ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಮತ್ತಾಯ 1:1-17
    ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
    • 1 ಯೇಸು ಕ್ರಿಸ್ತನ* ಜೀವನಚರಿತ್ರೆ* ಬಗ್ಗೆ ತಿಳಿಸೋ ಪುಸ್ತಕ. ಯೇಸು ದಾವೀದನ ವಂಶದವನು.+ ದಾವೀದ ಅಬ್ರಹಾಮನ ವಂಶದವನು.+

       2 ಅಬ್ರಹಾಮನಿಗೆ ಇಸಾಕ ಹುಟ್ಟಿದ.+

      ಇಸಾಕನಿಗೆ ಯಾಕೋಬ ಹುಟ್ಟಿದ.+

      ಯಾಕೋಬನಿಗೆ ಯೆಹೂದ+ ಮತ್ತು ಅವನ ಅಣ್ಣತಮ್ಮಂದಿರು ಹುಟ್ಟಿದ್ರು.

       3 ಯೆಹೂದನಿಗೆ ಪೆರೆಚ ಮತ್ತು ಜೆರಹ+ ಹುಟ್ಟಿದ್ರು, ತಾಮಾರ ಇವ್ರ ತಾಯಿ.

      ಪೆರೆಚನಿಗೆ ಹೆಚ್ರೋನ ಹುಟ್ಟಿದ.+

      ಹೆಚ್ರೋನನಿಗೆ ರಾಮ ಹುಟ್ಟಿದ.+

       4 ರಾಮನಿಗೆ ಅಮ್ಮೀನಾದಾಬ ಹುಟ್ಟಿದ.

      ಅಮ್ಮೀನಾದಾಬನಿಗೆ ನಹಶೋನ ಹುಟ್ಟಿದ.+

      ನಹಶೋನನಿಗೆ ಸಲ್ಮೋನ ಹುಟ್ಟಿದ.

       5 ಸಲ್ಮೋನನಿಗೆ ಬೋವಜ ಹುಟ್ಟಿದ, ರಾಹಾಬ ಬೋವಜನ ತಾಯಿ.+

      ಬೋವಜನಿಗೆ ಓಬೇದ ಹುಟ್ಟಿದ, ರೂತ್‌ ಓಬೇದನ ತಾಯಿ.+

      ಓಬೇದನಿಗೆ ಇಷಯ ಹುಟ್ಟಿದ.+

       6 ಇಷಯನಿಗೆ ರಾಜ ದಾವೀದ+ ಹುಟ್ಟಿದ.

      ದಾವೀದನಿಗೆ ಸೊಲೊಮೋನ+ ಹುಟ್ಟಿದ, ಊರೀಯನ ಹೆಂಡತಿ ಸೊಲೊಮೋನನ ತಾಯಿ.

       7 ಸೊಲೊಮೋನನಿಗೆ ರೆಹಬ್ಬಾಮ ಹುಟ್ಟಿದ.+

      ರೆಹಬ್ಬಾಮನಿಗೆ ಅಬೀಯ ಹುಟ್ಟಿದ.

      ಅಬೀಯನಿಗೆ ಆಸ ಹುಟ್ಟಿದ.+

       8 ಆಸನಿಗೆ ಯೆಹೋಷಾಫಾಟ ಹುಟ್ಟಿದ.+

      ಯೆಹೋಷಾಫಾಟನಿಗೆ ಯೆಹೋರಾಮ ಹುಟ್ಟಿದ.+

      ಯೆಹೋರಾಮನಿಗೆ ಉಜ್ಜೀಯ ಹುಟ್ಟಿದ.

       9 ಉಜ್ಜೀಯನಿಗೆ ಯೋತಾಮ ಹುಟ್ಟಿದ.+

      ಯೋತಾಮನಿಗೆ ಆಹಾಜ ಹುಟ್ಟಿದ.+

      ಆಹಾಜನಿಗೆ ಹಿಜ್ಕೀಯ ಹುಟ್ಟಿದ.+

      10 ಹಿಜ್ಕೀಯನಿಗೆ ಮನಸ್ಸೆ ಹುಟ್ಟಿದ.+

      ಮನಸ್ಸೆಗೆ ಆಮೋನ ಹುಟ್ಟಿದ.+

      ಆಮೋನನಿಗೆ ಯೋಷೀಯ ಹುಟ್ಟಿದ.+

      11 ಯೋಷೀಯನಿಗೆ+ ಯೆಕೊನ್ಯ+ ಮತ್ತು ಅವನ ಸಹೋದರರು ಹುಟ್ಟಿದ್ರು. ಯೆಹೂದ್ಯರನ್ನ ಬಾಬೆಲಿಗೆ ಬಂದಿಗಳಾಗಿ ಕರ್ಕೊಂಡು ಹೋದ ಸಮಯದಲ್ಲಿ ಇವರು ಹುಟ್ಟಿದ್ರು.+

      12 ಯೆಕೊನ್ಯನಿಗೆ ಶೆಯಲ್ತಿಯೇಲ ಹುಟ್ಟಿದ. ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಮೇಲೆ ಇವನು ಹುಟ್ಟಿದ.

      ಶೆಯಲ್ತಿಯೇಲನಿಗೆ ಜೆರುಬ್ಬಾಬೆಲ ಹುಟ್ಟಿದ.+

      13 ಜೆರುಬ್ಬಾಬೆಲನಿಗೆ ಅಬಿಹೂದ ಹುಟ್ಟಿದ.

      ಅಬಿಹೂದನಿಗೆ ಎಲ್ಯಕೀಮ ಹುಟ್ಟಿದ.

      ಎಲ್ಯಕೀಮನಿಗೆ ಅಜೋರ ಹುಟ್ಟಿದ.

      14 ಅಜೋರನಿಗೆ ಸದೋಕ ಹುಟ್ಟಿದ.

      ಸದೋಕನಿಗೆ ಅಖೀಮ ಹುಟ್ಟಿದ.

      ಅಖೀಮನಿಗೆ ಎಲಿಹೂದ ಹುಟ್ಟಿದ.

      15 ಎಲಿಹೂದನಿಗೆ ಎಲಿಯಾಜರ ಹುಟ್ಟಿದ.

      ಎಲಿಯಾಜರನಿಗೆ ಮತ್ತಾನ ಹುಟ್ಟಿದ.

      ಮತ್ತಾನನಿಗೆ ಯಾಕೋಬ ಹುಟ್ಟಿದ.

      16 ಯಾಕೋಬನಿಗೆ ಯೋಸೇಫ ಹುಟ್ಟಿದ. ಯೋಸೇಫ ಮರಿಯಳ ಗಂಡ. ಮರಿಯಗೆ ಯೇಸು ಹುಟ್ಟಿದನು.+ ಆತನನ್ನ ಕ್ರಿಸ್ತ ಅಂತ ಕರೀತಾರೆ.+

      17 ಹೀಗೆ ಅಬ್ರಹಾಮನಿಂದ ದಾವೀದನ ತನಕ 14 ಪೀಳಿಗೆ. ದಾವೀದನಿಂದ ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಸಮಯದ ತನಕ 14 ಪೀಳಿಗೆ. ಯೆಹೂದ್ಯರು ಬಾಬೆಲಿಗೆ ಬಂದಿಗಳಾಗಿ ಹೋದ ಸಮಯದಿಂದ ಕ್ರಿಸ್ತನ ತನಕ 14 ಪೀಳಿಗೆ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