ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • 1 ಪೂರ್ವಕಾಲವೃತ್ತಾಂತ 26
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

1 ಪೂರ್ವಕಾಲವೃತ್ತಾಂತ ಮುಖ್ಯಾಂಶಗಳು

      • ಬಾಗಿಲು ಕಾಯುವವರ ದಳಗಳು (1-19)

      • ಖಜಾನೆಗಳ ಮೇಲ್ವಿಚಾರಕರು, ಬೇರೆ ಅಧಿಕಾರಿಗಳು (20-32)

1 ಪೂರ್ವಕಾಲವೃತ್ತಾಂತ 26:1

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 9:2, 22; 2ಪೂರ್ವ 23:16, 19
  • +1ಪೂರ್ವ 26:14, 19

1 ಪೂರ್ವಕಾಲವೃತ್ತಾಂತ 26:9

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 26:14, 19

1 ಪೂರ್ವಕಾಲವೃತ್ತಾಂತ 26:13

ಮಾರ್ಜಿನಲ್ ರೆಫರೆನ್ಸ್

  • +ಜ್ಞಾನೋ 16:33

1 ಪೂರ್ವಕಾಲವೃತ್ತಾಂತ 26:15

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 26:4, 5

1 ಪೂರ್ವಕಾಲವೃತ್ತಾಂತ 26:16

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 26:10, 11

1 ಪೂರ್ವಕಾಲವೃತ್ತಾಂತ 26:17

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 26:15

1 ಪೂರ್ವಕಾಲವೃತ್ತಾಂತ 26:18

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 26:16

1 ಪೂರ್ವಕಾಲವೃತ್ತಾಂತ 26:20

ಪಾದಟಿಪ್ಪಣಿ

  • *

    ಅಥವಾ “ಸಮರ್ಪಿಸಲಾಗಿದ್ದ.”

ಮಾರ್ಜಿನಲ್ ರೆಫರೆನ್ಸ್

  • +1ಅರ 7:51; 14:25, 26; 1ಪೂರ್ವ 9:26; 18:10, 11

1 ಪೂರ್ವಕಾಲವೃತ್ತಾಂತ 26:21

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 29:8

1 ಪೂರ್ವಕಾಲವೃತ್ತಾಂತ 26:22

ಮಾರ್ಜಿನಲ್ ರೆಫರೆನ್ಸ್

  • +1ಅರ 15:18

1 ಪೂರ್ವಕಾಲವೃತ್ತಾಂತ 26:23

ಮಾರ್ಜಿನಲ್ ರೆಫರೆನ್ಸ್

  • +ಅರ 3:27

1 ಪೂರ್ವಕಾಲವೃತ್ತಾಂತ 26:25

ಮಾರ್ಜಿನಲ್ ರೆಫರೆನ್ಸ್

  • +ವಿಮೋ 18:3, 4
  • +1ಪೂರ್ವ 23:17

1 ಪೂರ್ವಕಾಲವೃತ್ತಾಂತ 26:26

ಮಾರ್ಜಿನಲ್ ರೆಫರೆನ್ಸ್

  • +ಅರ 31:50; 1ಪೂರ್ವ 18:10, 11
  • +1ಪೂರ್ವ 29:3, 4
  • +1ಪೂರ್ವ 29:6, 7

1 ಪೂರ್ವಕಾಲವೃತ್ತಾಂತ 26:27

ಮಾರ್ಜಿನಲ್ ರೆಫರೆನ್ಸ್

  • +ಯೆಹೋ 6:19
  • +ಅರ 31:28

1 ಪೂರ್ವಕಾಲವೃತ್ತಾಂತ 26:28

ಮಾರ್ಜಿನಲ್ ರೆಫರೆನ್ಸ್

  • +1ಸಮು 9:9
  • +1ಸಮು 14:50
  • +2ಸಮು 2:18
  • +2ಸಮು 20:23

1 ಪೂರ್ವಕಾಲವೃತ್ತಾಂತ 26:29

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 23:12
  • +ಧರ್ಮೋ 17:9; 2ಪೂರ್ವ 19:8

