ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಯೆಹೋಶುವ 18
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಯೆಹೋಶುವ ಮುಖ್ಯಾಂಶಗಳು

      • ಉಳಿದ ಪ್ರದೇಶಗಳನ್ನ ಶೀಲೋನಲ್ಲಿ ಹಂಚ್ಕೊಟ್ರು (1-10)

      • ಬೆನ್ಯಾಮೀನನ ಆಸ್ತಿ (11-28)

ಯೆಹೋಶುವ 18:1

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:51; 22:9; ನ್ಯಾಯ 21:19
  • +1ಸಮು 1:3; 4:3; ಕೀರ್ತ 78:60; ಯೆರೆ 7:12; ಅಕಾ 7:44, 45
  • +ಅರ 14:8; ಧರ್ಮೋ 7:22; 33:29

ಯೆಹೋಶುವ 18:2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2021,

ಯೆಹೋಶುವ 18:3

ಮಾರ್ಜಿನಲ್ ರೆಫರೆನ್ಸ್

  • +ಅರ 33:53, 55

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ ರೆಫರೆನ್ಸ್‌ಗಳು, 11/2021,

ಯೆಹೋಶುವ 18:5

ಮಾರ್ಜಿನಲ್ ರೆಫರೆನ್ಸ್

  • +ಅರ 34:13; ಯೆಹೋ 19:51
  • +ಯೆಹೋ 15:1
  • +ಯೆಹೋ 16:1, 4

ಯೆಹೋಶುವ 18:6

ಮಾರ್ಜಿನಲ್ ರೆಫರೆನ್ಸ್

  • +ಅರ 26:55; 33:54; ಯೆಹೋ 14:2; ಜ್ಞಾನೋ 16:33; ಅಕಾ 13:19

ಯೆಹೋಶುವ 18:7

ಮಾರ್ಜಿನಲ್ ರೆಫರೆನ್ಸ್

  • +ಅರ 18:20; ಯೆಹೋ 13:33
  • +ಧರ್ಮೋ 10:9; 18:1
  • +ಧರ್ಮೋ 3:12, 13

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    9/15/2011, ಪು. 7-8

ಯೆಹೋಶುವ 18:8

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 19:51; ನ್ಯಾಯ 21:19

ಯೆಹೋಶುವ 18:10

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:33
  • +ಅರ 33:54; ಅಕಾ 13:19

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಜೀವನ ಮತ್ತು ಸೇವೆ ಕೂಟದ ಕೈಪಿಡಿ,

    11/2021, ಪು. 2

ಯೆಹೋಶುವ 18:11

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:1
  • +ಯೆಹೋ 16:1

ಯೆಹೋಶುವ 18:12

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 2:1; 16:1
  • +ಯೆಹೋ 7:2

ಯೆಹೋಶುವ 18:13

ಮಾರ್ಜಿನಲ್ ರೆಫರೆನ್ಸ್

  • +ಆದಿ 28:18, 19
  • +ಯೆಹೋ 10:11; 21:20, 22
  • +ಯೆಹೋ 16:5

ಯೆಹೋಶುವ 18:14

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:9

ಯೆಹೋಶುವ 18:15

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:9, 12

ಯೆಹೋಶುವ 18:16

ಪಾದಟಿಪ್ಪಣಿ

  • *

    ಅಕ್ಷ. “ಹಿನ್ನೋಮನ ಮಗನ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:8, 12; ಯೆರೆ 7:31; 19:2; ಮತ್ತಾ 5:22
  • +ಧರ್ಮೋ 2:11
  • +ಯೆಹೋ 15:63
  • +ಯೆಹೋ 15:7, 12; 1ಅರ 1:9

ಯೆಹೋಶುವ 18:17

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:7, 12
  • +ಯೆಹೋ 15:6, 12
  • +ಧರ್ಮೋ 19:14

ಯೆಹೋಶುವ 18:19

ಪಾದಟಿಪ್ಪಣಿ

  • *

    ಅದು, “ಮೃತ ಸಮುದ್ರ.”

