ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • ಅರಣ್ಯಕಾಂಡ 13
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

ಅರಣ್ಯಕಾಂಡ ಮುಖ್ಯಾಂಶಗಳು

      • 12 ಗೂಢಚಾರರು ಕಾನಾನಿಗೆ (1-24)

      • 10 ಗೂಢಚಾರರ ಕೆಟ್ಟ ವರದಿ (25-33)

ಅರಣ್ಯಕಾಂಡ 13:2

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:25; ಧರ್ಮೋ 1:15, 22, 23

ಅರಣ್ಯಕಾಂಡ 13:3

ಮಾರ್ಜಿನಲ್ ರೆಫರೆನ್ಸ್

  • +ಅರ 12:16; ಧರ್ಮೋ 1:19

ಅರಣ್ಯಕಾಂಡ 13:6

ಮಾರ್ಜಿನಲ್ ರೆಫರೆನ್ಸ್

  • +ಅರ 13:30; 14:30, 38; 34:18, 19; 1ಪೂರ್ವ 4:15

ಅರಣ್ಯಕಾಂಡ 13:8

ಮಾರ್ಜಿನಲ್ ರೆಫರೆನ್ಸ್

  • +ಅರ 11:28; 13:16; 14:30; 34:17

ಅರಣ್ಯಕಾಂಡ 13:11

ಮಾರ್ಜಿನಲ್ ರೆಫರೆನ್ಸ್

  • +ಆದಿ 48:5
  • +ಆದಿ 48:17, 19

ಅರಣ್ಯಕಾಂಡ 13:16

ಪಾದಟಿಪ್ಪಣಿ

  • *

    ಅರ್ಥ “ಯೆಹೋವ ರಕ್ಷಣೆ ಆಗಿದ್ದಾನೆ.”

ಮಾರ್ಜಿನಲ್ ರೆಫರೆನ್ಸ್

  • +ವಿಮೋ 17:9

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    12/1/2002, ಪು. 11

ಅರಣ್ಯಕಾಂಡ 13:17

ಪಾದಟಿಪ್ಪಣಿ

  • *

    ಅಥವಾ “‘ದಕ್ಷಿಣಕ್ಕೆ’ ಅಂದ್ರೆ ಕಾನಾನ್‌ ದೇಶದ ದಕ್ಷಿಣ ದಿಕ್ಕಿಗೆ.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 1:7

ಅರಣ್ಯಕಾಂಡ 13:18

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:8; ಧರ್ಮೋ 8:7

ಅರಣ್ಯಕಾಂಡ 13:20

ಮಾರ್ಜಿನಲ್ ರೆಫರೆನ್ಸ್

  • +ನೆಹೆ 9:25; ಯೆಹೆ 20:6
  • +ಧರ್ಮೋ 31:6; ಯೆಹೋ 1:6, 9
  • +ಅರ 13:23

ಅರಣ್ಯಕಾಂಡ 13:21

ಪಾದಟಿಪ್ಪಣಿ

  • *

    ಅಥವಾ “ಹಾಮಾತಿನ ಬಾಗಿಲ.”

ಮಾರ್ಜಿನಲ್ ರೆಫರೆನ್ಸ್

  • +ಅರ 34:2, 3; ಯೆಹೋ 15:1
  • +ಅರ 34:8
  • +2ಸಮು 10:6, 8

ಅರಣ್ಯಕಾಂಡ 13:22

ಮಾರ್ಜಿನಲ್ ರೆಫರೆನ್ಸ್

  • +ಆದಿ 13:18; ಯೆಹೋ 15:13; 21:11, 12
  • +ನ್ಯಾಯ 1:10
  • +ಧರ್ಮೋ 9:1, 2; ಯೆಹೋ 11:21

ಅರಣ್ಯಕಾಂಡ 13:23

ಮಾರ್ಜಿನಲ್ ರೆಫರೆನ್ಸ್

  • +ಅರ 32:9
  • +ಧರ್ಮೋ 1:25; 8:7-9

ಅರಣ್ಯಕಾಂಡ 13:24

ಪಾದಟಿಪ್ಪಣಿ

  • *

    ಅರ್ಥ “ದ್ರಾಕ್ಷಿ ಗೊಂಚಲು.”