1 ಪೂರ್ವಕಾಲವೃತ್ತಾಂತ 26:30

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 23:12

1 ಪೂರ್ವಕಾಲವೃತ್ತಾಂತ 26:31

ಮಾರ್ಜಿನಲ್ ರೆಫರೆನ್ಸ್

  • +1ಪೂರ್ವ 23:19
  • +1ಪೂರ್ವ 29:26, 27
  • +ಯೆಹೋ 13:24, 25; 21:8, 39

ಸಮಾನಾಂತರ ಭಾಷಾಂತರಗಳು

ಸಮಾನಾಂತರ ಬೈಬಲ್ ವಚನಗಳನ್ನು ನೋಡಲು, ವಚನದ ಸಂಖ್ಯೆಯ ಮೇಲೆ ಕ್ಲಿಕ್ ಮಾಡಿ.

ಸಾಮಾನ್ಯ

1 ಪೂರ್ವ. 26:11ಪೂರ್ವ 9:2, 22; 2ಪೂರ್ವ 23:16, 19
1 ಪೂರ್ವ. 26:11ಪೂರ್ವ 26:14, 19
1 ಪೂರ್ವ. 26:91ಪೂರ್ವ 26:14, 19
1 ಪೂರ್ವ. 26:13ಜ್ಞಾನೋ 16:33
1 ಪೂರ್ವ. 26:151ಪೂರ್ವ 26:4, 5
1 ಪೂರ್ವ. 26:161ಪೂರ್ವ 26:10, 11
1 ಪೂರ್ವ. 26:171ಪೂರ್ವ 26:15
1 ಪೂರ್ವ. 26:181ಪೂರ್ವ 26:16
1 ಪೂರ್ವ. 26:201ಅರ 7:51; 14:25, 26; 1ಪೂರ್ವ 9:26; 18:10, 11
1 ಪೂರ್ವ. 26:211ಪೂರ್ವ 29:8
1 ಪೂರ್ವ. 26:221ಅರ 15:18
1 ಪೂರ್ವ. 26:23ಅರ 3:27
1 ಪೂರ್ವ. 26:25ವಿಮೋ 18:3, 4
1 ಪೂರ್ವ. 26:251ಪೂರ್ವ 23:17
1 ಪೂರ್ವ. 26:26ಅರ 31:50; 1ಪೂರ್ವ 18:10, 11
1 ಪೂರ್ವ. 26:261ಪೂರ್ವ 29:3, 4
1 ಪೂರ್ವ. 26:261ಪೂರ್ವ 29:6, 7
1 ಪೂರ್ವ. 26:27ಯೆಹೋ 6:19
1 ಪೂರ್ವ. 26:27ಅರ 31:28
1 ಪೂರ್ವ. 26:281ಸಮು 9:9
1 ಪೂರ್ವ. 26:281ಸಮು 14:50
1 ಪೂರ್ವ. 26:282ಸಮು 2:18
1 ಪೂರ್ವ. 26:282ಸಮು 20:23
1 ಪೂರ್ವ. 26:291ಪೂರ್ವ 23:12
1 ಪೂರ್ವ. 26:29ಧರ್ಮೋ 17:9; 2ಪೂರ್ವ 19:8
1 ಪೂರ್ವ. 26:301ಪೂರ್ವ 23:12
1 ಪೂರ್ವ. 26:311ಪೂರ್ವ 23:19
1 ಪೂರ್ವ. 26:311ಪೂರ್ವ 29:26, 27
1 ಪೂರ್ವ. 26:31ಯೆಹೋ 13:24, 25; 21:8, 39
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • 1
  • 2
  • 3
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • 15
  • 16
  • 17
  • 18
  • 19
  • 20
  • 21
  • 22
  • 23
  • 24
  • 25
  • 26
  • 27
  • 28
  • 29
  • 30
  • 31
  • 32
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
1 ಪೂರ್ವಕಾಲವೃತ್ತಾಂತ 26:1-32

