ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಕೀರ್ತನೆ 38
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಕೀರ್ತನೆ ಮುಖ್ಯಾಂಶಗಳು

      • ಕ್ಷಮೆ ಕೇಳೋ ಪ್ರಾರ್ಥನೆ

        • “ನಾನು ತುಂಬ ಸಂಕಟದಲ್ಲಿದ್ದೀನಿ, ತುಂಬ ಕುಗ್ಗಿಹೋಗಿದ್ದೀನಿ” (6)

        • ಯೆಹೋವ ತನಗಾಗಿ ಕಾಯೋರ ಪ್ರಾರ್ಥನೆ ಕೇಳ್ತಾನೆ (15)

        • “ನನ್ನ ಪಾಪಗಳಿಂದಾಗಿ ಕಷ್ಟದಲ್ಲಿ ಬಿದ್ದೆ” (18)

ಕೀರ್ತನೆ 38:1

ಮಾರ್ಜಿನಲ್ ರೆಫರೆನ್ಸ್

  • +ಯೆರೆ 10:24

ಕೀರ್ತನೆ 38:2

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 32:4

ಕೀರ್ತನೆ 38:3

ಪಾದಟಿಪ್ಪಣಿ

  • *

    ಅಕ್ಷ. “ಯಾವ ಅಂಗನೂ ಆರೋಗ್ಯವಾಗಿಲ್ಲ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 6:2; 41:4; 51:8

ಕೀರ್ತನೆ 38:4

ಮಾರ್ಜಿನಲ್ ರೆಫರೆನ್ಸ್

  • +ಎಜ್ರ 9:6; ಕೀರ್ತ 40:12

ಕೀರ್ತನೆ 38:7

ಪಾದಟಿಪ್ಪಣಿ

  • *

    ಅಕ್ಷ. “ಸೊಂಟದಲ್ಲಿ ಬೆಂಕಿ ತುಂಬ್ಕೊಂಡಿದೆ.”

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 38:3

ಕೀರ್ತನೆ 38:10

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 6:7

ಕೀರ್ತನೆ 38:12

ಮಾರ್ಜಿನಲ್ ರೆಫರೆನ್ಸ್

  • +2ಸಮು 16:7; ಕೀರ್ತ 62:4

ಕೀರ್ತನೆ 38:13

ಮಾರ್ಜಿನಲ್ ರೆಫರೆನ್ಸ್

  • +2ಸಮು 16:11
  • +ಕೀರ್ತ 39:2, 9

ಕೀರ್ತನೆ 38:15

ಮಾರ್ಜಿನಲ್ ರೆಫರೆನ್ಸ್

  • +2ಸಮು 16:12; ಕೀರ್ತ 123:2
  • +ಕೀರ್ತ 138:3

ಕೀರ್ತನೆ 38:17

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 77:2

ಕೀರ್ತನೆ 38:18

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 32:5
  • +ಕೀರ್ತ 51:3

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಎಚ್ಚರ!, 11/8/1998, ಪು. 26

ಕೀರ್ತನೆ 38:19

ಪಾದಟಿಪ್ಪಣಿ

  • *

    ಅಕ್ಷ. “ಜೀವಂತವಾಗಿದ್ದಾರೆ.”

ಕೀರ್ತನೆ 38:21

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 22:11; 35:22

ಕೀರ್ತನೆ 38:22

ಮಾರ್ಜಿನಲ್ ರೆಫರೆನ್ಸ್

  • +ಕೀರ್ತ 27:1; 62:2; ಯೆಶಾ 12:2

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಕೀರ್ತ. 38:1ಯೆರೆ 10:24
ಕೀರ್ತ. 38:2ಕೀರ್ತ 32:4
ಕೀರ್ತ. 38:3ಕೀರ್ತ 6:2; 41:4; 51:8
ಕೀರ್ತ. 38:4ಎಜ್ರ 9:6; ಕೀರ್ತ 40:12
ಕೀರ್ತ. 38:7ಕೀರ್ತ 38:3
ಕೀರ್ತ. 38:10ಕೀರ್ತ 6:7
ಕೀರ್ತ. 38:122ಸಮು 16:7; ಕೀರ್ತ 62:4
ಕೀರ್ತ. 38:132ಸಮು 16:11
ಕೀರ್ತ. 38:13ಕೀರ್ತ 39:2, 9
ಕೀರ್ತ. 38:152ಸಮು 16:12; ಕೀರ್ತ 123:2
ಕೀರ್ತ. 38:15ಕೀರ್ತ 138:3
ಕೀರ್ತ. 38:17ಕೀರ್ತ 77:2
ಕೀರ್ತ. 38:18ಕೀರ್ತ 32:5
ಕೀರ್ತ. 38:18ಕೀರ್ತ 51:3
ಕೀರ್ತ. 38:21ಕೀರ್ತ 22:11; 35:22
ಕೀರ್ತ. 38:22ಕೀರ್ತ 27:1; 62:2; ಯೆಶಾ 12:2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಕೀರ್ತನೆ 38:1-22

