ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp16 ನಂ. 3 ಪು. 3
  • ಸಾವಿನ ನೋವಿಗೆ ಸಾಂತ್ವನದ ಮದ್ದು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾವಿನ ನೋವಿಗೆ ಸಾಂತ್ವನದ ಮದ್ದು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಅನುರೂಪ ಮಾಹಿತಿ
  • ಇತರರು ಹೇಗೆ ಸಹಾಯ ಮಾಡಬಲ್ಲರು?
    ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ
  • “ಅಳುವವರೊಂದಿಗೆ ಅಳಿರಿ”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2017
  • ನಾನು ನನ್ನ ದುಃಖದೊಂದಿಗೆ ಹೇಗೆ ಜೀವಿಸಬಲ್ಲೆ?
    ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ
  • ದುಃಖದಿಂದ ಹೊರಗೆ ಬರೋದು ಹೇಗೆ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
wp16 ನಂ. 3 ಪು. 3
ಅಳುತ್ತಿರುವ ಮಹಿಳೆ

ಮುಖಪುಟ ಲೇಖನ

ಸಾವಿನ ನೋವಿಗೆ ಸಾಂತ್ವನದ ಮದ್ದು

“ಆಗೋದೆಲ್ಲಾ ಒಳ್ಳೇದಕ್ಕೆ. ಅಳಬೇಡ ಮಗಳೇ. . . ”

ಪ್ರಣೀತಳa ತಂದೆ ಕಾರ್‌ ಅಪಘಾತದಲ್ಲಿ ತೀರಿಕೊಂಡಿದ್ದರು. ಶವಸಂಸ್ಕಾರಕ್ಕೆ ಬಂದಿದ್ದ ಮಹಿಳೆಯೊಬ್ಬಳು ಈ ಮಾತುಗಳನ್ನು ಹೇಳಿದರು.

ಪ್ರಣೀತಳಿಗೆ ಸಾಂತ್ವನ ಹೇಳಲೆಂದು ಆಪ್ತರೊಬ್ಬರು ಈ ಮಾತುಗಳನ್ನು ಹೇಳಿದರು. ಆದರೆ ಅದು ಪ್ರಣೀತಳಿಗೆ ನೆಮ್ಮದಿ ಕೊಡುವ ಬದಲು ತುಂಬ ನೋವು ಕೊಟ್ಟಿತು. ಎಷ್ಟರ ಮಟ್ಟಿಗೆಂದರೆ ಅನೇಕ ವರ್ಷಗಳಾದ ಮೇಲೆ ಆ ಘಟನೆ ಬಗ್ಗೆ ಬರೆಯುವಾಗಲೂ ಅವಳ ಕಣ್ಣೀರ ಕಟ್ಟೆ ಒಡೆಯಿತು. ಅವಳು ತನ್ನೊಳಗೆ “ನನ್ನಪ್ಪ ಸತ್ತು ಒಳ್ಳೇದಾಗಿಲ್ಲ” ಎಂದು ಕೊರಗುತ್ತಿದ್ದಳು. ಯಾಕೆಂದರೆ ಅವಳು ತನ್ನ ತಂದೆ ಮೇಲೆ ಪ್ರಾಣನೇ ಇಟ್ಟುಕೊಂಡಿದ್ದಳು.

ಪ್ರಣೀತಳಂತೆ ಅನೇಕರಿಗೆ ಸಾವಿನ ದುಃಖದಿಂದ ಹೊರಬರಲು ತುಂಬಾ ಸಮಯ ಬೇಕಾಗುತ್ತದೆ. ಅದರಲ್ಲೂ ಪ್ರೀತಿಪಾತ್ರರು ತೀರಿಹೋದಾಗಂತೂ ತುಂಬಾ ತುಂಬಾ ಸಮಯ ಹಿಡಿಯುತ್ತದೆ. ಅದಕ್ಕೇ ಬೈಬಲ್‌, ಸಾವನ್ನು “ಕೊನೆಯ ಶತ್ರು” ಎಂದು ಹೇಳುತ್ತದೆ. (1 ಕೊರಿಂಥ 15:26) ಸಾವು ಮತ್ತು ಅದು ತರುವ ನೋವು ನಮ್ಮ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ. ಇದ್ದಕ್ಕಿದ್ದಂತೆ ಸಾವು ನಮ್ಮ ಪ್ರಿಯರೊಬ್ಬರನ್ನು ಕಿತ್ತುಕೊಂಡಾಗ ಅದು ಅರಗಿಸಿಕೊಳ್ಳಲಾಗದ ವಿಷಯ. ಇಂಥ ನೋವು, ಸಂಕಟದಿಂದ ಯಾರೂ ತಪ್ಪಿಸಿಕೊಳ್ಳಲು ಆಗುವುದಿಲ್ಲ. ಇದು ಸಹಜ.

‘ಈ ನೋವು, ನೆನಪುಗಳು ನನ್ನನ್ನ ಎಷ್ಟು ದಿನ ಕಾಡುತ್ತೆ? ಹೇಗೆ ಸಮಾಧಾನ ಮಾಡಿಕೊಳ್ಳಲಿ? ಆಪ್ತರನ್ನು ಕಳೆದುಕೊಂಡು ದುಃಖದಲ್ಲಿರುವವರಿಗೆ ಹೇಗೆ ಸಮಾಧಾನ ಹೇಳಲಿ? ತೀರಿಹೋಗಿರುವ ನಮ್ಮ ಪ್ರೀತಿಪಾತ್ರರು ಮತ್ತೆ ಬದುಕುತ್ತಾರಾ?’ ನಿಮಗೂ ಈ ಪ್ರಶ್ನೆಗಳು ಬಂದಿದೆಯಾ? (w16-E No. 3)

a ಹೆಸರುಗಳನ್ನು ಬದಲಿಸಲಾಗಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