ಒಂದನೇ ಪೂರ್ವಕಾಲವೃತ್ತಾಂತ

26 ಬಾಗಿಲು ಕಾಯುವವರ+ ದಳಗಳು: ಕೋರಹಿಯರಲ್ಲಿ ಮೆಷೆಲೆಮ್ಯ,+ ಇವನು ಆಸಾಫನ ವಂಶದವ, ಕೋರೆಯನ ಮಗ. 2 ಮೆಷೆಲೆಮ್ಯನ ಗಂಡು ಮಕ್ಕಳು ಯಾರಂದ್ರೆ: ಮೊದಲ್ನೇ ಮಗ ಜೆಕರ್ಯ, ಎರಡನೆಯವ ಯೆದೀಯಯೇಲ್‌, ಮೂರನೆಯವ ಜೆಬದ್ಯ, ನಾಲ್ಕನೆಯವ ಯೆತ್ನಿಯೇಲ, 3 ಐದನೆಯವ ಏಲಾಮ್‌, ಆರನೆಯವ ಯೆಹೋಹಾನಾನ್‌, ಏಳನೆಯವ ಎಲೈಹೋಯೇನೈ. 4 ಓಬೇದೆದೋಮನ ಗಂಡು ಮಕ್ಕಳು ಯಾರಂದ್ರೆ: ಮೊದಲ್ನೇ ಮಗ ಶೆಮಾಯ, ಎರಡನೆಯವ ಯೆಹೋದಾಬಾದ್‌, ಮೂರನೆಯವ ಯೋವ, ನಾಲ್ಕನೆಯವ ಶಾಕಾರ, ಐದನೆಯವ ನೆತನೇಲ್‌, 5 ಆರನೆಯವ ಅಮ್ಮೀಯೇಲ್‌, ಏಳನೆಯವ ಇಸ್ಸಾಕಾರ, ಎಂಟನೆಯವ ಪೆಯುಲ್ಲೆತೈ. ದೇವರ ಆಶೀರ್ವಾದದಿಂದ ಓಬೇದೆದೋಮನಿಗೆ ಈ ಗಂಡು ಮಕ್ಕಳು ಹುಟ್ಟಿದ್ರು.

6 ಓಬೇದೆದೋಮನ ಮಗ ಶೆಮಾಯನಿಗೆ ಗಂಡು ಮಕ್ಕಳು ಹುಟ್ಟಿದ್ರು. ಅವರು ಬಲಿಷ್ಠರೂ ಸಮರ್ಥ ಗಂಡಸರೂ ಆಗಿದ್ರು. ಹಾಗಾಗಿ ಅವರು ತಮ್ಮತಮ್ಮ ತಂದೆ ಮನೆತನಕ್ಕೆ ಒಡೆಯರಾಗಿದ್ರು. 7 ಶೆಮಾಯನ ಗಂಡು ಮಕ್ಕಳು ಒತ್ನಿ, ರೆಫಾಯೇಲ್‌, ಓಬೇದ, ಎಲ್ಜಾಬಾದ್‌. ಅವನ ಸಹೋದರರು ಎಲೀಹು, ಸೆಮಕ್ಯ. ಇವರು ಸಹ ಸಮರ್ಥ ಗಂಡಸ್ರಾಗಿದ್ರು. 8 ಇವ್ರೆಲ್ಲ ಓಬೇದೆದೋಮನ ವಂಶದವರಾಗಿದ್ರು. ಅವರು, ಅವ್ರ ಗಂಡು ಮಕ್ಕಳು, ಅವ್ರ ಸಹೋದರರು ಎಲ್ರೂ ಸಮರ್ಥ ಗಂಡಸರಾಗಿದ್ರು. ಅವರು ಮಾಡ್ತಿದ್ದ ಸೇವೆಗೆ ಅವರು ಅರ್ಹರಾಗಿದ್ರು. ಓಬೇದೆದೋಮನಿಗೆ ಸೇರಿದವರು ಒಟ್ಟು 62 ಜನ. 9 ಮೆಷೆಲೆಮ್ಯನ+ ಗಂಡು ಮಕ್ಕಳು, ಸಹೋದರರು ಸೇರಿ ಒಟ್ಟು 18 ಜನ. ಇವರು ಸಮರ್ಥ ಗಂಡಸರಾಗಿದ್ರು. 10 ಮೆರಾರಿ ವಂಶದವನಾದ ಹೋಸನಿಗೆ ಗಂಡು ಮಕ್ಕಳು ಇದ್ರು. ಅವ್ರಲ್ಲಿ ಶಿಮ್ರಿ ಮುಖ್ಯಸ್ಥನಾಗಿದ್ದ. ಇವನು ಮೊದಲ್ನೇ ಮಗನಲ್ಲವಾದ್ರೂ ಅವನ ಅಪ್ಪ ಅವನನ್ನ ಮುಖ್ಯಸ್ಥನಾಗಿ ನೇಮಿಸಿದ. 11 ಎರಡನೆಯವ ಹಿಲ್ಕೀಯ, ಮೂರನೆಯವ ಟೆಬಲ್ಯ, ನಾಲ್ಕನೆಯವ ಜೆಕರ್ಯ. ಹೋಸನ ಎಲ್ಲ ಗಂಡು ಮಕ್ಕಳು, ಸಹೋದರರು ಸೇರಿ 13 ಜನ.