ಕೀರ್ತನೆ

ನೆನಪಿನಲ್ಲಿಡೋಕೆ ದಾವೀದನ ಮಧುರ ಗೀತೆ.

38 ಯೆಹೋವನೇ ಕೋಪದಿಂದ ನನ್ನನ್ನ ತಿದ್ದಬೇಡ,

ಸಿಟ್ಟಿಂದ ನನ್ನನ್ನ ಸರಿಪಡಿಸಬೇಡ.+

 2 ಯಾಕಂದ್ರೆ ನಿನ್ನ ಬಾಣ ನನ್ನೊಳಗೆ ಆಳವಾಗಿ ಹೋಗಿದೆ,

ನಿನ್ನ ಶಿಕ್ಷೆ ನನ್ನ ಮೇಲೆ ಭಾರವಾಗಿದೆ.+

 3 ನಿನ್ನ ಕೋಪದಿಂದ ನನ್ನ ಇಡೀ ಶರೀರಕ್ಕೆ ಹುಷಾರಿಲ್ಲ,*

ನನ್ನ ಪಾಪದಿಂದಾಗಿ ನನ್ನ ಎಲುಬಲ್ಲಿ ಶಾಂತಿನೇ ಇಲ್ಲ.+

 4 ಯಾಕಂದ್ರೆ ನನ್ನ ತಪ್ಪುಗಳು ನನ್ನನ್ನ ಮುಳುಗಿಸಿಬಿಟ್ಟಿದೆ,+

ಅದು ಭಾರವಾದ ಹೊರೆ ತರ ಇದೆ, ನನ್ನಿಂದ ಹೊರಕ್ಕಾಗ್ತಿಲ್ಲ.

 5 ನನ್ನ ದಡ್ಡತನದಿಂದ,

ನನ್ನ ಹುಣ್ಣುಗಳು ಕೀವುಗಟ್ಟಿ ಕೆಟ್ಟ ವಾಸನೆ ಬರ್ತಿದೆ.

 6 ನಾನು ತುಂಬ ಸಂಕಟದಲ್ಲಿದ್ದೀನಿ, ತುಂಬ ಕುಗ್ಗಿಹೋಗಿದ್ದೀನಿ,

ಇಡೀ ದಿನ ದುಃಖದಲ್ಲಿ ಮುಳುಗಿ ಹೋಗಿರ್ತಿನಿ.

 7 ನನ್ನೊಳಗೆ ಬೆಂಕಿ ಉರೀತಾ ಇದೆ,*

ನನ್ನ ಇಡೀ ದೇಹಕ್ಕೆ ರೋಗ ಬಂದಿದೆ.+

 8 ನಾನು ಮರಗಟ್ಟಿ ಹೋಗಿದ್ದೀನಿ, ಸಂಪೂರ್ಣವಾಗಿ ನಲುಗಿಹೋಗಿದ್ದೀನಿ,

ನನ್ನ ಹೃದಯದ ಯಾತನೆ ಕಿರಿಚಾಡಿ ನರಳೋ ತರ ಮಾಡ್ತಿದೆ.

 9 ಯೆಹೋವನೇ, ನನ್ನ ಬಯಕೆಗಳೆಲ್ಲ ನಿನ್ನ ಮುಂದಿದೆ,

ನನ್ನ ದುಃಖದ ನಿಟ್ಟುಸಿರು ನಿನಗೆ ಕಾಣ್ತಿದೆ.

10 ನನ್ನ ಹೃದಯ ಜೋರಾಗಿ ಬಡ್ಕೊಳ್ತಿದೆ, ನನಗೆ ಶಕ್ತಿನೇ ಇಲ್ಲದಾಗಿದೆ,

ನನ್ನ ಕಣ್ಣಿನ ದೃಷ್ಟಿ ಮೊಬ್ಬಾಗಿದೆ.+

11 ನನ್ನ ರೋಗದಿಂದಾಗಿ ನನ್ನ ಸ್ನೇಹಿತರು ನನ್ನ ದೂರ ಮಾಡಿ ಓಡಾಡ್ತಿದ್ದಾರೆ,

ನನ್ನ ಆಪ್ತಮಿತ್ರರು ನನ್ನಿಂದ ದೂರವಾಗಿದ್ದಾರೆ.

