ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಅರಸು 8:39
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 39 ನಿನ್ನ ವಾಸಸ್ಥಳವಾದ ಸ್ವರ್ಗದಿಂದ+ ಅದನ್ನ ಕೇಳಿಸ್ಕೊಂಡು ಕ್ಷಮಿಸು,+ ಸಹಾಯ ಮಾಡು. ಹೃದಯ ತಿಳಿದಿರೋ ನೀನು (ನೀನೊಬ್ಬನೇ ಮನುಷ್ಯರೆಲ್ಲರ ಹೃದಯವನ್ನ ಓದುವವನು)+ ಪ್ರತಿಯೊಬ್ಬನಿಗೂ ಅವನವನ ಕೆಲಸಕ್ಕೆ ತಕ್ಕ ಹಾಗೆ ಪ್ರತಿಫಲ ಕೊಡು.+

  • 1 ಪೂರ್ವಕಾಲವೃತ್ತಾಂತ 28:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 9 ನನ್ನ ಮಗನಾದ ಸೊಲೊಮೋನ, ನಿನ್ನ ತಂದೆಯ ದೇವರನ್ನ ತಿಳ್ಕೊ. ನಿನ್ನ ಪೂರ್ಣ* ಹೃದಯದಿಂದ,+ ಖುಷಿ ಖುಷಿಯಿಂದ ಆತನ ಸೇವೆ ಮಾಡು. ಯಾಕಂದ್ರೆ ಯೆಹೋವ ಎಲ್ರ ಹೃದಯವನ್ನ ನೋಡ್ತಾನೆ.+ ಮನಸ್ಸಿನ ಒಂದೊಂದು ವಿಷ್ಯಗಳನ್ನ, ಆಸೆಗಳನ್ನ ತಿಳ್ಕೊಂಡಿದ್ದಾನೆ.+ ನೀನು ಆತನನ್ನ ಹುಡುಕಿದ್ರೆ ನಿನಗೆ ಸಿಕ್ತಾನೆ,+ ಸಹಾಯ ಮಾಡ್ತಾನೆ. ಆದ್ರೆ ನೀನು ಅವನನ್ನ ಬಿಟ್ಟುಬಿಟ್ರೆ, ಆತನು ನಿನ್ನನ್ನ ಶಾಶ್ವತವಾಗಿ ಬಿಟ್ಟುಬಿಡ್ತಾನೆ.+

  • ಕೀರ್ತನೆ 7:9
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    •  9 ದಯವಿಟ್ಟು ದುಷ್ಟರ ಕೆಟ್ಟ ಕೆಲಸಗಳಿಗೆ ಅಂತ್ಯ ಹಾಡು.

      ಆದ್ರೆ ನೀತಿವಂತರು ಕದಲದೆ ನಿಲ್ಲೋ ಹಾಗೆ ಮಾಡು,+

      ಯಾಕಂದ್ರೆ ನೀನು ಹೃದಯಗಳನ್ನ ಮತ್ತು ಮನಸ್ಸಿನ ಭಾವನೆಗಳನ್ನ* ಪರೀಕ್ಷಿಸೋ+ ನೀತಿವಂತ ದೇವರು.+

  • ಜ್ಞಾನೋಕ್ತಿ 24:12
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 12 “ನಮಗೆ ಇದ್ರ ಬಗ್ಗೆ ಗೊತ್ತಿರಲಿಲ್ಲ” ಅಂತ ನೀನು ಹೇಳಿದ್ರೆ

      ಹೃದಯ* ಪರಿಶೋಧಿಸೋ ದೇವರಿಗೆ ಅದು ಗೊತ್ತಾಗಲ್ವಾ?+

      ಹೌದು, ನಿನ್ನನ್ನ ಗಮನಿಸೋ ದೇವರಿಗೆ ಎಲ್ಲ ಗೊತ್ತಾಗುತ್ತೆ.

      ಪ್ರತಿಯೊಬ್ರೂ ಏನೇನು ಮಾಡ್ತಾರೋ ಅದಕ್ಕೆ ತಕ್ಕ ಫಲ ಕೊಡ್ತಾನೆ.+

  • ಯೆರೆಮೀಯ 17:10
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 10 ಯೆಹೋವನಾದ ನಾನು ಹೃದಯವನ್ನ ಪರೀಕ್ಷಿಸಿ,+

      ಅಂತರಾಳದ ಯೋಚನೆಗಳನ್ನ* ಪರಿಶೀಲಿಸಿ

      ಪ್ರತಿಯೊಬ್ಬನ ನಡತೆಗೆ ಕೆಲಸಕ್ಕೆ

      ತಕ್ಕ ಪ್ರತಿಫಲ ಕೊಡ್ತೀನಿ.+

  • ಅ. ಕಾರ್ಯ 1:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಆಮೇಲೆ ಶಿಷ್ಯರೆಲ್ಲ ಪ್ರಾರ್ಥನೆ ಮಾಡ್ತಾ “ಯೆಹೋವನೇ,* ನಿನಗೆ ಎಲ್ರ ಹೃದಯದಲ್ಲಿ ಏನಿದೆ ಅಂತ ಗೊತ್ತು.+ ಈ ಇಬ್ರಲ್ಲಿ ನೀನು ಯಾರನ್ನ ಆರಿಸಿದ್ದೀಯ ಅಂತ ನಮಗೆ ತೋರಿಸ್ಕೊಡು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