ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb17 ಜೂನ್‌ ಪು. 8
  • ಸಾರುವ ಕೆಲಸದಲ್ಲಿ ಸಂತೋಷ ಕಂಡುಕೊಳ್ಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸಾರುವ ಕೆಲಸದಲ್ಲಿ ಸಂತೋಷ ಕಂಡುಕೊಳ್ಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಅನುರೂಪ ಮಾಹಿತಿ
  • ಸಿಹಿಸುದ್ದಿಯನ್ನ ಯಾರು ಸಾರುತ್ತಿದ್ದಾರೆ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ‘ಹೆಚ್ಚು ಉತ್ತಮವಾದ ವಿಷಯದ ಶುಭವರ್ತಮಾನವನ್ನು ತರುವುದು’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2005
  • “ಯೆಹೋವನನ್ನು ಸಂತೋಷದಿಂದ ಸೇವಿಸಿರಿ”
    2003 ನಮ್ಮ ರಾಜ್ಯದ ಸೇವೆ
  • ಆನಂದ—ನಾವು ದೇವರಿಂದ ಪಡೆಯುವ ಗುಣ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
mwb17 ಜೂನ್‌ ಪು. 8

ನಮ್ಮ ಕ್ರೈಸ್ತ ಜೀವನ

ಸಾರುವ ಕೆಲಸದಲ್ಲಿ ಸಂತೋಷ ಕಂಡುಕೊಳ್ಳಿ

ಸುವಾರ್ತೆ ಸಾರುವುದು ನಿಮಗೆ ಎಂದಾದರೂ ಕಷ್ಟ ಅನಿಸಿದೆಯಾ? ನಮ್ಮಲ್ಲಿ ಅನೇಕರು ಈ ಪ್ರಶ್ನೆಗೆ ‘ಹೌದು’ ಅಂತ ಹೇಳಬಹುದು. ಯಾಕೆ? ಕೆಲವೊಮ್ಮೆ ನಮ್ಮ ಟೆರಿಟೊರಿಯಲ್ಲಿ ಜನರು ಆಸಕ್ತಿ ತೋರಿಸದೇ ಇರಬಹುದು, ವಿರೋಧಿಸಿರಬಹುದು ಅಥವಾ ಅಪರಿಚಿತರ ಹತ್ತಿರ ಮಾತಾಡಲು ನಮಗೇ ಭಯ ಆಗಿರಬಹುದು. ಇದರಿಂದ ಸಾರುವುದರಲ್ಲಿ ಸಂತೋಷ ಕಳೆದುಕೊಳ್ಳಬಹುದು. ಆದರೆ ನಾವು ಆರಾಧಿಸುವ ದೇವರು ಸಂತೋಷದ ದೇವರಾಗಿದ್ದು, ನಾವು ಆತನ ಸೇವೆಯನ್ನು ಸಂತೋಷದಿಂದ ಮಾಡಬೇಕು ಎಂದು ಆತನು ಬಯಸುತ್ತಾನೆ. (ಕೀರ್ತ 100:2; 1ತಿಮೊ 1:11) ಸಾರುವುದರಲ್ಲಿ ಸಂತೋಷವನ್ನು ಕಂಡುಕೊಳ್ಳಲು ಮೂರು ಕಾರಣಗಳಿವೆ. ಅವು ಯಾವುವು?

ಒಂದು, ನಾವು ಸಾರುತ್ತಿರುವುದು ನಿರೀಕ್ಷೆಯ ಸಂದೇಶವನ್ನು. ಇಂದು ಜನರಲ್ಲಿ ನಿರೀಕ್ಷೆ ಕಣ್ಮರೆಯಾಗುತ್ತಿದ್ದರೂ ನಾವು “ಶುಭದ ಸುವಾರ್ತೆಯನ್ನು” ಜನರಿಗೆ ತಿಳಿಸುತ್ತಿದ್ದೇವೆ. (ಯೆಶಾ 52:7) ದೇವರ ರಾಜ್ಯದ ಸುವಾರ್ತೆ ನಮಗೂ ಸಂತೋಷ ತರುತ್ತದೆ. ಆದ್ದರಿಂದ ಸುವಾರ್ತೆ ಸಾರಲು ಹೋಗುವ ಮುಂಚೆ ದೇವರ ರಾಜ್ಯ ಭೂಮಿಯ ಮೇಲೆ ತರುವ ಆಶೀರ್ವಾದಗಳ ಕುರಿತು ಸ್ವಲ್ಪ ಯೋಚಿಸಿ.

