9 ಯುವಕನೇ, ನಿನ್ನ ಯೌವನದಲ್ಲಿ ಖುಷಿಪಡು. ನಿನ್ನ ಯೌವನದ ದಿನಗಳಲ್ಲಿ ಆನಂದಪಡು. ನಿನ್ನ ಮನಸ್ಸು ಬಯಸಿದ್ದನ್ನ ಮಾಡು, ನಿನ್ನ ಕಣ್ಣು ಸೆಳೆದಲ್ಲೆಲ್ಲ ಹೋಗು. ಆದ್ರೆ ನೀನು ಏನೇ ಮಾಡಿದ್ರೂ ಅದಕ್ಕೆಲ್ಲ ಸತ್ಯ ದೇವರು ಲೆಕ್ಕ ಕೇಳ್ತಾನೆ ಅಂತ ನಿನಗೆ ಗೊತ್ತಿರಲಿ.+
36 ನೆನಪಿಡಿ, ಜನ ತಮ್ಮ ಪೊಳ್ಳು ಮಾತಿಗೆ ತೀರ್ಪಿನ ದಿನದಲ್ಲಿ ದೇವರಿಗೆ ಲೆಕ್ಕ ಕೊಡಬೇಕಾಗುತ್ತೆ.+37 ಯಾಕಂದ್ರೆ ನಿನ್ನ ಮಾತು ಒಳ್ಳೇದಾಗಿದ್ರೆ ದೇವರು ನಿನ್ನನ್ನ ನೀತಿವಂತ ಅಂತ ಹೇಳ್ತಾನೆ. ನಿನ್ನ ಮಾತು ಕೆಟ್ಟದಾಗಿದ್ರೆ ದೇವರು ನಿನ್ನನ್ನ ಶಿಕ್ಷಿಸ್ತಾನೆ.”
31 ಯಾಕಂದ್ರೆ ದೇವರು ಒಂದು ದಿನವನ್ನ ನಿಶ್ಚಯಿಸಿದ್ದಾನೆ.+ ಆ ದಿನ ಆತನು ಭೂಮಿ ಮೇಲಿರೋ ಎಲ್ರಿಗೆ ಸರಿಯಾಗಿ ತೀರ್ಪು ಮಾಡ್ತಾನೆ. ಅದಕ್ಕಾಗಿ ಆತನು ಒಬ್ಬ ವ್ಯಕ್ತಿಯನ್ನ ಆರಿಸ್ಕೊಂಡಿದ್ದಾನೆ. ಆ ದಿನ ಬಂದೆ ಬರುತ್ತೆ ಅಂತ ಪಕ್ಕಾ ಮಾಡೋಕೆ ಆತನು ಆ ವ್ಯಕ್ತಿಯನ್ನ ಮತ್ತೆ ಎಬ್ಬಿಸಿ ಜೀವ ಕೊಟ್ಟಿದ್ದಾನೆ.”+