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 1:24

ಅರಣ್ಯಕಾಂಡ 13:25

ಮಾರ್ಜಿನಲ್ ರೆಫರೆನ್ಸ್

  • +ಅರ 14:33, 34

ಅರಣ್ಯಕಾಂಡ 13:26

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 1:19

ಅರಣ್ಯಕಾಂಡ 13:27

ಮಾರ್ಜಿನಲ್ ರೆಫರೆನ್ಸ್

  • +ವಿಮೋ 3:8; ಯಾಜ 20:24
  • +ಧರ್ಮೋ 1:25

ಅರಣ್ಯಕಾಂಡ 13:28

ಮಾರ್ಜಿನಲ್ ರೆಫರೆನ್ಸ್

  • +ಅರ 13:22, 33; ಧರ್ಮೋ 1:27, 28

ಅರಣ್ಯಕಾಂಡ 13:29

ಮಾರ್ಜಿನಲ್ ರೆಫರೆನ್ಸ್

  • +ಅರ 13:17
  • +ಆದಿ 36:12; ವಿಮೋ 17:8; 1ಸಮು 15:3
  • +ನ್ಯಾಯ 1:21; 2ಸಮು 5:6, 7
  • +ಆದಿ 10:15, 16
  • +ಆದಿ 10:19
  • +ವಿಮೋ 23:23; ಧರ್ಮೋ 7:1; 20:17