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:6, 12
  • +ಅರ 34:12

ಯೆಹೋಶುವ 18:22

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 15:6, 12
  • +ಆದಿ 12:8; 1ಅರ 12:28, 29

ಯೆಹೋಶುವ 18:24

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 21:8, 17

ಯೆಹೋಶುವ 18:25

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 9:16, 17; 1ಅರ 3:4

ಯೆಹೋಶುವ 18:28

ಮಾರ್ಜಿನಲ್ ರೆಫರೆನ್ಸ್

  • +2ಸಮು 21:14
  • +ಯೆಹೋ 15:8, 12; 1ಪೂರ್ವ 11:4; 2ಪೂರ್ವ 3:1
  • +1ಸಮು 10:26

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಯೆಹೋ. 18:1ಯೆಹೋ 19:51; 22:9; ನ್ಯಾಯ 21:19
ಯೆಹೋ. 18:11ಸಮು 1:3; 4:3; ಕೀರ್ತ 78:60; ಯೆರೆ 7:12; ಅಕಾ 7:44, 45
ಯೆಹೋ. 18:1ಅರ 14:8; ಧರ್ಮೋ 7:22; 33:29
ಯೆಹೋ. 18:3ಅರ 33:53, 55
ಯೆಹೋ. 18:5ಅರ 34:13; ಯೆಹೋ 19:51
ಯೆಹೋ. 18:5ಯೆಹೋ 15:1
ಯೆಹೋ. 18:5ಯೆಹೋ 16:1, 4
ಯೆಹೋ. 18:6ಅರ 26:55; 33:54; ಯೆಹೋ 14:2; ಜ್ಞಾನೋ 16:33; ಅಕಾ 13:19
ಯೆಹೋ. 18:7ಅರ 18:20; ಯೆಹೋ 13:33
ಯೆಹೋ. 18:7ಧರ್ಮೋ 10:9; 18:1
ಯೆಹೋ. 18:7ಧರ್ಮೋ 3:12, 13
ಯೆಹೋ. 18:8ಯೆಹೋ 19:51; ನ್ಯಾಯ 21:19
ಯೆಹೋ. 18:10ಜ್ಞಾನೋ 16:33
ಯೆಹೋ. 18:10ಅರ 33:54; ಅಕಾ 13:19
ಯೆಹೋ. 18:11ಯೆಹೋ 15:1
ಯೆಹೋ. 18:11ಯೆಹೋ 16:1
ಯೆಹೋ. 18:12ಯೆಹೋ 2:1; 16:1
ಯೆಹೋ. 18:12ಯೆಹೋ 7:2
ಯೆಹೋ. 18:13ಆದಿ 28:18, 19
ಯೆಹೋ. 18:13ಯೆಹೋ 10:11; 21:20, 22
ಯೆಹೋ. 18:13ಯೆಹೋ 16:5
ಯೆಹೋ. 18:14ಯೆಹೋ 15:9
ಯೆಹೋ. 18:15ಯೆಹೋ 15:9, 12
ಯೆಹೋ. 18:16ಯೆಹೋ 15:8, 12; ಯೆರೆ 7:31; 19:2; ಮತ್ತಾ 5:22
ಯೆಹೋ. 18:16ಧರ್ಮೋ 2:11
ಯೆಹೋ. 18:16ಯೆಹೋ 15:63
ಯೆಹೋ. 18:16ಯೆಹೋ 15:7, 12; 1ಅರ 1:9
ಯೆಹೋ. 18:17ಯೆಹೋ 15:7, 12
ಯೆಹೋ. 18:17ಯೆಹೋ 15:6, 12
ಯೆಹೋ. 18:17ಧರ್ಮೋ 19:14
ಯೆಹೋ. 18:19ಯೆಹೋ 15:6, 12
ಯೆಹೋ. 18:19ಅರ 34:12
ಯೆಹೋ. 18:22ಯೆಹೋ 15:6, 12
ಯೆಹೋ. 18:22ಆದಿ 12:8; 1ಅರ 12:28, 29
ಯೆಹೋ. 18:24ಯೆಹೋ 21:8, 17
ಯೆಹೋ. 18:25ಯೆಹೋ 9:16, 17; 1ಅರ 3:4
ಯೆಹೋ. 18:282ಸಮು 21:14
ಯೆಹೋ. 18:28ಯೆಹೋ 15:8, 12; 1ಪೂರ್ವ 11:4; 2ಪೂರ್ವ 3:1
ಯೆಹೋ. 18:281ಸಮು 10:26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಯೆಹೋಶುವ 18:1-28

ಯೆಹೋಶುವ

18 ಆಮೇಲೆ ಇಸ್ರಾಯೇಲ್ಯರ ಇಡೀ ಜನಾಂಗ ಶೀಲೋನಲ್ಲಿ+ ಸಭೆ ಸೇರಿ, ಅಲ್ಲಿ ದೇವದರ್ಶನ ಡೇರೆಯನ್ನ ನಿಲ್ಲಿಸಿದ್ರು.+ ಈಗಾಗ್ಲೇ ಅವರು ಕಾನಾನ್‌ ದೇಶವನ್ನೆಲ್ಲ ವಶ ಮಾಡ್ಕೊಂಡಿದ್ರು.+ 2 ಆದ್ರೆ ಇಸ್ರಾಯೇಲಿನ ಏಳು ಕುಲದವ್ರಿಗೆ ಇನ್ನೂ ಆಸ್ತಿ ಹಂಚ್ಕೊಟ್ಟಿರಲಿಲ್ಲ. 3 ಹಾಗಾಗಿ ಯೆಹೋಶುವ ಇಸ್ರಾಯೇಲ್ಯರಿಗೆ ಹೀಗಂದ: “ನಿಮ್ಮ ಪೂರ್ವಜರ ದೇವರಾದ ಯೆಹೋವ ನಿಮಗೆ ಕೊಟ್ಟಿರೋ ದೇಶನ ವಶ ಮಾಡ್ಕೊಳ್ಳೋಕೆ ಇನ್ನೆಷ್ಟು ತಡಮಾಡ್ತೀರ?+ 4 ಪ್ರತಿ ಕುಲದಿಂದ ಮೂರು ಮೂರು ಜನ್ರನ್ನ ಆರಿಸಿ. ಇಡೀ ದೇಶ ಸುತ್ತಾಡಿ ಬರೋಕೆ ಅವ್ರನ್ನ ಕಳಿಸ್ತೀನಿ. ಅವರು ಹೋಗಿ ತಮ್ಮ ಕುಲಕ್ಕೆ ಬರಬೇಕಾದ ಪ್ರದೇಶಗಳ ಪಟ್ಟಿ ಮಾಡ್ಕೊಂಡು ನನ್ನ ಹತ್ರ ಬರಲಿ. 5 ಅವರು ಆ ಪ್ರದೇಶಗಳನ್ನ ಏಳು ಪಾಲುಮಾಡಿ ಅದನ್ನ ತಮ್ಮ ತಮ್ಮಲ್ಲೇ ಹಂಚ್ಕೊಳ್ಳಲಿ.+ ಯೆಹೂದ ಕುಲ ದಕ್ಷಿಣಕ್ಕಿರೋ ತಮ್ಮ ಪ್ರದೇಶದಲ್ಲಿ+ ಮತ್ತು ಯೋಸೇಫನ ವಂಶದವರು ಉತ್ತರಕ್ಕಿರೋ ತಮ್ಮ ಪ್ರದೇಶದಲ್ಲಿ ಉಳ್ಕೊಳ್ತಾರೆ.+ 6 ಹಾಗಾಗಿ ನೀವು ಹೋಗಿ ದೇಶ ಸುತ್ತಾಡಿ ಅದನ್ನ ಏಳು ಪಾಲು ಮಾಡಿ, ಅವುಗಳ ನಕ್ಷೆನ ನನ್ನ ಹತ್ರ ತಗೊಂಡು ಬನ್ನಿ. ನಮ್ಮ ದೇವರಾದ ಯೆಹೋವನ ಮುಂದೆ ನಿಮಗಾಗಿ ಚೀಟಿ ಹಾಕ್ತೀನಿ.+ 7 ಆದ್ರೆ ಲೇವಿಯರಿಗೆ ಅದ್ರಲ್ಲಿ ಯಾವುದೇ ಪಾಲು ಸಿಗಲ್ಲ.+ ಯಾಕಂದ್ರೆ ಯೆಹೋವನಿಗೆ ಮಾಡೋ ಪುರೋಹಿತ ಸೇವೆನೇ ಅವ್ರ ಆಸ್ತಿ.+ ಗಾದ್‌, ರೂಬೇನ್‌, ಮನಸ್ಸೆ ಕುಲದ ಅರ್ಧ ಜನ್ರಿಗೆ+ ಯೋರ್ದನಿನ ಪೂರ್ವಕ್ಕೆ ಈಗಾಗ್ಲೇ ಯೆಹೋವನ ಸೇವಕ ಮೋಶೆಯಿಂದ ಆಸ್ತಿ ಸಿಕ್ಕಿದೆ.”

