ಕೀರ್ತನೆ
ಯಾತ್ರೆ ಗೀತೆ. ದಾವೀದನ ಕೀರ್ತನೆ.
131 ಯೆಹೋವನೇ, ನನ್ನ ಹೃದಯದಲ್ಲಿ ಗರ್ವ ಇಲ್ಲ,
ನನಗೆ ಸೊಕ್ಕಿನ ಕಣ್ಣಿಲ್ಲ,+
ದೊಡ್ಡದೊಡ್ಡ ಸಾಹಸ ಮಾಡಬೇಕು ಅನ್ನೋ ಅತಿಯಾಸೆ ಇಲ್ಲ,+
ನನ್ನ ಶಕ್ತಿಗೂ ಮೀರಿ ವಿಷ್ಯಗಳನ್ನ ಮಾಡೋ ಆಸೆಯಾಗಲಿ ನನಗಿಲ್ಲ.
2 ಬದಲಿಗೆ ಎದೆಹಾಲನ್ನ ಬಿಟ್ಟಿರೋ ಮಗು ಅಮ್ಮನ ಹತ್ರ ನಿಶ್ಚಿಂತೆಯಿಂದ ಇರೋ ತರ,
ನಾನು ನನ್ನ ಪ್ರಾಣವನ್ನ* ಸಮಾಧಾನ ಪಡಿಸಿದ್ದೀನಿ,+
ಎದೆಹಾಲು ಬಿಟ್ಟಿರೋ ಮಗು ತರ ನಾನು ಸಂತೃಪ್ತಿಯಾಗಿ ಇದ್ದೀನಿ.
3 ಇವತ್ತಿಂದ ಶಾಶ್ವತವಾಗಿ
ಇಸ್ರಾಯೇಲ್ ಯೆಹೋವನಿಗಾಗಿ ಕಾಯಲಿ.+