ಅರಣ್ಯಕಾಂಡ 13:30

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 14:7, 8

ಅರಣ್ಯಕಾಂಡ 13:31

ಮಾರ್ಜಿನಲ್ ರೆಫರೆನ್ಸ್

  • +ಅರ 32:9

ಅರಣ್ಯಕಾಂಡ 13:32

ಮಾರ್ಜಿನಲ್ ರೆಫರೆನ್ಸ್

  • +ಅರ 14:36
  • +ಆಮೋ 2:9

ಅರಣ್ಯಕಾಂಡ 13:33

ಮಾರ್ಜಿನಲ್ ರೆಫರೆನ್ಸ್

  • +ಧರ್ಮೋ 1:28; 9:1, 2

ಇಂಡೆಕ್ಸಸ್

  • ಸಂಶೋಧನಾ ಸಾಧನ

    ಕಾವಲಿನಬುರುಜು,

    7/15/2011, ಪು. 10-11

    10/1/2006, ಪು. 17-18

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

ಅರ. 13:2ವಿಮೋ 18:25; ಧರ್ಮೋ 1:15, 22, 23
ಅರ. 13:3ಅರ 12:16; ಧರ್ಮೋ 1:19
ಅರ. 13:6ಅರ 13:30; 14:30, 38; 34:18, 19; 1ಪೂರ್ವ 4:15
ಅರ. 13:8ಅರ 11:28; 13:16; 14:30; 34:17
ಅರ. 13:11ಆದಿ 48:5
ಅರ. 13:11ಆದಿ 48:17, 19
ಅರ. 13:16ವಿಮೋ 17:9
ಅರ. 13:17ಧರ್ಮೋ 1:7
ಅರ. 13:18ವಿಮೋ 3:8; ಧರ್ಮೋ 8:7
ಅರ. 13:20ನೆಹೆ 9:25; ಯೆಹೆ 20:6
ಅರ. 13:20ಧರ್ಮೋ 31:6; ಯೆಹೋ 1:6, 9
ಅರ. 13:20ಅರ 13:23
ಅರ. 13:21ಅರ 34:2, 3; ಯೆಹೋ 15:1
ಅರ. 13:21ಅರ 34:8
ಅರ. 13:212ಸಮು 10:6, 8
ಅರ. 13:22ಆದಿ 13:18; ಯೆಹೋ 15:13; 21:11, 12
ಅರ. 13:22ನ್ಯಾಯ 1:10
ಅರ. 13:22ಧರ್ಮೋ 9:1, 2; ಯೆಹೋ 11:21
ಅರ. 13:23ಅರ 32:9
ಅರ. 13:23ಧರ್ಮೋ 1:25; 8:7-9
ಅರ. 13:24ಧರ್ಮೋ 1:24
ಅರ. 13:25ಅರ 14:33, 34
ಅರ. 13:26ಧರ್ಮೋ 1:19
ಅರ. 13:27ವಿಮೋ 3:8; ಯಾಜ 20:24
ಅರ. 13:27ಧರ್ಮೋ 1:25
ಅರ. 13:28ಅರ 13:22, 33; ಧರ್ಮೋ 1:27, 28
ಅರ. 13:29ಅರ 13:17
ಅರ. 13:29ಆದಿ 36:12; ವಿಮೋ 17:8; 1ಸಮು 15:3
ಅರ. 13:29ನ್ಯಾಯ 1:21; 2ಸಮು 5:6, 7
ಅರ. 13:29ಆದಿ 10:15, 16
ಅರ. 13:29ಆದಿ 10:19
ಅರ. 13:29ವಿಮೋ 23:23; ಧರ್ಮೋ 7:1; 20:17
ಅರ. 13:30ಯೆಹೋ 14:7, 8
ಅರ. 13:31ಅರ 32:9
ಅರ. 13:32ಅರ 14:36
ಅರ. 13:32ಆಮೋ 2:9
ಅರ. 13:33ಧರ್ಮೋ 1:28; 9:1, 2
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
  • 33
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಅರಣ್ಯಕಾಂಡ 13:1-33

ಅರಣ್ಯಕಾಂಡ

13 ಯೆಹೋವ ಮೋಶೆ ಜೊತೆ ಮಾತಾಡಿ 2 “ನಾನು ಇಸ್ರಾಯೇಲ್ಯರಿಗೆ ಕೊಡೋ ಕಾನಾನ್‌ ದೇಶವನ್ನ ನೋಡ್ಕೊಂಡು ಬರೋಕೆ ಕೆಲವು ಗೂಢಚಾರರನ್ನ ಕಳಿಸು. ಅದಕ್ಕಾಗಿ ಪ್ರತಿಯೊಂದು ಕುಲದಿಂದ ಒಬ್ಬೊಬ್ಬ ಪ್ರಧಾನನನ್ನ ಆರಿಸ್ಕೊ”+ ಅಂದನು.