12 ಬಾಗಿಲು ಕಾಯುವವರ ದಳಗಳಲ್ಲಿದ್ದ ಈ ಮುಖ್ಯಸ್ಥರಿಗೆ ತಮ್ಮ ಸಹೋದರರು ಯೆಹೋವನ ಆಲಯದಲ್ಲಿ ಯಾವ ಕೆಲಸಗಳನ್ನ ಮಾಡ್ತಿದ್ರೋ ಆ ಕೆಲಸಗಳನ್ನೇ ಕೊಟ್ರು. 13 ಹಾಗಾಗಿ ಅವ್ರೆಲ್ಲ ತಮ್ಮತಮ್ಮ ತಂದೆ ಮನೆತನ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಬೇರೆಬೇರೆ ಬಾಗಿಲುಗಳಲ್ಲಿ ತಮ್ಮ ಜವಾಬ್ದಾರಿಗಳು ಯಾವುದಂತ ತಿಳ್ಕೊಳ್ಳೋಕೆ ಚೀಟು ಹಾಕಿದ್ರು.+ 14 ಪೂರ್ವ ದಿಕ್ಕಿನ ಬಾಗಿಲಿಗೆ ಶೆಲೆಮ್ಯನ ಹೆಸ್ರಲ್ಲಿ ಚೀಟು ಬಿತ್ತು. ಅವರು ಅವನ ಮಗ ಜೆಕರ್ಯನಿಗಾಗಿ ಚೀಟು ಹಾಕಿದ್ರು. ಉತ್ತರದ ಬಾಗಿಲಿಗೆ ಅವನ ಹೆಸ್ರಲ್ಲಿ ಚೀಟು ಬಿತ್ತು. ಜೆಕರ್ಯ ಒಬ್ಬ ವಿವೇಚನೆಯುಳ್ಳ ಸಲಹೆಗಾರ. 15 ದಕ್ಷಿಣದ ಬಾಗಿಲಿಗೆ ಓಬೇದೆದೋಮನ ಹೆಸ್ರಲ್ಲಿ ಚೀಟು ಬಿತ್ತು. ಅವನ ಗಂಡು ಮಕ್ಕಳಿಗೆ+ ಕಣಜಗಳನ್ನ ನೋಡ್ಕೊಳ್ಳೋ ಕೆಲಸ ಕೊಟ್ಟಿದ್ರು. 16 ಪಶ್ಚಿಮದ ಬಾಗಿಲಿಗೆ ಶುಪ್ಪೀಮನ, ಹೋಸನ+ ಹೆಸ್ರಲ್ಲಿ ಚೀಟು ಬಿತ್ತು. ಆ ಬಾಗಿಲು ಶೆಲ್ಲೆಕೆತ್‌ ಅನ್ನೋ ಬಾಗಿಲ ಪಕ್ಕದಿಂದ ಮೇಲೆ ಹೋಗ್ತಿದ್ದ ಹೆದ್ದಾರಿ ಹತ್ರ ಇತ್ತು. ಬಾಗಿಲು ಕಾಯುವವರ ಗುಂಪುಗಳು ಪಕ್ಕಪಕ್ಕದಲ್ಲೇ ನಿಲ್ತಿತ್ತು. 17 ಪೂರ್ವದ ಬಾಗಿಲ ಹತ್ರ ಆರು ಲೇವಿಯರನ್ನ ನೇಮಿಸಿದ್ರು. ಪ್ರತಿದಿನ ಉತ್ತರದ ಕಡೆಗೆ ನಾಲ್ಕು ಜನ್ರನ್ನ, ದಕ್ಷಿಣದ ಕಡೆಗೆ ನಾಲ್ಕು ಜನ್ರನ್ನ ನೇಮಿಸ್ತಿದ್ರು. ಕಣಜವನ್ನ+ ನೋಡ್ಕೊಳ್ಳೋ ಕೆಲಸಕ್ಕಾಗಿ ಇಬ್ರು ಬಾಗಿಲು ಕಾಯುವವರನ್ನ, ಅವ್ರ ಪಕ್ಕದಲ್ಲಿ ಇನ್ನಿಬ್ರು ಬಾಗಿಲು ಕಾಯುವವರನ್ನ ನಿಲ್ಲಿಸಿದ್ರು. 18 ಪಶ್ಚಿಮದ ಕಡೆಗಿದ್ದ ಮೊಗಸಾಲೆಯ ಹೆದ್ದಾರಿ+ ಕಡೆಗೆ ನಾಲ್ಕು ಜನ್ರನ್ನ, ಮೊಗಸಾಲೆಯ ಕಡೆಗೆ ಇಬ್ರು ಬಾಗಿಲು ಕಾಯುವವರನ್ನ ನೇಮಿಸಿದ್ರು. 19 ಇವು ಕೋರಹಿಯರ, ಮೆರಾರಿಯರ ವಂಶದವರಿಂದ ಬಂದ ಬಾಗಿಲು ಕಾಯುವವರ ದಳಗಳು.