8 ಆಗ ಆ ಗಂಡಸ್ರು ತಮ್ಮ ಪ್ರಯಾಣದ ಸಿದ್ಧತೆಗಳನ್ನ ಮಾಡ್ಕೊಂಡ್ರು. ಯೆಹೋಶುವ ಅವ್ರಿಗೆ “ಇಡೀ ದೇಶ ಸುತ್ತಾಡಿ ಪ್ರದೇಶಗಳ ಪಟ್ಟಿಮಾಡಿ ನನ್ನ ಹತ್ರ ಬನ್ನಿ. ನಾನು ಶೀಲೋನಲ್ಲಿ ಯೆಹೋವನ ಮುಂದೆ ನಿಮಗಾಗಿ ಚೀಟಿ ಹಾಕ್ತೀನಿ” ಅಂತ ಆಜ್ಞೆ ಕೊಟ್ಟ.+ 9 ಆಮೇಲೆ ಆ ಗಂಡಸ್ರು ಇಡೀ ದೇಶ ಸುತ್ತಾಡಿ ಪಟ್ಟಣಗಳನ್ನೆಲ್ಲ ಪಟ್ಟಿಮಾಡಿದ್ರು. ಅವುಗಳನ್ನ ಏಳು ಪಾಲು ಮಾಡಿ ಪುಸ್ತಕದಲ್ಲಿ ಬರೆದು ಶೀಲೋನಲ್ಲಿದ್ದ ಯೆಹೋಶುವನ ಹತ್ರ ಬಂದ್ರು. 10 ಯೆಹೋಶುವ ಶೀಲೋನಲ್ಲಿ ಯೆಹೋವನ ಮುಂದೆ ಚೀಟಿ ಹಾಕಿದ.+ ಅಲ್ಲಿ ಯೆಹೋಶುವ ಇಸ್ರಾಯೇಲ್ಯರಿಗೆ ಅವ್ರವ್ರ ಪಾಲು ಹಂಚ್ಕೊಟ್ಟ.+