3 ಯೆಹೋವ ಹೇಳಿದ ಹಾಗೇ ಮೋಶೆ ಕೆಲವು ಗಂಡಸರನ್ನ ಪಾರಾನ್‌ ಕಾಡಿಂದ+ ಕಾನಾನ್‌ ದೇಶಕ್ಕೆ ಕಳಿಸಿದ. ಅವರೆಲ್ಲ ಇಸ್ರಾಯೇಲ್ಯರ ಮುಖ್ಯಸ್ಥರು. 4 ಅವರ ಹೆಸ್ರು: ರೂಬೇನ್‌ ಕುಲದಿಂದ ಜಕ್ಕೂರನ ಮಗ ಶಮ್ಮೂವ. 5 ಸಿಮೆಯೋನ್‌ ಕುಲದಿಂದ ಹೋರಿಯ ಮಗ ಶಾಫಾಟ. 6 ಯೆಹೂದ ಕುಲದಿಂದ ಯೆಫುನ್ನೆಯ ಮಗ ಕಾಲೇಬ್‌.+ 7 ಇಸ್ಸಾಕಾರ್‌ ಕುಲದಿಂದ ಯೋಸೇಫನ ಮಗ ಇಗಾಲ್‌. 8 ಎಫ್ರಾಯೀಮ್‌ ಕುಲದಿಂದ ನೂನನ ಮಗ ಹೋಷೇಯ.+ 9 ಬೆನ್ಯಾಮೀನ್‌ ಕುಲದಿಂದ ರಾಫೂವನ ಮಗ ಪಲ್ಟಿ. 10 ಜೆಬುಲೂನ್‌ ಕುಲದಿಂದ ಸೋದೀಯ ಮಗ ಗದ್ದಿಯೇಲ್‌. 11 ಯೋಸೇಫ ಕುಲದಿಂದ+ ಅಂದ್ರೆ ಮನಸ್ಸೆ ಕುಲದಿಂದ+ ಸೂಸೀಯ ಮಗ ಗದ್ದಿ. 12 ದಾನ್‌ ಕುಲದಿಂದ ಗೆಮಲ್ಲೀಯ ಮಗ ಅಮ್ಮೀಯೇಲ್‌. 13 ಅಶೇರ್‌ ಕುಲದಿಂದ ಮೀಕಾಯೇಲನ ಮಗ ಸೆತೂರ್‌. 14 ನಫ್ತಾಲಿ ಕುಲದಿಂದ ವಾಪೆಸೀಯ ಮಗ ನಹಬಿ. 15 ಗಾದ್‌ ಕುಲದಿಂದ ಮಾಕೀಯನ ಮಗ ಗೆಯೂವೇಲ್‌. 16 ಇದಿಷ್ಟು ಮೋಶೆ ಕಾನಾನ್‌ ದೇಶಕ್ಕೆ ಕಳಿಸಿದ ಗೂಢಚಾರರ ಹೆಸ್ರುಗಳು. ಮೋಶೆ ನೂನನ ಮಗ ಹೋಷೇಯನಿಗೆ ಯೆಹೋಶುವ*+ ಅಂತ ಹೆಸರಿಟ್ಟ.

17 ಮೋಶೆ ಅವರನ್ನ ಕಾನಾನ್‌ ದೇಶಕ್ಕೆ ಕಳಿಸುವಾಗ “ನೀವು ಮೊದ್ಲು ನೆಗೆಬ್‌ಗೆ* ಹೋಗಿ ಆಮೇಲೆ ಅಲ್ಲಿಂದ ಬೆಟ್ಟ ಪ್ರದೇಶಕ್ಕೆ ಹೋಗಿ.+ 18 ಆ ದೇಶ ಹೇಗಿದೆ,+ ಅಲ್ಲಿನ ಜನ ಬಲಶಾಲಿಗಳಾ ಬಲಹೀನರಾ, ಅಲ್ಲಿ ಜನ ಜಾಸ್ತಿ ಇದ್ದಾರಾ ಕಮ್ಮಿ ಇದ್ದಾರಾ, 19 ಆ ದೇಶ ಒಳ್ಳೇದಾ ಇಲ್ವಾ, ಅವ್ರ ಪಟ್ಟಣಗಳಿಗೆ ಕೋಟೆ ಇದ್ಯಾ ಅಂತ ನೋಡ್ಕೊಂಡು ಬನ್ನಿ. 20 ಅಲ್ಲಿನ ಜಮೀನು ಫಲವತ್ತಾಗಿದ್ಯಾ ಬಂಜರಾಗಿದ್ಯಾ,+ ಅಲ್ಲಿ ಮರಗಳು ಇದ್ಯಾ ಇಲ್ವಾ ಅಂತ ನೋಡಿ. ಧೈರ್ಯದಿಂದ+ ಹೋಗಿ, ಅಲ್ಲಿನ ಕೆಲವು ಹಣ್ಣುಗಳನ್ನ ತಗೊಂಡು ಬನ್ನಿ” ಅಂದ. ಆಗ ದ್ರಾಕ್ಷಿ ಹಣ್ಣಿನ ಮೊದ್ಲ ಬೆಳೆಯ ಕಾಲವಾಗಿತ್ತು.+

