ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 2 ಅರಸು 22:18, 19
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಆದ್ರೆ ಯೆಹೋವನ ಹತ್ರ ಕೇಳೋಕೆ ನಿಮ್ಮನ್ನ ನನ್ನ ಹತ್ರ ಕಳಿಸಿದ ಯೆಹೂದದ ರಾಜನಿಗೆ ಹೀಗೆ ಹೇಳಿ: ‘ನೀನು ಕೇಳಿಸ್ಕೊಂಡಿರೋ ಮಾತುಗಳ ಬಗ್ಗೆ ಇಸ್ರಾಯೇಲ್‌ ದೇವರಾದ ಯೆಹೋವ ಹೇಳೋದು ಏನಂದ್ರೆ 19 “ಈ ಸ್ಥಳದ ಬಗ್ಗೆ, ಇದ್ರ ಜನ್ರ ಬಗ್ಗೆ ಅವ್ರಿಗೆ ಶಾಪ ತಗಲುತ್ತೆ, ಆ ಜನ್ರು ಭಯಪಡ್ತಾರೆ ಅಂತ ನಾನು ಹೇಳಿದ ಮಾತುಗಳನ್ನ ನೀನು ಕೇಳಿಸ್ಕೊಂಡಾಗ ನಿನ್ನ ಹೃದಯ ಸ್ಪಂದಿಸಿತು. ಯೆಹೋವನ ಮುಂದೆ ನಿನ್ನನ್ನ ತಗ್ಗಿಸ್ಕೊಂಡೆ.+ ನಿನ್ನ ಬಟ್ಟೆಗಳನ್ನ ಹರ್ಕೊಂಡು+ ನನ್ನ ಮುಂದೆ ಗೋಳಾಡಿದೆ. ಹಾಗಾಗಿ ನಿನ್ನ ಪ್ರಾರ್ಥನೆ ಕೇಳಿಸ್ಕೊಂಡೆ ಅಂತ ಯೆಹೋವನಾದ ನಾನು ಹೇಳ್ತಿದ್ದೀನಿ.

  • 2 ಪೂರ್ವಕಾಲವೃತ್ತಾಂತ 33:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಅವನು ದೇವರಿಗೆ ಪ್ರಾರ್ಥಿಸ್ತಾ ಇದ್ದ. ಅವನ ಪ್ರಾರ್ಥನೆ ಕೇಳಿ ದೇವರಿಗೆ ಕನಿಕರ ಹುಟ್ತು. ಹಾಗಾಗಿ ಆತನು ಮನಸ್ಸೆಯನ್ನ ಯೆರೂಸಲೇಮಿಗೆ ಕರ್ಕೊಂಡು ಬಂದು ಮತ್ತೆ ಅವನನ್ನ ರಾಜ ಮಾಡಿದ.+ ಆಗ ಯೆಹೋವನೇ ಸತ್ಯ ದೇವರು ಅಂತ ಮನಸ್ಸೆಗೆ ಪಕ್ಕಾ ಗೊತ್ತಾಯ್ತು.+

  • ಕೀರ್ತನೆ 22:24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 24 ಯಾಕಂದ್ರೆ ದೌರ್ಜನ್ಯ ಆದವನ ಕಷ್ಟವನ್ನ ಆತನು ತಳ್ಳಿಬಿಡಲಿಲ್ಲ, ಅಸಹ್ಯ ಪಟ್ಕೊಳ್ಳಲಿಲ್ಲ,+

      ದೇವರು ತನ್ನ ಮುಖವನ್ನ ತಿರುಗಿಸ್ಕೊಳ್ಳಲಿಲ್ಲ.+

      ಸಹಾಯಕ್ಕಾಗಿ ಕೂಗಿದಾಗ ಆತನು ಕೇಳಿಸ್ಕೊಳ್ಳದೆ ಇರಲಿಲ್ಲ.+

  • ಕೀರ್ತನೆ 34:18
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 18 ಹೃದಯ ಒಡೆದು ಹೋಗಿರೋರಿಗೆ ಯೆಹೋವ ಹತ್ರಾನೇ ಇರ್ತಾನೆ,+

      ಮನಸ್ಸು ಚೂರುಚೂರಾಗಿ ಹೋಗಿರೋರನ್ನ* ಆತನು ಕಾದು ಕಾಪಾಡ್ತಾನೆ.+

  • ಜ್ಞಾನೋಕ್ತಿ 28:13
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ತನ್ನ ಅಪರಾಧಗಳನ್ನ ಮುಚ್ಚಿಡುವವನಿಗೆ ಒಳ್ಳೇದಾಗಲ್ಲ,+

