್ಷಣೆಗೆ ಬೈಬಲ್ ಯಾಕೆ ಅರ್ಹವಾಗಿದೆ ಎಂಬುದಕ್ಕೆ ಕೆಲವು ಕಾರಣಗಳು ಯಾವುವು?
8 ದೇವರಿಂದ ಬಂದದ್ದು ಮತ್ತು ಪ್ರಾಮಾಣ್ಯದ ಬಾಹ್ಯ ಮತ್ತು ಆಂತರಿಕ ಎಲ್ಲಾ ರುಜುವಾತುಗಳು ಇವೆ ಎಂದು ವಾದಿಸುವ ಪುಸ್ತಕವೊಂದು ಖಂಡಿತವಾಗಿಯೂ ನಮ್ಮ ಪರೀಕ್ಷೆಗೆ ಅರ್ಹವಾಗಿದೆ.a ಅದು ಜೀವಿತದ ಉದ್ದೇಶವನ್ನು, ಲೋಕದ ಪರಿಸ್ಥಿತಿಗಳ ಅರ್ಥವನ್ನು, ಮತ್ತು ಭವಿಷ್ಯದಲ್ಲೇನಿದೆ ಎಂಬುದನ್ನು ವಿವರಿಸುತ್ತದೆ. ಬೇರೆ ಯಾವುದೇ ಪುಸ್ತಕವು ಅದನ್ನು ಮಾಡಶಕ್ತವಲ್ಲ.
9 ಹೌದು, ಬೈಬಲ್ ಮಾನವ ಕುಲಕ್ಕೆ ದೇವರ ಸಂದೇಶವಾಗಿದೆ. ಆತನ ಕಾರ್ಯಕಾರೀ ಶಕ್ತಿ, ಯಾ ಆತ್ಮದ ಮೂಲಕ, ಸುಮಾರು 40 ಮಾನವರು ದಾಖಲೆಯನ್ನು ಮಾಡುವುದರೊಂದಿಗೆ ಅವನು ಅದರ ಬರೆವಣಿಗೆಯನ್ನು ಮಾರ್ಗದರ್ಶಿಸಿದನು. ಹೀಗೆ ದೇವರು ತನ್ನ ವಾಕ್ಯವಾದ ಪವಿತ್ರ ಬೈಬಲಿನ ಮೂಲಕ ನಮ್ಮೊಡನೆ ಮಾತಾಡುತ್ತಾನೆ. ಅಪೊಸ್ತಲ ಪೌಲನು ಬರೆದದ್ದು: “ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿ”ದ್ದೀರಿ.—1 ಥೆಸಲೊನೀಕ 2:13.
10 ಅಮೆರಿಕದ 16ನೆಯ ಅಧ್ಯಕ್ಷರಾದ ಅಬ್ರಹಾಮ್ ಲಿಂಕನರು ಬೈಬಲನ್ನು “ಮನುಷ್ಯನಿಗೆ ದೇವರು ಕೊಟ್ಟಂತವುಗಳೆಲ್ಲದರಲ್ಲಿ ಅತ್ಯಂತ ಶ್ರೇಷ್ಠ ಕೊಡುಗೆ . . . ಅದಿಲ್ಲದಿರುತ್ತಿದ್ದರೆ ತಪ್ಪಿನಿಂದ ಸರಿಯನ್ನು ನಾವು ತಿಳಿಯ ಶಕ್ತರಾಗುತ್ತಿದ್ದಿಲ್ಲ” ಎಂದು ಕರೆದರು. ಹಾಗಾದರೆ ಈಗ, ಕಷ್ಟಾನುಭವವು ಹೇಗೆ ಆರಂಭವಾಯಿತು, ಯಾಕೆ ಅದನ್ನು ದೇವರು ಅನುಮತಿಸಿದನು, ಮತ್ತು ಅದರ ಕುರಿತು ಅವನೇನು ಮಾಡಲಿರುವನು ಎಂಬುದರ ಕುರಿತು ಈ ಅತ್ಯುತ್ಕೃಷ್ಟ ಕೊಡುಗೆಯು ನಮಗೆ ಏನನ್ನು ತಿಳಿಸುತ್ತದೆ?
[ಪಾದಟಿಪ್ಪಣಿಗಳು]
a ಬೈಬಲಿನ ಪ್ರಾಮಾಣ್ಯದ ಕುರಿತು ಇನ್ನೂ ಹೆಚ್ಚಿನ ವಿವರಣಾತ್ಮಕ ಸಮಾಚಾರಕ್ಕಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್, ಸಂಘಟಿತ ಇವರಿಂದ 1989 ರಲ್ಲಿ ಪ್ರಕಾಶಿಸಲ್ಪಟ್ಟ ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಪುಸ್ತಕವನ್ನು ನೋಡಿರಿ.
[ಪುಟ 10ರಲ್ಲಿರುವ ಚಿತ್ರ]
ದೇವರಿಂದ ಪ್ರೇರಿತವಾದ ಬೈಬಲು, ಮಾನವ ಕುಟುಂಬಕ್ಕೆ ಅವನ ಸಂದೇಶವಾಗಿದೆ