20 ಸತ್ಯದೇವರ ಆಲಯದ ಖಜಾನೆಗಳ ಮೇಲೆ, ಪವಿತ್ರ ಸೇವೆಗೆ ಮೀಸಲಾಗಿ ಇಟ್ಟಿದ್ದ* ವಸ್ತುಗಳ ಖಜಾನೆಗಳ ಮೇಲೆ ಲೇವಿಯರಲ್ಲಿ ಅಹೀಯನಿಗೆ ಅಧಿಕಾರ ಕೊಟ್ರು.+ 21 ಲದ್ದಾನನ ಗಂಡು ಮಕ್ಕಳಲ್ಲಿ ಅಂದ್ರೆ ಗೇರ್ಷೋನನ ವಂಶಸ್ಥರ ಗಂಡು ಮಕ್ಕಳಲ್ಲಿ ಒಬ್ಬನ ಹೆಸ್ರು ಯೆಹೀಯೇಲಿ. ಇವನು ಲದ್ದಾನನಿಗೆ ಸೇರಿದ ಕುಲದ ಒಬ್ಬ ಮುಖ್ಯಸ್ಥನಾಗಿದ್ದ.+ 22 ಯೆಹೀಯೇಲಿಯ ಗಂಡು ಮಕ್ಕಳು ಜೇತಾಮ್‌, ಯೋವೇಲ. ಇವ್ರಿಬ್ರೂ ಯೆಹೋವನ ಆಲಯದ ಖಜಾನೆಗಳ+ ಮೇಲ್ವಿಚಾರಕರಾಗಿದ್ರು. 23 ಅಮ್ರಾಮ್ಯರಿಂದ, ಇಚ್ಹಾರ್ಯರಿಂದ, ಹೆಬ್ರೋನ್ಯರಿಂದ, ಉಜ್ಜೀಯೇಲ್ಯರಿಂದ+ 24 ಶೆಬೂವೇಲನನ್ನ ಕಣಜಗಳ ಮೇಲೆ ಮೇಲ್ವಿಚಾರಣೆ ಮಾಡೋಕೆ ನೇಮಿಸಿದ್ರು. ಇವನು ಮೋಶೆಯ ಮೊಮ್ಮಗ, ಗೇರ್ಷೋಮನ ಮಗ. 25 ಇವನ ಸಹೋದರನಾದ ಎಲೀಯೆಜರನ+ ವಂಶದವರು: ಎಲೀಯೆಜರನ ಮಗ ರೆಹಬ್ಯ,+ ರೆಹಬ್ಯನ ಮಗ ಯೆಶಾಯ, ಯೆಶಾಯನ ಮಗ ಯೋರಾಮ, ಯೋರಾಮನ ಮಗ ಜಿಕ್ರಿ, ಜಿಕ್ರಿಯ ಮಗ ಶೆಲೋಮೋತ್‌. 