10 ನೀನು ಆರೋನನನ್ನ, ಅವನ ಮಕ್ಕಳನ್ನ ಪುರೋಹಿತರಾಗಿ ನೇಮಿಸಬೇಕು. ಅವರು ಪುರೋಹಿತರಾಗಿ ತಮ್ಮ ಜವಾಬ್ದಾರಿ ಮಾಡಬೇಕು.+ ಆರೋನನ ಕುಟುಂಬಕ್ಕೆ ಸೇರದ ಯಾರೂ ಆರಾಧನಾ ಸ್ಥಳದ ಹತ್ರ ಬರಬಾರದು. ಬಂದ್ರೆ ಅವನನ್ನ ಸಾಯಿಸಬೇಕು.”+
7 ಯಾಕಂದ್ರೆ ಪುರೋಹಿತನ ತುಟಿಗಳ ಮೇಲೆ ಯಾವಾಗ್ಲೂ ಜ್ಞಾನ ಇರಬೇಕು. ನಿಯಮದ* ಬಗ್ಗೆ ತಿಳ್ಕೊಳ್ಳೋಕೆ ಜನ ಅವನನ್ನ ಹುಡ್ಕೊಂಡು ಹೋಗಬೇಕು.+ ಕಾರಣ, ಅವನು ಸೈನ್ಯಗಳ ದೇವರಾದ ಯೆಹೋವನ ಸಂದೇಶವಾಹಕ.”