ಎರಡು, ನಾವು ತಿಳಿಸುವ ಸುವಾರ್ತೆಯು ಜನರಿಗೆ ಶಾರೀರಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಪ್ರಯೋಜನ ತರುತ್ತದೆ. ಅವರು ಕೆಟ್ಟ ಅಭ್ಯಾಸಗಳನ್ನು ಬಿಟ್ಟುಬಿಟ್ಟು ನಿತ್ಯಜೀವದ ನಿರೀಕ್ಷೆಯನ್ನು ಹೇಗೆ ಪಡೆಯುವುದೆಂದು ಕಲಿಯುತ್ತಾರೆ. (ಯೆಶಾ 48:17, 18; ರೋಮ 1:16) ಸಾರುವ ಕೆಲಸ, ಅಪಾಯಕ್ಕೆ ಒಳಗಾಗಿರುವವರನ್ನು ಹುಡುಕಿ ಸಂರಕ್ಷಿಸುವ ಕೆಲಸದಂತಿದೆ. ಕೆಲವರಿಗೆ ರಕ್ಷಣೆ ಪಡೆಯುವುದು ಇಷ್ಟವಿರುವುದಿಲ್ಲ. ಆದರೆ ನಾವು, ಯಾರು ರಕ್ಷಣೆಯನ್ನು ಪಡೆಯಲು ಬಯಸುತ್ತಾರೋ ಅಂಥವರಿಗಾಗಿ ಹುಡುಕುತ್ತಾ ಇರುತ್ತೇವೆ.—ಮತ್ತಾ 10:11-14.

ಮೂರು, ಸಾರುವ ಕೆಲಸವು ಮುಖ್ಯವಾಗಿ ಯೆಹೋವನಿಗೆ ಮಹಿಮೆ ತರುತ್ತದೆ. ಆತನು ನಮ್ಮ ಈ ಕೆಲಸವನ್ನು ತುಂಬಾ ಮಾನ್ಯ ಮಾಡುತ್ತಾನೆ. (ಯೆಶಾ 43:10; ಇಬ್ರಿ 6:10) ಅಲ್ಲದೆ, ಈ ಕೆಲಸವನ್ನು ಮಾಡಲು ಆತನು ತನ್ನ ಪವಿತ್ರಾತ್ಮವನ್ನು ಧಾರಾಳವಾಗಿ ಕೊಡುತ್ತಾನೆ. ಹಾಗಾಗಿ ಪವಿತ್ರಾತ್ಮ ಫಲವಾದ ಆನಂದಕ್ಕಾಗಿ ನಾವು ಪ್ರಾರ್ಥಿಸಬೇಕು. (ಗಲಾ 5:22) ಆತನ ಸಹಾಯದಿಂದ ನಾವು ಭಯವನ್ನು ಮೆಟ್ಟಿನಿಂತು ಧೈರ್ಯದಿಂದ ಸುವಾರ್ತೆ ಸಾರಬಹುದು. (ಅಕಾ 4:31) ಆಗ ನಮ್ಮ ಟೆರಿಟೊರಿಯ ಜನರು ಹೇಗೇ ಪ್ರತಿಕ್ರಿಯಿಸಲಿ ನಾವು ಸುವಾರ್ತೆ ಸಾರುವುದರಲ್ಲಿ ಸಂತೋಷ ಪಡೆಯುತ್ತೇವೆ.—ಯೆಹೆ 3:3.

ಸಾರುವ ಕೆಲಸದಲ್ಲಿ ತೋರಿಸಲಾದ ಎರಡು ಭಿನ್ನ ಮನೋಭಾವ—ಅಸಂತೋಷ ಮತ್ತು ಸಂತೋಷ

ಸುವಾರ್ತೆಯ ಕಡೆಗೆ ಯಾವ ಮನೋಭಾವ ಇಟ್ಟುಕೊಳ್ಳಲು ನೀವು ಬಯಸುತ್ತೀರಿ? ನೀವು ಸೇವೆಯಲ್ಲಿ ಸಂತೋಷವನ್ನು ಹೇಗೆ ತೋರಿಸುತ್ತೀರಿ?

ಅಧ್ಯಯನ ಮತ್ತು ಧ್ಯಾನದ ಮೂಲಕ ಸಂತೋಷವನ್ನು ಮತ್ತೆ ಪಡೆದುಕೊಳ್ಳಿ ಎಂಬ ವಿಡಿಯೋ ಹಾಕಿ, ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:

  • ನಾವು ಸೇವೆಯಲ್ಲಿ ಪ್ರತಿ ತಿಂಗಳು ಹೆಚ್ಚಿನ ಸಮಯ ಕಳೆಯುವುದಾದರೂ ನಮ್ಮ ವೈಯಕ್ತಿಕ ಅಧ್ಯಯನಕ್ಕೆ ಪ್ರಾಮುಖ್ಯತೆ ಕೊಡಬೇಕು ಏಕೆ?

  • ನಾವು ಯಾವ ವಿಧದಲ್ಲಿ ಮರಿಯಳನ್ನು ಅನುಕರಿಸಬೇಕು?

  • ದೇವರ ವಾಕ್ಯವನ್ನು ನೀವು ಯಾವಾಗ ಧ್ಯಾನಿಸುತ್ತೀರಿ?

  • ಸುವಾರ್ತೆ ಸಾರುವಾಗ ಯಾವ ವಿಷಯ ನಿಮಗೆ ಸಂತೋಷ ತರುತ್ತದೆ?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