3 ಯಾರೋ ಬಯಲು ಪ್ರದೇಶದಿಂದ ಹೀಗೆ ಕೂಗಿ ಹೇಳ್ತಿದ್ದಾರೆ:
“ಯೆಹೋವನ ಮಾರ್ಗ ಸಿದ್ಧಮಾಡಿ!+
ಮರುಭೂಮಿಯನ್ನ ಹಾದುಹೋಗೋ ಒಂದು ನೇರವಾದ ಹೆದ್ದಾರಿಯನ್ನ ನಮ್ಮ ದೇವರಿಗಾಗಿ ತಯಾರಿ ಮಾಡಿ.+
4 ಎಲ್ಲ ಕಣಿವೆಗಳು ಮುಚ್ಚಲಿ,
ಎಲ್ಲ ಪರ್ವತಗಳು ಮತ್ತು ಬೆಟ್ಟಗಳು ತಗ್ಗಲಿ.
ಒರಟಾದ ನೆಲ ಸಮತಟ್ಟಾಗಲಿ,
ಏರುಪೇರಾದ ನೆಲ ಕಣಿವೆಯ ಬಯಲಾಗಲಿ.+