26 ಇವರು ಖಜಾನೆಗಳಲ್ಲಿ ಪವಿತ್ರ ಸೇವೆಗಂತ ಮೀಸಲಾಗಿ ಇಟ್ಟಿರೋ ವಸ್ತುಗಳ+ ಮೇಲ್ವಿಚಾರಣೆ ಮಾಡ್ತಿದ್ರು. ಈ ವಸ್ತುಗಳನ್ನ ರಾಜ ದಾವೀದ,+ ಕುಲದ ಮುಖ್ಯಸ್ಥರು,+ ಸಾವಿರ ಜನ್ರ ಮೇಲೆ, ನೂರು ಜನ್ರ ಮೇಲೆ ಇದ್ದ ಅಧಿಪತಿಗಳು, ಸೇನಾಪತಿಗಳು ಪವಿತ್ರ ಅಂತ ಮೀಸಲಾಗಿ ಇಟ್ರು. ಆ ವಸ್ತುಗಳ ಮೇಲೆ ಶೆಲೋಮೋತ್‌, ಅವನ ಸಹೋದರರು ಅಧಿಕಾರಿಗಳಾಗಿದ್ರು. 27 ಯುದ್ಧಗಳಲ್ಲಿ+ ಕೊಳ್ಳೆಹೊಡೆದು+ ತಂದಿದ್ದ ವಸ್ತುಗಳಲ್ಲಿ ಕೆಲವನ್ನ ಇವರು ಯೆಹೋವನ ಆಲಯದ ನಿರ್ವಹಣೆಗಾಗಿ ಪವಿತ್ರ ಅಂತ ಮೀಸಲಾಗಿಟ್ಟಿದ್ರು. 28 ದಿವ್ಯದೃಷ್ಟಿಯಿದ್ದ+ ಸಮುವೇಲ, ಕೀಷನ ಮಗ ಸೌಲ, ನೇರನ ಮಗ ಅಬ್ನೇರ,+ ಚೆರೂಯಳ+ ಮಗ ಯೋವಾಬ+ ಪವಿತ್ರ ಅಂತ ಮೀಸಲಾಗಿ ಇಟ್ಟಿದ್ದ ಆ ವಸ್ತುಗಳನ್ನ ಮೇಲ್ವಿಚಾರಣೆ ಮಾಡ್ತಿದ್ರು. ಯಾರಾದ್ರೂ ಏನನ್ನಾದ್ರೂ ಪವಿತ್ರ ಅಂತ ಮೀಸಲಾಗಿ ಇಟ್ರೆ ಅದ್ರ ಮೇಲ್ವಿಚಾರಣೆಯನ್ನ ಶೆಲೋಮೋತ್‌, ಅವನ ಸಹೋದರರಿಗೆ ಒಪ್ಪಿಸಲಾಗ್ತಿತ್ತು.