      ಅದನ್ನ ಒಪ್ಕೊಂಡು ಮತ್ತೆ ಮಾಡದೆ ಇರುವವನಿಗೆ ಕರುಣೆ ಸಿಗುತ್ತೆ.+

  • ಯೆಶಾಯ 57:15
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 15 ಯಾಕಂದ್ರೆ ಮಹೋನ್ನತನೂ ಶ್ರೇಷ್ಠನೂ

      ನಿತ್ಯನಿರಂತರಕ್ಕೂ ಜೀವಿಸುವವನೂ*+ ಪವಿತ್ರನು ಅನ್ನೋ ಹೆಸ್ರಿರೋ ದೇವರೂ+ ಹೀಗಂತಿದ್ದಾನೆ

      “ನಾನು ಉನ್ನತವಾದ, ಪವಿತ್ರವಾದ ಸ್ಥಳದಲ್ಲಿ ವಾಸಿಸ್ತೀನಿ,+

      ಆದ್ರೆ ಜಜ್ಜಿ ಹೋಗಿರುವವರ ಜೊತೆ, ದೀನಮನಸ್ಸು ಇರುವವ್ರ ಜೊತೆ ವಾಸಿಸ್ತಾ

      ದೀನರ ಪ್ರಾಣಗಳು ಮತ್ತೆ ಚೈತನ್ಯ ಪಡ್ಕೊಳ್ಳೋ ತರ ಮಾಡ್ತೀನಿ,

      ಜಜ್ಜಿ ಹೋಗಿರುವವ್ರ ಮನಸ್ಸಿಗೆ ನವಚೈತನ್ಯವನ್ನ ತುಂಬ್ತೀನಿ.+

  • ಲೂಕ 15:22-24
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 22 ಆದ್ರೆ ಆ ಅಪ್ಪ ಸೇವಕರಿಗೆ ‘ಬೇಗ ಹೋಗಿ ಒಳ್ಳೇ ಬಟ್ಟೆ ತಂದು ಇವನಿಗೆ ಹಾಕಿ. ಇವನ ಬೆರಳಿಗೆ ಉಂಗುರ ಹಾಕಿ. ಕಾಲಿಗೆ ಚಪ್ಪಲಿ ಹಾಕಿ. 23 ಅಷ್ಟೇ ಅಲ್ಲ ಒಂದು ಕೊಬ್ಬಿದ ಕರು ತಂದು ಕಡಿರಿ. ಊಟಮಾಡಿ ಖುಷಿಪಡೋಣ, ಹಬ್ಬ ಮಾಡೋಣ. 24 ಯಾಕಂದ್ರೆ ನನ್ನ ಚಿಕ್ಕ ಮಗ ಸತ್ತುಹೋಗಿದ್ದ, ಆದ್ರೆ ಈಗ ಬದುಕಿದ್ದಾನೆ.+ ಕಳೆದುಹೋಗಿದ್ದ, ಈಗ ಸಿಕ್ಕಿದ್ದಾನೆ’ ಅಂದ. ಅವ್ರೆಲ್ಲ ಖುಷಿಪಡ್ತಾ ಹಬ್ಬ ಮಾಡಿದ್ರು.

  • ಲೂಕ 18:13, 14
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 13 ಆದ್ರೆ ತೆರಿಗೆ ವಸೂಲಿಗಾರ ದೂರದಲ್ಲೇ ನಿಂತಿದ್ದ. ಆಕಾಶದ ಕಡೆ ಕಣ್ಣೆತ್ತಿ ನೋಡೋಕೂ ಮನಸ್ಸು ಬರಲಿಲ್ಲ. ಎದೆ ಬಡ್ಕೊಳ್ಳುತ್ತಾ ‘ದೇವರೇ, ಕರುಣೆ ತೋರಿಸು. ನಾನು ಪಾಪಿ’+ ಅಂದ. 14 ನೆನಪಿಡಿ, ದೇವರ ದೃಷ್ಟಿಯಲ್ಲಿ ಆ ಫರಿಸಾಯನಿಗಿಂತ ಈ ಮನುಷ್ಯನೇ ಹೆಚ್ಚು ನೀತಿವಂತ.+ ಯಾಕಂದ್ರೆ ಹೆಚ್ಚಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ತಗ್ಗಿಸ್ತಾನೆ. ತಗ್ಗಿಸ್ಕೊಳ್ಳೋ ವ್ಯಕ್ತಿಯನ್ನ ದೇವರು ಮೇಲೆ ಎತ್ತುತ್ತಾನೆ.”+

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