21 ಅವರು ಅಲ್ಲಿಂದ ಕಾನಾನ್‌ ದೇಶಕ್ಕೆ ಹೋದ್ರು. ಅವರು ಚಿನ್‌ ಕಾಡುಪ್ರದೇಶದಿಂದ+ ಲೆಬೋ-ಹಾಮಾತಿನ*+ ಹತ್ರ ಇರೋ ರೆಹೋಬಿನ+ ತನಕ ದೇಶ ಸುತ್ತಿ ನೋಡಿದ್ರು. 22 ಅವರು ನೆಗೆಬಿಗೆ ಹೋದ ಮೇಲೆ ಅಲ್ಲಿಂದ ಹೆಬ್ರೋನಿಗೆ+ ಹೋದ್ರು. ಅಲ್ಲಿ ಅಹೀಮನ್‌, ಶೇಷೈ, ತಲ್ಮೈ+ ಅನ್ನೋ ಅನಾಕ್ಯ ಜನ+ ವಾಸಿಸ್ತಿದ್ರು. ಹೆಬ್ರೋನ್‌ ಪಟ್ಟಣವನ್ನ ಈಜಿಪ್ಟಿನ ಸೋನ್‌ ಪಟ್ಟಣಕ್ಕಿಂತ ಏಳು ವರ್ಷ ಮುಂಚೆ ಕಟ್ಟಲಾಗಿತ್ತು. 23 ಅವರು ಎಷ್ಕೋಲ್‌ ಕಣಿವೆಗೆ+ ಬಂದಾಗ ಒಂದು ದ್ರಾಕ್ಷಿ ಗೊಂಚಲಿದ್ದ ಕೊಂಬೆಯನ್ನ ಕಡಿದ್ರು. ಅದನ್ನ ಇಬ್ರು ಗಂಡಸರು ಒಂದು ಕೋಲಿನ ಮೇಲೆ ಹಾಕಿ ಎತ್ಕೊಂಡು ಹೋಗಬೇಕಾಯ್ತು. ಅದ್ರ ಜೊತೆ ಕೆಲವು ದಾಳಿಂಬೆಗಳನ್ನ ಅಂಜೂರಗಳನ್ನ ತಗೊಂಡ್ರು.+ 24 ಇಸ್ರಾಯೇಲ್ಯ ಗಂಡಸರು ಅಲ್ಲಿ ದ್ರಾಕ್ಷಿ ಗೊಂಚಲನ್ನ ಕೊಯ್ದದ್ರಿಂದ ಆ ಜಾಗಕ್ಕೆ ಎಷ್ಕೋಲ್‌*+ ಕಣಿವೆ ಅಂತ ಹೆಸ್ರು ಬಂತು.

25 ಆ ಗೂಢಚಾರರು 40 ದಿನ+ ಆದ್ಮೇಲೆ ವಾಪಸ್‌ ಬಂದ್ರು. 26 ಅವರು ಮೋಶೆ, ಆರೋನ, ಎಲ್ಲ ಇಸ್ರಾಯೇಲ್ಯರು ಇದ್ದ ಕಾದೇಶಿನ+ ಪಾರಾನ್‌ ಕಾಡಿಗೆ ಬಂದ್ರು. ಅವರು ಎಲ್ಲ ಇಸ್ರಾಯೇಲ್ಯರಿಗೆ ಕಾನಾನ್‌ ದೇಶದ ಬಗ್ಗೆ ವರದಿಯನ್ನ ಕೊಟ್ರು. ಅಲ್ಲಿನ ಹಣ್ಣುಗಳನ್ನ ತೋರಿಸಿದ್ರು. 27 ಅವರು ಮೋಶೆಗೆ “ನೀನು ಹೇಳಿದ ಹಾಗೇ ನಾವು ಕಾನಾನ್‌ ದೇಶಕ್ಕೆ ಹೋದ್ವಿ. ಅದು ನಿಜವಾಗ್ಲೂ ಹಾಲೂ ಜೇನೂ ಹರಿಯೋ+ ದೇಶ. ಇವೆಲ್ಲ ಆ ದೇಶದಲ್ಲಿ ಬೆಳೆದ ಹಣ್ಣುಗಳು.+ 28 ಆದ್ರೆ ಆ ದೇಶದ ಜನ ಬಲಿಷ್ಠರು. ಅಲ್ಲಿ ಭದ್ರ ಕೋಟೆಗಳಿರೋ ದೊಡ್ಡದೊಡ್ಡ ಪಟ್ಟಣಗಳಿವೆ. ಅಷ್ಟೇ ಅಲ್ಲ ಅಲ್ಲಿ ನಾವು ಅನಾಕ್ಯರನ್ನ ನೋಡಿದ್ವಿ.+ 29 ನೆಗೆಬಿನಲ್ಲಿ+ ಅಮಾಲೇಕ್ಯರು+ ಇದ್ದಾರೆ. ಬೆಟ್ಟ ಪ್ರದೇಶದಲ್ಲಿ ಹಿತ್ತಿಯರು, ಯೆಬೂಸಿಯರು,+ ಅಮೋರಿಯರು+ ವಾಸ ಇದ್ದಾರೆ. ಸಮುದ್ರದ+ ಹತ್ರ ಯೋರ್ದನ್‌ ನದಿ ಹತ್ರ ಕಾನಾನ್ಯರು+ ಇದ್ದಾರೆ” ಅಂದ್ರು.