12 ನನ್ನ ಪ್ರಾಣ ತೆಗೀಬೇಕು ಅಂತಿರೋರು ಬಲೆ ಬೀಸಿದ್ದಾರೆ,

ನನಗೆ ಕೆಟ್ಟದ್ದನ್ನ ಮಾಡಬೇಕು ಅಂತಿರೋರು ನನ್ನ ವಿರುದ್ಧ ಮಾತಾಡಿದ್ದಾರೆ,+

ಅವರು ನನಗೆ ಮೋಸ ಮಾಡೋಕೆ ಇಡೀ ದಿನ ಕುತಂತ್ರ ಮಾಡ್ತಾರೆ.

13 ಆದ್ರೆ ನಾನು ಅವ್ರ ಮಾತಿಗೆ ಗಮನಕೊಡದೆ ಕಿವುಡನ ತರ ಇದ್ದುಬಿಡ್ತೀನಿ,+

ಏನೂ ಮಾತಾಡದೆ ಮೂಕನ ಹಾಗೆ ಇದ್ದುಬಿಡ್ತೀನಿ.+

14 ಏನೂ ಕೇಳದ ಕಿವುಡನ ತರ ಆಗಿದ್ದೀನಿ,

ನನ್ನ ಪರವಾಗಿ ಮಾತಾಡೋಕೆ ಆಗದ ಮೂಕನ ತರ ಆಗಿದ್ದೀನಿ.

15 ಯಾಕಂದ್ರೆ ಯೆಹೋವನೇ, ನಾನು ನಿನಗಾಗಿ ಕಾದೆ,+

ನನ್ನ ದೇವರಾದ ಯೆಹೋವನೇ, ನೀನು ನನಗೆ ಉತ್ರ ಕೊಟ್ಟೆ.+

16 ನಾನು ಹೀಗೆ ಹೇಳಿದ್ದೆ “ನನ್ನ ಕಾಲು ಜಾರಿದ್ರೆ,

ಅವರು ನನ್ನನ್ನ ನೋಡಿ ಖುಷಿಪಡಬಾರದು ಅಥವಾ ಕೊಚ್ಕೊಬಾರದು.”

17 ಯಾಕಂದ್ರೆ ನಾನು ಇನ್ನೇನು ಕುಸಿದು ಬೀಳ್ತಿದ್ದೆ,

ಯಾವಾಗ್ಲೂ ನೋವಿಂದ ನರಳ್ತಿದ್ದೆ.+

18 ನಾನು ನನ್ನ ತಪ್ಪನ್ನ ಒಪ್ಕೊಂಡೆ,+

ನನ್ನ ಪಾಪಗಳಿಂದಾಗಿ ಕಷ್ಟದಲ್ಲಿ ಬಿದ್ದೆ.+

19 ಆದ್ರೆ ನನ್ನ ಶತ್ರುಗಳು ಚುರುಕಾಗಿದ್ದಾರೆ,* ಬಲಿಷ್ಠರಾಗಿದ್ದಾರೆ,

ಯಾವ ಕಾರಣನೂ ಇಲ್ಲದೆ ನನ್ನನ್ನ ದ್ವೇಷಿಸೋ ಜನ ಜಾಸ್ತಿ ಆಗಿದ್ದಾರೆ.

20 ಅವರು ಉಪಕಾರಕ್ಕೆ ಅಪಕಾರ ಮಾಡಿದ್ದಾರೆ,

ಒಳ್ಳೇದನ್ನ ಮಾಡದ ಹಾಗೆ ನನ್ನನ್ನ ತಡೆದಿದ್ದಾರೆ.

21 ಯೆಹೋವನೇ, ನನ್ನನ್ನ ಬಿಟ್ಟುಬಿಡಬೇಡ.

ದೇವರೇ, ನನ್ನಿಂದ ದೂರ ಉಳೀಬೇಡ.+

22 ಯೆಹೋವನೇ, ನನ್ನ ರಕ್ಷಕನೇ,+

ಬೇಗ ಬಂದು ನನಗೆ ಸಹಾಯಮಾಡು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