29 ಇಚ್ಹಾರ್ಯರಲ್ಲಿ+ ಕೆನನ್ಯನಿಗೆ, ಅವನ ಗಂಡು ಮಕ್ಕಳಿಗೆ ದೇವರ ಆಲಯದ ಹೊರಗಿನ ಕೆಲಸಗಳನ್ನ ಒಪ್ಪಿಸಿದ್ರು. ಅವರು ಇಸ್ರಾಯೇಲಲ್ಲಿ ಅಧಿಕಾರಿಗಳು, ನ್ಯಾಯಾಧೀಶರು+ ಆಗಿದ್ರು.

30 ಹೆಬ್ರೋನ್ಯರಲ್ಲಿ+ ಹಷಬ್ಯನಿಗೆ, ಅವನ ಸಹೋದರರಿಗೆ ಯೋರ್ದನ್‌ ನದಿಯ ಪಶ್ಚಿಮ ದಿಕ್ಕಲ್ಲಿರೋ ಇಸ್ರಾಯೇಲ್‌ ಪ್ರದೇಶದ ಮೇಲೆ ಅಧಿಕಾರ ಕೊಟ್ರು. ಅವ್ರನ್ನ ಯೆಹೋವನ ಕೆಲಸಕ್ಕೆ, ರಾಜನ ಸೇವೆಗೆ ಬಳಸ್ತಿದ್ರು. ಸಮರ್ಥ ಗಂಡಸ್ರಾಗಿದ್ದ ಇವ್ರ ಒಟ್ಟು ಸಂಖ್ಯೆ 1,700. 31 ಹೆಬ್ರೋನ್ಯರಲ್ಲಿ ಯೆರೀಯಾನು+ ತನ್ನ ಕುಲದವ್ರಾದ ಹೆಬ್ರೋನ್ಯರ ಮುಖ್ಯಸ್ಥನಾಗಿದ್ದ. ರಾಜ ದಾವೀದನ ಆಳ್ವಿಕೆಯ 40ನೇ ವರ್ಷದಲ್ಲಿ+ ಹೆಬ್ರೋನ್ಯರಲ್ಲಿ ವೀರರು, ಸಮರ್ಥರು ಆಗಿದ್ದ ಗಂಡಸ್ರನ್ನ ದಾವೀದನ ಜನ್ರು ಹುಡುಕೋಕೆ ಶುರು ಮಾಡಿದ್ರು. ಅಂಥ ಗಂಡಸ್ರು ಗಿಲ್ಯಾದಿನ ಯಜ್ಜೇರಿನಲ್ಲಿ+ ಸಿಕ್ಕಿದ್ರು. 32 ಯೆರೀಯಾನ ಸಹೋದರರ ಒಟ್ಟು ಸಂಖ್ಯೆ 2,700. ಅವ್ರೆಲ್ಲ ಸಮರ್ಥ ಗಂಡಸ್ರಾಗಿದ್ರು, ತಮ್ಮತಮ್ಮ ಕುಲದ ಮುಖ್ಯಸ್ಥರಾಗಿದ್ರು. ಹಾಗಾಗಿ ಅವರು ಸತ್ಯ ದೇವರ ಕೆಲಸಗಳಿಗೆ, ರಾಜನ ಕೆಲಸಗಳಿಗೆ ಸಂಬಂಧಪಟ್ಟ ಎಲ್ಲ ವಿಷ್ಯಗಳನ್ನ ನೋಡ್ಕೊಳ್ಳೋಕೆ ಆಗೋ ಹಾಗೇ ರಾಜ ದಾವೀದ ಅವ್ರನ್ನ ರೂಬೇನ್ಯರ, ಗಾದ್ಯರ, ಮನಸ್ಸೆಯ ಅರ್ಧ ಕುಲದ ಜನ್ರ ಮೇಲೆ ಅಧಿಕಾರಿಗಳಾಗಿ ನೇಮಿಸಿದ.

ಕನ್ನಡ ಪ್ರಕಾಶನಗಳು (1987-2025)
ಲಾಗ್ ಔಟ್
ಲಾಗಿನ್
  • ಕನ್ನಡ
  • ಶೇರ್ ಮಾಡಿ
  • ಆದ್ಯತೆಗಳು
  • Copyright © 2025 Watch Tower Bible and Tract Society of Pennsylvania
  • ಷರತ್ತುಗಳು
  • ಪ್ರವೈಸಿ ಪಾಲಿಸಿ
  • ಪ್ರೈವಸಿ ಸೆಟ್ಟಿಂಗ್ಸ್
  • JW.ORG
  • ಲಾಗಿನ್
ಶೇರ್ ಮಾಡಿ