42 ಆಮೇಲೆ ಎಲ್ಲ ಸೇನಾಪತಿಗಳು, ಕಾರೇಹನ ಮಗನಾದ ಯೋಹಾನಾನ,+ ಹೋಷಾಯನ ಮಗನಾದ ಯೆಜನ್ಯ, ಚಿಕ್ಕವರಿಂದ ದೊಡ್ಡವರ ತನಕ ಎಲ್ಲ ಜನ್ರು 2 ಪ್ರವಾದಿ ಯೆರೆಮೀಯನ ಹತ್ರ ಬಂದು “ದಯವಿಟ್ಟು ನಮಗೊಂದು ಉಪಕಾರ ಮಾಡು. ನೀನು ನೋಡ್ತಾ ಇದ್ದಿಯಲ್ಲಾ, ನಾವೀಗ ಉಳಿದಿರೋದು ಸ್ವಲ್ಪ ಜನ. ನಮಗೋಸ್ಕರ, ಉಳಿದಿರೋ ಈ ಎಲ್ಲ ಜನ್ರಿಗೋಸ್ಕರ+ ನಿನ್ನ ದೇವರಾದ ಯೆಹೋವನ ಹತ್ರ ಪ್ರಾರ್ಥನೆ ಮಾಡು.