ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಆದಿಕಾಂಡ 2:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಹಾಗಾಗಿ ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ಹೆಂಡತಿ ಜೊತೆ ಇರ್ತಾನೆ.* ಅವರಿಬ್ರು ಒಂದೇ ದೇಹ ಆಗ್ತಾರೆ.+

  • ಆದಿಕಾಂಡ 20:3
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 3 ಆಮೇಲೆ ದೇವರು ಅಬೀಮೆಲೆಕನಿಗೆ ರಾತ್ರಿ ಕನಸಲ್ಲಿ “ನೀನು ಆ ಸ್ತ್ರೀಯನ್ನ ಕರ್ಕೊಂಡು ಬಂದಿರೋದ್ರಿಂದ ಖಂಡಿತ ಸಾಯ್ತಿಯ.+ ಅವಳಿಗೆ ಮದುವೆಯಾಗಿದೆ, ಅವಳು ಇನ್ನೊಬ್ಬನಿಗೆ ಸೇರಿದವಳು”+ ಅಂದನು.

  • ಆದಿಕಾಂಡ 20:6
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 6 ಅದಕ್ಕೆ ಸತ್ಯ ದೇವರು ಕನಸಲ್ಲಿ “ನೀನು ಕೆಟ್ಟ ಉದ್ದೇಶದಿಂದ ಇದನ್ನ ಮಾಡಲಿಲ್ಲ ಅಂತ ನಂಗೊತ್ತು. ಹಾಗಾಗಿ ನನ್ನ ವಿರುದ್ಧ ಪಾಪ ಮಾಡದ ಹಾಗೆ ನಾನು ನಿನ್ನನ್ನ ತಡಿದೆ. ಅವಳನ್ನ ಮುಟ್ಟಲು ಬಿಡಲಿಲ್ಲ.

  • ಕೀರ್ತನೆ 51:ಶೀರ್ಷಿಕೆ
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • ಗಾಯಕರ ನಿರ್ದೇಶಕನಿಗೆ ಸೂಚನೆ, ದಾವೀದ ಬತ್ಷೆಬೆ+ ಜೊತೆ ಲೈಂಗಿಕ ಸಂಬಂಧ ಇಟ್ಕೊಂಡ ಮೇಲೆ ಪ್ರವಾದಿ ನಾತಾನ ದಾವೀದನ ಹತ್ರ ಬಂದಿದ್ದ. ಆಗ ದಾವೀದ ಈ ಮಧುರ ಗೀತೆಯನ್ನ ರಚಿಸಿದ.

  • ಕೀರ್ತನೆ 51:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  4 ನಿನ್ನ ವಿರುದ್ಧ, ಹೌದು, ಮುಖ್ಯವಾಗಿ* ನಿನ್ನ ವಿರುದ್ಧ ಪಾಪ ಮಾಡಿದ್ದೀನಿ,+

      ನಿನಗೆ ಇಷ್ಟ ಆಗದೇ ಇರೋದನ್ನೇ ಮಾಡಿದ್ದೀನಿ.+

      ಹಾಗಾಗಿ ನೀನು ಹೇಳೋದೆಲ್ಲ ಸರಿಯಾಗೇ ಇರುತ್ತೆ.

      ನಿನ್ನ ತೀರ್ಪು ನ್ಯಾಯವಾಗೇ ಇರುತ್ತೆ.+

  • ಮಾರ್ಕ 10:7, 8
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 7 ಅದಕ್ಕೇ ಒಬ್ಬ ಪುರುಷ ಅಪ್ಪಅಮ್ಮನನ್ನ ಬಿಟ್ಟು,+ 8 ಅವನೂ ಅವನ ಹೆಂಡತಿನೂ ಒಂದೇ ದೇಹ ಆಗ್ತಾರೆ.’+ ಹಾಗಾಗಿ ಅವರು ಇನ್ನು ಮುಂದೆ ಇಬ್ಬರಲ್ಲ, ಒಂದೇ ಶರೀರವಾಗಿ ಇರ್ತಾರೆ.

  • ಇಬ್ರಿಯ 13:4
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 4 ಮದುವೆ ಬಂಧವನ್ನ ಎಲ್ರೂ ಗೌರವಿಸಬೇಕು. ಗಂಡ ಹೆಂಡತಿ ಒಬ್ರಿಗೊಬ್ರು ದ್ರೋಹ ಮಾಡಬಾರದು.+ ಯಾಕಂದ್ರೆ ಲೈಂಗಿಕ ಅನೈತಿಕತೆ* ಮತ್ತು ವ್ಯಭಿಚಾರ ಮಾಡೋ ವ್ಯಕ್ತಿಗಳಿಗೆ ದೇವರು ತೀರ್ಪು ಮಾಡ್ತಾನೆ.+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