11 ಬೆನ್ಯಾಮೀನ್‌ ಕುಲಕ್ಕೆ ಮೊದಲ ಚೀಟಿ ಬಿತ್ತು. ಅವ್ರ ಮನೆತನಗಳಿಗೆ ಸಿಕ್ಕ ಪ್ರದೇಶ ಯೆಹೂದ+ ಮತ್ತು ಯೋಸೇಫನ ಪ್ರದೇಶಗಳ ಮಧ್ಯದಲ್ಲಿತ್ತು.+ 12 ಉತ್ತರದ ಕಡೆಗೆ ಅವ್ರ ಗಡಿ ಯೋರ್ದನಿಂದ ಶುರುವಾಗಿ, ಯೆರಿಕೋವಿನ ಉತ್ತರಕ್ಕಿದ್ದ ಇಳಿಜಾರಿನ ತನಕ ಇತ್ತು.+ ಪಶ್ಚಿಮದ ಕಡೆಗೆ ಬೆಟ್ಟದ ತನಕ ಹೋಗಿ, ಅಲ್ಲಿಂದ ಬೇತಾವೆನಿನ ಕಾಡಿನ ತನಕ ಇತ್ತು.+ 13 ಅಲ್ಲಿಂದ ಈ ಗಡಿ ಲೂಜಿನ ಅಂದ್ರೆ ಲೂಜಿನ ದಕ್ಷಿಣಕ್ಕೆ ಇಳಿಜಾರಿನಲ್ಲಿದ್ದ ಬೆತೆಲಿನ+ ತನಕ ಹೋಗಿ ಕೆಳಗಿನ ಬೇತ್‌-ಹೋರೋನಿನ+ ದಕ್ಷಿಣಕ್ಕಿದ್ದ ಬೆಟ್ಟದ ಮೇಲಿನ ಅಟಾರೋತ್‌-ಅದ್ದಾರಿನ+ ತನಕ ಸಾಗಿತ್ತು. 14 ಆಮೇಲೆ ಈ ಗಡಿ ಬೇತ್‌-ಹೋರೋನಿನ ಮುಂದೆ ಇದ್ದ ಬೆಟ್ಟದಿಂದ ದಕ್ಷಿಣದ ಕಡೆಗೆ ಸಾಗಿ ಕಿರ್ಯತ್‌-ಬಾಳ್‌ ಅಂದ್ರೆ ಯೆಹೂದನ ಮಕ್ಕಳ ನಗರವಾಗಿದ್ದ ಕಿರ್ಯತ್‌-ಯಾರೀಮಿನ+ ತನಕ ವಿಸ್ತರಿಸಿ ಅಲ್ಲಿಗೆ ಮುಗಿತಿತ್ತು. ಇದು ಪಶ್ಚಿಮದ ಗಡಿ.