30 ಆಗ ಕಾಲೇಬ ಮೋಶೆ ಮುಂದೆ ನಿಂತಿದ್ದ ಜನ್ರನ್ನ ಶಾಂತ ಮಾಡೋಕೆ ಪ್ರಯತ್ನಿಸ್ತಾ “ಆ ದೇಶದ ವಿರುದ್ಧ ಹೋಗಿ ಅದನ್ನ ಸೋಲಿಸಿ ವಶ ಮಾಡೋಕೆ ಖಂಡಿತ ನಮ್ಮಿಂದ ಆಗುತ್ತೆ. ಬನ್ನಿ, ಈಗ್ಲೇ ಹೋಗಿ ದಾಳಿ ಮಾಡೋಣ”+ ಅಂದ. 31 ಆದ್ರೆ ಅವನ ಜೊತೆ ಹೋಗಿದ್ದ ಗಂಡಸರು “ಅವ್ರ ಜೊತೆ ಹೋರಾಡೋಕೆ ಸಾಧ್ಯಾನೇ ಇಲ್ಲ. ಅವರು ನಮಗಿಂತ ತುಂಬ ಬಲಿಷ್ಠರು”+ ಅಂದ್ರು. 32 ಅವರು ಇಸ್ರಾಯೇಲ್ಯರಿಗೆ ಕಾನಾನ್‌ ದೇಶದ ಬಗ್ಗೆ ಇನ್ನೂ ಕೆಟ್ಟ ಕೆಟ್ಟ ಸುದ್ದಿ ಕೊಡ್ತಾ+ “ನಾವು ಸುತ್ತಿ ನೋಡಿದ ಆ ದೇಶ ಅಪಾಯಕರ ದೇಶ, ಅಲ್ಲಿ ನಾವು ಬದುಕುಳಿಯೋಕೆ ಆಗಲ್ಲ. ನಾವು ನೋಡಿದ ಎಲ್ಲ ಜನ್ರು ತುಂಬ ಎತ್ತರವಾಗಿ, ಬಲಿಷ್ಠರಾಗಿ ಇದ್ರು.+ 33 ಅಲ್ಲಿ ನಾವು ನೆಫೀಲಿಯರನ್ನ ನೋಡಿದ್ವಿ. ಅವರು ನೆಫೀಲಿಯರ ವಂಶದವರಾದ ಅನಾಕ್ಯರು.+ ಅವ್ರ ಮುಂದೆ ನಾವು ಮಿಡತೆಗಳ ತರ ಇದ್ವಿ. ಅವ್ರ ಕಣ್ಣಿಗೂ ನಾವು ಮಿಡತೆಗಳ ತರ ಕಾಣ್ತಿದ್ವಿ” ಅಂದ್ರು.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