15 ದಕ್ಷಿಣದ ಗಡಿ ಕಿರ್ಯತ್‌-ಯಾರೀಮಿನ ತುತ್ತತುದಿಯಿಂದ ಪಶ್ಚಿಮದ ತನಕ ಇತ್ತು. ಅದು ನೆಫ್ತೋಹ+ ಅನ್ನೋ ನೀರಿನ ಬುಗ್ಗೆ ತನಕ ಹೋಗ್ತಿತ್ತು. 16 ಅಲ್ಲಿಂದ ಗಡಿ ಕೆಳಗಿಳಿದು ಹಿನ್ನೋಮ್‌* ಕಣಿವೆ+ ಮುಂದಿದ್ದ ಬೆಟ್ಟದ ತುದಿ ತನಕ ಇತ್ತು. ಆ ಬೆಟ್ಟ ರೆಫಾಯರ+ ಕಣಿವೆಯ ಉತ್ತರಕ್ಕಿತ್ತು. ಆಮೇಲೆ ಈ ಗಡಿ ಹಿನ್ನೋಮ್‌ ಕಣಿವೆಯ ತನಕ ಹೋಗಿ ದಕ್ಷಿಣಕ್ಕಿದ್ದ ಯೆಬೂಸಿಯರ+ ಇಳಿಜಾರಿನ ತನಕ ವಿಸ್ತರಿಸಿ ಏನ್‌-ರೋಗೆಲಿಗೆ+ ಇಳಿತಿತ್ತು. 17 ಆಮೇಲೆ ಅದು ಉತ್ತರದ ಕಡೆಗೆ ಏನ್‌-ಷೆಮೆಷಿನ ತನಕ ಹೋಗಿ, ಅದುಮೀಮಿಗೆ+ ಹತ್ತಿ ಹೋಗೋ ದಾರಿ ಮುಂದಿದ್ದ ಗೆಲೀಲೋತಿನ ತನಕ ಹರಡಿತ್ತು. ಅಲ್ಲಿಂದ ಕೆಳಗಿಳಿದು ರೂಬೇನನ ಮಗ ಬೋಹನನ+ ಕಲ್ಲಿನ ತನಕ ಹೋಗ್ತಿತ್ತು.+ 18 ಅಲ್ಲಿಂದ ಅದು ಅರಾಬಾದ ಮುಂದಿದ್ದ ಉತ್ತರದ ತಗ್ಗಿನಲ್ಲಿ ಸಾಗಿ ಅರಾಬಾದ ತನಕ ಹೋಗ್ತಿತ್ತು. 19 ಮುಂದೆ ಈ ಗಡಿ ಬೇತ್‌-ಹೊಗ್ಲಾದ+ ಉತ್ತರಕ್ಕಿದ್ದ ತಗ್ಗಿನ ತನಕ ಸಾಗಿ ಯೋರ್ದನಿನ ದಕ್ಷಿಣದ ಅಂಚಲ್ಲಿ ಮತ್ತು ಲವಣ ಸಮುದ್ರದ*+ ಉತ್ತರ ಕೊಲ್ಲಿಯಲ್ಲಿ ಮುಗಿತಿತ್ತು. ಇದು ದಕ್ಷಿಣದ ಗಡಿಯಾಗಿತ್ತು. 20 ಪೂರ್ವದ ಕಡೆಗೆ ಯೋರ್ದನ್‌ ನದಿನೇ ಅವ್ರ ಗಡಿಯಾಗಿತ್ತು. ಇದು ಬೆನ್ಯಾಮೀನ್‌ ವಂಶದ ಮನೆತನಗಳಿಗೆ ಸಿಕ್ಕ ಆಸ್ತಿಯ ನಾಲ್ಕೂ ಕಡೆಯ ಗಡಿಯಾಗಿತ್ತು.

21 ಬೆನ್ಯಾಮೀನ್‌ ಕುಲದ ಮನೆತನಗಳಿಗೆ ಸಿಕ್ಕಿದ ಪಟ್ಟಣಗಳು ಯಾವದಂದ್ರೆ: ಯೆರಿಕೋ, ಬೇತ್‌-ಹೊಗ್ಲಾ, ಏಮೆಕ್ಕೆಚ್ಚೀಚ್‌, 22 ಬೇತ್‌-ಅರಾಬ,+ ಚಮಾರಯಿಮ್‌, ಬೆತೆಲ್‌,+ 23 ಅವ್ವೀಮ್‌, ಪಾರಾ, ಒಫ್ರ, 24 ಕೆಫೆರ್‌-ಅಮ್ಮೋನ್ಯ, ಒಫ್ನೀ ಮತ್ತು ಗೆಬ.+ ಹೀಗೆ 12 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು.

25 ಗಿಬ್ಯೋನ್‌,+ ರಾಮ, ಬೇರೋತ್‌, 26 ಮಿಚ್ಪೆ, ಕೆಫೀರಾ, ಮೋಚಾ, 27 ರೆಕೆಮ್‌, ಇರ್ಪೇಲ್‌, ತರಲಾ, 28 ಚೀಲ,+ ಎಲೆಫ್‌, ಯೆಬೂಸ್‌ ಅಂದ್ರೆ ಯೆರೂಸಲೇಮ್‌,+ ಗಿಬೆಯಾ,+ ಕಿರ್ಯತ್‌. ಹೀಗೆ 14 ಪಟ್ಟಣಗಳು ಮತ್ತು ಅವುಗಳಿಗೆ ಸೇರಿದ ಹಳ್ಳಿಗಳು.

ಇದು ಬೆನ್ಯಾಮೀನ್‌ ವಂಶದ ಮನೆತನಗಳಿಗೆ ಸಿಕ್ಕಿದ ಆಸ್ತಿ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